ಉಕ್ರೇನ್ ( Russia Ukraine War) ನಲ್ಲಿ ರಷ್ಯಾ ಸೇನಾಪಡೆಯಿಂದ ರಣಭೀಕರ ದಾಳಿ ನಡೆಯುತ್ತಿದೆ. ಪುಟಿನ್ ಯುದ್ಧದಾಹಕ್ಕೆ ಉಕ್ರೇನ್ ಸಾವಿನ ಮನೆಯಾದಂತ್ತಾಗಿದೆ. ಬಲಿಷ್ಠ ರಷ್ಯಾ ಮಣ್ಣುಮುಕ್ಕಿಸಲು ನ್ಯಾಟೋ ಸೇನೆ ಎಂಟ್ರಿಕೊಡುತ್ತಾ ಎನ್ನುವ ಪ್ರಶ್ನೆ ಉಂಟಾಗಿದೆ. ರಷ್ಯಾ, ಉಕ್ರೇನ್ ಅಧ್ಯಕ್ಷರ ಜತೆ ಪ್ರಧಾನಿ ನರೇಂದ್ರ ಮೋದಿ ನಿನ್ನೆ ಚರ್ಚೆ ಮಾಡಿದ್ದು, ತಾತ್ಕಾಲಿಕ ಕದನ ವಿರಾಮವನ್ನು ಪ್ರಶಂಸಿಸಿದ್ದಾರೆ. ಉಕ್ರೇನ್ ರಷ್ಯಾ ಯುದ್ಧ ಸಮರ ಮುಂದುವರೆಯುತ್ತಿದೆ. ಖಾರ್ಕಿವ್ ಬಳಿ ರಷ್ಯಾ ಸೇನಾಧಿಕಾರಿ ಮೇಜರ್ ಜನರಲ್ ವಿಟಾಲಿ ಗೆರಾಸಿಮೊವ್ ಹತ್ಯೆಗೈದಿರುವುದಾಗಿ ಉಕ್ರೇನ್ ಹೇಳಿಕೆ ನೀಡಿದೆ. ಉಕ್ರೇನ್‌ನಲ್ಲಿ ಹೋರಾಡಲು ರಷ್ಯಾದಿಂದ ಸಿರಿಯನ್ನರ ನೇಮಕ ಮಾಡಿಕೊಳ್ಳುತ್ತಿದೆ ಎಂದು ಪೆಂಟಗನ್ ತಿಳಿಸಿದೆ. ಇನ್ನೂ ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವುದನ್ನು ಖಂಡಿಸಿ ರಷ್ಯಾದಲ್ಲಿ ಐಬಿಎಂ ತನ್ನ ಎಲ್ಲ ವ್ಯವಹಾರಗಳನ್ನು ಸ್ಥಗಿತಗೊಳಿಸಿದೆ. ಅದೇರೀತಿಯಾಗಿ ರಷ್ಯಾದಿಂದ ತೈಲ ಆಮದು ನಿಷೇಧದ ಬಗ್ಗೆ ನಿರ್ಧರಿಸಿಲ್ಲವೆಂದು ಅಮೆರಿಕ ಹೇಳಿದೆ. ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರ ಏರ್‌ಲಿಫ್ಟ್ ಕಾರ್ಯಚರಣೆ ಭರದಿಂದ ಸಾಗಿದೆ. ರೊಮೇನಿಯಾದ ಸುಸೇವಾದಿಂದ ದೆಹಲಿಗೆ ವಿಶೇಷ ವಿಮಾನ ದಲ್ಲಿ 200 ಭಾರತೀಯರು ಆಗಮಿಸಿದ್ದಾರೆ.
ನಾವು ರಷ್ಯಾದಿಂದ ಬರುವ ಎಲ್ಲ ಆಮದು ನಿರ್ಬಂಧಿಸುತ್ತೇವೆ. ರಷ್ಯಾದ ತೈಲ, ಗ್ಯಾಸ್ ಎಲ್ಲವನ್ನೂ ನಿರ್ಬಂಧಿಸುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ಉಕ್ರೇನ್ ದೇಶದ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ ರಷ್ಯಾಗೆ ದೊಡ್ಡ ದೊಡ್ಡ ಕಂಪನಿಗಳು ಬಿಸಿ ಮುಟ್ಟಿಸುತ್ತಿವೆ. ರಷ್ಯಾದಲ್ಲಿ ಕೆಎಫ್ಸಿ, ಪಿಜಾ ಹಟ್ ತನ್ನ ಸೇವೆ ಸ್ಥಗಿತಗೊಳಿಸಿದೆ.
ರಷ್ಯಾ ವಿರುದ್ಧ ಅಮೆರಿಕ ಮತ್ತಷ್ಟು ನಿರ್ಬಂಧಗಳನ್ನು ವಿಧಿಸಿದೆ. ರಷ್ಯಾ ತೈಲ, ಕಲ್ಲಿದ್ದಲು ಆಮದು ಮೇಲೆ ಯುಎಸ್ ನಿರ್ಬಂಧ ವಿಧಿಸಿದೆ.
ಉಕ್ರೇನ್ ದೇಶದ ಮೇಲೆ ರಷ್ಯಾ ಯುದ್ಧ ಮುಂದುವರಿಸಿರುವ ಹಿನ್ನೆಲೆಯಲ್ಲಿ ರಷ್ಯಾ ಬೆಂಬಲಕ್ಕೆ ಚೀನಾ ನಿಂತಿದೆ. ರಷ್ಯಾದ ಮೇಲೆ ವಿವಿಧ ದೇಶಗಳು ನಿರ್ಬಂಧ ವಿಧಿಸುತ್ತಿವೆ. ಈ ನಿರ್ಬಂಧಗಳು ಎಲ್ಲರಿಗೂ ನೇರವಾಗಿ ಹಾನಿ ಮಾಡಲಿವೆ. ಆದರೆ ರಷ್ಯಾವನ್ನು ಬಹಿರಂಗವಾಗಿ ಚೀನಾ ಬೆಂಬಲಿಸಿದೆ.
ಸುಮಿ ನಗರದಿಂದ ಎಲ್ಲಾ ಭಾರತೀಯ ವಿದ್ಯಾರ್ಥಿಗಳನ್ನು ಶಿಫ್ಟ್ ಮಾಡಲಾಗುತ್ತದೆ ಎಂದು ಭಾರತೀಯ ವಿದೇಶಾಂಗ ಇಲಾಖೆ ಅಧಿಕೃತ ಮಾಹಿತಿ ನೀಡಿದೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿದೆ. ರಷ್ಯಾ 3 ಲಕ್ಷ ಜನರನ್ನು ಒತ್ತೆಯಾಳಾಗಿ ಇರಿಸಿಕೊಂಡಿದೆ. ತನ್ನ ಸೇನಾ ಕಾರ್ಯಾಚರಣೆಯನ್ನ ರಷ್ಯಾ ತೀವ್ರಗೊಳಿಸಿದೆ. ಮಾನವೀಯ ಕಾರಿಡಾರ್‌ಗಳ ಮೇಲೆ ದಾಳಿ ಮಾಡುತ್ತಿದೆ ಎಂದು ರಷ್ಯಾ ವಿರುದ್ಧ ಉಕ್ರೇನ್ ವಿದೇಶಾಂಗ ಸಚಿವ ಆರೋಪ ಮಾಡಿದ್ದಾರೆ.
ಉಕ್ರೇನ್‌ನ ಸುಮಿ ನಗರದಿಂದ 12 ಬಸ್ಗಳಲ್ಲಿ ಭಾರತೀಯ ವಿದ್ಯಾರ್ಥಿಗಳು ಹೊರಟ್ಟಿದ್ದಾರೆ. ಸುಮಿ ನಗರದಲ್ಲಿದ್ದ ಭಾರತೀಯ ವಿದ್ಯಾರ್ಥಿಗಳಿಗೆ ತೆರವು ಮಾಡಲಾಗಿದೆ. ರೆಡ್ ಕ್ರಾಸ್ ಸೊಸೈಟಿಯಿಂದ ಬಸ್ಗಳಿಗೆ ವ್ಯವಸ್ಥೆ ಮಾಡಲಾಗಿದೆ. ಬಸ್ಗಳಲ್ಲಿ ಬಾಂಗ್ಲಾ, ನೇಪಾಳಿ ವಿದ್ಯಾರ್ಥಿಗಳೂ ಪ್ರಯಾಣ ಮಾಡುತ್ತಿದ್ದಾರೆ. ಸುಮಿಯಿಂದ ಉಕ್ರೇನ್‌ನ ಪೊಲಟವ ಪ್ರದೇಶಕ್ಕೆ ಪ್ರಯಾಣ ಬೆಳೆಸಿದ್ದಾರೆ ಎಂದು ಭಾರತೀಯ ರಾಯಭಾರ ಕಚೇರಿಯ ಸಿಬ್ಬಂದಿಗಳು ತಿಳಿಸಿದ್ದಾರೆ.
ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಉಕ್ರೇನ್, ರಷ್ಯಾ ಯುದ್ಧದ ಬಗ್ಗೆ ಚೀನಾ ಅಧ್ಯಕ್ಷರು ಕಳವಳ ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯಲ್ಲಿನ ವಿದ್ಯಾರ್ಥಿಗಳು ಇಷ್ಟೊಂದು ಸಂಖ್ಯೆಯಲ್ಲಿ ಉಕ್ರೇನ್‌ನಲ್ಲಿ ನೆಲೆಸಿದ್ದಾರೆ ಎಂಬುದೆ ಯಾರಿಗೂ ಗೊತ್ತಿರಲಿಲ್ಲ. ಯಾವಾಗ ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಿತೊ ಒಬ್ಬೊಬ್ಬರ ಮಾಹಿತಿ ಹೊರಬೀಳುತ್ತಾ ಸಾಗಿ ಜಿಲ್ಲೆಯ ಒಟ್ಟು 21 ಜನರು ಉಕ್ರೇನ್‌ನಲ್ಲಿ ಇರೋದು ಬೆಳಕಿಗೆ ಬಂತು. ಇಷ್ಟು ದಿನ ಜೀವಭಯ ಆತಂಕದಲ್ಲಿದ್ದ ವಿದ್ಯಾರ್ಥಿಗಳು ಕೊನೆಗೂ ಒಬ್ಬೊಬ್ಬರಾಗಿ ಮನೆ ಸೇರುತ್ತಿದ್ದಾರೆ. ಸದ್ಯ ಬಾಗಲಕೋಟೆಯ 21 ಜನರಲ್ಲಿ 18 ಜನ ವಿದ್ಯಾರ್ಥಿಗಳು ಉಕ್ರೇನ್ನಿಂದ ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ. ಇದರಿಂದ ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನು 21 ಜನರ ಪೈಕಿ ಒಟ್ಟು 10 ಜನರು ತಮ್ಮ ನಿವಾಸ ತಲುಪಿದ್ದು, ಕುಟುಂಬಸ್ಥರು ಮಾಲಾರ್ಪಣೆ ಮಾಡಿ ಶಾಲು ಹೊದಿಸಿ ಸಿಹಿ ತಿನ್ನಿಸಿ ಸಂಭ್ರಮಿಸಿದರು.
ಉಕ್ರೇನ್ನಿಂದ ಸುರಕ್ಷಿತವಾಗಿ ಚಿತ್ರದುರ್ಗದ ವಿದ್ಯಾರ್ಥಿನಿ ಸುನೇಹಾ ಇಂದು ವಾಪಾಸ್ ಆಗಿದ್ದಾರೆ. ಪುತ್ರಿ ಮನೆಗೆ ಬಂದ ಬಳಿಕ ಸಿಹಿ ಹಂಚಿ ಸುನೇಹಾ ಕುಟುಂಬಸ್ಥರು ಸಂಭ್ರಮಿಸಿದ್ದಾರೆ. ಎಂಬಿಬಿಎಸ್ ವ್ಯಾಸಂಗಕ್ಕೆ ಸುನೇಹಾ ಉಕ್ರೇನ್‌ಗೆ ತೆರಳಿದ್ದರು.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿದೆ. ಸುಮಿ ಸಿಟಿಯಲ್ಲಿ ಕೂಡ ರಷ್ಯಾ ದಾಳಿ ನಡೆಸಿದ್ದು, 21 ನಾಗರಿಕರ ಕೊಲೆ ಮಾಡಲಾಗಿದೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರಿಸಿದೆ. ಕ್ರಿಮಿಯಾ ರಷ್ಯಾದ ಒಂದು ಭಾಗ. ಕ್ರಿಮಿಯಾ ವಿವಾದದ ಬಗ್ಗೆ ರಷ್ಯಾ ಜೊತೆ ಚರ್ಚೆಗೆ ಸಿದ್ಧ. ಆದ್ರೆ ನಾವು ಶರಣಾಗತಿ ಆಗಲ್ಲ. ನ್ಯಾಟೋ ಪಡೆ ಮೇಲೆ ಇದ್ದ ನಂಬಿಕೆ ಕಳೆದುಕೊಂಡಿದ್ದೇವೆ ಎಂದು ಸಹಾಯಕ್ಕೆ ಬಾರದ ನ್ಯಾಟೋ ವಿರುದ್ಧ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಕಿಡಿಕಾರಿದ್ದಾರೆ.
ಉಕ್ರೇನ್ ದೇಶದ ಮೇಲೆ ರಷ್ಯಾ ಯುದ್ಧ ಮುಂದುವರೆಸಿದೆ. ಸುಮಿ ಸಿಟಿಯಿಂದ ಭಾರತೀಯ ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ, ಪೋಲೆಂಡ್ ಗಡಿಯತ್ತ 694 ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. 694 ವಿದ್ಯಾರ್ಥಿಗಳ ಪೈಕಿ 10 ಜನ ಕನ್ನಡಿಗರಿರುವ ಮಾಹಿತಿಯಿದ್ದು, ವಿದ್ಯಾರ್ಥಿಗಳು ಸುಮಿ ನಗರದಿಂದ ತೆರಳಲು ಭಾರತೀಯ ವಿದೇಶಾಂಗ ಇಲಾಖೆ ಬಸ್ ವ್ಯವಸ್ಥೆ ಮಾಡಿದೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರೆಸಿದೆ. ಸಹಾಯಕ್ಕೆ ಬಾರದ ನ್ಯಾಟೋ ವಿರುದ್ಧ ಝೆಲೆನ್‌ಸ್ಕಿ ಕಿಡಿ ಕಾರಿದ್ದಾರೆ. ನ್ಯಾಟೋ ಪಡೆ ಮೇಲೆ ಇದ್ದ ನಂಬಿಕೆ ಕಳೆದುಕೊಂಡಿದ್ದೇವೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಹೇಳಿಕೆ ನೀಡಿದ್ದಾರೆ.
ಕಾರ್ಕೀವ್ನಿಂದ ಎಲ್ಲರೂ ಗಡಿ ತಲುಪಿದ್ದಾರೆ. ಸುಮಿಯಲ್ಲಿ ಸುಮಾರು 600 ಮಂದಿ ಭಾರತೀಯರಿದ್ದಾರೆ. ಇದರಲ್ಲಿ ಆರೇಳು ಮಂದಿ ಕನ್ನಡಿಗರು ಇರಬಹುದು. ಅವರನ್ನು ಈಗ ರಷ್ಯಾ ಮೂಲಕ ಕರತರುವ ಕಾರ್ಯ ಆರಂಭವಾಗಿದೆ. ಅವರೆಲ್ಲರು ಒಂದೆರಡು ದಿನದಲ್ಲಿ ಭಾರತಕ್ಕೆ ಬರಬಹುದು. ಈ ಹಿಂದೆ ನಾನು ವಿದೇಶಾಂಗ ಇಲಾಖೆಯಲ್ಲಿ ಕೆಲಸ ಮಾಡಿದ್ದ ಕಾರಣ ಹಲವರು ನನ್ನ ಸಂಪರ್ಕ ಮಾಡುತ್ತಿದ್ದರು. ಉಕ್ರೇನ್‌ನಲ್ಲಿ ಹಲವರು ಸಿಕ್ಕಿ ಹಾಕಿಕೊಂಡವರು ನನ್ನ ಸಂಪರ್ಕ ಮಾಡಿದ್ದರು. ವಿದೇಶಾಂಗ ಇಲಾಖೆ ಕಂಟ್ರೋಲ್ ರೂಂ ಸಂಪರ್ಕಿಸಿ ಊಟ, ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು NRI ಸಮಿತಿ ಮಾಜಿ ಉಪಾಧ್ಯಕ್ಷೆ ಆರತಿ ಕೃಷ್ಣ ಹೇಳಿಕೆ ನೀಡಿದ್ದಾರೆ.
ಉಕ್ರೇನ್ ದೇಶದ ಮೇಲೆ ರಷ್ಯಾ ಯುದ್ಧ ಮುಂದುವರೆಸಿದೆ. ರಷ್ಯಾ ವಾಯು ದಾಳಿಯಲ್ಲಿ ಮಕ್ಕಳಿಬ್ಬರು ಸೇರಿ 9 ಜನ ಸಾವನ್ನಪ್ಪಿದ್ದಾರೆ. ಉಕ್ರೇನ್ ಸುಮಿ ನಗರದಲ್ಲಿ ರಷ್ಯಾ ಸೇನೆಯಿಂದ ವಾಯು ದಾಳಿ ಮಾಡಲಾಗಿದೆ.
ರಷ್ಯಾ ಉಕ್ರೇನ್ ಯುದ್ಧ ಹಲವು ಸವಾಲುಗಳನ್ನು ತಂದೊಡ್ಡಿದೆ. ಯುದ್ಧದ ನಂತರ ರಷ್ಯಾದಿಂದ ಗೋಧಿ ಪೂರೈಕೆಯಾಗುತ್ತಿಲ್ಲ ಎಂದು ಬೆಂಗಳೂರಿನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ ನೀಡಿದ್ದಾರೆ. ಭಾರತದ ರೈತರೇ ಸಾಕಷ್ಟು ಗೋಧಿ ಉತ್ಪಾದನೆ ಮಾಡುತ್ತಿದ್ದಾರೆ. ಜಾಗತಿಕ ದೃಷ್ಟಿಕೋನ ದಿಂದ ಇಂತಹ ಸವಾಲು ಸ್ವೀಕರಿಸಬೇಕಿದೆ. ನಾವು ವಿಶ್ವಕ್ಕೆ ಗೋಧಿ ಪೂರೈಸುವಲ್ಲಿ ಆತ್ಮನಿರ್ಭರತಾ ಸಾಧಿಸುತ್ತಿದ್ದೇವೆ. ಯುದ್ಧದಿಂದ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿದೆ. ಭಾರತ ಶೇಕಡಾ 80ರಷ್ಟು ಕಚ್ಚಾತೈಲ ಆಮದು ಮಾಡಿಕೊಳ್ಳುತ್ತಿದೆ. ಪೆಟ್ರೋಲಿಯಂ ಕಂಪನಿಗಳು ತೈಲ ದರದ ಬಗ್ಗೆ ನಿರ್ಧರಿಸಲಿವೆ. ಪರ್ಯಾಯ ಮೂಲಗಳಿಂದ ತೈಲ ಆಮದು ಬಗ್ಗೆ ಚಿಂತಿಸ್ತಿದ್ದೇವೆ. ತೈಲ ಬೆಲೆ ಏರುಪೇರು ತಡೆಯಲು ಕೆಲ ಅಂಶ ಸೇರಿಸಲಾಗಿದೆ. ಬಜೆಟ್ನಲ್ಲಿ ಕೆಲವು ಅಂಶಗಳನ್ನು ಸೇರಿಸಲಾಗಿದೆ. ಯುದ್ಧದಿಂದ ವ್ಯತಿರಿಕ್ತ ಪರಿಣಾಮ ಖಂಡಿವಾಗಿಯೂ ಆಗಲಿದೆ ಎಂದು ಹೇಳಿದ್ದಾರೆ.
ಉಕ್ರೇನ್ನಿಂದ ವಿದ್ಯಾರ್ಥಿಗಳು ಸುರಕ್ಷಿತವಾಗಿ ಬಂದರೆ ಒಳ್ಳೆಯದು ಎಂದು ಮೈಸೂರಲ್ಲಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರದಿಂದ ಎಲ್ಲ ಭಾರತೀಯರ ರಕ್ಷಣೆಯಾಗುತ್ತಿದೆ. ಕೆಲವರು ಉಕ್ರೇನ್ನಿಂದ ಬರುವುದಕ್ಕೆ ತುಂಬಾ ಕಷ್ಟಪಟ್ಟಿದ್ದಾರೆ. ಇದು ಕಷ್ಟದ ಪರಿಸ್ಥಿತಿ, ಯುದ್ಧ ಬೇಡ ಎಂಬುದು ಎಲ್ಲರ ಬಯಕೆಯಾಗಿದೆ ಎಂದರು.
ಉಕ್ರೇನ್ ದೇಶದ ಮೇಲೆ ರಷ್ಯಾ ಯುದ್ಧ ಮುಂದುವರೆದಿದೆ. ಉಕ್ರೇನ್ ಸೇನೆಯಿಂದ 12,000 ರಷ್ಯಾ ಸೈನಿಕರ ಹತ್ಯೆ ಆಗಿದ್ದು, ರಷ್ಯಾಗೆ ಸೇರಿದ 80 ಕಾಪ್ಟರ್, 48 ಯುದ್ಧ ವಿಮಾನ ಧ್ವಂಸ ಮಾಡಲಾಗಿದೆ. ಉಕ್ರೇನ್ ಸೇನೆಯಿಂದ 303 ಯುದ್ಧ ಟ್ಯಾಂಕರ್ ಧ್ವಂಸವಾಗಿದೆ.
ನೀಟ್ ಪ್ರವೇಶಕ್ಕೆ ಪಿಯು, ನೀಟ್ ಅಂಕದಲ್ಲಿ ಶೇ.50ರಷ್ಟು ಅಂಕ ಇಲ್ಲವಾದರೆ ಮಕ್ಕಳಿಗೆ ವಂಚನೆಯಾಗುತ್ತದೆ. ಮಕ್ಕಳು ಬೇರೆ ಬೇರೆ ಕಡೆ ಹೋಗುವ ಅನಿವಾರ್ಯತೆ ಉಂಟಾಗುತ್ತದೆ ಎಂದು ಉಕ್ರೇನ್ನಿಂದ ವಾಪಸಾದ ವಿದ್ಯಾರ್ಥಿಗಳ ವಿದ್ಯಾಭ್ಯಾಸ ವಿಚಾರವನ್ನು ವಿಧಾನಸಭೆಯ ಶೂನ್ಯವೇಳೆಯಲ್ಲಿ ಯು.ಟಿ.ಖಾದರ್ ಪ್ರಸ್ತಾಪ ಮಾಡಿದ್ದಾರೆ. ಇದಕ್ಕೆ ಸಚಿವ ಡಾ.ಕೆ.ಸುಧಾಕರ್ ಉತ್ತರ ನೀಡಿದ್ದು, ಮುಂದಿನ ಶೈಕ್ಷಣಿಕ ಭವಿಷ್ಯದ ಬಗ್ಗೆ ಮೀಟಿಂಗ್ ನಡೆಸಲಾಗಿದೆ. ರಾಜೀವ್ ಗಾಂಧಿ ವಿಶ್ವವಿದ್ಯಾಲಯದ ತಂಡ ಸಭೆ ನಡೆಸಿದೆ. ಇದರ ಬಗ್ಗೆ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳುತ್ತೇವೆ. ನೀಟ್ ಮೇಲೆ ಯಾವ ರಾಜ್ಯಗಳಿಗೂ ಹಿಡಿತವಿಲ್ಲ. ಆಲ್ ಇಂಡಿಯಾ ಕೌನ್ಸಿಲ್ ಅದನ್ನು ನಿರ್ವಹಣೆ ಮಾಡುತ್ತದೆ. ಶೇ.50 ರಾಜ್ಯಕ್ಕೆ, ಶೇ.50 ಕೇಂದ್ರಕ್ಕೆ ಸೀಟು ಹಂಚಿಕೆಯಾಗುತ್ತೆ ಎಂದು ಸುಧಾಕರ್ ಹೇಳಿದ್ದಾರೆ.
ಉಕ್ರೇನ್‌ನ ಯುದ್ಧ ನಡೆಯುವ ಸ್ಥಳಕ್ಕೆ ಹತ್ತಿರದಲ್ಲಿ ಇದ್ದ ದಾವಣಗೆರೆ ಮೂಲದ ವಿದ್ಯಾರ್ಥಿ ದೆಹಲಿಗೆ ಆಗಮಿಸಿದ್ದಾರೆ. 15 ದಿನಗಳಿಂದ ಆತಂಕದಲ್ಲಿ ಪಾಲಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದ ಪ್ರವೀಣ್ ಬಾದಾಮಿ ಇಂದು ದೆಹಲಿಗೆ ಆಗಮಿಸಿದ್ದು, ಇಂದು ರಾತ್ರಿ ಅಥವಾ ನಾಳೆ ಬೆಳಿಗ್ಗೆ ಮನೆಗೆ ತಲುಪಿದ್ದಾರೆ. ಈ ಕುರಿತು ಟಿರ್ವಿ ಗೆ ಕುಟುಂಬ ಸದಸ್ಯರಿಂದ ಮಾಹಿತಿ ನೀಡಿದ್ದಾರೆ.
ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರೆಸಿದೆ. ಉಕ್ರೇನ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಸಾರಿಗೆ ವ್ಯವಸ್ಥೆಗೆ ನಷ್ಟವಾಗಿದೆ. ಸಾರಿಗೆ ವ್ಯವಸ್ಥೆಗೆ 10 ಬಿಲಿಯನ್ ಡಾಲರ್ನಷ್ಟು ನಷ್ಟವಾಗಿದೆ ಎಂದು ಉಕ್ರೇನ್ ಸರ್ಕಾರದಿಂದ ನಷ್ಟದ ಅಂದಾಜು ಬಗ್ಗೆ ಮಾಹಿತಿ ನೀಡಲಾಗಿದೆ.
ಭಾರತದ ಯುವಕ ಉಕ್ರೇನ್‌ನ ಪ್ಯಾರಾ ಮಿಲಿಟರಿ ಪಡೆ ಸೇರಿದ್ದಾನೆ. ರಷ್ಯಾ ವಿರುದ್ಧ ತಮಿಳುನಾಡಿನ ಯುವಕ ಹೋರಾಟಕ್ಕಿಳಿದಿದ್ದಾನೆ. ತಮಿಳುನಾಡಿನ ಕೊಯಂಬತ್ತೂರಿನ ಸಾಯಿ ನಿಖೇಶ್ ಉಕ್ರೇನ್‌ನ ಪ್ಯಾರಾ ಮಿಲಿಟರಿ ಪಡೆ ಸೇರಿದ್ದಾನೆ.
ಉಕ್ರೇನ್ ಮೇಲೆ ರಷ್ಯಾ ಸೈನ್ಯ ನಿರಂತರ ದಾಳಿ ನಡೆಸಿದೆ. ಉಕ್ರೇನ್ ನ 202 ಶಾಲೆಗಳನ್ನು ಆಹುತಿ ತೆಗೆದುಕೊಂಡಿರುವ ರಷ್ಯಾ ಸೇನೆ, ಉಕ್ರೇನ್‌ನ 34 ಆಸ್ಪತ್ರೆಗಳು ಸಂಪೂರ್ಣ ನೆಲಸಮ ಮಾಡಿದೆ. ಉಕ್ರೇನ್ ನ 1 500 ವಸತಿ ಕಟ್ಟಡಗಳು ನಾಶ ಮಾಡಿದೆ.
ಟಿವಿ9 ನಿಂದ ನಮಗೆ ಕ್ಷಣ ಕ್ಷಣದ ಮಾಹಿತಿ ಸಿಗುತ್ತಿತ್ತು ಅಂತ ಮಗ ವಾಪಸ್ಸಾಗಿದ್ದನ್ನು ನೆನೆದು ಪೋಷಕರು ಕಣ್ಣೀರು ಹಾಕಿದ್ದಾರೆ. ನಮ್ಮ ಮಗ ಉಕ್ರೇನ್ನಲ್ಲಿದ್ದಾಗ ಇದ್ದ ನೋವು ಯಾರಿಗೂ ಹೇಳಿಕೊಂಡಿಲ್ಲ. ನನ್ನ ಕಷ್ಟ ಅವನಿಗೆ ಗೊತ್ತಾಗಿಲ್ಲ. ಅವನ ಕಷ್ಟ ನನಗೆ ಗೊತ್ತಿಲ್ಲ. ಏನಾಗುತ್ತೋ ಅನ್ನೋ ಭಯದಲ್ಲೇ ಮಂಡ ದೈರ್ಯದಲ್ಲಿ ಕಾಲದೂಡಿದ್ದೇನೆ ಅಂತ ಉಕ್ರೇನ್ನಿಂದ ವಾಪಸ್ಸಾದ ಜೀವನ್ ತಂದೆ ನಾಗರಾಜ್ ಅವತ ಹೇಳಿದರು.
ಮಕರಿವ್ ಬೇಕರಿ ಮೇಲೆ ರಷ್ಯಾ ದಾಳಿ ನಡೆಸಿದ ಹಿನ್ನೆಲೆ 13 ಜನರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ವರದಿ ಮಾಡಿದೆ.
ಉಕ್ರೇನ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಸಾರಿಗೆ ವ್ಯವಸ್ಥೆಗೆ ನಷ್ಟವಾಗಿದೆ. ಸುಮಾರು 10 ಬಿಲಿಯನ್ ಡಾಲರ್ ನಷ್ಟು ಸಾರಿಗೆ ವ್ಯವಸ್ಥೆಗೆ ನಷ್ಟವಾಗಿದೆ. ಅಪಾರ ಪ್ರಮಾಣದ ಅಂದಾಜು ನಷ್ಟದ ಬಗ್ಗೆ ಉಕ್ರೇನ್ ಸರಕಾರದಿಂದ ಮಾಹಿತಿ ಲಭ್ಯವಾಗಿದೆ.
ಸದ್ಯ ವಿಶ್ವದಲ್ಲಿಯೇ ರಷ್ಯಾ ಅತಿ ಹೆಚ್ಚು ನಿರ್ಬಂಧಗಳನ್ನು ಹೊಂದಿರುವ ದೇಶವಾಗಿದೆ. ಇರಾನ್ ಮತ್ತು ಉತ್ತರ ಕೊರಿಯಾವನ್ನು ರಷ್ಯಾ ಹಿಂದೆ ಹಾಕಿದೆ. ರಷ್ಯಾದ ವಿರುದ್ದ ವಿವಿಧ ದೇಶಗಳಿಂದ 2,778 ಹೊಸ ನಿರ್ಬಂಧಗಳ ಹೇರಿಕೆಯಾಗಿದೆ. ಯುದ್ದ ಘೋಷಣೆಯಾದ ಬಳಿಕ ರಷ್ಯಾ ಒಟ್ಟು 5,530 ನಿರ್ಬಂಧಗಳನ್ನು ಹೊಂದಿದೆ.
ರಷ್ಯಾ ಮತ್ತೆ ಕೆಲವು ನಗರಗಳಲ್ಲಿ ಕದನವಿರಾಮ ಘೋಷಿಸಿದೆ. ಭಾರತೀಯ ಕಾಲಮಾನ ಮಧ್ಯಾಹ್ನ 12-30ರಿಂದ ಕದನವಿರಾಮ ಘೋಷಿಸಿದೆ. ಕದನ ವಿರಾಮದ ಬಗ್ಗೆ ಭಾರತದಲ್ಲಿನ ರಷ್ಯಾದ ರಾಯಭಾರ ಕಚೇರಿಯಿಂದ ಮಾಹಿತಿ ಲಭ್ಯವಾಗಿದೆ.
ಉಕ್ರೇನ್ನಿಂದ ಬಂದ ವಿದ್ಯಾರ್ಥಿನಿ ವಿದ್ಯಾರ್ಥಿನಿ ಪ್ರಿಯಾ ಪಾಟೀಲ್ಗೆ ಸನ್ಮಾನ ಮಾಡಿದ್ದಾರೆ. ವಿಶ್ವ ಮಹಿಳಾ ದಿನದ ಅಂಗವಾಗಿ ಕಲಬುರಗಿ ನದರದ ಬಸವೇಶ್ವರ ಪುತ್ಥಳಿ ಬಳಿ ಸತ್ಕಾರ ಮಾಡಲಾಗಿದೆ.
ರಷ್ಯಾ ಉಕ್ರೇನ್ ಮೇಲೆ ಯುದ್ಧ ಮುಂದುವರಿಸಿದೆ. ರಷ್ಯಾ ಸೇನೆ ದಾಳಿಯಲ್ಲಿ ಇದುವರೆಗೆ 202 ಶಾಲೆಗಳು, 34 ಆಸ್ಪತ್ರೆಗಳು ಧ್ವಂಸಗೊಂಡಿವೆ. ಈ ಬಗ್ಗೆ ಉಕ್ರೇನ್ ಹೇಳಿಕೆ ನೀಡಿದೆ.
ಸುಮಿಯಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆ ಕಾರ್ಯ ಶುರುವಾಗಿದೆ. ಈಗತಾನೇ ಟ್ಯಾಕ್ಸಿ ಬಂದಿದ್ದು, ಕರ್ನಾಟಕದ ವಿದ್ಯಾರ್ಥಿಗಳು ಸುರಕ್ಷಿತ ಸ್ಥಳಕ್ಕೆ ಹೊರಟಿದ್ದಾರೆ.
ಉಕ್ರೇನ್ನಿಂದ ಅಶ್ವಿನಿ ಯಾದವಾಡ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಗ್ರಾಮಕ್ಕೆ ಆಗಮಿಸಿದ್ದಾರೆ. ಈ ವೇಳೆ ಮಾತನಾಡಿದ ಅಶ್ವಿನಿ,
ಖಾರ್ಕೀವ್ನಲ್ಲಿದ್ದಾಗ ಬಹಳ ಕಷ್ಟ ಆಯಿತು. ಎರಡು ದಿನಗಟ್ಟಲೆ ಊಟವಿಲ್ಲದೆ ಇದ್ದೆವು. ನಂತರ ಗಡಿಗೆ ಬರೋಕೆ ಹೇಳಿದರು. ಗಡಿಗೆ ಬಂದ ಮೇಲೆ ಭಾರತೀಯ ಅಧಿಕಾರಿಗಳು ಸಹಾಯ ಮಾಡಿದರು. ಊಟ, ವಸತಿ ವ್ಯವಸ್ಥೆ ಮಾಡಿದರು ಅಂತ ಭಾರತ ಸರಕಾರಕ್ಕೆ, ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದರು.
ಉಕ್ರೇನ್‌ನಲ್ಲಿ ಸಿಲುಕಿದ್ದ ಪಟ್ರೆಹಳ್ಳಿಯ ವಿದ್ಯಾರ್ಥಿ ತವರಿಗೆ ವಾಪಸ್ ಆಗಿದ್ದಾರೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಪಟ್ರೆಹಳ್ಳಿಯ ವಿದ್ಯಾರ್ಥಿ ವಿಷ್ಣು ಮುರುಗನ್ ತವರಿಗೆ ವಾಪಸ್ ಆಗಿದ್ದಾರೆ. ಪುತ್ರನ ಆಗಮನದಿಂದ ಪೋಷಕರು ನಿರಾಳರಾಗಿದ್ದಾರೆ. ಉಕ್ರೇನ್‌ನ ಕಾಲೇಜು ಬಂಕರ್ನಿಂದ ಹಂಗೇರಿಗೆ ಶಿಫ್ಟ್ ಮಾಡಿದ್ರು. ಹಂಗೇರಿಯಿಂದ ಭಾರತಕ್ಕೆ ಸರ್ಕಾರದಿಂದ ಫ್ಲೈಟ್ ವ್ಯವಸ್ಥೆ ಆಗಿತ್ತು. ಸೂಕ್ತ ವ್ಯವಸ್ಥೆ ಕಲ್ಪಿಸಿ ಸುರಕ್ಷಿತವಾಗಿ ತವರಿಗೆ ಕರೆತರಲಾಗಿದೆ ಅಂತ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ, ಜಿಲ್ಲಾಡಳಿತಕ್ಕೆ ವಿಷ್ಣು ಧನ್ಯವಾದ ತಿಳಿಸದರು.
ವಿಶ್ವ ಬ್ಯಾಂಕ್ ಅಗತ್ಯ ಸೇವೆಗಳಿಗಾಗಿ ಉಕ್ರೇನ್‌ಗೆ 700 ಮಿಲಿಯನ್ ಡಾಲರ್ ನೆರವು ನೀಡಿದೆ.
ನಾನು ಯಾರಿಗೂ ಹೆದರಲ್ಲ ಅಂತ ರಷ್ಯಾ-ಉಕ್ರೇನ್ ಯುದ್ಧದ ನಡುವೆ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಹೇಳಿಕೆ ನೀಡಿದ್ದಾರೆ. ತಾನು ಕೀವ್‌ನಲ್ಲಿಯೇ ಇರುವುದಾಗಿ ಝೆಲೆನ್‌ಸ್ಕಿ ಹೇಳಿದ್ದಾರೆ.
ತುಮಕೂರಿನ ಶ್ರೀ ನಗರ ನಿವಾಸಿಯಾಗಿರುವ ಪ್ರತಿಭಾ ಉಕ್ರೇನ್ನಿಂದ ತವರಿಗೆ ವಾಪಸ್ ಆಗಿದ್ದಾರೆ. ಪ್ರತಿಭಾ ಉಕ್ರೇನ್‌ನ ಖಾರ್ಕಿವ್ ಸಿಟಿಯಲ್ಲಿ ಅಂತಿಮ ವರ್ಷದ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದಾರೆ. ಪ್ರತಿಭಾ ವಾಪಸ್ ಆದ ಹಿನ್ನೆಲೆ ಪೋಷಕರು ಪುಲ್ ಖುಷ್ ಆಗಿದ್ದಾರೆ. ಜೊತೆಗೆ ನೆರೆಹೊರೆಯವರುಹಾರ ಶಾಲು ಹಾಕಿ ಸ್ವಾಗತ ಕೋರಿದ್ದಾರೆ. ಮಗಳು ವಾಪಸ್ ಆಗಿದ ಕಾರಣ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿಗಳು ಉಕ್ರೇನ್‌ನ ಖಾರ್ಕೀವ್ನಿಂದ ರೊಮೇನಿಯಾ ತಲುಪಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ಸಂಭ್ರಮಾಚರಣೆ ಮಾಡಿದ್ದಾರೆ. ಕಿರಣ ಸವದಿ ಸೇರಿ ಅನೇಕ ವಿದ್ಯಾರ್ಥಿಗಳು ಒಂದೇ ಮಾತರಂ ಎಂದು ಘೋಷಣೆ ಕೂಗಿ ಸಂಭ್ರಮಿಸಿದ್ದಾರೆ.
ರಷ್ಯಾ ವಿರುದ್ಧ ಇತರ ರಾಷ್ಟ್ರಗಳ ನಿರ್ಬಂಧ ಮುಂದುವರಿದಿದೆ. ರಷ್ಯಾಕ್ಕೆ ತೈಲ ಶೋಧನೆ ಉಪಕರಣಗಳ ರಫ್ತಿಗೆ ನಿರ್ಬಂಧ ಹೇರಲಾಗಿದೆ.
ಶೋಧನಾ ಉಪಕರಣ ರಫ್ತು ಮಾಡಲ್ಲ ಅಂತ ಜಪಾನ್ ತಿಳಿಸಿದೆ.
ಉಕ್ರೇನ್ ವಿದೇಶಾಂಗ ಸಚಿವ ಡಿಮಿಟ್ರೋ ಕುಲೆಬಾ ರಷ್ಯಾ ವಿದೇಶಾಂಗ ಸಚಿವರನ್ನು ಭೇಟಿಯಾಗಲಿದ್ದಾರೆ. ಗುರುವಾರ ಭೇಟಿಯಾಗುವುದಾಗಿ ಕುಲೆಬಾ ಹೇಳಿದ್ದಾರೆ. ಈ ವೇಳೆ ರಷ್ಯಾ, ಉಕ್ರೇನ್ ಅಧ್ಯಕ್ಷರ ಮಾತುಕತೆ ಪ್ರಸ್ತಾಪ ಮಾಡಿದ್ದಾರೆ. ನೇರ ಮಾತುಕತೆಗೆ ಪ್ರಸ್ತಾಪ ಸಲ್ಲಿಸುವುದಾಗಿ ಕುಲೆಬಾ ಹೇಳಿಕೆ ನೀಡಿದ್ದಾರೆ.
ರೊಮಾನಿಯಾದಿಂದ ಮತ್ತೊಂದು ವಿಮಾನ ದೆಹಲಿಯಲ್ಲಿ ಲ್ಯಾಂಡಿಂಗ್ ಆಗಿದೆ. ದೆಹಲಿಗೆ 47 ಕನ್ನಡಿಗರು ಬಂದಿಳಿದಿದ್ದಾರೆ. ಹಿಂದಿನ ವಿಮಾನದಲ್ಲಿ ಬಂದ ಮೂವರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.
ನವೀನ್ ಮೃತದೇಹ ತರುವ ವಿಚಾರಕ್ಕೆ ಸಂಬಂಧಿಸಿ ಸಿಎಂ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಕೇಂದ್ರ ಸಚಿವ ಜೈಶಂಕರ್ ಅವರ ಜೊತೆ ಮಾತಾಡಿದ್ದೇನೆ. ನವೀನ್ ಮೃತದೇಹ ಸಿಕ್ಕಿದೆ. ಉಕ್ರೇನಿನ ಶವಾಗಾರದಲ್ಲಿ ಮೃತ ದೇಹ ಇಡಲಾಗಿದೆ. ಯುದ್ಧ ಇನ್ನೂ ನಡೀತಿದೆ. ರಾಯಭಾರಿ ಕಚೇರಿ ಅಧಿಕಾರಿಗಳ ಜತೆ ಸಂಪರ್ಕದಲ್ಲಿದ್ದೇವೆ. ಮೃತದೇಹ ತರುವ ಬಗ್ಗೆ ಮಾತುಕತೆ ನಡೆಸುತ್ತಿದ್ದೇವೆ ಅಂತ ತಿಳಿಸಿದರು.
ಉಕ್ರೇನ್ನಿಂದ ವಿಜಯಪುರದ ಮತ್ತೋರ್ವ ವಿದ್ಯಾರ್ಥಿನಿ ವಾಪಸ್ಸಾಗಿದ್ದಾರೆ. ಭಾರತೀಯ ರಾಯಭಾರ ಕಚೇರಿ ಹಾಗೂ ಉಕ್ರೇನ್ ಸರ್ಕಾರ ಯುದ್ದದ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. 2014 ರಿಂದಲೂ ಯುದ್ದವಾಗುತ್ತದೆ ಎನ್ನಲಾಗುತ್ತಿದೆ. ಯುದ್ದವಾಗಲ್ಲ ಎಂದು ಹೇಳಿದ್ದ.ರು ಯುದ್ದ ಆರಂಭವಾದ ಕೂಡಲೇ ನಮಗೆ ಭಯವಾಗಿತ್ತು. ಬಂಕರ್ನಲ್ಲಿ ಅಶ್ರಯ ಪಡೆದಿದ್ದೆವು. ಆಹಾರ ಸಮಸ್ಯೆಯಾಗಿತ್ತು.
ಬಾಂಬ್ ದಾಳಿ ನಮ್ಮ ಸಮೀಪವೇ ಆಗುತ್ತಿದ್ದವು. ಭಯದಲ್ಲೇ ಕಾಲ ಕಳೆದವು. ನಂತರ ಜೀವ ಉಳಿಸಿಕೊಳ್ಳಲು ಬೇರೆ ದೇಶಗಳ ಗಡಿಯತ್ತ ಹೊರಡಲು ಮುಂದಾದೆವು ಅಂತ ವಿವಿಧಾ ತಿಳಿಸಿದ್ದಾರೆ.
ಉಕ್ರೇನ್ ರಷ್ಯಾ ಯುದ್ಧ ಹಿನ್ನೆಲೆ ಚಿನ್ನದ ಬೆಲೆ ಏರಿಕೆಯಾಗುತ್ತಿದೆ. ಕಳೆದ ಏಳು ದಿನದಿಂದ ಚಿನ್ನದ ಬೆಲೆ ಏರಿಕೆಯಾಗುತ್ತಿದೆ. 22 ಕ್ಯಾರೆಟ್ ಗೋಲ್ಡ್ ಹಿಂದೆ ಒಂದು ಗ್ರಾಂ ಗೆ 4,450 ರೂಪಾಯಿ ಇತ್ತು. ಇಂದು ಒಂದು ಗ್ರಾಂ 22 ಕ್ಯಾರೆಟ್ ಚಿನ್ನಕ್ಕೆ 4,950 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನ ಹಿಂದೆ 4,900 ರೂ. ಇದ್ದರೆ, ಇಂದು 24 ಕ್ಯಾರೆಟ್ ಚಿನ್ನ 5,500 ರೂಪಾಯಿ ಇದೆ. ಮುಂದೆಯೂ ಚಿನ್ನದ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ. ಬೇರೆ ದೇಶದಲ್ಲಿ ಯುದ್ಧ ನಡಿತಾಯಿದ್ದು ಷೇರು ಮಾರುಕಟ್ಟೆ ಕುಸಿದಿದೆ. ಜನ ಸೇಫ್ ಮಾರುಕಟ್ಟೆಯಾದ ಚಿನ್ನದ ಮೇಲೆ ಇನ್ವೆಸ್ಟ್ ಮಾಡ್ತಿದ್ದಾರೆ. ಚಿನ್ನದ ಬೆಲೆ ಏರಿಕೆಯಿಂದ ಗ್ರಾಹಕರಿಗೆ ಹೊಡೆತ ಬಿದ್ದಿದೆ. ಈಗ ಮದುವೆ, ಶುಭ ಕಾರ್ಯಗಳು ಇದ್ದು ಜನ ಹಳೆ ಚಿನ್ನ ಮಾರಿ ಹೊಸ ಚಿನ್ನ ಖರೀದಿ ಮಾಡುತ್ತಿದ್ದಾರೆ.
ಬೆಳಗಾವಿಯಲ್ಲಿ ಭಾರತ-ಜಪಾನ್ ಜಂಟಿ ಮಿಲಿಟರಿ ಸಮರಾಭ್ಯಾಸ ನಡೆಯುತ್ತಿದೆ. ಮರಾಠಾ ಲಘು ಪದಾತಿ ದಳ ಕೇಂದ್ರದಲ್ಲಿ ಜಂಟಿ ಸಮರಾಭ್ಯಾಸ ನಡೆಯುತ್ತಿದೆ. ಫೆ.27ರಂದು ಆರಂಭವಾಗಿದೆ. ಇಂದು ಭಾರತ-ಜಪಾನ್ ಜಂಟಿ ಸಮರಾಭ್ಯಾಸದ ಅಣಕು ಪ್ರದರ್ಶನ ಮಾಡಲಾಗುತ್ತದೆ.
ಉಕ್ರೇನ್‌ನ ಸುಮಿಯಲ್ಲಿ ರಷ್ಯಾ ಸೇನೆಯಿಂದ ಕ್ಷಿಪಣಿ ದಾಳಿ ನಡೆದ ಹಿನ್ನೆಲೆ 10 ಜನರು ಮೃತಪಟ್ಟಿದ್ದಾಗಿ ಉಕ್ರೇನ್ ಹೇಳಿಕೆ ನೀಡಿದೆ.
ಉಕ್ರೇನ್‌ನ 5 ನಗರಗಳಲ್ಲಿ ಕದನವಿರಾಮ ಘೋಷಣೆ ಮಾಡಲಾಗಿದೆ. ಕೀವ್, ಚೆರ್ನಿಹಿವ್, ಮರಿಯುಪೋಲ್, ಖಾರ್ಕಿವ್, ಸುಮಿ ನಗರಗಳಲ್ಲಿ ರಷ್ಯಾ ಕದನವಿರಾಮ ಘೋಷಿಸಿದೆ. ಮಧ್ಯಾಹ್ನ 12.30ರಿಂದ 5 ನಗರಗಳಲ್ಲಿ ಕದನವಿರಾಮ ಘೋಷಣೆಯಾಗಿದೆ.
ಉಕ್ರೇನ್‌ನ ಮೈಕೊಲೈವ್‌ನಲ್ಲಿ ರಷ್ಯಾದಿಂದ ಕ್ಷಿಪಣಿ ದಾಳಿ ನಡೆದಿದೆ. ರಷ್ಯಾ ದಾಳಿಯಲ್ಲಿ 8 ಜನರ ಸಾವನ್ನಪ್ಪಿದ್ದು, 19 ಜನರಿಗೆ ಗಾಯವಾಗಿದೆ.
ನಾಳೆ ಮೃತ ನವೀನ್ ನಿವಾಸಕ್ಕೆ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಭೇಟಿ ನೀಡಲಿದ್ದಾರೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿ ನವೀನ್ ನಿವಾಸವಿದೆ. ನಾಳೆ ಬೆಳಿಗ್ಗೆ 10.30ಕ್ಕೆ ನವೀನ್ ನಿವಾಸಕ್ಕೆ ಸಿದ್ದರಾಮಯ್ಯ ಹಾಗೂ ಜಾರಕಿಹೊಳಿ ಭೇಟಿ ನೀಡಿ, ಮೃತನ ಕುಟುಂಬಕ್ಕೆ ಸಾಂತ್ವನ ಹೇಳಲಿದ್ದಾರೆ. ಈ ವೇಳೆ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಭಾಗವಹಿಸಲಿದ್ದಾರೆ .
ಉಕ್ರೇನ್‌ನಲ್ಲಿ ಸಿಲುಕಿದ್ದ 200 ಭಾರತೀಯರು ವಿಶೇಷ ವಿಮಾನದಲ್ಲಿ ಆಗಮಿಸಿದ್ದಾರೆ. ರೊಮೇನಿಯಾದ ಸುಸೇವಾದಿಂದ ದೆಹಲಿಗೆ ಆಗಮಿಸಿದ್ದಾರೆ. ಇಂದು ಬೆಳಗ್ಗೆ ರೊಮಾನಿಯಾದಿಂದ ಒಂದು ವಿಮಾನ ಬಂ.ದಿದೆ. 200 ಭಾರತೀಯರನ್ನು ವಿಮಾನ ಹೊತ್ತು ತಂದಿದೆ. ಇದರಲ್ಲಿ ಮೂವರು ಕನ್ನಡಿಗರು ದೆಹಲಿಗೆ ಆಗಮಿಸಿದ್ದಾರೆ.
ತುಮಕೂರು ಜಿಲ್ಲೆಗೆ ಇದುವರೆಗೆ ಒಟ್ಟು 19 ವಿದ್ಯಾರ್ಥಿಗಳು ಉಕ್ರೇನ್ನಿಂದ ಆಗಮಿಸಿದ್ದಾರೆ. 19 ವಿದ್ಯಾರ್ಥಿ ಗಳು ತಮ್ಮ ಮನೆಗಳಿಗೆ ವಾಪಸ್ ಆಗಿದ್ದಾರೆ.. ಇನ್ನೂ 5 ವಿದ್ಯಾರ್ಥಿಗಳು ಬರಬೇಕಿದೆ. ಸದ್ಯ ಮೂವರು ವಿದ್ಯಾರ್ಥಿಗಳು ರೋಮಾನಿಯಾ ಬಾರ್ಡರ್ನಲ್ಲಿ ಇರುವುದಾಗಿ ಮಾಹಿತಿಯಿದೆ. ಒಬ್ಬರು ಸುಮಿ ಹಾಗೂ ಮತ್ತೊಬ್ಬರು ಅರ್ಮೆನಿರಾದಲ್ಲಿ ಇರುವುದಾಗಿ ಮಾಹಿತಿ ಲಭ್ಯವಾಗಿದೆ.
ಉಕ್ರೇನ್ ಯುದ್ದ ಭೂಮಿಯಿಂದ ಸುರಕ್ಷಿತವಾಗಿ ಆಗಮಿಸಿದ ಭಾರತೀಯ ವಿದ್ಯಾರ್ಥಿಗಳು ರುಮೇನಿಯಾದಲ್ಲಿ ಸಂಭ್ರಮ ಆಚರಣೆ ಮಾಡಿದ್ದಾರೆ. ಗದಗ ನಗರದ ಆಕಾಶ್ ಪೊಲೀಸ್ ಪಾಟೀಲ್ ಸೇರಿದಂತೆ ಭಾರತೀಯ ವಿದ್ಯಾರ್ಥಿಗಳುಸಂಭ್ರಮ ಮಾಡಿದ್ದಾರೆ. ಭಾರತ್ ಮಾತಾಕೀ ಜೈ ಅಂತ ಘೋಷಣೆ ಕೂಗಿ ಸಂಭ್ರಮಿಸಿದ್ದಾರೆ. ಸದ್ಯ ಭಾರತೀಯ ವಿದ್ಯಾರ್ಥಿಗಳು ವಿಮಾನ ಹತ್ತಲು ಹೊರಟಿದ್ದಾರೆ. ವಿದ್ಯಾರ್ಥಿಗಳು ಇಂದು ದೆಹಲಿ ಆಗಮಿಸಲಿದ್ದಾರೆ ಅಂತ ಟಿವಿ9ಗೆ ವಿದ್ಯಾರ್ಥಿ ಆಕಾಶ್ ತಂದೆ ಶೇಖರಗೌಡ ಪೊಲೀಸ್ ಪಾಟೀಲ್ ಮಾಹಿತಿ ನೀಡಿದ್ದಾರೆ.
ರುಬಿನಾ ಉಕ್ರೇನ್ನಿಂದ ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಹಟ್ಟಿ ಪಟ್ಟಣಕ್ಕೆ ಬಂದಿದ್ದಾಳೆ. ತಂದೆ-ತಾಯಿ ಮನೆಗೆ ಬಂದ ಮಗಳಿಗೆ ದೃಷ್ಟಿ ತೆಗೆದರು. ರುಬಿನಾಗೆ ಸಾಂಪ್ರದಾಯಿಕವಾಗಿ ದೃಷ್ಟಿ ತೆಗೆದು ಸ್ವಾಗತ ಕೋರಿದ್ದಾರೆ. ಮಗಳನ್ನು ಕಂಡು ತಂದೆ ಹುಸೇನ್ ಪಾಷಾ ಹಾಗೂ ತಾಯಿ ಜುಬೇದಾಬೇಗಂ ಭಾವುಕರಾದರು. ಬಳಿಕ ಉಕ್ರೇನ್ ಕಹಿ ಘಟನೆ ಬಗ್ಗೆ ಹೇಳಿಕೆ ನೀಡಿದ ರುಬಿನಾ, ಮದರ್ ಲ್ಯಾಂಡ್ ಅಂದ್ರೇನೆ ವೈಬ್ರೇಟ್ ಆಗತ್ತೆ. ಉಕ್ರೇನ್‌ನಲ್ಲಿ ನಮ್ಮನ್ನ ಕಾಪಾಡಿದ್ದೇ ಭಾರತದ ಫ್ಲಾಗ್. ನಮಗೆ ರಕ್ಷಣೆಯಾಗಿ, ಸೆಕ್ಯುರಿಟಿಯಾಗಿ ಭಾರತ ಧ್ವಜ ನಮ್ಮ ಜೊತೆಗಿತ್ತು. ಭಾರತೀಯಳು ಅಂತ ಹೇಳಿಕೊಳ್ಳೊಕೆ ಹೆಮ್ಮೆಯಾಗುತ್ತೆ ಅಂತ ತಿಳಿಸದಳು.
ಉಕ್ರೇನ್‌ನ 4 ನಗರಗಳಲ್ಲಿ ರಷ್ಯಾ ಕದನ ವಿರಾಮ ಘೋಷಣೆ ಮಾಡಿದೆ. ಕೀವ್, ಚೆರ್ನಿಹಿವ್, ಮರಿಯುಪೋಲ್, ಸುಮಿ ನಗರಗಳಲ್ಲಿ ಕದನ ವಿರಾಮ ಘೋಷಿಸಿದೆ. ನಾಗರಿಕರ ಸ್ಥಳಾಂತರ ಹಿನ್ನೆಲೆಯಲ್ಲಿ ಮಧ್ಯಾಹ್ನ 12.30ರಿಂದ 4 ನಗರಗಳಲ್ಲಿ ಕದನ ವಿರಾಮ ಘೋಷಣೆಯಾಗಿದೆ.
ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಹಟ್ಟಿ ಪಟ್ಟಣದ ವಿದ್ಯಾರ್ಥಿನಿ ರುಬಿನಾ ಉಕ್ರೇನ್ನಿಂದ ತವರೂರಿಗೆ ಆಗಮಿಸಿದ್ದಾರೆ. ಮನೆಗೆ ಬಂದ ಮಗಳಿಗೆ ತಂದೆ-ತಾಯಿ ಸಾಂಪ್ರದಾಯಿಕವಾಗಿ ದೃಷ್ಟಿ ತೆಗೆದು ಸ್ವಾಗತಿಸಿದ್ದಾರೆ. ಮಗಳನ್ನು ಕಂಡು ತಂದೆ ಹುಸೇನ್ ಪಾಷಾ ಹಾಗೂ ತಾಯಿ ಜುಬೇದಾಬೇಗಂ ಭಾವುಕರಾದರು. ಬಳಿಕ ಉಕ್ರೇನ್ ಕಹಿ ಘಟನೆ ಬಗ್ಗೆ ರುಬಿನಾ ಹೇಳಿಕೆ ನೀಡಿದ್ದಾರೆ. ಮದರ್ ಲ್ಯಾಂಡ್ ಅಂದ್ರೇನೆ ವೈಬ್ರೇಟ್ ಆಗತ್ತೆ. ಉಕ್ರೇನ್‌ನಲ್ಲಿ ನಮ್ಮನ್ನ ಕಾಪಾಡಿದ್ದೇ ಭಾರತದ ಫ್ಲಾಗ್. ನಮಗೆ ರಕ್ಷಣೆಯಾಗಿ, ಸೆಕ್ಯುರಿಟಿಯಾಗಿ ಭಾರತ ಧ್ವಜ ನಮ್ಮ ಜೊತೆಗಿತ್ತು. ಭಾರತ ಧ್ವಜ ತೋರಿಸಿದಾಗ ಶೆಲ್ಲಿಂಗ್ ನಿಲ್ಲಿಸಿದ್ದ ಸೇನೆ. ಭಾರತೀಯಳು ಅಂತ ಹೇಳಿಕೊಳ್ಳೊಕೆ ಹೆಮ್ಮೆಯಾಗುತ್ತೆ. ನಮಗೆ ಅವಕಾಶ ಕೊಟ್ಟ ಉಕ್ರೇನ್ ಸ್ಥಿತಿ ಏನು..?ಅದನ್ನ ನೆನಪಿಸಿಕೊಂಡ್ರೆ ತುಂಬಾ ಕಾಡುತ್ತೆ ಎಂದು ಹೇಳಿದ್ದಾರೆ.
ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ದ ಹಿನ್ನೆಲೆ, ತುಮಕೂರು ಜಿಲ್ಲೆಗೆ ಇದುವರೆಗೂ ಒಟ್ಟು 19 ವಿದ್ಯಾರ್ಥಿಗಳು ಆಗಮಿಸಿದ್ದಾರೆ. 19 ವಿದ್ಯಾರ್ಥಿ ಗಳು ತಮ್ಮ ಮನೆಗಳಿಗೆ ವಾಪಸ್ಸಾಗಿದ್ದು, ಇನ್ನೂ 5 ವಿದ್ಯಾರ್ಥಿಗಳು ಬರಬೇಕಿದೆ. ಸದ್ಯ ಮೂವರು ವಿದ್ಯಾರ್ಥಿಗಳು ರೋಮಾನಿಯಾ ಬಾರ್ಡರ್ ನಲ್ಲಿ ಇರುವುದಾಗಿ ಮಾಹಿತಿಯಿದ್ದು, ಒಬ್ಬರು ಸುಮಿ ಹಾಗೂ ಮತ್ತೋಬ್ಬರು ಅರ್ಮೆನಿರಾದಲ್ಲಿ ಇರುವುದಾಗಿ ಮಾಹಿತಿ ಲಭ್ಯವಾಗಿದೆ.
ಇಂದು ಬೆಳಗ್ಗೆ ರೊಮಾನಿಯಾದಿಂದ ಒಂದು ವಿಮಾನ ಬಂದಿದ್ದು, 200 ಭಾರತೀಯರನ್ನು ಹೊತ್ತು ತಂದಿದೆ. ಇದರಲ್ಲಿ ಮೂವರು ಕನ್ನಡಿಗರು ದೆಹಲಿಗೆ ಆಗಮಿಸಿದ್ದಾರೆ.
ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದಲ್ಲಿ ಕನ್ನಡಿಗ ನವೀನ ಸಾವು ಹಿನ್ನೆಲೆ. ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದಲ್ಲಿರೋ ಮೃತ ನವೀನ ನಿವಾಸಕ್ಕೆ ನಾಳೆ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಭೇಟಿ ನೀಡಲಿದ್ದಾರೆ. ನಾಳೆ ಬೆಳಿಗ್ಗೆ 10.30ಕ್ಕೆ ನವೀನ ನಿವಾಸಕ್ಕೆ ಭೇಟಿ ನೀಡಿ, ಮೃತನ ಕುಟುಂಬಕ್ಕೆ ಸಾಂತ್ವನ ಹೇಳಲಿದ್ದು, ಸಿದ್ದರಾಮಯ್ಯ ಮತ್ತು ಜಾರಕಿಹೊಳಿ ಜೊತೆ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಭಾಗವಹಿಸಲಿದ್ದಾರೆ.
ಉಕ್ರೇನ್-ರಷ್ಯಾ ಮಧ್ಯೆ 13ನೇ ದಿನವೂ ಮಹಾಯುದ್ಧ ಮುಂದುವರೆದಿದೆ. ಉಕ್ರೇನ್‌ನ ಝೈಟೊಮಿರ್‌ನ ತೈಲ ಡಿಪೋ ಮೇಲೆ ಕ್ಷಿಪಣಿ ದಾಳಿ ಮಾಡಲಾಗಿದೆ. ಚೆರ್ನಿಹಿವ್ ನಗರದ ತೈಲ ಡಿಪೋ ಮೇಲೂ ರಷ್ಯಾ ಸೇನೆ ದಾಳಿ ಮಾಡಿದ್ದು, ಝೈಟೊಮಿರ್, ಚೆರ್ನಿಹಿವ್ ನಗರದ ತೈಲ ಡಿಪೋಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಉಕ್ರೇನ್-ರಷ್ಯಾ ನಡುವೆ ಯುದ್ಧ ಮುಂದುವರೆದಿದೆ. ಉಕ್ರೇನ್‌ನಲ್ಲಿ ರಷ್ಯಾದ 52 ಯುದ್ಧ ವಿಮಾನ ಹಾಗೂ 69 ಹೆಲಿಕಾಪ್ಟರ್ ಹೊಡೆದುರುಳಿಸಿದ್ದಾಗಿ ಉಕ್ರೇನ್ ಹೇಳಿಕೆ ನೀಡಿದೆ.
ಉಕ್ರೇನ್-ರಷ್ಯಾ ಮಧ್ಯೆ 3ನೇ ಸುತ್ತಿನ ಮಾತುಕತೆಯೂ ವಿಫಲವಾಗಿದೆ. ಬೆಲಾರಸ್‌ನಲ್ಲಿ ನಡೆದ 2 ದೇಶಗಳ 3ನೇ ಸುತ್ತಿನ ಚರ್ಚೆ ವಿಫಲವಾಗಿದೆ.
ಉಕ್ರೇನ್-ರಷ್ಯಾ ನಡುವೆ ಸಂಘರ್ಷ ವಿಚಾರವಾಗಿ ಮಾನವೀಯ ಕ್ರಮಗಳನ್ನು ರಾಜಕೀಯಗೊಳಿಸಬಾರದು ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಭಾರತ ಹೇಳಿಕೆ ನೀಡಿದೆ.
Published On - 7:19 am, Tue, 8 March 22