ಲಾಹೋರ್ ವಿಶ್ವವಿದ್ಯಾಲಯದಲ್ಲಿ ಪ್ರಿಯಕರನಿಗೆ ಲವ್​ ಪ್ರಪೋಸ್​ ಮಾಡಿದ ವಿದ್ಯಾರ್ಥಿನಿ! ಮುಂದೇನಾಯ್ತು?

|

Updated on: Mar 13, 2021 | 5:42 PM

ಈ ವಿಷಯ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಕಿವಿಗೂ ಬಿದ್ದಿದ್ದೆ, ಅವರು ವಿಡಿಯೋವನ್ನು ನೋಡಿದ್ದಾರೆ. ಮೊಬೈಲ್ ದೃಶ್ಯಾವಳಿಗಳು ಸಂದರ್ಭ ಸಹಿತ ಸಾಕ್ಷ್ಯವನ್ನು ವಿವರಿಸಿದೆ. ತಡ ಮಾಡದೆ ಆಡಳಿತ ಮಂಡಳಿ ಇಬ್ಬರನ್ನೂ ಕಾಲೇಜು ಕ್ಯಾಂಪಸ್ಸಿನಿಂದ ಶಾಶ್ವತವಾಗಿ ಹೊರಗಟ್ಟಿದೆ. ಇನ್ನೆಂದಿಗೂ ಕಾಲೇಜು ಆವರಣದೊಳಕ್ಕೆ ಬರಬೇಡಿ ಎಂದು ಫರ್ಮಾನು ಹೊರಡಿಸಿದೆ.

ಲಾಹೋರ್ ವಿಶ್ವವಿದ್ಯಾಲಯದಲ್ಲಿ ಪ್ರಿಯಕರನಿಗೆ ಲವ್​ ಪ್ರಪೋಸ್​ ಮಾಡಿದ ವಿದ್ಯಾರ್ಥಿನಿ! ಮುಂದೇನಾಯ್ತು?
ಲಾಹೋರ್ ವಿಶ್ವವಿದ್ಯಾಲಯದಲ್ಲಿ ಪ್ರಿಯಕರನಿಗೆ ಲವ್​ ಪ್ರಪೋಸ್​ ಮಾಡಿದ ವಿದ್ಯಾರ್ಥಿನಿ!
Follow us on

ನೆರೆಯ ಪಾಕಿಸ್ತಾನದ ಪ್ರತಿಷ್ಠಿತ ಲಾಹೋರ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯೊಬ್ಬಳು ಪ್ರಿಯಕರನಿಗೆ ಲವ್​ ಪ್ರಪೋಸ್​ ಮಾಡಿದ್ದಾಳೆ. ಸಾರ್ವಜನಿಕವಾಗಿ ಸಹಪಾಠಿಗಳ ಎದುರಿಗೆ ಯುವತಿ ಮಂಡಿಯೂರಿ ಹೂಗುಚ್ಚ ನೀಡಿ, ತನ್ನ ಪ್ರಿಯತಮನಿಗೆ ಐ ಲವ್​ ಯೂ ಅಂದಿದ್ದಾಳೆ. ತಕ್ಷಣವೇ ಇದಕ್ಕೆ ಸ್ಪಂದಿಸಿದ ಯುವಕ ಸಹ ಲವ್​ ಯು ಟೂ ಅಂದಿದ್ದಾನೆ. ಪ್ರಿಯತಮೆಯನ್ನು ತಬ್ಬಿ ಮುದ್ದಾಡಿದ್ದಾನೆ. ಸುತ್ತಮುತ್ತಲಿದ್ದವರು ಇದನ್ನೆಲ್ಲಾ ಕಣ್ಣಾರೆ ನೋಡಿದ್ದಾರೆ. ಜೊತೆಗೆ ತಮ್ಮ ಮೊಬೈಲ್​ ಕಣ್ಣಲ್ಲೂ ವಿಡಿಯೋ ಮಾಡಿದ್ದಾರೆ. ಇಷ್ಟೆಲ್ಲಾ ಆದ ಮೇಲೇನಾಯ್ತು ಅಂದ್ರು…

ಈ ವಿಷಯ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಕಿವಿಗೆ ಬೀಳಲು ಹೆಚ್ಚು ಹೊತ್ತು ಬೇಕಾಗಲಿಲ್ಲ. ಆಡಳಿತ ಮಂಡಳಿ ಸದಸ್ಯರು ವಿಡಿಯೋ ನೋಡಿದ್ದಾರೆ. ಮೊಬೈಲ್ ದೃಶ್ಯಾವಳಿಗಳು ಸಂದರ್ಭ ಸಹಿತ ಸಾಕ್ಷ್ಯವನ್ನು ವಿವರಿಸಿವೆ. ತಡ ಮಾಡದೆ ಆಡಳಿತ ಮಂಡಳಿ ಇಬ್ಬರನ್ನೂ ಕಾಲೇಜು ಕ್ಯಾಂಪಸ್ಸಿನಿಂದ ಶಾಶ್ವತವಾಗಿ ಹೊರಗಟ್ಟಿದೆ. ಇನ್ನೆಂದಿಗೂ ಕಾಲೇಜು ಆವರಣದೊಳಕ್ಕೆ ಬರಬೇಡಿ ಎಂದು ಫರ್ಮಾನು ಹೊರಡಿಸಿದೆ. ಇದರ ಬಗ್ಗೆ ಹೆಚ್ಚೇನು ಹೇಳುವ ಅಗತ್ಯವಿಲ್ಲ. ಕಾಲೇಜಿನಲ್ಲಿ ಶಿಸ್ತು ಕಾಪಾಡದ ವಿದ್ಯಾರ್ಥಿಗಳಿಬ್ಬರನ್ನೂ ಉಚ್ಚಾಟಿಸಿದ್ದೇವೆ ಎಂದು ಆಡಳಿತ ಮಂಡಳಿ ಸದಸ್ಯರು ಸ್ಪಷ್ಟಪಡಿಸಿದ್ದಾರೆ.

 

Published On - 5:18 pm, Sat, 13 March 21