ಲಂಡನ್ ಜನವರಿ 19: ಯುಕೆ ಸಂಸತ್ತಿನ (UK Parliament) ಆವರದಲ್ಲಿ ‘ಜೈ ಶ್ರೀ ರಾಮ್’ ಘೋಷಣೆ ಮೊಳಗಿದೆ. ಎಲ್ಲೆಡೆ ರಾಮ ನಾಮ ಪ್ರತಿಧ್ವನಿಸುತ್ತಿದ್ದಂತೆ ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿರುವ ರಾಮಮಂದಿರದ (Ram Janmabhoomi Temple) ಉದ್ಘಾಟನಾ ಸಮಾರಂಭದ ಉತ್ಸಾಹವು ಭೌಗೋಳಿಕ ಮತ್ತು ಸಾಂಸ್ಕೃತಿಕ ಗಡಿಗಳನ್ನು ದಾಟಿದೆ ಎಂಬುದನ್ನು ಇಲ್ಲಿ ಕಾಣಬಹುದು. ಪ್ರಾಣ-ಪ್ರತಿಷ್ಠಾ ಸಮಾರಂಭದ ಆಚರಣೆಗಳನ್ನು ಯುಕೆಯ ಸನಾತನ ಸಂಸ್ಥೆ (SSUK) ಪ್ರಾರಂಭಿಸಿದ್ದು ಶ್ರೀರಾಮನ ಜಪ ಮತ್ತು ಶಂಖದ ಧ್ವನಿಯೊಂದಿಗೆ ಹೌಸ್ ಆಫ್ ಕಾಮನ್ಸ್‌ನಲ್ಲಿ ಮೊಳಗಿತು.
ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಆಗಿರುವ ವಿಡಿಯೊ ಪ್ರಕಾರ, ಭಗವಾನ್ ರಾಮನನ್ನು ‘ಯುಗ ಪುರುಷ’ ಎಂದು ಶ್ಲಾಘಿಸುವ ಕಾರ್ಯಕ್ರಮವು ಭಜನೆಯೊಂದಿಗೆ ಪ್ರಾರಂಭವಾಯಿತು. SSUK ಸದಸ್ಯರು ಕಾಕಭೂಶುಂಡಿ ಸಂವಾದದ ಪ್ರಸ್ತುತಿಯೊಂದಿಗೆ ಆರಂಭವಾದ ಈ ಕಾರ್ಯಕ್ರಮ ಭಗವದ್ಗೀತೆಯ 12 ನೇ ಅಧ್ಯಾಯವನ್ನು ಪಠಿಸುವ ಮೂಲಕ ಭಗವಾನ್ ವಿಷ್ಣುವಿನ 10 ನೇ ಅವತಾರವಾದ ಭಗವಾನ್ ಕೃಷ್ಣನಿಗೆ ಗೌರವ ಸಲ್ಲಿಸಿದರು.
“Jai Shri Ram” chants echo in UK Parliament. pic.twitter.com/T9BfCRWrk3
— sansadflix (@sansadflix) January 19, 2024
ಹಾರೋ ಸಂಸದ ಬಾಬ್ ಬ್ಲ್ಯಾಕ್‌ಮನ್, ರಾಜ್ ರಾಜೇಶ್ವರ್ ಗುರು ಮತ್ತು ಹನ್ಸ್ಲೋ ಬ್ರಹ್ಮಋಷಿ ಆಶ್ರಮದ ಸ್ವಾಮಿ ಸೂರ್ಯ ಪ್ರಭಾ ದೀದಿ ಆಧ್ಯಾತ್ಮಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಏತನ್ಮಧ್ಯೆ, ದೇಶಾದ್ಯಂತ 200 ಕ್ಕೂ ಹೆಚ್ಚು ದೇವಾಲಯಗಳು, ಸಮುದಾಯ ಸಂಘಟನೆಗಳು ಮತ್ತು ಸಂಘಗಳು ಸಹಿ ಮಾಡಿದ ಯುಕೆ ಘೋಷಣೆಯನ್ನು ಜನವರಿ 22 ರಂದು ಪ್ರಾಣ-ಪ್ರತಿಷ್ಠಾ ಸಮಾರಂಭದ ಮೊದಲು ದೇವಾಲಯದ ಪಟ್ಟಣದಲ್ಲಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಪ್ರಸ್ತುತಪಡಿಸಲಾಗುತ್ತದೆ.
ಬ್ರಿಟನ್‌ನಲ್ಲಿರುವ ಧಾರ್ವಿುಕ ಸಮುದಾಯಗಳು ಅಯೋಧ್ಯೆಯ ರಾಮಜನ್ಮಭೂಮಿ ಮಂದಿರದ ಪ್ರತಿಷ್ಠಾಪನೆ ಸಮಾರಂಭವನ್ನು ಸ್ವಾಗತಿಸಲು ಸಂತೋಷವನ್ನು ವ್ಯಕ್ತಪಡಿಸಿವೆ. ಪ್ರಾಣ ಪ್ರತಿಷ್ಠಾ ಸಮಾರಂಭದ ಮೊದಲು, ಏಕತೆಗೆ ಸಾಕ್ಷಿಯಾದ ಯುಕೆ ಘೋಷಣೆಯನ್ನು ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ನೀಡಲಾಗುವುದು” ಎಂದು ಹೇಳಿಕೆ ತಿಳಿಸಿದೆ.
ಏತನ್ಮಧ್ಯೆ, ಅಯೋಧ್ಯೆಯಲ್ಲಿ ಸಿದ್ಧತೆಗಳು ಭರದಿಂದ ಸಾಗಿವೆ. ಪ್ರಾಣ ಪ್ರತಿಷ್ಠೆಗೂ ಮುನ್ನ ಶುಕ್ರವಾರ ರಾಮ್ ಲಲ್ಲಾ ಮುಖದ ಮೊದಲ ನೋಟವನ್ನು ಹಂಚಿಕೊಳ್ಳಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ಫೋಟೋಗಳಲ್ಲಿ, ಐದು ವರ್ಷದ ಭಗವಾನ್ ರಾಮನು ಕೈಯಲ್ಲಿ ಚಿನ್ನದ ಬಿಲ್ಲು ಮತ್ತು ಬಾಣದೊಂದಿಗೆ ನಿಂತಿರುವುದನ್ನು ಕಾಣಬಹುದು.
ಇದನ್ನೂ ಓದಿ: Ram Lalla: ಅಯೋಧ್ಯೆ ರಾಮಮಂದಿರದ ರಾಮಲಲ್ಲಾ ಹೇಗಿದ್ದಾನೆ? ವೈರಲ್ ಆಯ್ತು ಫೋಟೋ
ರಾಮ ಲಲ್ಲಾ ಪ್ರಾಣ-ಪ್ರತಿಷ್ಠಾ ಸಮಾರಂಭಕ್ಕಾಗಿ ವಾರದ ವೈದಿಕ ಆಚರಣೆಗಳು ಶುಕ್ರವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ನಂತರ ‘ನವಗ್ರಹ’ ಮತ್ತು ‘ಹವನ’ ಸ್ಥಾಪನೆಯ ನಂತರ ಪವಿತ್ರ ಅಗ್ನಿಯನ್ನು ಬೆಳಗಿಸಲಾಯಿತು. ವಿಧಿವಿಧಾನಗಳು ಮಂಗಳವಾರ ಆರಂಭಗೊಂಡಿದ್ದು, ಜನವರಿ 22 ರಂದು ಪ್ರಾಣ-ಪ್ರತಿಷ್ಠಾ ಸಮಾರಂಭದೊಂದಿಗೆ ಮುಕ್ತಾಯಗೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ರಾಮ್ ಲಲ್ಲಾ ಅವರ ಪ್ರತಿಷ್ಠಾಪನೆಯ ಅಧ್ಯಕ್ಷತೆ ವಹಿಸಲಿದ್ದಾರೆ. ಜನವರಿ 23 ರಿಂದ ಸಾರ್ವಜನಿಕರಿಗೆ ‘ದರ್ಶನ’ಕ್ಕಾಗಿ ದೇವಾಲಯವು ತೆರೆದಿರುತ್ತದೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ