ಟೋಕಿಯೊ: ಕ್ವಾಡ್ ನಾಯಕರು (Quad Summit) ಟೋಕಿಯೊದಲ್ಲಿ ಭೇಟಿಯಾಗಿದ್ದು ಈ ವೇಳೆ ಚೀನಾ (China) ಮತ್ತು ರಷ್ಯಾದ (Russia) ಯುದ್ಧ ವಿಮಾನಗಳು ಮಂಗಳವಾರ ಜಪಾನ್ (Japan) ವಾಯು ನೆಲೆ ಬಳಿ ಹಾರಾಟ ನಡೆಸಿವೆ ಎಂದು ಜಪಾನ್ ರಕ್ಷಣಾ ಸಚಿವರು ತಿಳಿಸಿದ್ದಾರೆ. ಅಮೆರಿಕ, ಭಾರತ, ಆಸ್ಟ್ರೇಲಿಯಾ ಮತ್ತು ಜಪಾನ್ ನಾಯಕರು ಪ್ರಾದೇಶಿಕ ಭದ್ರತೆಯ ಕುರಿತು ಮಾತುಕತೆ ನಡೆಸುತ್ತಿರುವಾಗ ರಷ್ಯಾ ಮತ್ತು ಚೀನಾದ ವಿಮಾನಗಳ ಹಾರಾಟ ಬಗ್ಗೆ ಸರ್ಕಾರವು ಗಂಭೀರ ಕಳವಳ ವನ್ನು ವ್ಯಕ್ತಪಡಿಸಿದೆ ಎಂದು ನೊಬುವೊ ಕಿಶಿ ಹೇಳಿದ್ದಾರೆ. ವಿಮಾನಗಳು ಪ್ರಾದೇಶಿಕ ವಾಯುಪ್ರದೇಶವನ್ನು ಉಲ್ಲಂಘಿಸಿಲ್ಲ ಎಂದು ರಕ್ಷಣಾ ಸಚಿವಾಲಯ ಎಎಫ್‌ಪಿಗೆ ತಿಳಿಸಿದೆ. ನವೆಂಬರ್‌ನಿಂದ ಇದು ನಾಲ್ಕನೇ ಬಾರಿಗೆ ರಷ್ಯಾ ಮತ್ತು ಚೀನಾದ ದೀರ್ಘ-ದೂರದ ಜಂಟಿ ವಿಮಾನಗಳು ಜಪಾನ್ ಬಳಿ ಕಾಣಿಸಿಕೊಂಡಿವೆ. ಚೀನಾದ ಎರಡು ಬಾಂಬರ್‌ಗಳು ಜಪಾನ್ ಸಮುದ್ರದಲ್ಲಿ ರಷ್ಯಾದ ಎರಡು ಬಾಂಬರ್‌ಗಳನ್ನು ಸೇರಿಕೊಂಡು ಪೂರ್ವ ಚೀನಾ ಸಮುದ್ರಕ್ಕೆ ಜಂಟಿಯಾಗಿ ಹಾರಾಟ ನಡೆಸಿದವು ಎಂದು ಕಿಶಿ ಸುದ್ದಿಗಾರರಿಗೆ ತಿಳಿಸಿದರು. “ಅದರ ನಂತರ, ಒಟ್ಟು ನಾಲ್ಕು ವಿಮಾನಗಳು, ಎರಡು (ಹೊಸ) ಚೀನೀ ಬಾಂಬರ್‌ಗಳು ಮತ್ತು ಎರಡು ರಷ್ಯಾದ ಬಾಂಬರ್‌ಗಳು, ಪೂರ್ವ ಚೀನಾ ಸಮುದ್ರದಿಂದ ಪೆಸಿಫಿಕ್ ಸಾಗರಕ್ಕೆ ಜಂಟಿ ಹಾರಾಟವನ್ನು ನಡೆಸಿತು ಎಂದು ಅವರು ಹೇಳಿದ್ದಾರೆ. ರಷ್ಯಾದ ಗುಪ್ತಚರ ಮಾಹಿತಿ ಸಂಗ್ರಹಿಸುವ ವಿಮಾನವು ಮಂಗಳವಾರ ಉತ್ತರ ಹೊಕ್ಕೈಡೋದಿಂದ ಮಧ್ಯ ಜಪಾನ್‌ನ ನೋಟೊ ಪರ್ಯಾಯ ದ್ವೀಪಕ್ಕೆ ಹಾರಿದೆ. ಟೋಕಿಯೊದಲ್ಲಿ ನಡೆದ ಶೃಂಗಸಭೆ ವೇಳೆ ಇದು “ಪ್ರಚೋದನಕಾರಿ” ಆಗಿತ್ತು ಎಂದು ಅವರು ಹೇಳಿದ್ದಾರೆ.
ಕ್ವಾಡ್ ನಾಯಕರು ಮಂಗಳವಾರ “ಯಥಾಸ್ಥಿತಿಯನ್ನು ಬಲವಂತವಾಗಿ ಬದಲಾಯಿಸುವ” ಪ್ರಯತ್ನಗಳ ವಿರುದ್ಧ ಎಚ್ಚರಿಕೆ ನೀಡಿದರು. ಆದಾಗ್ಯೂ ಅವರು ಜಂಟಿ ಹೇಳಿಕೆಯಲ್ಲಿ ರಷ್ಯಾ ಅಥವಾ ಚೀನಾದ ನೇರ ಉಲ್ಲೇಖಗಳನ್ನೇನೂ ಮಾಡಿಲ್ಲ.
VIDEO: Chinese H-6K bombers and Russian Tu-95MS bombers conducted regular joint strategic patrols above the Sea of Japan, E.China Sea and West Pacific on Tue. The aircraft abided by intl regulations and did not violate any other country’s airspace: Russian Defense Ministry pic.twitter.com/771mVKjqW0
— Global Times (@globaltimesnews) May 24, 2022
ಜಪಾನ್ ನಮ್ಮ ದೇಶದ ಮತ್ತು ಪ್ರದೇಶದ ಭದ್ರತೆಯ ದೃಷ್ಟಿಕೋನದಿಂದ ನಮ್ಮ ಗಂಭೀರ ಕಾಳಜಿಗಳನ್ನು ರಾಜತಾಂತ್ರಿಕ ಮಾರ್ಗಗಳ ಮೂಲಕ ಸಂವಹನ ಮಾಡಿದೆ” ಎಂದು ಕಿಶಿ ಹೇಳಿದರು.
“ಉಕ್ರೇನ್ ವಿರುದ್ಧದ ರಷ್ಯಾದ ಆಕ್ರಮಣಕ್ಕೆ ಅಂತರರಾಷ್ಟ್ರೀಯ ಸಮುದಾಯವು ಪ್ರತಿಕ್ರಿಯಿಸುತ್ತಿದ್ದಂತೆ, ಆಕ್ರಮಣಕಾರಿಯಾಗಿರುವ ರಷ್ಯಾದ ಸಹಯೋಗದೊಂದಿಗೆ ಚೀನಾ ಇಂತಹ ಕ್ರಮ ಕೈಗೊಂಡಿರುವುದು ಆತಂಕಕ್ಕೆ ಕಾರಣವಾಗಿದೆ. ಇದನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ತನ್ನ ನೆರೆಯ ಚೀನಾ, ರಷ್ಯಾ ಮತ್ತು ದಕ್ಷಿಣ ಕೊರಿಯಾದೊಂದಿಗೆ ಗಡಿ ವಿವಾದಗಳನ್ನು ಹೊಂದಿರುವ ಜಪಾನ್, ತನ್ನ ವಾಯು ಗಡಿಗಳನ್ನು ರಕ್ಷಿಸಲು ವಾಡಿಕೆಯಂತೆ ಜೆಟ್‌ಗಳನ್ನು ಕಳುಹಿಸುತ್ತದೆ. ರಕ್ಷಣಾ ಸಚಿವಾಲಯದ ಪ್ರಕಾರ, ದೇಶವು ಕಳೆದ ವರ್ಷ ಮಾರ್ಚ್‌ವರೆಗೆ 1,004 ಬಾರಿ ಮಿಲಿಟರಿ ಜೆಟ್‌ಗಳನ್ನು ಹೊಡೆದುರುಳಿಸಿದೆ.
ವಿದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ