ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin)ಶುಕ್ರವಾರ ಕ್ರೆಮ್ಲಿನ್‌ನಲ್ಲಿ (Kremlin) ಮಾಡಿದ ಭಾಷಣದಲ್ಲಿ ರಷ್ಯಾವು ಉಕ್ರೇನ್‌ನ ನಾಲ್ಕು ಹೊಸ ಪ್ರದೇಶಗಳನ್ನು ಸ್ವಾಧೀನ ಪಡಿಸಿಕೊಂಡಿದೆ ಎಂದು ಘೋಷಿಸಿದರು. ಪ್ರಸ್ತುತ ಭಾಷಣದಲ್ಲಿ ಅವರು ಉಕ್ರೇನ್‌ನೊಂದಿಗೆ ಏಳು ತಿಂಗಳ ಸಂಘರ್ಷದ ಸಮಯದಲ್ಲಿ ಮಾಸ್ಕೋದ ಪಡೆಗಳು ಭಾಗಶಃ ವಶಪಡಿಸಿಕೊಂಡ ನಾಲ್ಕು ಉಕ್ರೇನಿಯನ್ ಪ್ರದೇಶಗಳನ್ನು ರಷ್ಯಾ ಸ್ವಾಧೀನಪಡಿಸಿಕೊಂಡಿರುವುದನ್ನು ವಿವರಿಸಿದರು. ಉಕ್ರೇನ್‌ನ ಆಕ್ರಮಿತ ಪ್ರದೇಶಗಳಲ್ಲಿ ಜನಾಭಿಪ್ರಾಯ ಸಂಗ್ರಹಣೆಗಳನ್ನು ನಡೆಸಿದ ನಂತರ ರಷ್ಯಾ ಈ ಸೇರ್ಪಡೆಗಳನ್ನು ಘೋಷಿಸಿತು. ಜನಾಭಿಪ್ರಾಯಗಳು ಅಂತರರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿವೆ. ಅವುಗಳು ಬಲವಂತವಾಗಿವೆ ಮತ್ತು ನ್ಯಾಯಸಮ್ಮತವಲ್ಲ ಎಂದು ಪಾಶ್ಚಿಮಾತ್ಯ ಸರ್ಕಾರಗಳು ಮತ್ತು ಕೈವ್ ಹೇಳಿದೆ. ಉಕ್ರೇನ್, ಯುನೈಟೆಡ್ ಸ್ಟೇಟ್ಸ್ ಮತ್ತು ವಿಶ್ವಸಂಸ್ಥೆಯ ಮುಖ್ಯಸ್ಥರು ಎಲ್ಲರೂಈ ಸಮಾರಂಭ ಯಾವುದೇ ಕಾನೂನು ಮೌಲ್ಯವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ, ಕೈವ್ ಇದನ್ನು “ಕ್ರೆಮ್ಲಿನ್ ಫ್ರೀಕ್ ಶೋ” ಎಂದು ಹೇಳಿದೆ
ರಷ್ಯಾ ನಾಲ್ಕು ಹೊಸ ಪ್ರದೇಶಗಳನ್ನು ಹೊಂದಿದೆ ಎಂದು ಘೋಷಿಸಿದ ಪುಟಿನ್, ಲುಹಾನ್ಸ್ಕ್, ಡೊನೆಟ್ಸ್ಕ್, ಖೆರ್ಸನ್ ಪ್ರದೇಶ ಮತ್ತು ಜಪೋರಿಝಿಯಾ ಪ್ರದೇಶದಲ್ಲಿ ವಾಸಿಸುವ ಜನರು ಶಾಶ್ವತವಾಗಿ ನಮ್ಮ ದೇಶವಾಸಿಗಳಾಗುತ್ತಿದ್ದಾರೆ ಎಂದಿದ್ದಾರೆ.
ಉಕ್ರೇನ್ ಮಿಲಿಟರಿ ಕ್ರಮವನ್ನು ನಿಲ್ಲಿಸಿ ಸಂಧಾನಕ್ಕೆ ಬರುವಂತೆ ಪುಟಿನ್ ಹೇಳಿದ್ದಾರೆ. ಇತ್ತ ರಷ್ಯಾ ವಶಪಡಿಸಿಕೊಂಡ ಎಲ್ಲಾ ಭೂಮಿಯನ್ನು ವಶಪಡಿಸಿಕೊಳ್ಳುವುದಾಗಿ ಕೈವ್ ಪ್ರತಿಜ್ಞೆ ಮಾಡಿದೆ. ನಮ್ಮ ಪ್ರದೇಶಗಳನ್ನು ವಶಪಡಿಸಿಕೊಳ್ಳುವ ರಷ್ಯಾದ ನಿರ್ಧಾರವು ಮಾತುಕತೆಯ ಯಾವುದೇ ನಿರೀಕ್ಷೆಯನ್ನು ಉಳಿಸಿಕೊಂಡಿಲ್ಲ ಎಂದು ಉಕ್ರೇನ್ ಹೇಳಿದೆ.
ನೆರೆದಿದ್ದ ನೂರಾರು ಗಣ್ಯರನ್ನು 18 ನಿಮಿಷಗಳ ಕಾಲ ಕಾದು ಕಾಯುವಂತೆ ಮಾಡಿದ ನಂತರ ಪುಟಿನ್ ಸಭಾಂಗಣ ಪ್ರವೇಶಿಸಿದ್ದರು.
ತಮ್ಮ ಭಾಷಣದಲ್ಲಿ ಪುಟಿನ್ 18 ನೇ ಶತಮಾನದಿಂದ ಎರಡನೆಯ ಮಹಾಯುದ್ಧದವರೆಗೆ ರಷ್ಯಾದ ವೀರರ ಸ್ಮರಣೆ ಮಾಡಿದ್ದು ಪಾಶ್ಚಿಮಾತ್ಯ ರಾಷ್ಟ್ರಗಳ ವಿರುದ್ಧದ ಆರೋಪಗಳನ್ನು ಪುನರಾವರ್ತಿಸಿದರು. ಕೊನೆಯಲ್ಲಿ ಜಪಾನ್ ವಿರುದ್ಧ ಯುನೈಟೆಡ್ ಸ್ಟೇಟ್ಸ್ ಪರಮಾಣು ಶಸ್ತ್ರಾಸ್ತ್ರಗಳ ಬಳಕೆಯನ್ನು ನೆನಪಿಸಿಕೊಂಡರು.
ಅವಸರದ ಸ್ವಾಧೀನಗಳು ಎಂದರೆ ಯುದ್ಧದಲ್ಲಿ ಮೇಲುಗೈ ಸಾಧಿಸುವುದು. ರಷ್ಯಾ ತನ್ನದೇ ಎಂದು ಘೋಷಿಸುತ್ತಿರುವ ಪ್ರದೇಶದ ಮೂಲಕ ಸಾಗುತ್ತವೆ. ಅಗತ್ಯವಿದ್ದರೆ ಪರಮಾಣು ಶಸ್ತ್ರಾಸ್ತ್ರಗಳೊಂದಿಗೆ ರಕ್ಷಿಸಲು ಸಿದ್ಧ ಎಂದು ಪುಟಿನ್ ಹೇಳಿದ್ದಾರೆ.
ಕೆಲವು ಪಾಶ್ಚಿಮಾತ್ಯ ರಾಜಕಾರಣಿಗಳು ಅದನ್ನು ಬ್ಲಫ್ ಎಂದು ಕರೆದಿದ್ದು ಅದನ್ನು ಪುಟಿನ್ ಸ್ಪಷ್ಟವಾಗಿ ನಿರಾಕರಿಸಿದರು. ರಷ್ಯಾ ಪರಮಾಣು ಅಸ್ತ್ರ ಪ್ರಯೋಗಿಸಿದರೆ ಅನಾಹುತಕಾರಿ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ ಎಂದು ಅಮೆರಿಕ ಹೇಳಿದೆ.
Published On - 6:18 pm, Fri, 30 September 22