ಇಂಡಿಯಾನಾದಲ್ಲಿ ತೆಲಂಗಾಣ ವಿದ್ಯಾರ್ಥಿಯ ಮೇಲಿನ ದಾಳಿ ಖಂಡಿಸಿದ ಅಮೆರಿಕ

|

Updated on: Nov 03, 2023 | 9:11 AM

ಭಾರತೀಯ ಪದವೀಧರ ವಿದ್ಯಾರ್ಥಿ ವರುಣ್ ರಾಜ್ ಪುಚಾ ವಿರುದ್ಧದ ಕ್ರೂರ ದಾಳಿಯ ವರದಿಗಳಿಂದ ನಾವು ತೀವ್ರವಾಗಿ ವಿಚಲಿತರಾಗಿದ್ದೇವೆ. ಅವರ ಗಾಯಗಳಿಂದ ಸಂಪೂರ್ಣ ಚೇತರಿಸಿಕೊಳ್ಳಬೇಕೆಂದು ನಾವು ಬಯಸುತ್ತೇವೆ. ಈ ನಡೆಯುತ್ತಿರುವ ಪ್ರಕರಣದ ಕುರಿತು ಯಾವುದೇ ಪ್ರಶ್ನೆಗಳಿಗೆ ನಾವು ಸ್ಥಳೀಯ ಕಾನೂನು ಪಾಲಿಸುತ್ತೇವೆ ಎಂದು ವಿದೇಶಾಂಗ ಇಲಾಖೆಯ ವಕ್ತಾರರು ಎಎನ್ಐಗೆ ತಿಳಿಸಿದ್ದಾರೆ.

ಇಂಡಿಯಾನಾದಲ್ಲಿ ತೆಲಂಗಾಣ ವಿದ್ಯಾರ್ಥಿಯ ಮೇಲಿನ ದಾಳಿ ಖಂಡಿಸಿದ ಅಮೆರಿಕ
ಪ್ರಾತಿನಿಧಿಕ ಚಿತ್ರ
Follow us on

ವಾಷಿಂಗ್ಟನ್ ನವೆಂಬರ್ 03: ಅಮೆರಿಕದ ಇಂಡಿಯಾನಾದ( Indiana) ವಾಲ್ಪಾರೈಸೊ ನಗರದಲ್ಲಿ (Valparaiso city) ಭಾರತೀಯ ವಿದ್ಯಾರ್ಥಿಯೊಬ್ಬನಿಗೆ ಇರಿದ ಎರಡು ದಿನಗಳ ನಂತರ, ವಿದೇಶಾಂಗ ಇಲಾಖೆ ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದೆ ಎಂದು ಎಎನ್‌ಐ ವರದಿ ಮಾಡಿದೆ. ಅಕ್ಟೋಬರ್ 29 ರಂದು ವಾಲ್ಪಾರೈಸೊ ವಿಶ್ವವಿದ್ಯಾಲಯದ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿ ವರುಣ್ ರಾಜ್ ಪುಚಾಗೆ (Varun Raj Pucha)ಸಾರ್ವಜನಿಕ ಜಿಮ್‌ನಲ್ಲಿ ತಲೆಗೆ ಇರಿಯಲಾಗಿತ್ತು. ತೆಲಂಗಾಣ (Telangana) ಮೂಲದ ವರುಣ್ ಪ್ರಸ್ತುತ ಆಸ್ಪತ್ರೆಯಲ್ಲಿ ಲೈಫ್ ಸಪೋರ್ಟ್ ನಲ್ಲಿದ್ದಾರೆ.

ಪ್ರಕರಣದ ದಾಳಿಕೋರನನ್ನು 24 ವರ್ಷದ ಜೋರ್ಡಾನ್ ಆಂಡ್ರೇಡ್ ಎಂದು ಗುರುತಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನನಗೆ ಪುಚಾ “ಸ್ವಲ್ಪ ವಿಚಿತ್ರ” ಅನಿಸಿದ್ದು, ನನಗೆ ಬೆದರಿಕೆ ಇದೆ ಎಂದು ಭಾವಿಸಿ ತಾನು ಆ ರೀತಿ ಪ್ರತಿಕ್ರಿಯಿಸಿದೆ ಎಂದು ಆರೋಪಿ ಪೊಲೀಸರಿಗೆ ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ. ಗುರುವಾರ, ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಈ ಘಟನೆಯಿಂದ ತುಂಬಾನೇ ದುಃಖಿತರಾಗಿದ್ದಾರೆ ಎಂದು ಹೇಳಿದೆ.

ಭಾರತೀಯ ಪದವೀಧರ ವಿದ್ಯಾರ್ಥಿ ವರುಣ್ ರಾಜ್ ಪುಚಾ ವಿರುದ್ಧದ ಕ್ರೂರ ದಾಳಿಯ ವರದಿಗಳಿಂದ ನಾವು ತೀವ್ರವಾಗಿ ವಿಚಲಿತರಾಗಿದ್ದೇವೆ. ಅವರ ಗಾಯಗಳಿಂದ ಸಂಪೂರ್ಣ ಚೇತರಿಸಿಕೊಳ್ಳಬೇಕೆಂದು ನಾವು ಬಯಸುತ್ತೇವೆ. ಈ ನಡೆಯುತ್ತಿರುವ ಪ್ರಕರಣದ ಕುರಿತು ಯಾವುದೇ ಪ್ರಶ್ನೆಗಳಿಗೆ ನಾವು ಸ್ಥಳೀಯ ಕಾನೂನು ಪಾಲಿಸುತ್ತೇವೆ ಎಂದು ವಿದೇಶಾಂಗ ಇಲಾಖೆಯ ವಕ್ತಾರರು ಎಎನ್ಐಗೆ ತಿಳಿಸಿದ್ದಾರೆ.

ಏತನ್ಮಧ್ಯೆ, ಆಂಡ್ರೇಡ್ ನ್ನು ಬಂಧಿಸಲಾಗಿದೆ ಮತ್ತು ಮಾರಕ ಆಯುಧ ಮತ್ತು ಕೊಲೆ ಯತ್ನದ ಆರೋಪವನ್ನು ಎದುರಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಚಿಕಾಗೋ ಟ್ರಿಬ್ಯೂನ್ ಪ್ರಕಾರ ಅವರು ನ್ಯಾಯಾಲಯದ ಮುಂದೆ ನಿರ್ದೋಷಿ ಎಂದು ವಾದಿಸಿದ್ದೆ
ಪುಚಾ ಅವರ ತಂದೆ ಪಿ ರಾಮ್ ಮೂರ್ತಿ ಅವರು ಬುಧವಾರ ಪಿಟಿಐಗೆ ತಮ್ಮ ಮಗನ ರೂಮ್‌ಮೇಟ್‌ ಈ ಘಟನೆಯ ಬಗ್ಗೆ ಮಾಹಿತಿ ನೀಡಿರುವುದಾಗಿ ಹೇಳಿದ್ದಾರೆ.

“ನನ್ನ ಮಗನ ರೂಮ್‌ಮೇಟ್‌ನಿಂದ ನನ್ನ ಮಗ ಒಬ್ಬ ವ್ಯಕ್ತಿಯಿಂದ ಹಲ್ಲೆಗೊಳಗಾಗಿದ್ದಾನೆ ಮತ್ತು ಅವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಅವನ ಸ್ಥಿತಿ ಗಂಭೀರವಾಗಿದೆ ಎಂದು ನಮಗೆ ಮಾಹಿತಿ ಸಿಕ್ಕಿತು” ಎಂದು ಅವರು ಹೇಳಿದರು.

ಪುಚಾ ಕಂಪ್ಯೂಟರ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದರು. ಆಗಸ್ಟ್ 2022 ರಲ್ಲಿ ಯುಎಸ್‌ಗೆ ತೆರಳಿದ್ದರು. ಮುಂದಿನ ವರ್ಷ ಖಮಾಮ್‌ನಲ್ಲಿ ಮನೆಗೆ ಮರಳುವ ನಿರೀಕ್ಷೆಯಿತ್ತು ಎಂದು ಕುಟುಂಬ ಹೇಳಿದೆ.

ಇದನ್ನೂ ಓದಿ: ಅಮೆರಿಕದಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಎಸ್ ಮಾಡುತ್ತಿದ್ದ ತೆಲಂಗಾಣ ವಿದ್ಯಾರ್ಥಿಗೆ ಚಾಕುವಿನಿಂದ ಇರಿತ, ಸ್ಥಿತಿ ಗಂಭೀರ -ಕುಟುಂಬಕ್ಕೆ ನೆರವಾಗಿರುವ ಸಚಿವ ಕೆಟಿಆರ್

ನಮ್ಮ ಮಗುವಿಗೆ ನ್ಯಾಯ ಬೇಕು,, ದಾಳಿಕೋರನಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಪುಚಾ ಸಂಬಂಧಿಕರು ಹೇಳಿದ್ದಾರೆ. ಈ ಘಟನೆಯಿಂದ “ಆಘಾತ ಮತ್ತು ದುಃಖವಾಗಿದೆ” ಎಂದು ವಾಲ್ಪಾರೈಸೊ ವಿಶ್ವವಿದ್ಯಾಲಯ ಹೇಳಿದೆ.

“ವರುಣ್ ರಾಜ್ ಪುಚಾ ಮೇಲಿನ ದಾಳಿಯಿಂದ ನಮಗೆ ಆಘಾತ ಮತ್ತು ದುಃಖವಾಗಿದೆ. ವಾಲ್ಪಾರೈಸೊ ವಿಶ್ವವಿದ್ಯಾನಿಲಯದಲ್ಲಿ, ನಾವು ಪರಸ್ಪರ ಕುಟುಂಬ ಎಂದು ಪರಿಗಣಿಸುತ್ತೇವೆ. ಈ ಘಟನೆಯು ನಮಗೆಲ್ಲರಿಗೂ ಆಘಾತ ತಂದಿದೆ. ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಅವರ ಎಲ್ಲಾ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಇವೆ ಎಂದು ವಿಶ್ವವಿದ್ಯಾಲಯದ ಅಧ್ಯಕ್ಷ ಜೋಸ್ ಪಡಿಲ್ಲಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ