ಅಮರಿಕದ ನೂತನ ಅಧ್ಯಕ್ಷ ಜೋ ಬೈಡನ್ (Joe Biden) ಶುಕ್ರವಾರ ಏರ್ಫೋರ್ಸ್ ವಿಮಾನ ಹತ್ತುವಾಗ ಮೆಟ್ಟಿಲುಗಳ ಮೇಲೇ ಮೂರು ಬಾರಿ ಎಡವಿ ಬಿದ್ದಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಈ ವಾರದ ಪ್ರಾರಂಭದಲ್ಲಿ ಅಟ್ಲಾಂಟಾದ ಪಾರ್ಲರ್ ಮೇಲೆ ಸಾಮೂಹಿಕ ಗುಂಡಿನ ದಾಳಿ ನಡೆದಿತ್ತು. ಅದರ ಬಗ್ಗೆ ಏಷಿಯನ್-ಅಮೆರಿಕನ್ ಸಮುದಾಯ ಮುಖಂಡರೊಂದಿಗೆ ಚರ್ಚಿಸಲು ಬೈಡನ್ ಶುಕ್ರವಾರ ಅಲ್ಲಿಗೆ ತೆರಳಿದ್ದಾರೆ. ಅಟ್ಲಾಂಟಾಕ್ಕೆ ತೆರಳಲು ಏರ್ಫೋರ್ಸ್ 1 ವಿಮಾನದ ಮೆಟ್ಟಿಲು ಏರುತ್ತಿರುವಾಗ ಒಂದಲ್ಲ, ಮೂರು ಬಾರಿ ಎಡವಿದ್ದಾರೆ.
ವೇಗವಾಗಿ ಹತ್ತುತ್ತಿದ್ದ ಅವರು ಮೆಟ್ಟಿಲುಗಳ ಅರ್ಧ ಭಾಗಕ್ಕೆ ಹೋಗುತ್ತಿದ್ದಂತೆ, ಮೊದಲು ಸಣ್ಣ ಪ್ರಮಾಣದಲ್ಲಿ ಎಡವಿದರು. ಅದಾಗಿ ಕೆಲವೇ ಸೆಕೆಂಡ್ನಲ್ಲಿ ಇನ್ನೊಮ್ಮೆ ಎಡವಿದರು ಮತ್ತೆ ಮೂರನೇ ಬಾರಿ ಎಡವಿದಾಗ ಅಲ್ಲೇ ಮಂಡಿಯೂರಿ ಬಿದ್ದಿದ್ದಾರೆ. ನಂತರ ಸಾವರಿಸಿಕೊಂಡು ಎದ್ದಿದ್ದಾರೆ. 78ವರ್ಷದ ಜೋ ಬೈಡನ್ ಹೀಗೆ ಮೂರು ಬಾರಿ ಎಡವಿದ್ದನ್ನು ನೋಡಿದವರಲ್ಲಿ ಹಲವರು ಅವರ ಆರೋಗ್ಯದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು ವಿವಿಧ ಮೀಮ್ಸ್ಗಳನ್ನು ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಿದ್ದಾರೆ.
ಆರೋಗ್ಯವಾಗಿಯೇ ಇದ್ದಾರೆ..
ಇನ್ನು ಜೋ ಬೈಡನ್ ಮೂರು ಬಾರಿ ಎಡವಿದ್ದರಿಂದ ಅವರ ಆರೋಗ್ಯದ ಬಗ್ಗೆ ಸಹಜವಾಗಿಯೇ ಪ್ರಶ್ನೆ ಎದ್ದಿತ್ತು. ಹೀಗಾಗಿ ಅವರ ಮಾಧ್ಯಮ ಉಪ ಕಾರ್ಯದರ್ಶಿ ಕರೀನ್ ಜೀನ್-ಪಿಯರೆ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಬೈಡನ್ ಆರೋಗ್ಯದಲ್ಲಿ ಯಾವುದೇ ಸಮಸ್ಯೆಯಿಲ್ಲ. ಆರೋಗ್ಯ ಚೆನ್ನಾಗಿಯೇ ಇದೆ ಎಂದು ಹೇಳಿದ್ದಾರೆ. ಜೋ ಬೈಡನ್ ವಿಮಾನಗಳ ಮೆಟ್ಟಿಲೇರುತ್ತಿರುವಾಗ ತುಂಬ ಗಾಳಿ ಬೀಸುತ್ತಿತ್ತು. ಹಾಗಾಗಿ ಅವರಿಗೆ ಸಮತೋಲನ ತಪ್ಪುತ್ತಿತ್ತು ಎಂದೂ ತಿಳಿಸಿದ್ದಾರೆ. ಇನ್ನು ಜೋ ಬೈಡನ್ ಕೂಡ ಇಷ್ಟಕ್ಕಾಗಿ ಅಟ್ಲಾಂಟಾ ಪ್ರವಾಸವನ್ನು ಮೊಟಕುಗೊಳಿಸಲಿಲ್ಲ.
WATCH: Biden falls three times trying to climb the stairs to board Air Force One pic.twitter.com/IfDUjLPQB4
— Breaking911 (@Breaking911) March 19, 2021
ಇದನ್ನೂ ಓದಿ: ‘ಹಂತಕ’ ಆರೋಪ; ಅಮೆರಿಕಾ ಅಧ್ಯಕ್ಷ ಜೋ ಬೈಡನ್ಗೆ ನೇರಾನೇರ ಚರ್ಚೆಗೆ ಆಹ್ವಾನವಿತ್ತ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್
ಭಾರತೀಯ ಮೂಲದ ರೆಸ್ಟೋರೆಂಟ್ ಮಾಲೀಕರೊಂದಿಗೆ ಅಮೆರಿಕ ಅಧ್ಯಕ್ಷರ ಮಾತುಕತೆ; ನಾನೂ ಬರಬಹುದಾ ಎಂದು ಪ್ರಶ್ನಿಸಿದ ಜೋ ಬೈಡನ್