ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೋದಲ್ಲಿರುವ BAPS ಸ್ವಾಮಿನಾರಾಯಣ ಮಂದಿರವನ್ನು ಕಿಡಿಗೇಡಿಗಳು ಧ್ವಂಸಗೊಳಿಸಿರುವ ಘಟನೆ ಬುಧವಾರ ರಾತ್ರಿ ನಡೆದಿದೆ. ನ್ಯೂಯಾರ್ಕ್‌ನ ದೇವಾಲಯದಲ್ಲಿ ಇದೇ ರೀತಿಯ ಘಟನೆ ನಡೆದು 10 ದಿನಗಳ ನಂತರ ಇಲ್ಲಿ ಈ ಘಟನೆ ನಡೆದಿದೆ.
ದೇವಾಲಯದ ಗೋಡೆಯ ಮೇಲೆ ಹಿಂದೂ ವಿರೋಧಿ ಬರಹಗಳು ಕಂಡುಬಂದಿದ್ದು, ಹಿಂದೂಗಳು ಹಿಂದಿರುಗಿ ಎಂದು ಬರೆದಿರುವುದು ಸ್ಥಳೀಯ ಹಿಂದೂ ಸಮುದಾಯದವರ ಆತಂಕಕ್ಕೆ ಕಾರಣವಾಗಿದೆ.
ಇದಕ್ಕೂ ಮೊದಲು, ಸೆಪ್ಟೆಂಬರ್ 17, 2024 ರಂದು ನ್ಯೂಯಾರ್ಕ್‌ನ BAPS ಸ್ವಾಮಿನಾರಾಯಣ ದೇವಸ್ಥಾನದಲ್ಲಿ ಇದೇ ರೀತಿಯ ವಿಧ್ವಂಸಕ ಘಟನೆ ನಡೆದಿತ್ತು.
ಮತ್ತಷ್ಟು ಓದಿ:Swaminarayan Temple Vandalised: ಕೆನಡಾದ ಸ್ವಾಮಿನಾರಾಯಣ ದೇವಸ್ಥಾನ ಧ್ವಂಸ, ಗೋಡೆಗಳ ಮೇಲೆ ಭಾರತ ವಿರೋಧಿ ಘೋಷಣೆ: ಭಾರತ ತೀವ್ರ ಆಕ್ರೋಶ
ನ್ಯೂಯಾರ್ಕ್‌ನಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ನ್ಯೂಯಾರ್ಕ್‌ನ ಮೆಲ್‌ವಿಲ್ಲೆಯಲ್ಲಿರುವ BAPS ಸ್ವಾಮಿನಾರಾಯಣ ದೇವಸ್ಥಾನದ ವಿಧ್ವಂಸಕತೆಯನ್ನು ಖಂಡಿಸಿದರು, ಅದನ್ನು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದರು.
ಕೆಲವು ದಿನಗಳ ಹಿಂದಷ್ಟೇ ಖಲಿಸ್ತಾನ್ ಉಗ್ರ ಗುರುಪಂತ್ವ ಸಿಂಗ್ ಪನ್ನು ಹಿಂದೂ ದೇವಾಲಯ ಹಾಗೂ ಸಂಸ್ಥೆಗಳಿಗೆ ಇರುವ ಬೆದರಿಕೆಯ ವಿಡಿಯೋಗಳನ್ನು ಹಂಚಿಕೊಂಡಿದ್ದ.
ಸದ್ಯ ನ್ಯೂಯಾರ್ಕ್ನಲ್ಲಿ ಸ್ವಾಮಿ ನಾರಾಯಣ ದೇವಾಲಯದ ಮೇಲೆ ನಡೆದ ದಾಳಿಯೂ ಕೂಡ ಕ್ಯಾಲಿಫೋರ್ನಿಯಾ ಹಾಗೂ ಕೆನಡಾದಲ್ಲಿ ನಡೆದ ಮಾದರಿಯಲ್ಲಿಯೇ ನಡೆದಿದೆ. ಇದರ ಹಿಂದೆ ಖಲಿಸ್ತಾನಿ ಉಗ್ರರ ಕೈವಾಡವಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ