AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದ್ಯದ ದೊರೆ ಮಲ್ಯ ಮಗನ ವಿಹಾರ ನೌಕೆ ಸೇಲ್!

ಸಾವಿರಾರು ಕೋಟಿ ಸಾಲದ ಸುಳಿಗೆ ಸಿಲುಕಿ ದೇಶ ತೊರೆದ ವಿಜಯ್ ಮಲ್ಯಗೆ ಮತ್ತೆ ಸಂಕಷ್ಟ ಎದುರಾಗಿದೆ. ವಿಜಯ್ ಮಲ್ಯ ಪುತ್ರ ಸಿದ್ಧಾರ್ಥ್ ಮಲ್ಯ ಒಡೆತನದ ವಿಹಾರ ನೌಕೆ ಮಾರಾಟಕ್ಕೆ ಲಂಡನ್ ನ್ಯಾಯಾಲಯ ಆದೇಶ ನೀಡಿದೆ. ಈ ಮೂಲಕ ಕತಾರ್ ಬ್ಯಾಂಕ್​ನ 47 ಕೋಟಿ ಸಾಲ ತೀರಿಸಲು ಮಲ್ಯ ವಿಹಾರ ನೌಕೆ ಮಾರಾಟಕ್ಕೆ ಅನುವು ನೀಡಲಾಗಿದೆ. ಭಾರತೀಯರನ್ನು ಕರೆತರಲು ಸಿದ್ಧತೆ: ಕೊರೊನಾ ವೈರಸ್ ಪೀಡಿತ ಚೀನಾದಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಪ್ರಯತ್ನಗಳು ಆರಂಭವಾಗಿವೆ. ಕೇಂದ್ರ ಸರ್ಕಾರ ಈ ಬಗ್ಗೆ […]

ಮದ್ಯದ ದೊರೆ ಮಲ್ಯ ಮಗನ ವಿಹಾರ ನೌಕೆ ಸೇಲ್!
ಸಾಧು ಶ್ರೀನಾಥ್​
|

Updated on: Jan 28, 2020 | 7:41 AM

Share

ಸಾವಿರಾರು ಕೋಟಿ ಸಾಲದ ಸುಳಿಗೆ ಸಿಲುಕಿ ದೇಶ ತೊರೆದ ವಿಜಯ್ ಮಲ್ಯಗೆ ಮತ್ತೆ ಸಂಕಷ್ಟ ಎದುರಾಗಿದೆ. ವಿಜಯ್ ಮಲ್ಯ ಪುತ್ರ ಸಿದ್ಧಾರ್ಥ್ ಮಲ್ಯ ಒಡೆತನದ ವಿಹಾರ ನೌಕೆ ಮಾರಾಟಕ್ಕೆ ಲಂಡನ್ ನ್ಯಾಯಾಲಯ ಆದೇಶ ನೀಡಿದೆ. ಈ ಮೂಲಕ ಕತಾರ್ ಬ್ಯಾಂಕ್​ನ 47 ಕೋಟಿ ಸಾಲ ತೀರಿಸಲು ಮಲ್ಯ ವಿಹಾರ ನೌಕೆ ಮಾರಾಟಕ್ಕೆ ಅನುವು ನೀಡಲಾಗಿದೆ.

ಭಾರತೀಯರನ್ನು ಕರೆತರಲು ಸಿದ್ಧತೆ: ಕೊರೊನಾ ವೈರಸ್ ಪೀಡಿತ ಚೀನಾದಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಪ್ರಯತ್ನಗಳು ಆರಂಭವಾಗಿವೆ. ಕೇಂದ್ರ ಸರ್ಕಾರ ಈ ಬಗ್ಗೆ ಚಿಂತನೆ ನಡೆಸಿದ್ದು, ವೈರಸ್ ತೀವ್ರವಾಗಿ ಹರಡಿರುವ ವುಹಾನ್ ಸೇರಿದಂತೆ ಚೀನಾದ ಹಲವೆಡೆ ಇರುವ ಭಾರತೀಯರನ್ನ ಕರೆತರಲು ವಿಶೇಷ ವಿಮಾನದ ವ್ಯವಸ್ಥೆಯನ್ನೂ ಮಾಡಲಾಗಿದೆ.

ರೋಗ ನಿಯಂತ್ರಣಕ್ಕೆ ಹರಸಾಹಸ! ಮತ್ತೊಂದ್ಕಡೆ ಕೊರೊನಾ ವೈರಾಣು ಹರದಂತೆ ತೀವ್ರ ಕ್ರಮಗಳನ್ನ ಕೈಗೊಳ್ಳುತ್ತಿರುವ ಚೀನಾ ಸರ್ಕಾರ, ಸುಮಾರು 62 ಸಾವಿರ ಕೋಟಿ ರಿಲೀಸ್ ಮಾಡಿದೆ. ಈಗಾಗಲೇ 80ಕ್ಕೂ ಹೆಚ್ಚು ಮಂದಿ ಕೊರೊನಾ ವೈರಸ್​ಗೆ ಬಲಿಯಾಗಿದ್ದು, ಈ ರೋಗ ಪೀಡಿತರ ಸಂಖ್ಯೆ 3 ಸಾವಿರದ ಆಸುಪಾಸು ತಲುಪಿದೆ.

‘ಹಸಿರು ವಲಯ’ದ ಮೇಲೆ ಮತ್ತೆ ದಾಳಿ? ಎಲ್ಲಾ ತಣ್ಣಗಾಯ್ತು ಎನ್ನುವಷ್ಟರಲ್ಲಿ ಮತ್ತೆ ಅಮೆರಿಕ-ಇರಾನ್ ನಡವೆ ಅಸಮಾಧಾನ ಹೊಗೆಯಾಡಲಾರಂಭಿಸಿದೆ. ಕೆಲ ದಿನಗಳ ಕಾಲ ಸುಮ್ಮನಿದ್ದ ಇರಾನ್ ಮತ್ತೆ ರಾಕೆಟ್ ದಾಳಿ ನಡೆಸುತ್ತಿದೆ ಅನ್ನೋ ಆರೋಪ ಕೇಳಿಬಂದಿದೆ. ಇರಾಕ್​ನ ರಾಜಧಾನಿ ಬಾಗ್​ದಾದ್​ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಸಮೀಪ ರಾಕೆಟ್ ದಾಳಿ ನಡೆದಿದೆ ಎನ್ನಲಾಗಿದೆ.