ಬಾಹ್ಯಾಕಾಶದಿಂದ ಹಿಮಾಲಯದ ಅದ್ಭುತ ಪೋಟೋಗಳನ್ನು ಹಂಚಿಕೊಂಡ ಯುಎಇ ಗಗನಯಾತ್ರಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 14, 2023 | 11:06 AM

ಯುಎಇ ಗಗನಯಾತ್ರಿ ಸುಲ್ತಾನ್ ಅಲ್ ನೆಯಾದಿ ಅವರು ಬಾಹ್ಯಾಕಾಶದಿಂದ ಹಿಮಾಲಯದ ಕೆಲವೊಂದು ಅದ್ಭುತ ಫೋಟೋಗಳನ್ನು ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ. ಬಾಹ್ಯಾಕಾಶದಿಂದ ಹಿಮಾಲಯಗಳ ಒಂದು ಅದ್ಭುತದಂತೆ ಕಾಣುತ್ತಿರುವುದು ನಿಜ. ಎವರೆಸ್ಟ್ ಶಿಖರದ ನೆಲೆಯು ಭೂಮಿಯ ಮೇಲಿನ ಸಮುದ್ರ ಮಟ್ಟಕ್ಕಿಂತ ಎತ್ತರದ ಸ್ಥಳ. ಈ ಪರ್ವತಗಳು ನಮ್ಮ ಗ್ರಹದ ಶ್ರೀಮಂತ ಸ್ವಭಾವದ ಅಪ್ರತಿಮ ಹೆಗ್ಗುರುತುಗಳಲ್ಲಿ ಒಂದಾಗಿದೆ ಎಂದು ಬರೆದುಕೊಂಡಿದ್ದಾರೆ.

ಬಾಹ್ಯಾಕಾಶದಿಂದ ಹಿಮಾಲಯದ ಅದ್ಭುತ ಪೋಟೋಗಳನ್ನು ಹಂಚಿಕೊಂಡ ಯುಎಇ ಗಗನಯಾತ್ರಿ
ಹಿಮಾಲಯ
Follow us on

ಯುಎಇ (United Arab Emirates) ಗಗನಯಾತ್ರಿ ಸುಲ್ತಾನ್ ಅಲ್ ನೆಯಾದಿ ಅವರು ಆರು ತಿಂಗಳವರೆಗೆ ಬಾಹ್ಯಾಕಾಶ ಯಾತ್ರೆಯನ್ನು ಕೈಗೊಂಡಿದ್ದಾರೆ. ಅವರು ಬಾಹ್ಯಾಕಾಶದಲ್ಲಿ ತಮ್ಮ ವಾಂಟೇಜ್ ಪಾಯಿಂಟ್‌ನಿಂದ (ಗಮ್ಯ ಸ್ಥಾನ) ತೆಗೆದ ಹಿಮಾಲಯದ ಕೆಲವೊಂದು ಅದ್ಭುತ ಫೋಟೋಗಳನ್ನು ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ. ಹಿಮಾಲಯ ಪರ್ವತ ಶ್ರೇಣಿಯು ತಂಪಾಗಿ ಮೈ ತಳೆದು ನಿಂತು, ತನ್ನ ವೈಭವವನ್ನು ಪ್ರದರ್ಶಿಸುತ್ತಿರುವ ಆಕರ್ಷಕ ಚಿತ್ರಗಳನ್ನು ವಿಶ್ವದ ಮುಂದೆ ಪ್ರದರ್ಶಿಸಿದ್ದಾರೆ. ಇದೀಗ ಈ ಬಗ್ಗೆ ಟ್ವಿಟರ್​​ ಬಳಕೆದಾರರೂ ಇದೊಂದು ಅದ್ಭುತ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನು ಸುಲ್ತಾನ್ ಅಲ್ ನೆಯಾದಿ ಅವರು ಹಂಚಿಕೊಂಡಿರುವ ಟ್ವಿಟರ್​​ ಜತೆಗೆ ಒಂದು ಶೀರ್ಷಿಕೆಯನ್ನು ನೀಡಿದ್ದಾರೆ. ಎರಡು ಚಿತ್ರಗಳಲ್ಲಿ, ಪರ್ವತಗಳ ಮೇಲೆ ಮೋಡಗಳನ್ನು ಕಾಣಬಹುದು. ಈ ರುದ್ರರಮಣೀಯ ನೋಟವನ್ನು ನೋಡಿ ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಬಾಹ್ಯಾಕಾಶದಿಂದ ಹಿಮಾಲಯಗಳ ಒಂದು ಅದ್ಭುತದಂತೆ ಕಾಣುತ್ತಿರುವುದು ನಿಜ. ಎವರೆಸ್ಟ್ ಶಿಖರದ ನೆಲೆಯು ಭೂಮಿಯ ಮೇಲಿನ ಸಮುದ್ರ ಮಟ್ಟಕ್ಕಿಂತ ಎತ್ತರದ ಸ್ಥಳ. ಈ ಪರ್ವತಗಳು ನಮ್ಮ ಗ್ರಹದ ಶ್ರೀಮಂತ ಸ್ವಭಾವದ ಅಪ್ರತಿಮ ಹೆಗ್ಗುರುತುಗಳಲ್ಲಿ ಒಂದಾಗಿದೆ ಎಂದು ಬರೆದುಕೊಂಡಿದ್ದಾರೆ.

ಗಗನಯಾತ್ರಿ ಸುಲ್ತಾನ್ ಅಲ್ ನೆಯಾದಿ ಹಂಚಿಕೊಂಡಿರುವ ಟ್ವೀಟ್​​

ಸುಲ್ತಾನ್ ಅಲ್ ನೆಯಾದಿ ಅವರು ಈ ಫೋಟೋಗಳನ್ನು ನೆನ್ನೆ (ಆ.13) ತಮ್ಮ ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಇಲ್ಲಿಯವರೆಗೆ 44,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಮತ್ತು 600ಕ್ಕೂ ಹೆಚ್ಚು ಲೈಕ್​​ ಪಡೆದುಕೊಂಡಿದೆ. ಒಬ್ಬ ಬಳಕೆದಾರ “ಇದು ಪ್ರಕೃತಿಯ ಭವ್ಯವಾದ ಮೇರುಕೃತಿ” ಎಂದು ಕಮೆಂಟ್​​ ಮಾಡಿದ್ದಾರೆ.

ಇದನ್ನೂ ಓದಿ: ಹೆಚ್ಚಿನ ಭೂ ವೀಕ್ಷಣೆಗಾಗಿ ಡಿಎಸ್-ಎಸ್ಎಆರ್ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಒಯ್ಯಲಿದೆ ಪಿಎಸ್ಎಲ್‌ವಿ-ಸಿ56 ಯೋಜನೆ

ಮೇ ತಿಂಗಳಿನಲ್ಲಿ ಸುಲ್ತಾನ್ ಅಲ್ ನೆಯಾದಿ ಅವರು ಬಾಹ್ಯಾಕಾಶದ ಮೂಲಕ ದುಬೈನ ಹಲವು ಪ್ರದೇಶಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ದುಬೈನ ಸಹಿ ಪಾಮ್ ಜುಮೇರಾ, ಜೆಬೆಲ್ ಅಲಿ ಮತ್ತು ಜುಮೇರಾ ವಿಲೇಜ್ ಸರ್ಕಲ್ ಸೇರಿದಂತೆ ದುಬೈನ ವಸತಿ ಪ್ರದೇಶಗಳ ಚಿತ್ರಗಳನ್ನು ಕೂಡ ಹಂಚಿಕೊಂಡಿದ್ದಾರೆ. ಬಾಹ್ಯಾಕಾಶದಿಂದ ದುಬೈನ್ನು ನೋಡಿದರೆ ನಕ್ಷತ್ರಗಳಂತೆ ಪ್ರಕಾಶಮಾನವಾಗಿ ಹೊಳೆಯುತ್ತದೆ ಎಂದು ಟ್ವಿಟರ್​​ನಲ್ಲಿ ಬರೆದುಕೊಂಡಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ