ಬ್ರಿಟನ್ನಲ್ಲಿ ಭಾರತ ಮೂಲದ ಯುವತಿ ಮೇಲೆ ಅತ್ಯಾಚಾರ ಒಂದು ತಿಂಗಳಲ್ಲಿ ಎರಡನೇ ಘಟನೆ
ಯುಕೆಯಲ್ಲಿ ಭಾರತ ಮೂಲದ ಯುವತಿ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರವೆಸಗಿರುವ ಘಟನೆ ವರದಿಯಾಗಿದೆ. ವಿಶೇಷವಾಗಿ ಕೇವಲ ಒಂದು ತಿಂಗಳ ಹಿಂದೆ ಸಿಖ್ ಮಹಿಳೆಯ ಮೇಲೆ ಇದೇ ರೀತಿಯ ದಾಳಿ ನಡೆದಿತ್ತು. ವೆಸ್ಟ್ ಮಿಡ್‌ಲ್ಯಾಂಡ್ಸ್ ಪೊಲೀಸರು ಶನಿವಾರ ಸಂಜೆ ವಾಲ್ಸಾಲ್‌ನ ಪಾರ್ಕ್ ಹಾಲ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ. ಯುವತಿಯೊಬ್ಬರು ರಸ್ತೆಯಲ್ಲಿ ಮಲಗಿ ಸಹಾಯಕ್ಕಾಗಿ ಕರೆಯುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು.

ಬ್ರಿಟನ್, ಅಕ್ಟೋಬರ್ 27: ಬ್ರಿಟನ್ನಲ್ಲಿ 20 ವರ್ಷದ ಯುವತಿ ಮೇಲೆ ಅತ್ಯಾಚಾರ(Rape) ನಡೆದಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಘಟನೆಯು ಬ್ರಿಟನ್‌ನಲ್ಲಿರುವ ಭಾರತೀಯ ಸಮುದಾಯವನ್ನು ಆಘಾತಗೊಳಿಸಿದೆ. ವಿಶೇಷವಾಗಿ ಕೇವಲ ಒಂದು ತಿಂಗಳ ಹಿಂದೆ ಸಿಖ್ ಮಹಿಳೆಯ ಮೇಲೆ ಇದೇ ರೀತಿಯ ಘಟನೆ ನಡೆದಿತ್ತು. ವೆಸ್ಟ್ ಮಿಡ್‌ಲ್ಯಾಂಡ್ಸ್ ಪೊಲೀಸರು ಶನಿವಾರ ಸಂಜೆ ವಾಲ್ಸಾಲ್‌ನ ಪಾರ್ಕ್ ಹಾಲ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಿದ್ದಾರೆ.
ಯುವತಿಯೊಬ್ಬರು ರಸ್ತೆಯಲ್ಲಿ ಮಲಗಿ ಸಹಾಯಕ್ಕಾಗಿ ಕರೆಯುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಬಂದಿತ್ತು. ದಾಳಿಯ ನಂತರ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದಾಗ್ಯೂ, ಆಕೆಯ ಗೌಪ್ಯತೆಯನ್ನು ಕಾಪಾಡುವ ಸಲುವಾಗಿ ಆಕೆಯ ಗುರುತನ್ನು ಎಲ್ಲೂ ಬಿಟ್ಟುಕೊಟ್ಟಿಲ್ಲ. ಶಂಕಿತ ದಾಳಿಕೋರನನ್ನು ಗುರುತಿಸಲು ಪೊಲೀಸರು ಸಾರ್ವಜನಿಕರ ಸಹಾಯವನ್ನು ಕೋರಿದ್ದಾರೆ.
ಘಟನೆ ಸಮಯದಲ್ಲಿಆತ ಕಪ್ಪು ಬಟ್ಟೆ ಧರಿಸಿದ್ದ, ಸಣ್ಣ ಕೂದಲಿತ್ತು, ಆತನ ಬಣ್ಣ ಬಿಳಿ ಎಂದು ಸಾರ್ವಜನಿಕರು ತಿಳಿಸಿದ್ದಾರೆ. ವೆಸ್ಟ್ ಮಿಡ್‌ಲ್ಯಾಂಡ್ಸ್ ಪೊಲೀಸರು ಸಾರ್ವಜನಿಕರಲ್ಲಿ ಈ ಪ್ರದೇಶದಲ್ಲಿ ಯಾವುದೇ ಅನುಮಾನಾಸ್ಪದ ಚಟುವಟಿಕೆ ಅಥವಾ ಯಾವುದೇ ಸಿಸಿಟಿವಿ ಅಥವಾ ಡ್ಯಾಶ್‌ಕ್ಯಾಮ್ ದೃಶ್ಯಾವಳಿಗಳನ್ನು ತಕ್ಷಣ ಪೊಲೀಸರಿಗೆ ವರದಿ ಮಾಡುವಂತೆ ಮನವಿ ಮಾಡಿದ್ದಾರೆ. ಯುವತಿ ಪಂಜಾಬ್ ಮೂಲದವಳು ಎಂದು ಹೇಳಲಾಗುತ್ತಿದೆ.
ಮತ್ತಷ್ಟು ಓದಿ: ಬೆಂಗಳೂರಿನಲ್ಲಿ ಪಶ್ಚಿಮ ಬಂಗಾಳದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ
ಕಳೆದ ಸೆಪ್ಟೆಂಬರ್ ಮಧ್ಯದಲ್ಲಿ ಸಿಖ್ ಯುವತಿ ಮೇಲೆ ಅತ್ಯಾಚಾರ ನಡೆದಿತ್ತು. ಜನಾಂಗೀಯ ನಿಂದನೆ ಮಾಡಿದ ಆರೋಪದ ಮೇಲೆ ಯುನೈಟೆಡ್ ಕಿಂಗ್‌ಡಂನ ವೆಸ್ಟ್ ಮಿಡ್‌ಲ್ಯಾಂಡ್ಸ್ ಪೊಲೀಸರು 30 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದರು. ತನ್ನ ಮೇಲೆ ದೌರ್ಜನ್ಯದ ವೇಳೆ ದಾಳಿಕೋರರು ಜನಾಂಗೀಯ ನಿಂದನೆ ಮಾಡಿದ್ದರು ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ ಎಂದು ವೆಸ್ಟ್ ಮಿಡ್‌ಲ್ಯಾಂಡ್ಸ್ ಪೋಲಿಸರು ತಿಳಿಸಿದ್ದಾರೆ.
ಘಟನೆಯನ್ನು ನೀಚ, ಜನಾಂಗೀಯ ಮತ್ತು ಸ್ತ್ರೀದ್ವೇಷಿ ದಾಳಿ ಎಂದು ಬಣ್ಣಿಸಿದ ಇಲ್ಫೋರ್ಡ್ ಸೌಥ್ ಸಂಸದ ಜಸ್ ಅಥ್ವಾಲ್ ಅವರು,ಯುವತಿಯೋರ್ವಳನ್ನು ಜೀವಮಾನ ಪರ್ಯಂತ ಆಘಾತಕ್ಕೊಳಗಾಗಿಸಿರುವ ಈ ಘಟನೆಯು ದೇಶದಲ್ಲಿ ಹೆಚ್ಚುತ್ತಿರುವ ಜನಾಂಗೀಯ ಉದ್ವಿಗ್ನತೆಗಳನ್ನು ಪ್ರತಿಬಿಂಬಿಸುತ್ತಿದೆ ಎಂದು ಎಚ್ಚರಿಸಿದ್ದರು.
ಇದಕ್ಕೂ ಒಂದು ವಾರಗಳ ಹಿಂದಷ್ಟೇ ವೋಲ್ವರ್‌ಹ್ಯಾಂಪ್ಟನ್ ರೈಲು ನಿಲ್ದಾಣದ ಹೊರಗೆ ಇಬ್ಬರು ಸಿಖ್ ವ್ಯಕ್ತಿಗಳ ಮೇಲೆ ಯುವಕರ ಗುಂಪೊಂದು ಕ್ರೂರ ಹಲ್ಲೆ ನಡೆಸಿತ್ತು. ಪಕ್ಕದಲ್ಲಿದ್ದವರು ಮಧ್ಯ ಪ್ರವೇಶಿಸುವವರೆಗೂ ಅವರು ವೃದ್ಧರನ್ನು ಪದೇ ಪದೇ ಒದೆಯುತ್ತಿದ್ದನ್ನು ಚಿತ್ರೀಕರಿಸಿಕೊಳ್ಳಲಾಗಿತ್ತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




