ಕೇವಲ 3 ನಿಮಿಷಗಳಲ್ಲಿ 15,000 ಅಡಿ ಎತ್ತರದಿಂದ ಏಕಾಏಕಿ ಕೆಳಗೆ ಬಂದ ವಿಮಾನ, ಒಮ್ಮೆ ಪ್ರಯಾಣಿಕರ ಎದೆ ಬಡಿತವೇ ನಿಂತಂಗಾಗಿತ್ತು

ಅಮೆರಿಕನ್ ಏರ್​ಲೈನ್ಸ್​ನ ವಿಮಾನವೊಂದು ಸ್ವಲ್ಪದರಲ್ಲೇ ಭಾರಿ ಅಪಘಾತದಿಂದ ಪಾರಾಗಿದೆ. ವಿಮಾನವು ಮೂರು ನಿಮಿಷಗಳಲ್ಲಿ 15,000 ಅಡಿ ಕೆಳಕ್ಕೆ ಇಳಿದಿತ್ತು, ಆಗ ಒಮ್ಮೆ ಪ್ರಯಾಣಿಕರ ಹೃದಯ ಬಡಿತವೇ ನಿಂತಂತಾಗಿತ್ತು. ಫ್ಲೋರಿಡಾ  ವಿಶ್ವವಿದ್ಯಾಲಯದ ಪ್ರೊಫೆಸರ್ ಹ್ಯಾರಿಸನ್ ಹೋವ್ ವಿಮಾನದಲ್ಲಿದ್ದರು.

ಕೇವಲ 3 ನಿಮಿಷಗಳಲ್ಲಿ 15,000 ಅಡಿ ಎತ್ತರದಿಂದ ಏಕಾಏಕಿ ಕೆಳಗೆ ಬಂದ ವಿಮಾನ, ಒಮ್ಮೆ ಪ್ರಯಾಣಿಕರ ಎದೆ ಬಡಿತವೇ ನಿಂತಂಗಾಗಿತ್ತು
ವಿಮಾನ
Follow us
ನಯನಾ ರಾಜೀವ್
|

Updated on: Aug 14, 2023 | 8:07 AM

ಅಮೆರಿಕನ್ ಏರ್​ಲೈನ್ಸ್​ನ ವಿಮಾನವೊಂದು ಸ್ವಲ್ಪದರಲ್ಲೇ ಭಾರಿ ಅಪಘಾತದಿಂದ ಪಾರಾಗಿದೆ. ವಿಮಾನವು ಮೂರು ನಿಮಿಷಗಳಲ್ಲಿ 15,000 ಅಡಿ ಕೆಳಕ್ಕೆ ಇಳಿದಿತ್ತು, ಆಗ ಒಮ್ಮೆ ಪ್ರಯಾಣಿಕರ ಹೃದಯ ಬಡಿತವೇ ನಿಂತಂತಾಗಿತ್ತು. ಫ್ಲೋರಿಡಾ  ವಿಶ್ವವಿದ್ಯಾಲಯದ ಪ್ರೊಫೆಸರ್ ಹ್ಯಾರಿಸನ್ ಹೋವ್ ವಿಮಾನದಲ್ಲಿದ್ದರು. ಈ ಅನುಭವವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಅವರು, “ನಾನು ಹಲವು ಬಾರಿ ವಿಮಾನದಲ್ಲಿ ಪ್ರಯಾಣಿಸಿದ್ದೇನೆ, ಆದರೆ ಇಂಥಾ ಭಯಾನಕ ದೃಶ್ಯವನ್ನು ಮೊದಲ ಬಾರಿ ನೋಡಿದ್ದು ಎಂದು ಬರೆದಿದ್ದಾರೆ.

ಅವರು ಮಾಡಿರುವ ಟ್ವೀಟ್​ನಲ್ಲಿ ಪ್ರಯಾಣಿಕರು ಆಕ್ಸಿಜನ್ ಮಾಸ್ಕ್​ ಮೂಲಕ ಆಮ್ಲಜನಕ ತೆಗೆದುಕೊಳ್ಳುತ್ತಿರುವುದನ್ನು ಗಮನಿಸಬಹುದು. ವಿಮಾನವು 11 ನಿಮಿಷಗಳಲ್ಲಿ ಸುಮಾರು 20,000 ಅಡಿಗಳಿಗೆ ಇಳಿದಿದೆ. 43 ನಿಮಿಷಗಳ ಪ್ರಯಾಣದ ನಂತರ, ವಿಮಾನವು ಆರು ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ 18,600 ಅಡಿಗಳಷ್ಟು ಕೆಳಗಿಳಿಯಿತು.

ಅಮೆರಿಕನ್ ಈಗಲ್ ಫ್ಲೈಟ್ 5916, ಪೀಡ್‌ಮಾಂಟ್ ಏರ್‌ಲೈನ್ಸ್ ನಿರ್ವಹಿಸುತ್ತದೆ, ಚಾರ್ಲೆಟ್ (CLT) ನಿಂದ ಫ್ಲೋರಿಡಾದ ಗೇನೆಸ್‌ವಿಲ್ಲೆಗೆ (GNV) ಆಗಸ್ಟ್ 10 ರಂದು GNV ನಲ್ಲಿ ಸುರಕ್ಷಿತವಾಗಿ ಇಳಿಯಿತು.

ಹ್ಯಾರಿಸನ್ ಟ್ವೀಟ್

I’ve flown a lot. This was scary. Kudos to our amazing flight crew- cabin staff and pilots on @AmericanAir 5916. The photos cannot capture the burning smell, loud bang or ear pops. Good to be on the ground. #AA5916 #CLT #GNV pic.twitter.com/P8pPrvOQDQ

— Harrison Hove (@HarrisonHove) August 10, 2023

ಈ ಅನನುಕೂಲತೆಗಾಗಿ ನಾವು ನಮ್ಮ ಗ್ರಾಹಕರಿಗೆ ಕ್ಷಮೆಯಾಚಿಸುತ್ತೇವೆ ಮತ್ತು ಅವರ ವೃತ್ತಿಪರತೆಗಾಗಿ ನಮ್ಮ ತಂಡಕ್ಕೆ ಧನ್ಯವಾದ ಹೇಳುತ್ತೇವೆ ಎಂದು ಅಮೆರಿಕನ್‌ ಏರ್‌ಲೈನ್ಸ್‌ ವಕ್ತಾರರು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಖೋ- ಖೋ ವಿಶ್ವಕಪ್: ಭಾರತ ಮಹಿಳಾ- ಪುರುಷ ತಂಡಗಳೇ ಚಾಂಪಿಯನ್ಸ್
ಖೋ- ಖೋ ವಿಶ್ವಕಪ್: ಭಾರತ ಮಹಿಳಾ- ಪುರುಷ ತಂಡಗಳೇ ಚಾಂಪಿಯನ್ಸ್
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ