ಏಷ್ಯನ್ ಅಮೆರಿಕನ್ನರ ವಿರುದ್ಧ ನಡೆಯುತ್ತಿರುವ ದ್ವೇಷದ ಕೃತ್ಯಗಳ ವಿರುದ್ಧ ಧ್ವನಿ ಎತ್ತಿದ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ, ಯುಎಸ್ ಸೆನೆಟರ್ಗಳು
ಸಾಂಕ್ರಾಮಿಕ ರೋಗದ ಮಧ್ಯೆಯೂ ದೇಶದಲ್ಲಿ ಏಷ್ಯನ್ ಅಮೆರಿಕನ್ನರ ವಿರುದ್ಧದ "ಕೆಟ್ಟ" ದ್ವೇಷದ ದಾಳಿ ನಿಲ್ಲಬೇಕು ಎಂದು ಯುಎಸ್ ಅಧ್ಯಕ್ಷ ಜೋ ಬೈಡೆನ್ ಹೇಳಿದ ಒಂದು ದಿನದ ನಂತರ ನಾಡೆಲ್ಲಾ ಟ್ವೀಟ್ ನಲ್ಲಿ ಈ ಮೇಲಿನ ಹೇಳಿಕೆ ಕೊಟ್ಟಿದ್ದಾರೆ.
ಏಷ್ಯನ್ ಅಮೆರಿಕನ್ನರ ವಿರುದ್ಧ ನಡೆಯುತ್ತಿರುವ ದ್ವೇಷದ ಕೃತ್ಯಗಳಿಂದ ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಮತ್ತು ಯುಎಸ್ ಸೆನೆಟರ್ಗಳು ಗಾಬರಿಗೊಂಡಿರುವುದಾಗಿ ಹೇಳಿದ್ದಾರೆ ಮತ್ತು ಎಲ್ಲಾ ರೀತಿಯ ದ್ವೇಷ, ಜನಾಂಗೀಯ ತಾರತಮ್ಯ ಮತ್ತು ಹಿಂಸಾಚಾರವನ್ನು ಖಂಡಿಸಿದ್ದಾರೆ. ಮಾರ್ಚ್ ಮತ್ತು ಡಿಸೆಂಬರ್ 2020 ರ ನಡುವೆ ಏಷ್ಯನ್ ಅಮೆರಿಕನ್ನರ ವಿರುದ್ಧ 3,000 ಕ್ಕೂ ಹೆಚ್ಚು ಹಲ್ಲೆ ಘಟನೆಗಳು ವರದಿಯಾಗಿದೆ ಎಂದು ಏಷ್ಯನ್ ಅಮೆರಿಕನ್ ಪರ ಗುಂಪುಗಳು ತಿಳಿಸಿವೆ. ಎಫ್‌ಬಿಐ ಅಂಕಿಅಂಶಗಳ ಪ್ರಕಾರ, 2019 ರಲ್ಲಿ ಕೇವಲ 216 ಪ್ರಕರಣಗಳು ವರದಿಯಾಗಿದ್ದವು.
“ಜಾಗತಿಕವಾಗಿ ಏಷ್ಯನ್ ಅಮೆರಿಕನ್ನರು ಮತ್ತು ಏಷ್ಯನ್ ಸಮುದಾಯದ ವಿರುದ್ಧ ನಡೆಯುತ್ತಿರುವ ದ್ವೇಷದ ಕೃತ್ಯಗಳಿಂದ ನಾನು ಗಾಬರಿ ಆಗಿದ್ದೇನೆ. ವರ್ಣಭೇದ ನೀತಿ, ದ್ವೇಷ ಮತ್ತು ಹಿಂಸಾಚಾರಕ್ಕೆ ನಮ್ಮ ಸಮಾಜದಲ್ಲಿ ಸ್ಥಾನವಿಲ್ಲ. ಈ ಅನ್ಯಾಯದ ವಿರುದ್ಧ ಏಷ್ಯನ್ ಮತ್ತು ಏಷ್ಯನ್ ಅಮೆರಿಕನ್ ಸಮುದಾಯದೊಂದಿಗೆ ಒಂದಾಗಿ ನಿಲ್ಲುತ್ತೇನೆ” ಎಂದು ನಾಡೆಲ್ಲಾ ಟ್ವೀಟ್ ನಲ್ಲಿಹೇಳಿದ್ದಾರೆ. ಮೈಕ್ರೋಸಾಫ್ಟ್ ಕಂಪೆನಿಯು ಎಲ್ಲಾ ರೀತಿಯ ದ್ವೇಷ, ಜನಾಂಗೀಯ ತಾರತಮ್ಯ ಮತ್ತು ಹಿಂಸೆಯನ್ನು ಖಂಡಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಿದೆ.
I am appalled by the ongoing acts of hate against Asian Americans and the Asian community globally. Racism, hate and violence have no place in our society. I am united with the Asian and Asian American community in standing against this injustice. https://t.co/77z6gQqgBt
— Satya Nadella (@satyanadella) March 12, 2021
ಸಾಂಕ್ರಾಮಿಕ ರೋಗದ ಮಧ್ಯೆಯೂ ದೇಶದಲ್ಲಿ ಏಷ್ಯನ್ ಅಮೆರಿಕನ್ನರ ವಿರುದ್ಧದ “ಕೆಟ್ಟ” ದ್ವೇಷದ ದಾಳಿ ನಿಲ್ಲಬೇಕು ಎಂದು ಯುಎಸ್ ಅಧ್ಯಕ್ಷ ಜೋ ಬೈಡೆನ್ ಹೇಳಿದ ಒಂದು ದಿನದ ನಂತರ ನಾಡೆಲ್ಲಾ ಟ್ವೀಟ್ ನಲ್ಲಿ ಈ ಮೇಲಿನ ಹೇಳಿಕೆ ಕೊಟ್ಟಿದ್ದಾರೆ. ಏಷ್ಯನ್ ಅಮೆರಿಕನ್ನರ ಮೇಲೆ “ಹಿಂಸಾತ್ಮಕ” ದಾಳಿಯನ್ನು ಖಂಡಿಸಿದ ಬೈಡೆನ್, ಜನವರಿಯಲ್ಲಿ ಅಧಿಕಾರ ವಹಿಸಿಕೊಂಡ ನಂತರ ರಾಷ್ಟ್ರದ ಮೊದಲ ಪ್ರೈಮ್ ಟೈಮ್ ಭಾಷಣದಲ್ಲಿ ಮಾತನಾಡಿ, ಸಮುದಾಯದ ಸದಸ್ಯರು ಕಿರುಕುಳಕ್ಕೆ, ದೂಷಣೆಗೆ ಒಳಗಾದ ಬಲಿಪಶುಗಳು ಎಂದು ಹೇಳಿದ್ದರು.
ಈ ಮಧ್ಯೆ, COVID-19 ಸಾಂಕ್ರಾಮಿಕ ಸಮಯದಲ್ಲಿ ಏಷ್ಯನ್ ಅಮೆರಿಕನ್ ಮತ್ತು ಪೆಸಿಫಿಕ್ ಐಲ್ಯಾಂಡರ್ (ಎಎಪಿಐ) ಸಮುದಾಯಗಳ ವಿರುದ್ಧ ದ್ವೇಷದ ಅಪರಾಧಗಳು ಮತ್ತು ಹಿಂಸಾಚಾರ ನಿಯಂತ್ರಿಸುವ ಸಲುವಾಗಿ ಕಾನೂನು ತರಲು ಪ್ರಮುಖ ಜನಪ್ರತಿನಿಧಿಗಳು ಕೈಜೋಡಿಸಿದ್ದಾರೆ. COVID-19 ಜಾಗತಿಕ ಬಿಕ್ಕಟ್ಟಿನ ಸಮಯದಲ್ಲಿ ಏಷ್ಯನ್ ಅಮೆರಿಕನ್ನರ ವಿರುದ್ಧ ಜನಾಂಗೀಯ ದಾಳಿ ಹೆಚ್ಚುತ್ತಿರುವ ಬಗ್ಗೆ ಕಾಂಗ್ರೆಸ್ ಸದಸ್ಯ ಡೊನಾಲ್ಡ್ ಎಂ. ಪೇನ್ ಕಳವಳ ವ್ಯಕ್ತಪಡಿಸಿದರು. “ಏಷ್ಯನ್ ಅಮೆರಿಕನ್ನರ ನಿಂದನೆ ಮತ್ತು ಅವರ ಮೇಲೆ ಆದ ಆಕ್ರಮಣವನ್ನು ಬಲವಾದ ಪದಗಳಲ್ಲಿ ಖಂಡಿಸಲು ನಾನು ಬಯಸುತ್ತೇನೆ” ಎಂದು ಪೇನ್ ಹೇಳಿದ್ದಾರೆ.
“ದ್ವೇಷ ಮತ್ತು ಹಿಂಸಾಚಾರಕ್ಕೆ ಅಮೆರಿಕದಲ್ಲಿ ಯಾವುದೇ ಸ್ಥಾನವಿಲ್ಲ. ಈ ದಾಳಿಗಳು ನಿಲ್ಲಬೇಕು. ಏಕೆಂದರೆ ಅವುಗಳು ಸಾವಿರಾರು ಮೈಲುಗಳಷ್ಟು ದೂರದಲ್ಲಿ ಪ್ರಾರಂಭವಾದ ಸಾಂಕ್ರಾಮಿಕ ರೋಗಕ್ಕೆ ಅಮೆರಿಕನ್ನರನ್ನು ಬಲಿಪಶು ಮಾಡುವ ಮತ್ತು ದೂಷಿಸುವ ಹೇಡಿತನದ ಪ್ರಯತ್ನಗಳಾಗಿವೆ. ಅದೃಷ್ಟವಶಾತ್, ನಮ್ಮಲ್ಲಿ ವೈವಿಧ್ಯತೆಯನ್ನು ಬೆಂಬಲಿಸುವ ಮತ್ತು ಎಲ್ಲ ಅಮೆರಿಕನ್ನರನ್ನು ರಕ್ಷಿಸುವ ಅಧ್ಯಕ್ಷರಿದ್ದಾರೆ”ಎಂದು ಅವರು ಹೇಳಿದರು.
ಸೆನೆಟರ್ ಡಯಾನ್ನೆ ಫೆಯಿನ್ಸ್ಟೈನ್ ಮಾತನಾಡಿ, ಕಳೆದ ಕೆಲವು ವಾರಗಳಲ್ಲಿ, ನ್ಯಾಯಾಂಗ ಇಲಾಖೆಯಲ್ಲಿ ಅಗ್ರ ಮೂರು ನಾಯಕತ್ವದ ಸ್ಥಾನಗಳಿಗೆ ನಾಮನಿರ್ದೇಶಿತರು ಸೆನೆಟ್ ನ್ಯಾಯಾಂಗ ಸಮಿತಿಯ ಮುಂದೆ ಎಫ್‌ಬಿಐ ನಿರ್ದೇಶಕರಂತೆ ಹಾಜರಾಗಿದ್ದಾರೆ ಎಂದು ಹೇಳಿದ್ದಾರೆ. “ಪ್ರತಿ ವಿಚಾರಣೆಯಲ್ಲೂ ಏಷ್ಯಾದ ಅಮೆರಿಕನ್ನರ ವಿರುದ್ಧದ ದ್ವೇಷ ಅಪರಾಧಗಳ ಹೆಚ್ಚಳದ ವಿಷಯವು ಚರ್ಚೆಗೆ ಬಂದಿದೆ” ಎಂದು ಅವರು ಹೇಳಿದರು.
“ಏಷ್ಯನ್-ಅಮೆರಿಕನ್ ಸಮುದಾಯ ಹಾಗೂ ಕೋವಿಡ್ ಬಿಕ್ಕಟ್ಟಿಗೆ ಕಪೋಲಕಲ್ಪಿತವಾಗಿ ತಳುಕು ಹಾಕಿರುವುದರಿಂದ ದಾಳಿ ಹೆಚ್ಚಾಗಿದೆ. ಇದಕ್ಕೆ ಯಾವ ಆಧಾರವೂ ಇಲ್ಲ. ಶುದ್ಧ ಪಿತೂರಿ ಹಾಗೂ ವರ್ಣಭೇದ ನೀತಿ. ನಾವು ಪಿತೂರಿಯನ್ನು ಖಂಡಿಸಬೇಕು. ಹೆಚ್ಚುತ್ತಿರು ದ್ವೇಷದ ಅಪರಾಧ ಕೃತ್ಯಗಳನ್ನು ಎದುರಿಸಬೇಕು,” ಎಂದು ಫೆಯಿನ್ಸ್ಟೈನ್ ಹೇಳಿದರು.
ಇದನ್ನೂ ಓದಿ: ‘ಭಾರತೀಯರು ಅಮೆರಿಕನ್ನರನ್ನೂ ಮಿರಿಸುತ್ತಿದ್ದಾರೆ’; ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಶ್ಲಾಘನೆ
ನಮ್ಮದೇ ಕೊರೊನಾ ಲಸಿಕೆ ಪಡೆಯಿರಿ ಎಂದು ಆಫರ್ ನೀಡುತ್ತಿದೆ ಚೀನಾ; ಕ್ವಾಡ್ ಶೃಂಗಸಭೆ ಬಳಿಕ ಅಚ್ಚರಿಯ ಬೆಳವಣಿಗೆ!
Published On - 8:55 pm, Sat, 13 March 21