Ram Lalla: ಅಯೋಧ್ಯೆ ರಾಮಮಂದಿರದ ರಾಮಲಲ್ಲಾ ಹೇಗಿದ್ದಾನೆ? ವೈರಲ್ ಆಯ್ತು ಫೋಟೋ

ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ಫೋಟೋಗಳಲ್ಲಿ, ಐದು ವರ್ಷದ ಭಗವಾನ್ ರಾಮ ಅಥವಾ ರಾಮಲಲ್ಲಾ ಕೈಯಲ್ಲಿ ಚಿನ್ನದ ಬಿಲ್ಲು ಮತ್ತು ಬಾಣದೊಂದಿಗೆ ನಿಂತಿರುವುದನ್ನು ಕಾಣಬಹುದು. ಪ್ರಾಣ ಪ್ರತಿಷ್ಠಾಪನೆಯ ಮುಹೂರ್ತದ ಜನವರಿ 22 ರಂದು ಮಧ್ಯಾಹ್ನ 12.30 ಕ್ಕೆ ಮಾತ್ರ ವಿಗ್ರಹದ ಕಣ್ಣುಗಳನ್ನು ತೆರೆಯಲಾಗುತ್ತದೆ

Ram Lalla: ಅಯೋಧ್ಯೆ ರಾಮಮಂದಿರದ ರಾಮಲಲ್ಲಾ ಹೇಗಿದ್ದಾನೆ? ವೈರಲ್ ಆಯ್ತು ಫೋಟೋ
ರಾಮ ಲಲ್ಲಾ
Follow us
ರಶ್ಮಿ ಕಲ್ಲಕಟ್ಟ
|

Updated on:Jan 19, 2024 | 5:47 PM

ದೆಹಲಿ ಜನವರಿ 19: ಅಯೋಧ್ಯೆಯಲ್ಲಿರುವ (Ayodhya) ರಾಮಮಂದಿರದಲ್ಲಿ (Ram mandir)  ಜನವರಿ 22 ರಂದು ನಡೆಯುವ ಪ್ರಾಣ ಪ್ರತಿಷ್ಠೆಯ ಮುನ್ನ ಶುಕ್ರವಾರ ರಾಮ ಲಲ್ಲಾನ (Ram Lalla) ಮುಖದ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ಫೋಟೋಗಳಲ್ಲಿ, ಐದು ವರ್ಷದ ಭಗವಾನ್ ರಾಮನು ಕೈಯಲ್ಲಿ ಚಿನ್ನದ ಬಿಲ್ಲು ಮತ್ತು ಬಾಣದೊಂದಿಗೆ ನಿಂತಿರುವುದನ್ನು ಕಾಣಬಹುದು.

ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ವಿಗ್ರಹವನ್ನು ತಯಾರಿಸಿದ ಕಾರ್ಯಾಗಾರದ ಚಿತ್ರಗಳಾಗಿವೆ ಇವು. ಪ್ರಾಣ ಪ್ರತಿಷ್ಠಾಪನೆಯ ಮುಹೂರ್ತದ ಜನವರಿ 22 ರಂದು ಮಧ್ಯಾಹ್ನ 12.30 ಕ್ಕೆ ಮಾತ್ರ ವಿಗ್ರಹದ ಕಣ್ಣುಗಳನ್ನು ತೆರೆಯಲಾಗುತ್ತದೆ. ಗುರುವಾರ 51 ಇಂಚಿನ ಕಪ್ಪು ಶಿಲೆಯ ಮೂರ್ತಿಯನ್ನು ಗರ್ಭಗುಡಿಯಲ್ಲಿ ಬಟ್ಟೆ ಹೊದಿಸಿಡಲಾಗಿತ್ತು . ವಿಶ್ವ ಹಿಂದೂ ಪರಿಷತ್ ಶೇರ್ ಮಾಡಿದ ರಾಮ್ ಲಲ್ಲಾನ ಮೊದಲ ಫೋಟೋ ಕಪ್ಪು ಪ್ರತಿಮೆಯ ಕಣ್ಣುಗಳನ್ನು ಹಳದಿ ಬಟ್ಟೆಯಿಂದ ಮುಚ್ಚಲಾಗಿತ್ತು.

ಒಂದು ವಾರದ ಹಿಂದೆ ಜ.16ರಂದು ಆರಂಭವಾದ ಪ್ರಾಣಪ್ರತಿಷ್ಠಾ ಕಾರ್ಯದ ಪೂರ್ವಭಾವಿ ಕಾರ್ಯಕ್ರಮಗಳು ಶುಕ್ರವಾರ 4ನೇ ದಿನಕ್ಕೆ ಕಾಲಿಟ್ಟಿವೆ. ಪೂಜೆಗಾಗಿ ಪವಿತ್ರ ಅಗ್ನಿಯನ್ನು ಇಂದು ಸ್ಥಾಪಿಸಲಾಗುವುದು.

ನೇತ್ರೋನ್ಮಿಲನ್, ಪ್ರಾಣ-ಪ್ರತಿಷ್ಠಾ

ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯ ಗಿವಿಂದ್ ದೇವ್ ಗಿರಿ ಅವರು ಎಎನ್ಐ ಸುದ್ದಿಸಂಸ್ಥೆಗೆ ವಿವರಿಸಿದಂತೆ, ರಾಮಲಲ್ಲಾ ಪ್ರತಿಮೆಯ ಅನಾವರಣವನ್ನು ಚಿನ್ನದ ಪಟ್ಟಿಗೆ ಜೇನುತುಪ್ಪವನ್ನು ಸವರುವ ಮೂಲಕ ಮಾಡಲಾಗುತ್ತದೆ. ಪ್ರಾಣ ಪ್ರತಿಷ್ಠೆಯ ಮುನ್ನ ಜನವರಿ 22 ರಂದು ರಾಮ ಲಲ್ಲಾ  ಕಣ್ಣುಗಳ ಮೇಲಿನ ಬಟ್ಟೆಯನ್ನು ತೆಗೆದುಹಾಕಲಾಗುತ್ತದೆ. ” ನೇತ್ರೋನ್ಮಿಲನ್,” ನ ಮೂಲ ವಿಧಾನವೆಂದರೆ ಚಿನ್ನದ ಪಟ್ಟಿಗೆ ಜೇನುತುಪ್ಪವನ್ನು ಸವರುವ ಮೂಲಕ ಕಣ್ಣುಗಳು ಹೊಳೆಯುವಂತೆ ಮಾಡಲಾಗುತ್ತದೆ. ಇದು ಜನರಿಗೆ ‘ಕಾಜಲ್’ನಂತೆ ಕಾಣುತ್ತದೆ ಎಂದಿದ್ದಾರೆ.

ಇದನ್ನೂ ಓದಿ: ರಾಮಮಂದಿರಕ್ಕೆ ಕರ್ನಾಟಕದಿಂದ 51 ಅಡಿ ಕೇಸರಿ ಧ್ವಜ ಅರ್ಪಣೆ

ಅರುಣ್ ಯೋಗಿರಾಜ್ ಅವರ ರಾಮ ಲಲ್ಲಾ ವಿಗ್ರಹ

ಅರುಣ್ ಯೋಗಿರಾಜ್ ಅವರ ವಿಗ್ರಹವನ್ನು ಸಮಿತಿಯು ಸರ್ವಾನುಮತದಿಂದ ಆಯ್ಕೆ ಮಾಡಿದೆ ಏಕೆಂದರೆ ಅದು ರಾಮ್ ಲಲ್ಲಾ ಅವರನ್ನು ಐದು ವರ್ಷದ ಮಗುವಿನಂತೆ ಅತ್ಯಂತ ವಿಶಿಷ್ಟವಾಗಿ ಚಿತ್ರಿಸಿದೆ. ವಿಗ್ರಹವು ಸುಮಾರು 150-200 ಕೆಜಿ ತೂಕವಿದ್ದು, ಕಪ್ಪು ಕಲ್ಲಿನಿಂದ ಕೆತ್ತಲಾಗಿದೆ. ವರದಿಗಳ ಪ್ರಕಾರ, ಕಪ್ಪು ಕಲ್ಲನ್ನು ಹೊರತೆಗೆಯಲಾದ ಬಂಡೆಯು ಮೂರು ಶತಕೋಟಿ ವರ್ಷಗಳಷ್ಟು ಹಳೆಯದಾದ ಬಂಡೆಯಾಗಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:24 pm, Fri, 19 January 24