ಇಸ್ರೇಲ್-ಹಮಾಸ್ ಯುದ್ಧ: ಹಮಾಸ್​​​ ಅಡಗಿಕೊಂಡಿದ್ದ ರಾಂಟಿಸ್ಸಿ ಆಸ್ಪತ್ರೆಯ ನೆಲಮಾಳಿಗೆ ಪತ್ತೆ, ಇಸ್ರೇಲ್​​ ಕಾರ್ಯಚರಣೆ ಹೀಗಿತ್ತು

ಇದೀಗ ಒತ್ತೆಯಾಳುಗಳಾಗಿ ಇಟ್ಟುಕೊಂಡಿರುವ ಜಾಗವನ್ನು ಇಸ್ರೇಲ್​​ ಸೇನೆ ಪತ್ತೆ ಮಾಡಿದೆ. ಇದರ ಜತೆಗೆ ಹಮಾಸ್​​​ ತನ್ನ ಶಸ್ತ್ರಾಸ್ತ್ರಗಳನ್ನು ಇಟ್ಟಿರುವ ಗಾಜಾದಲ್ಲಿನ ಮಕ್ಕಳ ಆಸ್ಪತ್ರೆಯ ನೆಲಮಾಳಿಗೆಯ ಮೇಲೆ ಇಸ್ರೇಲ್ ಪತ್ತೆ​​ ಮಾಡಿದೆ ಎಂದು ವಿಡಿಯೋವೊಂದನ್ನು ಇಸ್ರೇಲ್​​ ಮಿಲಿಟರಿ ಬಿಡುಗಡೆ ಮಾಡಿದೆ.

ಇಸ್ರೇಲ್-ಹಮಾಸ್ ಯುದ್ಧ: ಹಮಾಸ್​​​ ಅಡಗಿಕೊಂಡಿದ್ದ ರಾಂಟಿಸ್ಸಿ ಆಸ್ಪತ್ರೆಯ ನೆಲಮಾಳಿಗೆ ಪತ್ತೆ, ಇಸ್ರೇಲ್​​ ಕಾರ್ಯಚರಣೆ ಹೀಗಿತ್ತು
ಸಾಂದರ್ಭಿಕ ಚಿತ್ರ
Follow us
ಅಕ್ಷಯ್​ ಪಲ್ಲಮಜಲು​​
|

Updated on:Nov 14, 2023 | 11:32 AM

ಇಸ್ರೇಲ್​ ಮತ್ತು ಹಮಾಸ್​​​ ಘರ್ಷಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಸ್ರೇಲ್​​​​​​​ ಎಡೆ ಎತ್ತಿದ ಹಾವಿನಂತಾಗಿದೆ. ಹಮಾಸ್​​​ ಹಲ್ಲುಕಿತ್ತ ಹಾವಿನಂತಾಗಿದೆ. ಇದೀಗ ಹಮಾಸ್​​ಗೆ ಇಸ್ರೇಲ್​​​​​​​​ನ ದಾಳಿಯನ್ನು ಸಹಿಕೊಳ್ಳುವ ಶಕ್ತಿ ಇಲ್ಲ. ತನ್ನಲ್ಲಿದ್ದ ಎಲ್ಲ ಅಸ್ತ್ರವನ್ನು ಹಮಾಸ್​​​ ಇಸ್ರೇಲ್​​ ಮೇಲೆ ಉಪಯೋಗಿಸಿದೆ. ಆದರೆ ಇಸ್ರೇಲ್​​​ ಯಾವುದಕ್ಕೂ ಭಯಪಡದೆ, ಹಮಾಸ್​​​ಗೆ ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ನೀಡಿದೆ. ಹಮಾಸ್​ ಮಾಡಿದ ತಪ್ಪಿಗೆ ತಾನೇ ಅನುಭವಿಸುತ್ತಿದೆ. ಕರ್ಮ ರಿಟನ್​​ ಹೇಳುವುದು ಇದಕ್ಕೆ. ಹಮಾಸ್​​ ಈಗಾಗಲೇ ಇಸ್ರೇಲ್​​ ಸೇರಿದಂತೆ ಗಾಜಾದಲ್ಲಿದ್ದ ಬೇರೆ ಬೇರೆ ದೇಶದ ನಾಗರಿಕರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದಾರೆ. ಇದೀಗ ಒತ್ತೆಯಾಳುಗಳಾಗಿ ಇಟ್ಟುಕೊಂಡಿರುವ ಜಾಗವನ್ನು ಇಸ್ರೇಲ್​​ ಸೇನೆ ಪತ್ತೆ ಮಾಡಿದೆ. ಇದರ ಜತೆಗೆ ಹಮಾಸ್​​​ ತನ್ನ ಶಸ್ತ್ರಾಸ್ತ್ರಗಳನ್ನು ಇಟ್ಟಿರುವ ಗಾಜಾದಲ್ಲಿನ ಮಕ್ಕಳ ಆಸ್ಪತ್ರೆಯ ನೆಲಮಾಳಿಗೆಯ ಮೇಲೆ ಇಸ್ರೇಲ್​​ ಪತ್ತೆ ಮಾಡಿದೆ ಎಂದು ವಿಡಿಯೋವೊಂದನ್ನು ಇಸ್ರೇಲ್​​ ಮಿಲಿಟರಿ ಬಿಡುಗಡೆ ಮಾಡಿದೆ.

ಹಮಾಸ್​​ ಶಸ್ತ್ರಾಸ್ತ್ರಗಳಿರುವ ಮಕ್ಕಳ ಆಸ್ಪತ್ರೆಯ ನೆಲಮಾಳಿಗೆ ಮೇಲೆ ಇಸ್ರೇಲ್​​​ ಕಾರ್ಯಚರಣೆ ಹೇಗಿತ್ತು?

1. ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡುವ ವಿಶೇಷ ಮಕ್ಕಳ ಆಸ್ಪತ್ರೆಯಾದ ರಾಂಟಿಸ್ಸಿ ಆಸ್ಪತ್ರೆಯ ನೆಲಮಾಳಿಗೆಯಲ್ಲಿ ಹಮಾಸ್ ಉಗ್ರರರು ಸಂಗ್ರಹಿಸಿದ ಗ್ರೆನೇಡ್‌ಗಳು, ಆತ್ಮಾಹುತಿ ಬಾಂಬ್​​ ಮತ್ತು ಇತರ ಸ್ಫೋಟಕಗಳು ಸೇರಿದಂತೆ ಶಸ್ತ್ರಾಸ್ತ್ರಗಳ ಕಮಾಂಡ್ ಸೆಂಟರ್​​ನ್ನು ಇಸ್ರೇಲ್​ ಪಡೆಗಳು ಪತ್ತೆ ಮಾಡಿದೆ ಎಂದು ಇಸ್ರೇಲ್ ಮಿಲಿಟರಿ ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ ಹೇಳಿದ್ದಾರೆ. ಇದರ ಜತೆಗೆ ಈ ಪ್ರದೇಶದಲ್ಲಿ ಒತ್ತೆಯಾಳುಗಳನ್ನು ಕೂಡ ಪತ್ತೆ ಮಾಡಲಾಗಿದೆ.

2. ಇಸ್ರೇಲ್​​ ಪಡೆ ಬಿಡುಗಡೆ ಮಾಡಿದ ವಿಡಿಯೋದಲ್ಲಿ ರಾಂಟಿಸ್ಸಿ ಆಸ್ಪತ್ರೆಯ ಅಡುಗೆ ಮನೆಯಲ್ಲಿ ಹಮಾಸ್​​ ವಾಸಸ್ಥಳವನ್ನು ತೋರಿಸಲಾಗಿದೆ. ಇದರ ಪಕ್ಕದಲ್ಲೇ ಒಂದು ಸುರಂಗ ಇದೆ ಅಲ್ಲಿಂದ ಹಮಾಸ್​​ ಕಮಾಂಡರ್​​​ನ ಮನೆ ಕಾಣಿಸುತ್ತದೆ. ಇನ್ನು ಅಕ್ಟೋಬರ್​​​ ಏಳರಂದು ಹಮಾಸ್ ಇಸ್ರೇಲ್​​​ ಮೇಲೆ ದಾಳಿ ಮಾಡಿ, 1,200 ಜನರನ್ನು ಕೊಂದು ಅನೇಕರನ್ನು ಒತ್ತೆಯಾಳುಗಳಾಗಿ ಇರಿಸಿಕೊಳ್ಳಲು. ಹಮಾಸ್​ ಗುಂಡಿನ ಗುರುತುಗಳೊಂದಿಗೆ ಮೋಟಾರ್ಸೈಕಲ್​​​ನ್ನು ಬಳಸಿತ್ತು ಎಂದು ಇಸ್ರೇಲ್​ ಪಡೆ ಹೇಳಿದೆ.

3. ಈ ಹಿಂದೆ ಯುವತಿಯೊಬ್ಬನ್ನು ಒತ್ತೆಯಾಳುಯಾಗಿ ಇಟ್ಟುಕೊಂಡಿದ್ದ ಹಮಾಸ್​​ ಒಂದು ವಿಡಿಯೋವನ್ನು ವೈರಲ್​​ ಮಾಡಿತ್ತು. ಆಕೆ ಮನೆಯವರು ಈ ಬಗ್ಗೆ ಕಳವಳವನ್ನು ಕೂಡ ವ್ಯಕ್ತಪಡಿಸಿದರು. ಇದೀಗ ಆಕೆ ಇರುವ ಪ್ರದೇಶದ ಮೇಲೆ ಇಸ್ರೇಲ್​​ ತನ್ನ ಕಾರ್ಯಚರಣೆಯನ್ನು ಮುಮದುವರಿಸಿದೆ.

4. ಇನ್ನು ಸೋಮವಾರ ರಾತ್ರಿ, ಹಮಾಸ್‌ನ ಎಝೆಡಿನ್ ಅಲ್-ಕಸ್ಸಾಮ್ ಬ್ರಿಗೇಡ್‌ ಸೈನಿಕ ಹೀಬ್ರೂ ಭಾಷೆಯಲ್ಲಿ ಸಂದೇಶವೊಂದನ್ನು ಓದುತ್ತಿರುವ ವೀಡಿಯೊವನ್ನು ಬಿಡುಗಡೆಯಾಗಿದೆ. ಒತ್ತೆಯಾಳುಯೊಬ್ಬ ಬಗ್ಗೆ ಅಂದರೆ ಅವಳ ಐಡಿ ಕಾರ್ಡ್​​​ ಹಾಗೂ ಹಲವು ದಾಖಲೆಗಳನ್ನು ಈ ವಿಡಿಯೋದಲ್ಲಿ ತಿಳಿಸಲಾಗಿದೆ. ಹೀಗೆ ಹಮಾಸ್​​ ಒಂದಲ್ಲ ಒಂದು ವಿಡಿಯೋವನ್ನು ಒತ್ತೆಯಾಳುಗಳು ಕುಟುಂಬಕ್ಕೆ ಕಳುಹಿಸುತ್ತಿದೆ.

5. ಈಗಾಗಲೇ ಇಸ್ರೇಲ್​​​ ಟ್ಯಾಂಕರ್​​ಗಳು ಹಮಾಸ್​​​ ನೆಲೆಸಿರರುವ ಗಾಜಾ ನಗರದ ಮುಖ್ಯ ವೈದ್ಯಕೀಯ ಕೇಂದ್ರವಾದ ಅಲ್ ಶಿಫಾ ಆಸ್ಪತ್ರೆಯ ಹೊರಗೆ ನಿಂತಿದೆ. ಹಮಾಸ್​​​ ಉಗ್ರರ ಪ್ರಧಾನ ಕಚೇರಿ ಮುಂದೆ ಇಸ್ರೇಲ್​​ ಸುತ್ತಾಡುತ್ತಿದೆ.

ಇದನ್ನೂ ಓದಿ: ನವೆಂಬರ್​ 30ರವರೆಗೆ ಟೆಲ್ ಅವೀವ್​ಗೆ ವಿಮಾನ ಸೇವೆಯನ್ನು ಸ್ಥಗಿತಗೊಳಿಸಿದ ಏರ್​ ಇಂಡಿಯಾ

6. ಈಗಾಗಲೇ ಯುದ್ಧ ವಿರಾಮ ಘೋಷಣೆ ಮಾಡುವ ಬದಲು ಹಮಾಸ್​​ 70 ಮಹಿಳೆಯರನ್ನು ಮುಕ್ತಗೊಳಿಸುವಂತೆ ತಿಳಿಸಿದೆ. ಅಲ್ ಶಿಫಾವನ್ನು ವಶಪಡಿಸಿಕೊಂಡಿದ್ದು,ಇದರಲ್ಲಿ ಗಾಜಾದ ವೈದ್ಯಕೀಯ ಅಧಿಕಾರಿಗಳು 11,000 ಕ್ಕೂ ಹೆಚ್ಚು ಜನರು ಕೊಂದಿದೆ. ಮೂರು ನವಜಾತ ಶಿಶುಗಳು ಸೇರಿದಂತೆ ಹಿಂದಿನ ಮೂರು ದಿನಗಳಲ್ಲಿ 32 ರೋಗಿಗಳು ಸಾವನ್ನಪ್ಪಿದ್ದಾರೆ.

7., ಉತ್ತರ ಗಾಜಾದಲ್ಲಿ ಆಸ್ಪತ್ರೆಯ ಮುತ್ತಿಗೆ ಹಾಕಿದ ಹಮಾಸ್​​ ಕರೆಂಟ್​​​ ಕೊರತೆಯಿಂದ ಅನೇಕರು ಸಾವನ್ನಪ್ಪಿದ್ದಾರೆ. ಶಿಫಾ ಗಾಜಾದ ಅತಿದೊಡ್ಡ ಮತ್ತು ಉತ್ತಮ-ಸಜ್ಜಿತ ಆಸ್ಪತ್ರೆಯಾಗಿದೆ. ಆದರೆ ಈ ಸೌಲಭ್ಯವನ್ನು ಹಮಾಸ್ ಮಿಲಿಟರಿ ಸರಿಯಾಗಿ ಉಪಯೀಗಿಸುತ್ತಿಲ್ಲ ಎಂದು ಇಸ್ರೇಲ್​​​ ಹೇಳಿದೆ.

8. ಹಮಾಸ್ 16 ವರ್ಷಗಳ ಕಾಲ ಆಳಿದ ಗಾಜಾ ಪಟ್ಟಿಯ ಮೇಲೆ “ನಿಯಂತ್ರಣ ಕಳೆದುಕೊಂಡಿದೆ” ಎಂದು ಇಸ್ರೇಲಿ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಸೋಮವಾರ ಹೇಳಿದ್ದಾರೆ. ಭಯೋತ್ಪಾದಕರು ದಕ್ಷಿಣದ ಕಡೆಗೆ ಪಲಾಯನ ಮಾಡುತ್ತಿದ್ದಾರೆ. ನಾಗರಿಕರು ಹಮಾಸ್ ನೆಲೆಗಳನ್ನು ಲೂಟಿ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:19 am, Tue, 14 November 23

ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ