AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಷ್ಯಾದೊಂದಿಗಿನ ಯುದ್ಧ ಮುಗಿದ ನಂತರ ರಾಜೀನಾಮೆ ನೀಡುತ್ತೇನೆ; ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಘೋಷಣೆ

ರಷ್ಯಾದೊಂದಿಗಿನ ಯುದ್ಧ ಕೊನೆಗೊಂಡ ನಂತರ ತಾನು ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ. ಮತ್ತೊಂದು ಅವಧಿಗೆ ಅಧಿಕಾರ ವಹಿಸಿಕೊಳ್ಳುವ ಬದಲು ಸಂಘರ್ಷವನ್ನು ಮುಕ್ತಾಯಗೊಳಿಸುವುದು ನನ್ನ ಆದ್ಯತೆಯಾಗಿದೆ ಎಂದು ಅವರು ಒತ್ತಿ ಹೇಳಿದ್ದಾರೆ. ಶಾಂತಿ ನೆಲೆಸಿದ ನಂತರ ಉಕ್ರೇನ್ ಅನ್ನು ಮುನ್ನಡೆಸುವ ಉದ್ದೇಶ ನನಗಿಲ್ಲ ಎಂದು ಝೆಲೆನ್ಸ್ಕಿ ಸ್ಪಷ್ಟಪಡಿಸಿದ್ದಾರೆ.

ರಷ್ಯಾದೊಂದಿಗಿನ ಯುದ್ಧ ಮುಗಿದ ನಂತರ ರಾಜೀನಾಮೆ ನೀಡುತ್ತೇನೆ; ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಘೋಷಣೆ
Zelenskyy
ಸುಷ್ಮಾ ಚಕ್ರೆ
|

Updated on: Sep 25, 2025 | 8:20 PM

Share

ಕೈವ್, ಸೆಪ್ಟೆಂಬರ್ 25: ರಷ್ಯಾದೊಂದಿಗಿನ ಯುದ್ಧ ಮುಗಿದ ನಂತರ ತಾನು ಅಧಿಕಾರ ತ್ಯಜಿಸಲು ಸಿದ್ಧನಿದ್ದೇನೆ ಎಂದು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelenskyy) ಹೇಳಿದ್ದಾರೆ. ಈ ಬಗ್ಗೆ ಖಾಸಗಿ ವೆಬ್‌ಸೈಟ್‌ ಜೊತೆ ಮಾತನಾಡಿದ ಝೆಲೆನ್ಸ್ಕಿ, “ಯುದ್ಧವನ್ನು ಮುಗಿಸುವುದು ಮಾತ್ರ ನನ್ನ ಗುರಿ. ಯುದ್ಧ ಮುಗಿದು ನಮ್ಮ ದೇಶದಲ್ಲಿ ಶಾಂತಿ ನೆಲೆಸಿದ ನಂತರ ಅಧಿಕಾರ ನಡೆಸಬೇಕೆಂಬ ಆಸೆ ನನಗಿಲ್ಲ. ಮುಂದಿನ ಅವಧಿಗೆ ನಾನು ಸ್ಪರ್ಧಿಸುವುದಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಶಾಂತಿಕಾಲದಲ್ಲಿ ಉಕ್ರೇನ್ ಅನ್ನು ಮುನ್ನಡೆಸುವ ಉದ್ದೇಶವಿಲ್ಲ ಎಂದು ಝೆಲೆನ್ಸ್ಕಿ ಸ್ಪಷ್ಟಪಡಿಸಿದ್ದು, ಕದನ ವಿರಾಮ ಜಾರಿಗೆ ಬಂದರೆ ಸಂಸತ್ತಿನಲ್ಲಿ ಚುನಾವಣೆಗಳನ್ನು ಆಯೋಜಿಸುವಂತೆ ಕೇಳುವುದಾಗಿಯೂ ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಉಕ್ರೇನ್​​ ಮೇಲಿನ ಯುದ್ಧಕ್ಕೆ ಭಾರತ-ಚೀನಾ ಮುಖ್ಯ ಹೂಡಿಕೆದಾರರು; ವಿಶ್ವಸಂಸ್ಥೆಯಲ್ಲಿ ಮತ್ತೆ ಹಳೇ ರಾಗ ಹಾಡಿದ ಟ್ರಂಪ್

ಯುದ್ಧದ ಕಾರಣದಿಂದಾಗಿ ಉಕ್ರೇನ್‌ನಲ್ಲಿ ಚುನಾವಣೆಗಳನ್ನು ಅನಿರ್ದಿಷ್ಟವಾಗಿ ಮುಂದೂಡಲಾಗಿದೆ. ಈ ವಿಷಯವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ವಿಮರ್ಶಕರು ಎತ್ತಿದ್ದಾರೆ. ಭದ್ರತಾ ಕಾಳಜಿಗಳು ಮತ್ತು ಸಾಂವಿಧಾನಿಕ ನಿರ್ಬಂಧಗಳು ಪ್ರಕ್ರಿಯೆಯನ್ನು ಸಂಕೀರ್ಣಗೊಳಿಸುತ್ತವೆ ಎಂದು ಝೆಲೆನ್ಸ್ಕಿ ಒಪ್ಪಿಕೊಂಡರು.

ಆಗಸ್ಟ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಉನ್ನತ ಮಟ್ಟದ ಓವಲ್ ಆಫೀಸ್ ಸಭೆಯಲ್ಲಿ, ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಉಕ್ರೇನ್‌ನಲ್ಲಿ ಶಾಂತಿ ಪುನಃಸ್ಥಾಪಿಸಿದ ನಂತರ ಚುನಾವಣೆಗಳನ್ನು ನಡೆಸಲು ಮುಕ್ತರಾಗಿರುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಉಕ್ರೇನ್‌ ಜೊತೆಗಿನ ಶಾಂತಿ ಒಪ್ಪಂದದ ನಡುವೆ ಇಂಧನ ಒಪ್ಪಂದಗಳ ಕುರಿತು ಅಮೆರಿಕ- ರಷ್ಯಾ ಚರ್ಚೆ

“ಯುದ್ಧದ ಸಮಯದಲ್ಲಿ ಚುನಾವಣೆಗಳನ್ನು ನಡೆಸಲು ಸಾಧ್ಯವಿಲ್ಲದ ಕಾರಣ ನಾವು ಸಂಸತ್ತಿನಲ್ಲಿ ಕೆಲಸ ಮಾಡಬೇಕಾಗಿದೆ” ಎಂದು ಝೆಲೆನ್ಸ್ಕಿ ಹೇಳಿದ್ದಾರೆ. ಜನರು ಪ್ರಜಾಪ್ರಭುತ್ವ, ಮುಕ್ತ, ಕಾನೂನುಬದ್ಧ ಚುನಾವಣೆಯನ್ನು ನಡೆಸಲು ಸಾಧ್ಯವಾಗಬೇಕು ಎಂದು ಹೇಳಿದರು. ಉಕ್ರೇನ್‌ನಲ್ಲಿ ಚುನಾವಣೆಗಳನ್ನು ಪ್ರಸ್ತುತ ಸಮರ ಕಾನೂನಿನ ಅಡಿಯಲ್ಲಿ ಸ್ಥಗಿತಗೊಳಿಸಲಾಗಿದೆ ಎಂದರು.

ಯುದ್ಧವಿಲ್ಲದಿದ್ದರೆ ಝೆಲೆನ್ಸ್ಕಿ ಅವರ 5 ವರ್ಷಗಳ ಅವಧಿ ಮೇ 2024ರಲ್ಲಿ ಕೊನೆಗೊಳ್ಳುತ್ತಿತ್ತು. ರಷ್ಯಾದ ಆಕ್ರಮಣದ ಆರಂಭಿಕ ತಿಂಗಳುಗಳಲ್ಲಿ ಅವರ ಅನುಮೋದನೆ ರೇಟಿಂಗ್‌ಗಳು ಸುಮಾರು ಶೇ. 90ಕ್ಕೆ ಏರಿತು ಮತ್ತು ಇತ್ತೀಚಿನ ಸಮೀಕ್ಷೆಗಳು ಇನ್ನೂ ಅವರ ಬೆಂಬಲವನ್ನು ಶೇ. 60ಕ್ಕಿಂತ ಹೆಚ್ಚಿಸಿವೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ