ಅಮೆರಿಕದಲ್ಲಿ ಮನುಷ್ಯನಿಗೆ ಹಂದಿ ಹೃದಯ ಜೋಡಣೆ, 40 ದಿನಗಳ ಬಳಿಕ ವ್ಯಕ್ತಿ ಸಾವು
ಅಮೆರಿಕದಲ್ಲಿ ಹಂದಿ ಹೃದಯ ಕಸಿ ಮಾಡಿಸಿಕೊಂಡು ವ್ಯಕ್ತಿ 40 ದಿನಗಳ ಬಳಿಕ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಕಳೆದ ಸೆಪ್ಟೆಂಬರ್ನಲ್ಲಿ ಅಮೆರಿಕದ (America) ಮೇರಿಲ್ಯಾಂಡ್ ವಿವಿ ತಜ್ಞರು ವೈದ್ಯ ಲೋಕದಲ್ಲಿ ಹೊಸ ಸಾಹಸ ಮಾಡಿದ್ದರು. ಸಾವಿನಂಚಿನಲ್ಲಿದ್ದ 58 ವರ್ಷದ ವ್ಯಕ್ತಿಯನ್ನು ಉಳಿಸಿಕೊಳ್ಳಲು ಅಂತಿಮ ಪ್ರಯತ್ನವಾಗಿ ಹಂದಿಯ ಹೃದಯವನ್ನು ಅವರಿಗೆ ಅಳವಡಿಸಿದ್ದರು, ಶಸ್ತ್ರಚಿಕಿತ್ಸೆ ಏನೋ ಯಶಸ್ವಿಯಾಗಿತ್ತು ಆದರೆ ಶಸ್ತ್ರಚಿಕಿತ್ಸೆ ಬಳಿಕ ಮನುಷ್ಯನ ದೇಹ ಹಾಗೂ ಹೃದಯವನ್ನು ನಿರಾಕರಿಸುತ್ತಿತ್ತು, ಹೊಂದಿಕೊಳ್ಳುತ್ತಿರಲಿಲ್ಲ.

ಲಾರೆನ್ಸ್ ಫೌಸೆಟ್ ವ್ಯಕ್ತಿಯು ಹಂದಿ ಹೃದಯದ ಕಸಿ ಪಡೆದ ವಿಶ್ವದ ಎರಡನೇ ರೋಗಿಯಾಗಿದ್ದಾರೆ. ಇದು ವೈದ್ಯಕೀಯ ಸಂಶೋಧನೆಯ ಬೆಳವಣಿಗೆಯ ಕ್ಷೇತ್ರದಲ್ಲಿ ಮೈಲಿಗಲ್ಲು ಎಂದೇ ಹೇಳಲಾಗಿತ್ತು. 1,00,000 ಕ್ಕೂ ಹೆಚ್ಚು ಅಮೆರಿಕನ್ನರು ಪ್ರಸ್ತುತ ಅಂಗಾಂಗ ಕಸಿಗಾಗಿ ಕಾಯುವವರ ಪಟ್ಟಿಯಲ್ಲಿದ್ದಾರೆ.
ಕಳೆದ ವರ್ಷ ಮೊದಲ ಬಾರಿಗೆ ಹಂದಿ ಹೃದಯ ಕಸಿ ಮಾಡಿಸಿಕೊಂಡಿದ್ದ ರೋಗಿಯು, ಹಲವು ಕಾರಣಗಳಿಂದ ಹೃದಯ ಕಸಿಯಾದ 2 ತಿಂಗಳಿಗೆ ಮೃತಪಟ್ಟಿದ್ದರು.
ಮತ್ತಷ್ಟು ಓದಿ: ಮಹಿಳೆಯರಲ್ಲಿ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವುದು ಹೇಗೆ?
ಆರೋಗ್ಯ ಕಾರಣಗಳು ಮತ್ತು ಹೃದಯದ ವೈಫಲ್ಯದಿಂದಾಗಿ ಸಾಂಪ್ರದಾಯಿಕ ವಿಧಾನದಲ್ಲಿ ಹೃದಯ ಕಸಿ ವಿಫಲವಾದ ಕಾರಣ ಹಂದಿಯ ಹೃದಯವನ್ನು ಅಳವಡಿಸಲಾಗಿತ್ತು.
ಮಾನವನಲ್ಲಿ ಹಂದಿ ಮೂತ್ರಪಿಂಡ ಕಸಿ: ಅಮೆರಿಕದಲ್ಲಿ ಕೆಲವು ತಿಂಗಳುಗಳ ಹಿಂದೆ ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಗೆ ಅನುವಂಶಿಕವಾಗಿ ಮಾರ್ಪಡಿಸಿರುವ ಹಂದಿ ಮೂತ್ರಪಿಂಡವನ್ನು ಯಶಸ್ವಿಯಾಗಿ ಕಸಿ ಮಾಡುವ ಪ್ರಯೋಗವನ್ನು ನ್ಯೂಯಾರ್ಕ್ ವಿಶ್ವವಿದ್ಯಾಲಯ ನಡೆದಿದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ