ಅಮೆರಿಕದಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಎಸ್ ಮಾಡುತ್ತಿದ್ದ ತೆಲಂಗಾಣ ವಿದ್ಯಾರ್ಥಿಗೆ ಚಾಕುವಿನಿಂದ ಇರಿತ, ಸ್ಥಿತಿ ಗಂಭೀರ -ಕುಟುಂಬಕ್ಕೆ ನೆರವಾಗಿರುವ ಸಚಿವ ಕೆಟಿಆರ್
ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತನನ್ನು ಬಂಧಿಸಲಾಗಿದೆ ಎಂದು ವಲಪರೈಸೊ ಪೊಲೀಸ್ ಇಲಾಖೆಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಘಟನೆ ಭಾನುವಾರ ನಡೆದಿದ್ದು, ಬಳಿಕ ಬೆಳಕಿಗೆ ಬಂದಿದೆ.
ಹೈದರಾಬಾದ್: ತೆಲಂಗಾಣದ ಖಮ್ಮಂ ಜಿಲ್ಲೆಯವರಾದ (Khammam district of Telangana) ಮತ್ತು ಯುಎಸ್‌ಎ (USA) ನಲ್ಲಿ ಸ್ನಾತಕೋತ್ತರ ಪದವಿ ಓದುತ್ತಿರುವ 24 ವರ್ಷದ ಪಿ ವರುಣ್ ರಾಜ್ (P Varun Raj) ಎಂಬ ವಿದ್ಯಾರ್ಥಿಯನ್ನು ಇಂಡಿಯಾನಾ ರಾಜ್ಯದ ವಾಲ್‌ಪಾರೈಸೊ ನಗರದ ಸಾರ್ವಜನಿಕ ಜಿಮ್‌ನಲ್ಲಿ ( public gym) ದುಷ್ಕರ್ಮಿಗಳು ಭಾನುವಾರ (ಅಕ್ಟೋಬರ್ 29) ಚಾಕುವಿನಿಂದ ಇರಿದಿದ್ದಾರೆ. ವರುಣ್ ರಾಜ್ ಅವರನ್ನು ಇಂಡಿಯಾನಾದ ಫೋರ್ಟ್ ವೇನ್‌ನ ಲುಥೆರನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಗಳು ತಿಳಿಸಿವೆ.
ವರುಣ್ ಕುಟುಂಬವು ಯುಎಸ್ಎಗೆ ತೆರಳಲು ನೆರವಾಗಿರುವ ತೆಲಂಗಾಣ ಸಚಿವ ಕೆಟಿ ರಾಮರಾವ್ ಅವರು ವರುಣ್ ಕುಟುಂಬಕ್ಕೆ ಸಂಪೂರ್ಣ ಸಹಾಯ ಮಾಡುವ ಭರವಸೆ ನೀಡಿದ್ದಾರೆ. ವರುಣ್ ಅವರ ಚಿಕ್ಕಮ್ಮನ ಮನವಿಗೆ ಪ್ರತಿಕ್ರಿಯಿಸಿದ ಕೆಟಿಆರ್ ಟ್ವೀಟ್‌ನಲ್ಲಿ, ಭಾರತೀಯ ರಾಯಭಾರಿ ಕಚೇರಿ ಮತ್ತು ತೆಲಂಗಾಣ ಎನ್‌ಆರ್‌ಐ ಸ್ನೇಹಿತರ ಸಹಾಯದಿಂದ ವರುಣ್‌ಗೆ ಬೆಂಬಲ ನೀಡಲು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ. ನನ್ನ ತಂಡವು ಕುಟುಂಬದೊಂದಿಗೆ ಸಂಪರ್ಕದಲ್ಲಿರುವಂತೆ ಮಾಡುತ್ತೇನೆ‘ ಎಂದಿದ್ದಾರೆ.
ಪಿಟಿಐ ಜೊತೆ ಮಾತನಾಡಿದ ಸಂತ್ರಸ್ತೆಯ ತಂದೆ ಪಿ ರಾಮ್ ಮೂರ್ತಿ, ವರುಣ್‌ನ ರೂಮ್‌ಮೇಟ್‌ನಿಂದ ಚೂರಿ ಇರಿತದ ಸುದ್ದಿ ನಮಗೆ ಬಂದಿತು. ವರುಣನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ, ಆತನ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದರು. ಕೆಟಿಆರ್ ತಂಡದಿಂದ ತನಗೆ ಕರೆ ಬಂದಿದ್ದು, ಎಲ್ಲ ನೆರವು ನೀಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದರು. ಈ ಪ್ರಕರಣದಲ್ಲಿ ಶಂಕಿತನನ್ನು ಬಂಧಿಸಲಾಗಿದೆ ಎಂದು ವಾಲ್ಪಾರೈಸೊ ಪೊಲೀಸ್ ಇಲಾಖೆಯ ಡಿಟೆಕ್ಟಿವ್ ಕ್ರಿಸ್ ಆಲಿಸನ್ ತಿಳಿಸಿದ್ದಾರೆ.
We will do our best to support Varun with the help of Indian embassy and also the Telangana NRI friends
Will have my team @KTRoffice get in touch with the family https://t.co/edV1mP5wez
— KTR (@KTRBRS) November 1, 2023
ವರುಣ್ ರಾಜ್ ಆಗಸ್ಟ್ 2022 ರಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಎಸ್ ಮಾಡಲು ಯುಎಸ್‌ಎಗೆ ಹೋಗಿದ್ದರು. 2024 ರಲ್ಲಿ ಅವರ ಕೋರ್ಸ್ ಮುಗಿದ ನಂತರ ಖಮ್ಮಂಗೆ ಹಿಂತಿರುಗುವ ನಿರೀಕ್ಷೆಯಿದೆ. ಈ ವರ್ಷದ ಜನವರಿಯಲ್ಲಿ ಅಮೆರಿಕದ ಸಿಯಾಟಲ್‌ನಲ್ಲಿ ತೆಲುಗು ವಿದ್ಯಾರ್ಥಿನಿ ಜಾಹ್ನವಿ ಕಂದುಲಾ ಹತ್ಯೆಗೀಡಾದರು. ಪೊಲೀಸ್ ಅಧಿಕಾರಿಯೊಬ್ಬರ ಕರೆ ರೆಕಾರ್ಡಿಂಗ್ ವೈರಲ್ ಆಗಿ, ಅದರಲ್ಲಿ ಅವರು ಆಕೆಯ ಸಾವಿನ ಬಗ್ಗೆ ಕ್ರೂರ ಹಾಸ್ಯ ಮಾಡುವುದು ಕೇಳಿಬಂದಿತ್ತು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ