ಬೀಜಿಂಗ್: ಈಶಾನ್ಯ ಚೀನಾದಲ್ಲಿ ರಾಸಾಯನಿಕ ಸ್ಥಾವರದಲ್ಲಿ (China Chemical Plant Blast) ಸ್ಫೋಟ ಸಂಭವಿಸಿದ ಹಿನ್ನೆಲೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಈ ದುರಂತದಲ್ಲಿ 12 ಮಂದಿ ನಾಪತ್ತೆಯಾಗಿದ್ದಾರೆ. ಭಾನುವಾರ ಮಧ್ಯಾಹ್ನ 1.30ರ ಸುಮಾರಿಗೆ ಸ್ಫೋಟ ಸಂಭವಿಸಿದೆ. ಲಿಯಾನಿಂಗ್ ಪ್ರಾಂತ್ಯದ ಪಂಜಿನ್ ನಗರದಲ್ಲಿ ಭಾನುವಾರ 34 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿರುವುದಾಗಿ ಚೀನಾ ಸೆಂಟ್ರಲ್ ಟೆಲಿವಿಷನ್ ವರದಿ ಮಾಡಿದೆ.
ಪಂಜಿನ್ ಹಾಯೆ ಕೆಮಿಕಲ್ ಕೋ ಫ್ಯಾಕ್ಟರಿಯಲ್ಲಿನ ಬೆಂಕಿ ಇಂದು ಕೂಡ ಇನ್ನೂ ಉರಿಯುತ್ತಿದೆ. ಆ ಬೆಂಕಿಯನ್ನು ಹರಡದಂತೆ ಎಚ್ಚರ ವಹಿಸಲಾಗಿದೆ. ಉಪಕರಣಗಳ ಸ್ಥಾಪನೆ ಮತ್ತು ನಿರ್ವಹಣೆಯ ಸಮಯದಲ್ಲಿ ಈ ಸ್ಫೋಟ ಸಂಭವಿಸಿದೆ.
ಇದನ್ನೂ ಓದಿ: Thalassery Bomb Blast: ಕೇರಳದ ಕಣ್ಣೂರಿನಲ್ಲಿ ಬಾಂಬ್ ಸ್ಫೋಟ, ಒಬ್ಬರಿಗೆ ಗಂಭೀರ ಗಾಯ
ಇಂಟರ್ನೆಟ್‌ನಲ್ಲಿ ಹರಿದಾಡುತ್ತಿರುವ ವಿಡಿಯೊಗಳ ಪ್ರಕಾರ, ಈ ಸ್ಫೋಟದಿಂದ ಎಲ್ಲ ಕಡೆಯಲ್ಲೂ ಹೊಗೆ ಆವರಿಸಿದೆ. ಸುಮಾರು 1.4 ಮಿಲಿಯನ್ ಜನರಿರುವ ನಗರವಾದ ಪಂಜಿನ್‌ನಲ್ಲಿ ಈ ದುರಂತ ಸಂಭವಿಸಿರುವುದಕ್ಕೆ ಕಾರಣವೇನೆಂದು ಪೊಲೀಸ್ ಅಧಿಕಾರಿಗಳು ಇನ್ನೂ ತನಿಖೆ ನಡೆಸುತ್ತಿದ್ದಾರೆ.
China. Explosion and fire at a chemical plant in the city of Panjin, Liaoning province. Blast heard throughout the region. pic.twitter.com/HbUHTBVb49
— One Shot. (@coconutfist12) January 16, 2023
ಚೀನಾದಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಾರ್ಖಾನೆ ಮತ್ತು ಗಣಿ ಅಪಘಾತಗಳ ಸರಣಿಯಲ್ಲಿ ಇದು ಹೊಸತು. ಚೀನಾದ ಕಲ್ಲಿದ್ದಲು ಗಣಿಗಳು ಕಳೆದ ವರ್ಷ ಅಪಘಾತಗಳ ಸರಣಿಯನ್ನು ಅನುಭವಿಸಿದ್ದವು. ಇದರಿಂದ ಕನಿಷ್ಠ 129 ಜನ ಮೃತಪಟ್ಟಿದ್ದರು. 2019ರಲ್ಲಿ ಚೀನಾದ ಜಿಯಾಂಗ್ಸುದಲ್ಲಿನ ಕೈಗಾರಿಕಾ ಪಾರ್ಕ್ ಅನ್ನು ಮುಚ್ಚಲಾಯಿತು. ಅಲ್ಲಿ ಸ್ಫೋಟದಿಂದ ಸುಮಾರು 78 ಜನ ಮೃತಪಟ್ಟರು, ನೂರಾರು ಜನರು ಗಾಯಗೊಂಡರು.