AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೆಕ್ಸಾಸ್​ ಶಾಲೆಯಲ್ಲಿ ಗುಂಡಿನ ದಾಳಿ: 19 ಮಕ್ಕಳು ಸೇರಿ 21 ಮುಗ್ಧರ ಹತ್ಯೆ, ಶೋಕಾಚರಣೆಗೆ ಅಧ್ಯಕ್ಷ ಜೋ ಬೈಡೆನ್ ಸೂಚನೆ

ಬಫೆಲೊ ಸೂಪರ್ ಮಾರ್ಕೆಟ್ ಮೇಲೆ ಗುಂಡಿನ ದಾಳಿ ನಡೆದ ಕೇವಲ 10 ದಿನಗಳಲ್ಲಿ ಮತ್ತೊಂದು ವಿಷಾದಕರ ಬೆಳವಣಿಗೆ ನಡೆದಿದ್ದು, ಅಮೆರಿಕದಲ್ಲಿ ಗನ್ ಲಾಬಿ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.

ಟೆಕ್ಸಾಸ್​ ಶಾಲೆಯಲ್ಲಿ ಗುಂಡಿನ ದಾಳಿ: 19 ಮಕ್ಕಳು ಸೇರಿ 21 ಮುಗ್ಧರ ಹತ್ಯೆ, ಶೋಕಾಚರಣೆಗೆ ಅಧ್ಯಕ್ಷ ಜೋ ಬೈಡೆನ್ ಸೂಚನೆ
ಗುಂಡಿನ ದಾಳಿ ನಡೆದ ಟೆಕ್ಸಾಸ್ ನಗರದ ಶಾಲೆಯಲ್ಲಿ ಭಯಗೊಂಡ ಮಕ್ಕಳನ್ನು ಶಿಕ್ಷಕರು ಸಂತೈಸಿದರು.
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:May 25, 2022 | 10:25 AM

ವಾಷಿಂಗ್​ಟನ್: ಅಮೆರಿಕದ ಟೆಕ್ಸಾಸ್ ನಗರದ (Texas city of America) ಶಾಲೆಗೆ ನುಗ್ಗಿ ಯದ್ವಾತದ್ವಾ ಗುಂಡು ಹಾರಿಸಿರುವ ದುಷ್ಕರ್ಮಿ 19 ಮಕ್ಕಳೂ ಸೇರಿ 21 ಮಂದಿಯನ್ನು ಕೊಂದಿದ್ದಾನೆ. ಗುಂಡಿನ ದಾಳಿ (Texas School Shooting) ನಡೆಸಿದವ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ. ಇನ್ನೂ 18ರ ಹರೆಯದಲ್ಲಿರುವ ಯುವಕ ಸಾಲ್ವಡೋರ್ ರಾಮೊಸ್​ ಆರೋಪಿ ಎಂದು ಪೊಲೀಸರು ಹೇಳಿದ್ದಾರೆ. ಬಫೆಲೊ ಸೂಪರ್ ಮಾರ್ಕೆಟ್ ಮೇಲೆ ಗುಂಡಿನ ದಾಳಿ ನಡೆದ ಕೇವಲ 10 ದಿನಗಳಲ್ಲಿ ಮತ್ತೊಂದು ವಿಷಾದಕರ ಬೆಳವಣಿಗೆ ನಡೆದಿದ್ದು, ಅಮೆರಿಕದಲ್ಲಿ ಗನ್ ಲಾಬಿ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಜಪಾನ್ ಸೇರಿದಂತೆ ಏಷ್ಯಾದ ದೇಶಗಳಿಗೆ ಐದು ದಿನಗಳ ಪ್ರವಾಸಕ್ಕೆ ತೆರಳಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ‘ಇಂಥ ಪ್ರಕರಣಗಳು ವಿಶ್ವದ ಇತರ ದೇಶಗಳಲ್ಲಿ ಅಪರೂಪಕ್ಕೊಮ್ಮೆ ಆಗುತ್ತವೆ. ಆದರೆ ಅಮೆರಿಕದಲ್ಲಿ ಪದೇಪದೆ ಆಗುತ್ತಿರುವುದು ವಿಷಾದದ ಸಂಗತಿ. ದೇವರಾಣೆ, ನಾವು ಗನ್ ಲಾಬಿಗೆ ಕಡಿವಾಣ ಹಾಕುತ್ತೇವೆ. ಮೃತರ ಗೌರವಾರ್ಥ ದೇಶವ್ಯಾಪಿ ಬಾವುಟಗಳನ್ನು ಅರ್ಧ ಮಟ್ಟಕ್ಕೆ ಹಾರಿಸುತ್ತೇವೆ ಎಂದು ಹೇಳಿದರು.

ಟೆಕ್ಸಾಸ್ ಶೂಟಿಂಗ್ ಕುರಿತು ಅಮೆರಿಕದ ಮಾಧ್ಯಮದಲ್ಲಿ ವರದಿಯಾಗಿರುವ 10 ಮುಖ್ಯ ಅಂಶಗಳಿವು…

  1. ಟೆಕ್ಸಾಸ್ ಶೂಟಿಂಗ್​ನಲ್ಲಿ 19 ವಿದ್ಯಾರ್ಥಿಗಳು ಮತ್ತು ಮೂವರು ವಯಸ್ಕರು ಮೃತಪಟ್ಟಿದ್ದಾರೆ. ಗಾಯಾಳುಗಳ ಸಂಖ್ಯೆ ಇನ್ನೂ ನಿಖರವಾಗಿ ಹೇಳಲು ಸಾಧ್ಯವಾಗುತ್ತಿಲ್ಲ.
  2. ಗುಂಡಿನ ದಾಳಿ ನಡೆಸಿದವನನ್ನು ಪೊಲೀಸರು ಕೊಂದಿದ್ದಾರೆ. ಘಟನೆಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳಿಗೂ ಗಾಯಗಳಾಗಿವೆ.
  3. ಅಮೆರಿಕದ ಕಾಲಮಾನ ಮಧ್ಯಾಹ್ನ ಶಾಲೆಯ ಮೇಲೆ ಶೂಟಿಂಗ್ ಆರಂಭವಾಯಿತು. ತನ್ನ ಕಾರನ್ನು ದಾರಿಯಲ್ಲಿಯೇ ನಿಲ್ಲಿಸಿದ ದುಷ್ಕರ್ಮಿ ಉವಾಲ್​ಡೆ ಎಂಬಲ್ಲಿ ಇರುವ ರಾಬ್ ಎಲಿಮೆಂಟರಿ ಶಾಲೆಗೆ ರೈಫಲ್​ನೊಂದಿಗೆ ನುಗ್ಗಿದ.
  4. ಶಾಲೆಯಲ್ಲಿ 500 ಮಕ್ಕಳಿದ್ದರು. ಈ ಪೈಕಿ ಬಹುತೇಕ ಮಕ್ಕಳು ಸ್ಪ್ಯಾನಿಷ್ ಮಾತೃಭಾಷೆ ಇರುವ ಬಡ ಕುಟುಂಬಗಳಿಂದ ಬಂದವರು. ಶೂಟಿಂಗ್​ ವಿಷಯ ತಿಳಿದು ಪೋಷಕರು ಶಾಲೆಗಳಿಗೆ ಧಾವಿಸಿ ಬಂದರಾದರೂ, ಮಕ್ಕಳನ್ನು ತಕ್ಷಣಕ್ಕೆ ಅವರೊಂದಿಗೆ ಕಳುಹಿಸಲಿಲ್ಲ. ಎಲ್ಲ ಮಕ್ಕಳ ಲೆಕ್ಕ ಮಾಡಿ, ಹಾಜರಾತಿ ಪರಿಶೀಲಿಸಿದ ನಂತರವೇ ಪೋಷಕರೊಂದಿಗೆ ಮಕ್ಕಳನ್ನು ಕಳುಹಿಸಲು ಶಾಲೆಯ ಆಡಳಿತ ಮಂಡಳಿ ನಿರ್ಧರಿಸಿತು.
  5. ಘಟನೆ ಕುರಿತು ಪ್ರತಿಕ್ರಿಯಿಸಿರುವ ಟೆಕ್ಸಾಸ್ ರಾಜ್ಯಪಾಲ ಗ್ರೆಗ್ ಅಬೊಟ್, ಆರೋಪಿಯು ಏಕಾಂಗಿಯಾಗಿ ದುಷ್ಕೃತ್ಯ ಎಸಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಶಾಲೆಗೆ ಬರುವ ಮೊದಲು ಅವನು ತನ್ನ ಅಜ್ಜಿಯನ್ನು ಕೊಲೆ ಮಾಡಿದ್ದ ಎಂದು ಹೇಳಿದ್ದಾರೆ.
  6. ಈ ಹತ್ಯಾಕಾಂಡಕ್ಕೆ ನಿರ್ದಿಷ್ಟ ಕಾರಣ ಏನು ಎಂಬುದು ಈವರೆಗೆ ತಿಳಿದುಬಂದಿಲ್ಲ
  7. ಸ್ಯಾನ್ ಆಂಟೋನಿಯೊದಲ್ಲಿರುವ ವಿಶ್ವವಿದ್ಯಾಲಯ ಆಸ್ಪತ್ರೆಗೆ ಉವಾಲ್​ಡೆಯಿಂದ ಇಬ್ಬರು ಬಂದಿರುವುದು ದೃಢಪಟ್ಟಿದೆ. ಈ ಪೈಕಿ 66 ವರ್ಷದ ವೃದ್ಧೆಯೊಬ್ಬರಿದ್ದರೆ ಮತ್ತೊಬ್ಬರು 10 ವರ್ಷದ ಬಾಲಕಿ. ಇಬ್ಬರನ್ನೂ ತುರ್ತು ನಿಗಾ ಘಟಕಕ್ಕೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ.
  8. ಗುಂಡು ಹಾರಿಸಿರುವ ಆರೋಪಿ ಸಾಲ್ವಡೊರ್ ರಾಮೊಸ್ ಸಹ ಲ್ಯಾಟಿನೊ ಜನರೇ ಹೆಚ್ಚಾಗಿರುವ ಸ್ಯಾನ್ ಆಂಟೋನಿಯೊಗೆ ಸೇರಿದವರು ಎಂದು ತಿಳಿದುಬಂತು.
  9. ಮೃತ ಮಕ್ಕಳ ಪೋಷಕರಿಗೆ ಸಹಾನುಭೂತಿ ಸೂಚಿಸುವ ದೃಷ್ಟಿಯಿಂದ ಅಮೆರಿಕದ ಶ್ವೇತಭವನ ಸೇರಿದಂತೆ ಎಲ್ಲ ಸರ್ಕಾರಿ ಕಚೇರಿಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧಮಟ್ಟಕ್ಕೆ ಹಾರಿಸಿ, ಶೋಕಾಚರಣೆ ನಡೆಸಲು ಸರ್ಕಾರ ನಿರ್ಧರಿಸಿದೆ.
  10. ಅಮೆರಿಕದ ಪಾರ್ಕ್​ಲೆಂಡ್​ನಲ್ಲಿ 2018ರಲ್ಲಿ ನಡೆದಿದ್ದ ಗುಂಡು ಹಾರಾಟದಲ್ಲಿ ಪ್ರೌಢಶಾಲೆಯ 14 ಮಕ್ಕಳು ಸತ್ತಿದ್ದರು. 2012ರಲ್ಲಿ ಸ್ಯಾಂಡಿ ಹೂಕ್​ನಲ್ಲಿ ನಡೆದಿದ್ದ ಇಂಥದ್ದೇ ಘಟನೆಯಲ್ಲಿ 20 ಮಕ್ಕಳು ಮತ್ತು 6 ಸಿಬ್ಬಂದಿ ಸಾವನ್ನಪ್ಪಿದ್ದರು.

Published On - 7:23 am, Wed, 25 May 22

ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?
ಪ್ರಚಾರಕ್ಕಾಗಿ ನಟ ಮೆಡನೂರು ಮನು ವಿರುದ್ಧ ಆರೋಪ: ಸಂತ್ರಸ್ತೆ ಉತ್ತರವೇನು?
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಈಶಾನ್ಯ ರಾಜ್ಯಗಳು ಹೂಡಿಕೆಯ ಕೇಂದ್ರವಾಗುತ್ತಿದೆ; ಜ್ಯೋತಿರಾದಿತ್ಯ ಸಿಂಧಿಯಾ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ತಕ್ಕ ಉತ್ತರ; ಅಮಿತ್ ಶಾ ಶ್ಲಾಘನೆ
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
ಅರ್ಜುನ್ ಜನ್ಯ ಸಿನಿಮಾ ನಿರ್ದೇಶನಕ್ಕೆ ಮುಂದಾಗಿದ್ದು ಯಾರ ಬೆಂಬಲದಿಂದ?
‘ನನ್ನ ಗಂಡನ ಪರ ನಿಲ್ಲುತ್ತೇನೆ’; ಮನು ಪತ್ನಿ ಅಚಲ ನಿರ್ಧಾರ
‘ನನ್ನ ಗಂಡನ ಪರ ನಿಲ್ಲುತ್ತೇನೆ’; ಮನು ಪತ್ನಿ ಅಚಲ ನಿರ್ಧಾರ
ತಾಳಿ ಕಟ್ಟುವಷ್ಟರಲ್ಲಿ ಲವರ್ ಕಾಲ್: ಮದುವೆ ರದ್ದು ಬಗ್ಗೆ ಸಂಬಂಧಿಕರೇನಂದ್ರು?
ತಾಳಿ ಕಟ್ಟುವಷ್ಟರಲ್ಲಿ ಲವರ್ ಕಾಲ್: ಮದುವೆ ರದ್ದು ಬಗ್ಗೆ ಸಂಬಂಧಿಕರೇನಂದ್ರು?
‘ಮೌನ ಹಾಗೂ ನಗು’; ಉತ್ತರಿಸಲು ಹೊಸ ತಂತ್ರ ಕಂಡುಕೊಂಡ ಪವಿತ್ರಾ ಗೌಡ
‘ಮೌನ ಹಾಗೂ ನಗು’; ಉತ್ತರಿಸಲು ಹೊಸ ತಂತ್ರ ಕಂಡುಕೊಂಡ ಪವಿತ್ರಾ ಗೌಡ
ತಾಳಿ‌ ಕಟ್ಟುವ ಸಮಯದಲ್ಲಿ ಹಸೆಮಣೆಯಿಂದ ಹೊರ ನಡೆದ ವಧು
ತಾಳಿ‌ ಕಟ್ಟುವ ಸಮಯದಲ್ಲಿ ಹಸೆಮಣೆಯಿಂದ ಹೊರ ನಡೆದ ವಧು
ಶೋಲೆಯ ರಾಮಗಢ ಇನ್ನಿಲ್ಲ, ಶುರುವಾಯ್ತು ಹೆಸರು ಬದಲಾವಣೆ
ಶೋಲೆಯ ರಾಮಗಢ ಇನ್ನಿಲ್ಲ, ಶುರುವಾಯ್ತು ಹೆಸರು ಬದಲಾವಣೆ
Daily Devotional: ಅಸಹಾಯಕರ ಶಾಪ ಹೇಗೆ ಪರಿಣಾಮ ಬೀರುತ್ತೆ ಗೊತ್ತಾ?
Daily Devotional: ಅಸಹಾಯಕರ ಶಾಪ ಹೇಗೆ ಪರಿಣಾಮ ಬೀರುತ್ತೆ ಗೊತ್ತಾ?