Rocket Attack: ಉಕ್ರೇನ್ ಅಪಾರ್ಟ್​ಮೆಂಟ್ ಮೇಲೆ ರಷ್ಯಾ ರಾಕೆಟ್ ದಾಳಿ, 15 ಮಂದಿ ಸಾವು

ಉಕ್ರೇನ್​ ಮೇಲೆ ರಷ್ಯಾ ದಾಳಿ ಮುಂದುವರೆದಿದೆ, ಉಕ್ರೇನ್​ನ ಅಪಾರ್ಟ್​ಮೆಂಟ್ ಮೇಲೆ ರಷ್ಯಾ ರಾಕೆಟ್ ದಾಳಿ ನಡೆಸಿದ್ದು ಘಟನೆಯಲ್ಲಿ 15 ಮಂದಿ ಮೃತಪಟ್ಟಿರುವ ಕುರಿತು ಮಾಹಿತಿ ಲಭ್ಯವಾಗಿದೆ.

Rocket Attack: ಉಕ್ರೇನ್ ಅಪಾರ್ಟ್​ಮೆಂಟ್ ಮೇಲೆ ರಷ್ಯಾ ರಾಕೆಟ್ ದಾಳಿ, 15 ಮಂದಿ ಸಾವು
Ukraine
Image Credit source: AP
Edited By:

Updated on: Jul 10, 2022 | 5:33 PM

ಉಕ್ರೇನ್​ ಮೇಲೆ ರಷ್ಯಾ ದಾಳಿ ಮುಂದುವರೆದಿದೆ, ಉಕ್ರೇನ್​ನ ಅಪಾರ್ಟ್​ಮೆಂಟ್ ಮೇಲೆ ರಷ್ಯಾ ರಾಕೆಟ್ ದಾಳಿ ನಡೆಸಿದ್ದು ಘಟನೆಯಲ್ಲಿ 15 ಮಂದಿ ಮೃತಪಟ್ಟಿರುವ ಕುರಿತು ಮಾಹಿತಿ ಲಭ್ಯವಾಗಿದೆ.

ರಷ್ಯಾದ ರಾಕೆಟ್‌ಗಳು ಪೂರ್ವ ಉಕ್ರೇನ್ ಪಟ್ಟಣದ ಚಾಸಿವ್ ಯಾರ್‌ಗೆ ಅಪ್ಪಳಿಸಿ, ಐದು ಅಂತಸ್ತಿನ ಅಪಾರ್ಟ್‌ಮೆಂಟ್ ಕಟ್ಟಡವನ್ನು ನಾಶಪಡಿಸಿದೆ ಮತ್ತು ಈ ದಾಳಿಯಲ್ಲಿ ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ ಎಂಬುದು ತಿಳಿದುಬಂದಿದೆ.

ಸುಮಾರು ಮೂರು ಡಜನ್​ಗೂ ಅಧಿಕ ಮಂದಿ ಅವಶೇಷಗಳಡಿ ಸಿಲುಕಿರಬಹುದು ಎಂದು ಡೊನೆಟ್ಸ್ಕ್ ಪ್ರದೇಶದ ಗವರ್ನರ್ ಪಾವ್ಲೊ ಕಿರಿಲೆಂಕೊ ಹೇಳಿದ್ದಾರೆ.

ಸುಮಾರು 12,000 ಜನರಿರುವ ಉರಗನ್ ಪಟ್ಟಣದಲ್ಲಿ ರಷ್ಯಾ ರಾಕೆಟ್ ದಾಳಿ ನಡೆದಿದೆ, ಚಾಸಿವ್ ಯಾರ್ ಕ್ರಾಮಾಟೋರ್ಸ್ಕ್‌ನ ಆಗ್ನೇಯಕ್ಕೆ ಸುಮಾರು 20 ಕಿಲೋಮೀಟರ್ ದೂರದಲ್ಲಿದೆ.

ಕಳೆದ ಮಾರ್ಚ್​ ತಿಂಗಳಿನಲ್ಲಿ ಉಕ್ರೇನ್ ಗಡಿಗೆ ಕೇವಲ 45 ಮೈಲಿ ದೂರದಲ್ಲಿರುವ ಪೊಲೆಂಡ್ ರಾಜಧಾನಿಗೆ ಅಮೆರಿಕ ಅಧ್ಯಕ್ಷ ಜೋ- ಬೈಡನ್ ಭೇಟಿ ನೀಡಿದ ಬೆನ್ನಲ್ಲೇ, ಉಕ್ರೇನ್ ನ ಎಲ್ವಿವ್ ನಗರದಲ್ಲಿ ರಾಕೆಟ್ ದಾಳಿ ನಡೆಸಲಾಗಿತ್ತು.

ಪ್ರಬಲ ಸ್ಫೋಟಗಳು ರಷ್ಯಾದ ಆಕ್ರಮಣದಿಂದ ಉಕ್ರೇನ್ ನ ಇತರ ಭಾಗಗಳಿಂದ ಪಲಾಯನ ಮಾಡುವವರಿಗೆ ಆಶ್ರಯವಾಗಿದ್ದ ನಗರವನ್ನು ಭಯಪಡಿಸಿತ್ತು. ಮೊದಲ ಸ್ಫೋಟ ಸಂಭವಿಸಿದ ನಗರದ ಈಶಾನ್ಯ ಹೊರವಲಯದ ಸ್ಥಳದಿಂದ ದಟ್ಟವಾದ ಕಪ್ಪು ಹೊಗೆ ಗಂಟೆ ಗಟ್ಟಲೇ ಹೊರಹೊಮ್ಮಿತ್ತು, ಬಳಿಕ ಎರಡನೇ ಸ್ಫೋಟ ಸಂಭವಿಸಿರುವುದಾಗಿ ವರದಿಯಾಗಿತ್ತು. ಮೊದಲ ರಾಕೆಟ್ ದಾಳಿಯಲ್ಲಿ ಐವರು ಜನರು ಮೃತಪಟ್ಟಿದ್ದರು.

Published On - 5:20 pm, Sun, 10 July 22