
ನವದೆಹಲಿ, ನವೆಂಬರ್ 22: ರಷ್ಯಾದೊಂದಿಗಿನ ಯುದ್ಧವನ್ನು ಕೊನೆಗೊಳಿಸಲು ಅಮೆರಿಕ (United States) ಒತ್ತಾಯಿಸುತ್ತಿರುವುದರಿಂದ ನಮ್ಮ ದೇಶವು ತುಂಬಾ ಕಷ್ಟಕರವಾದ ಆಯ್ಕೆಯನ್ನು ಎದುರಿಸುತ್ತಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelenskyy) ಹೇಳಿದ್ದಾರೆ. ಉಕ್ರೇನ್ ದೇಶವು ತನ್ನ ಘನತೆಯನ್ನು ಕಳೆದುಕೊಳ್ಳುವ ಅಥವಾ ಅಮೆರಿಕದ ಬೆಂಬಲ ಪಡೆಯುವ ಅಪಾಯದಲ್ಲಿದೆ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಹೇಳಿದ್ದಾರೆ. ಉಕ್ರೇನ್-ರಷ್ಯಾ ಯುದ್ಧವನ್ನು ಕೊನೆಗೊಳಿಸಲು ಅಮೆರಿಕದ ಯೋಜನೆಗಳ ಮಧ್ಯೆ ಈ ಹೇಳಿಕೆ ಬಂದಿದೆ.
ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ತಮ್ಮ ದೇಶವಾಸಿಗಳಿಗೆ ಒಗ್ಗಟ್ಟಿನಿಂದ ಇರಲು ಮನವಿ ಮಾಡಿದ್ದಾರೆ. ತಾವು ಎಂದಿಗೂ ದೇಶಕ್ಕೆ ದ್ರೋಹ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. “ಇದು ನಮ್ಮ ದೇಶದ ಇತಿಹಾಸದ ಅತ್ಯಂತ ಕಠಿಣ ಕ್ಷಣಗಳಲ್ಲಿ ಒಂದಾಗಿದೆ. ಈಗ ಉಕ್ರೇನ್ ಬಹಳ ಕಷ್ಟಕರವಾದ ಆಯ್ಕೆಯನ್ನು ಎದುರಿಸುತ್ತಿದೆ. ಘನತೆಯನ್ನು ಕಳೆದುಕೊಳ್ಳುವುದು ಅಥವಾ ಪ್ರಮುಖ ಪಾಲುದಾರನನ್ನು ಕಳೆದುಕೊಳ್ಳುವ ಅಪಾಯವಿದೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಝೆಲೆನ್ಸ್ಕಿ ರಷ್ಯಾಕ್ಕೆ ಬಂದರೆ ಭೇಟಿಗೆ ಸಿದ್ಧ; ಉಕ್ರೇನ್ ಸಂಘರ್ಷದ ಬಗ್ಗೆ ಪುಟಿನ್ ಹೇಳಿಕೆ
ರಷ್ಯಾದೊಂದಿಗಿನ ಯುದ್ಧವನ್ನು ಕೊನೆಗೊಳಿಸಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 28 ಅಂಶಗಳ ಪ್ರಸ್ತಾಪದ ಮಧ್ಯೆ ಝೆಲೆನ್ಸ್ಕಿ ಅವರ ಈ ಹೇಳಿಕೆ ಬಂದಿದೆ. ಈ ಪ್ರಸ್ತಾವನೆಯನ್ನು ಸ್ವೀಕರಿಸಲು ಮತ್ತು ರಷ್ಯಾದೊಂದಿಗಿನ ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಅಧ್ಯಕ್ಷ ಟ್ರಂಪ್ ಒಂದು ವಾರಕ್ಕಿಂತ ಕಡಿಮೆ ಸಮಯವನ್ನು ನೀಡಿದ್ದಾರೆ. ಯುಎಸ್ ಮಾಧ್ಯಮಗಳಲ್ಲಿನ ವರದಿಗಳ ಪ್ರಕಾರ, “ಮುಂದಿನ ಗುರುವಾರ ಒಪ್ಪಂದವನ್ನು ಒಪ್ಪಿಕೊಳ್ಳಲು ಉಕ್ರೇನ್‌ಗೆ ಕೊನೆಯ ಗಡುವು” ಎಂದು ಟ್ರಂಪ್ ಹೇಳಿದ್ದಾರೆ.
ಇದನ್ನೂ ಓದಿ: ವಾಗ್ವಾದದಿಂದ ಸಭೆವರೆಗೆ, ಇಂದು ನ್ಯೂಯಾರ್ಕ್ ಮೇಯರ್ ಮಮ್ದಾನಿ ಜತೆ ಟ್ರಂಪ್ ಮಾತುಕತೆ
ಝೆಲೆನ್ಸ್ಕಿ ಈ ಪ್ರಸ್ತಾಪವನ್ನು ಸ್ವೀಕರಿಸಲು ಒಪ್ಪದಿದ್ದರೆ, ಶಸ್ತ್ರಾಸ್ತ್ರಗಳ ಪೂರೈಕೆಯನ್ನು ಕಡಿತಗೊಳಿಸುವುದಾಗಿ ಮತ್ತು ಉಕ್ರೇನ್‌ನೊಂದಿಗೆ ಗುಪ್ತಚರ ಮಾಹಿತಿಗಳನ್ನು ಹಂಚಿಕೊಳ್ಳುವುದನ್ನು ನಿಲ್ಲಿಸುವುದಾಗಿ ಅಮೆರಿಕ ಅಧ್ಯಕ್ಷ ಟ್ರಂಪ್ ಬೆದರಿಕೆ ಹಾಕಿದ್ದಾರೆ ಎಂದು ಮೂಲಗಳು ತಿಳಿಸಿವೆ. ಶಾಂತಿ ಪ್ರಯತ್ನಗಳನ್ನು ಪುನರುಜ್ಜೀವನಗೊಳಿಸಲು ಮತ್ತು ಸುಮಾರು 3 ವರ್ಷಗಳ ಕಾಲ ನಡೆದ ಸಂಘರ್ಷವನ್ನು ಕೊನೆಗೊಳಿಸಲು ವಾಷಿಂಗ್ಟನ್‌ನ ಇತ್ತೀಚಿನ ಪ್ರಯತ್ನವನ್ನು ಇದು ಪ್ರತಿನಿಧಿಸುತ್ತದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ