ಇಸ್ರೇಲ್​​​​ – ಹಮಾಸ್​​​ ಸಂಘರ್ಷ: ಪ್ಯಾಲೆಸ್ಟೈನ್ ಜತೆ ಮಾತುಕತೆ ನಡೆಸಲು ಇಷ್ಟವಿಲ್ಲ: ಬೆಂಜಮಿನ್ ನೆತನ್ಯಾಹು

ಹಮಾಸ್​​​ಗೆ ಬೆಂಬಲ ನೀಡುವ ಪ್ಯಾಲೆಸ್ಟೈನ್ ಜತೆಗೆ ನಾವು ಯಾವುದೇ ರೀತಿ ಮಾತುಕತೆಗಳನ್ನು ನಡೆಸುವುದಿಲ್ಲ, ಹಾಗೂ ಪ್ಯಾಲೆಸ್ಟೈನ್ ಜತೆಗೆ ಪರಿಹಾರತ್ಮಕ ಒಪ್ಪಂದಗಳನ್ನು ಮಾಡಿಕೊಳ್ಳಲು ಇಷ್ಟಪಡುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.

ಇಸ್ರೇಲ್​​​​ - ಹಮಾಸ್​​​ ಸಂಘರ್ಷ: ಪ್ಯಾಲೆಸ್ಟೈನ್ ಜತೆ ಮಾತುಕತೆ ನಡೆಸಲು ಇಷ್ಟವಿಲ್ಲ: ಬೆಂಜಮಿನ್ ನೆತನ್ಯಾಹು
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 20, 2024 | 4:14 PM

ಇಸ್ರೇಲ್​​​ ಮತ್ತು ಹಮಾಸ್​​​​  (Israel – Hamas) ನಡುವಿನ ಸಂಘರ್ಷ ಇನ್ನು ಮುಗಿದಿಲ್ಲ. ಕದನ ವಿರಾಮದ ನಡುವೆಯು ಇಸ್ರೇಲ್​​​ ಮತ್ತು ಹಮಾಸ್​​​ ನಡುವೆ ದಿನದಿಂದ ದಿನಕ್ಕೆ ಒಂದೊಂದು ಬೆಳವಣಿಗೆ ನಡೆಯುತ್ತಿದೆ. ಇನ್ನು ಹಮಾಸ್​​​ಗೆ ಬೆಂಬಲ ನೀಡುವ ಪ್ಯಾಲೆಸ್ಟೈನ್ ಜತೆಗೆ ನಾವು ಯಾವುದೇ ರೀತಿ ಮಾತುಕತೆಗಳನ್ನು ನಡೆಸುವುದಿಲ್ಲ, ಹಾಗೂ ಪ್ಯಾಲೆಸ್ಟೈನ್ ಜತೆಗೆ ಪರಿಹಾರತ್ಮಕ ಒಪ್ಪಂದಗಳನ್ನು ಮಾಡಿಕೊಳ್ಳಲು ಇಷ್ಟಪಡುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.

ಪ್ಯಾಲೆಸ್ಟೈನ್ ತುಂಬಾ ಅಪಾಯಕಾರಿ, ಅದರ ಜತೆಗೆ ಒಪ್ಪಂದ ಮಾಡಿಕೊಂಡರೆ ನಮ್ಮ ನಾಶವನ್ನು ನಾವೇ ಮಾಡಿಕೊಂಡಂತೆ ಎಂದು ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ. ಈ ಸಂಘರ್ಷದಲ್ಲಿ ನಾವು ವಿಜಯ ಸಾಧಿಸುವರೆಗೆ ಯಾವುದೇ ಮಾತುಕತೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಭವಿಷ್ಯದಲ್ಲಿ ಇಸ್ರೇಲ್ ಜೋರ್ಡಾನ್ ನದಿಯನ್ನು ರಕ್ಷಣೆ ಮಾಡಬೇಕಿದೆ. ಜೋರ್ಡಾನ್ ನದಿಯ ಪಶ್ಚಿಮ ಭಾಗದ ಸಂಪೂರ್ಣ ಪ್ರದೇಶದ ಮೇಲೆ ಇಸ್ರೇಲ್ ಭದ್ರತಾ ನಿಯಂತ್ರಣವನ್ನು ಹೊಂದಿರಬೇಕು ಎಂದು ಹೇಳಿದ್ದಾರೆ.

ಈಗಾಗಲೇ ಗಾಜಾದಲ್ಲಿ ಇಲ್ಲಿಯವರೆಗೆ ಸುಮಾರು 25,000 ಪ್ಯಾಲೆಸ್ಟೀನಿಯ ಪ್ರಜೆಗಳು ಸಾವನ್ನಪ್ಪಿದ್ದಾರೆ. ಶೇಕಾಡ 85ರಷ್ಟು ಜನರನ್ನು ಗಾಜಾದಿಂದ ಸ್ಥಳಾಂತರಿಸಲಾಗಿದೆ ಎಂದು ಹಮಾಸ್​​​ ಆರೋಗ್ಯ ಸಚಿವಾಲಯ ನೀಡಿದ ವರದಿಯಲ್ಲಿ ಹೇಳಿದೆ. ಇದು ಹೀಗೆ ಮುಂದುವರಿದರೆ ದೊಡ್ಡ ನಾಶವನ್ನು ಅನುಭವಿಸಬೇಕಾಗುತ್ತದೆ ಎಂದು ಹೇಳಿದೆ. ಈ ಕಾರಣಕ್ಕೆ ಅಮೆರಿಕ ಸೇರಿದಂತೆ ಇಸ್ರೇಲ್​​​ ಮಿತ್ರರಾಷ್ಟ್ರಗಳು ಹಾಗೂ ಶತ್ರು ರಾಷ್ಟ್ರಗಳು ಉಭಯ ರಾಷ್ಟ್ರಗಳ ಮುಖಾಮುಖಿ ಮಾತಕತೆ ನಡೆಸುವಂತೆ ಸಲಹೆ ನೀಡಿದೆ.

ಇದನ್ನೂ ಓದಿ: ಘನಘೋರ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್​​, ಅಮಾಯಕ ಯುವತಿಯನ್ನು ಗುಂಡಿಕ್ಕಿ ಕೊಂದ ಹಮಾಸ್​​

ಇನ್ನು ಗಾಜಾದಲ್ಲಿರುವ ಪ್ಯಾಲೆಸ್ಟೀನಿಯರ ರಕ್ಷಣೆಯನ್ನು ಮಾಡುವಂತೆ ಇಸ್ರೇಲ್​​​​ಗೆ ಅಮೆರಿಕದ ಅಧ್ಯಕ್ಷ ಜೋಬೈಡನ್​​​​ ಮನವಿ ಮಾಡಿದ್ದಾರೆ. ಆದರೆ ಇದನ್ನು ಇಸ್ರೇಲ್​ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು ಪರಿಗಣಿಸಿಲ್ಲ. ಜತೆಗೆ ಗಾಜಾದ ಮೇಲೆ ದಾಳಿ ಮಾಡುವಂತೆ ಆದೇಶವನ್ನು ನೀಡಿದ್ದಾರೆ. ಇನ್ನು ಈ ದಾಳಿಯಿಂದ ಅನೇಕ ಪ್ಯಾಲೆಸ್ಟೀನಿಯರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ