ನೈಜೀರಿಯಾ ಶಾಲೆಯ ಮೇಲೆ ಬಂಧೂಕುದಾರಿಗಳ ದಾಳಿ, 200ಕ್ಕೂ ಹೆಚ್ಚು ವಿದ್ಯಾರ್ಥಿಗಳು, 12 ಶಿಕ್ಷಕರ ಅಪಹರಣ
ನೈಜೀರಿಯಾದ ಶಾಲೆಯೊಂದರಲ್ಲಿ ಬಂದೂಕುಧಾರಿಗಳು ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಅಪಹರಿಸಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇತ್ತೀಚಿನ ವರ್ಷಗಳಲ್ಲಿ ನಡೆದ ಅತಿದೊಡ್ಡ ಶಾಲಾ ಅಪಹರಣಗಳಲ್ಲಿ ಈ ದಾಳಿಯೂ ಒಂದು, ಇದು ನೈಜೀರಿಯಾದ ಅಭದ್ರತೆಯ ಹದಗೆಡುತ್ತಿರುವುದನ್ನು ಎತ್ತಿ ತೋರಿಸುತ್ತದೆ.ಶಾಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಪಹೃತವಾದ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಕುಟುಂಬಗಳನ್ನು ಭೇಟಿಯಾಗಿ ಮಕ್ಕಳನ್ನು ಸುರಕ್ಷಿತವಾಗಿ ಹಿಂದಿರುಗಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು CAN ವಕ್ತಾರ ಡೇನಿಯಲ್ ಅಟೋರಿ ಹೇಳಿದ್ದಾರೆ.

ನೈಜೀರಿಯಾ, ನವೆಂಬರ್ 22: ನೈಜೀರಿಯಾದ ನೈಜರ್ ರಾಜ್ಯದ ಕ್ಯಾಥೋಲಿಕ್ ಶಾಲೆಗೆ ನುಗ್ಗಿದ ಶಸ್ತ್ರಸಜ್ಜಿತ ದುಷ್ಕರ್ಮಿಗಳು 200 ಕ್ಕೂ ಹೆಚ್ಚು ವಿದ್ಯಾರ್ಥಿಗಳು(Students) ಮತ್ತು 12 ಶಿಕ್ಷಕರನ್ನು ಅಪಹರಿಸಿದ್ದಾರೆ. ಅಗ್ವಾರಾ ಸ್ಥಳೀಯ ಸರ್ಕಾರಿ ಪ್ರದೇಶದಲ್ಲಿರುವ ಪಾಪಿರಿ ಸಮುದಾಯದ ಸೇಂಟ್ ಮೇರಿ ಶಾಲೆಯಲ್ಲಿ ಈ ದಾಳಿ ನಡೆದಿದೆ. ನೈಜೀರಿಯಾದ ಕ್ರಿಶ್ಚಿಯನ್ ಅಸೋಸಿಯೇಷನ್ ಪ್ರಕಾರ, ಬಂದೂಕುಧಾರಿಗಳು ಶಾಲೆಗೆ ನುಗ್ಗಿ 215 ಮಕ್ಕಳು ಮತ್ತು ವಿದ್ಯಾರ್ಥಿಗಳು ಹಾಗೂ 12 ಶಿಕ್ಷಕರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ. ಘಟನೆಯ ನಂತರ ಈ ಪ್ರದೇಶದಲ್ಲಿ ಭೀತಿ ಮತ್ತು ಭಯದ ವಾತಾವರಣವಿತ್ತು ಎಂದು ನೈಜರ್ ರಾಜ್ಯದ ಕೆಎನ್ ವಕ್ತಾರ ಡೇನಿಯಲ್ ಅಟೋರಿ ಹೇಳಿದ್ದಾರೆ.
ನಾನು ಈಗಷ್ಟೇ ಹಳ್ಳಿಯಿಂದ ಹಿಂತಿರುಗಿದ್ದೇನೆ. ನಾನು ಶಾಲೆ ಮತ್ತು ಅಲ್ಲಿದ್ದ ಪೋಷಕರನ್ನು ಭೇಟಿ ಮಾಡಿ ಮಕ್ಕಳನ್ನು ಸುರಕ್ಷಿತವಾಗಿ ಮರಳಿ ಕರೆತರಲು ಸರ್ಕಾರ ಮತ್ತು ಭದ್ರತಾ ಸಂಸ್ಥೆಗಳೊಂದಿಗೆ ನಾವು ಅವಿಶ್ರಾಂತವಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಭರವಸೆ ನೀಡಿದ್ದೇನೆ ಎಂದು ಅಟೋರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸ್ಥಳೀಯ ಆಡಳಿತ ಮತ್ತು ಭದ್ರತಾ ಪಡೆಗಳನ್ನು ಕಟ್ಟೆಚ್ಚರದಲ್ಲಿರಿಸಲಾಗಿದೆ. ಆದಾಗ್ಯೂ, ದಾಳಿಕೋರರ ಬಗ್ಗೆ ಮತ್ತು ಮಕ್ಕಳನ್ನು ಎಲ್ಲಿಗೆ ಕರೆದೊಯ್ಯಲಾಗಿದೆ ಎಂಬುದರ ಕುರಿತು ಯಾವುದೇ ಅಧಿಕೃತ ಮಾಹಿತಿ ಇನ್ನೂ ಬಿಡುಗಡೆಯಾಗಿಲ್ಲ. ಇತ್ತೀಚಿನ ವರ್ಷಗಳಲ್ಲಿ ನೈಜೀರಿಯಾದ ಉತ್ತರ-ಮಧ್ಯ ಮತ್ತು ವಾಯುವ್ಯ ಪ್ರದೇಶಗಳಲ್ಲಿನ ಶಾಲೆಗಳಿಂದ ಸಾಮೂಹಿಕ ಅಪಹರಣಗಳು ನಿರಂತರವಾಗಿ ಹೆಚ್ಚುತ್ತಿದ್ದು, ಮಕ್ಕಳ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಮತ್ತಷ್ಟು ಓದಿ: ಮುಂಬೈನಲ್ಲಿ 17 ಮಕ್ಕಳನ್ನು ಒತ್ತೆಯಾಳಾಗಿರಿಸಿಕೊಂಡಿದ್ದ ವ್ಯಕ್ತಿಯ ಎನ್ಕೌಂಟರ್
ಈ ಘಟನೆಯು ಸ್ಥಳೀಯ ಸಮುದಾಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ ಮತ್ತು ಪೋಷಕರಲ್ಲಿ ಕಳವಳ ಹೆಚ್ಚುತ್ತಿದೆ. ರಕ್ಷಣಾ ಕಾರ್ಯಾಚರಣೆ ತ್ವರಿತವಾಗಿ ನಡೆಯುತ್ತಿದೆ ಮತ್ತು ಪರಿಸ್ಥಿತಿಯನ್ನು ಶೀಘ್ರದಲ್ಲೇ ನಿಯಂತ್ರಣಕ್ಕೆ ತರಲು ಪ್ರಯತ್ನಗಳು ನಡೆಯುತ್ತಿವೆ ಎಂದು ಆಡಳಿತ ಹೇಳಿಕೊಂಡಿದೆ.
ಈ ವಾರ, ಬಂದೂಕುಧಾರಿಗಳು ವಾಯುವ್ಯ ನೈಜೀರಿಯಾದ ಶಾಲೆಯ ಮೇಲೆ ದಾಳಿ ಮಾಡಿ 25 ವಿದ್ಯಾರ್ಥಿನಿಯರನ್ನು ಅಪಹರಿಸಿದ್ದರು ದಾಳಿಯಲ್ಲಿ ಒಬ್ಬ ಶಾಲಾ ಉದ್ಯೋಗಿ ಸಾವನ್ನಪ್ಪಿದ್ದು, ಮತ್ತೊಬ್ಬರು ಗಾಯಗೊಂಡಿದ್ದರು. ಕೆಬ್ಬಿ ರಾಜ್ಯದ ಮಾಗಾದಲ್ಲಿರುವ ಬೋರ್ಡಿಂಗ್ ಶಾಲೆಯಲ್ಲಿ ಬೆಳಿಗ್ಗೆ 4 ಗಂಟೆಗೆ ಈ ಘಟನೆ ಸಂಭವಿಸಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




