ಸದನದಲ್ಲಿ ChatGPT ಬಳಸಿ ಬರೆದ ಭಾಷಣ ಓದಿದ ಅಮೆರಿಕದ ಶಾಸಕ ಜೇಕ್ ಆಚಿನ್‌ಕ್ಲೋಸ್

| Updated By: ರಶ್ಮಿ ಕಲ್ಲಕಟ್ಟ

Updated on: Jan 27, 2023 | 4:27 PM

ಎರಡು-ಪ್ಯಾರಾಗ್ರಾಫ್ ಭಾಷಣದಲ್ಲಿ ಆಚಿನ್‌ಕ್ಲೋಸ್ ಯುಎಸ್-ಇಸ್ರೇಲ್ ಕೃತಕ ಬುದ್ಧಿಮತ್ತೆ ಕೇಂದ್ರವನ್ನು ರಚಿಸುವ ಮಸೂದೆಯನ್ನು ಪರಿಚಯಿಸಿದ್ದಾರೆ.ಭಾಷಣವನ್ನು ಬರೆಯಲು AI ಅನ್ನು ಆಯ್ಕೆ ಮಾಡಿದ್ದು, ಅದರ ಸಾಮರ್ಥ್ಯ ಮತ್ತು ಶಕ್ತಿಯನ್ನು ತೋರಿಸುವುದಕ್ಕಾಗಿ ಆಗಿದೆ.

ಸದನದಲ್ಲಿ ChatGPT ಬಳಸಿ ಬರೆದ ಭಾಷಣ ಓದಿದ ಅಮೆರಿಕದ ಶಾಸಕ ಜೇಕ್ ಆಚಿನ್‌ಕ್ಲೋಸ್
ಜೇಕ್ ಆಚಿನ್‌ಕ್ಲೋಸ್
Follow us on

ಅಮೆರಿಕದ ಶಾಸಕರೊಬ್ಬರು ಸದನದಲ್ಲಿ ಕೃತಕ ಬುದ್ಧಿಮತ್ತೆ (AI) ಚಾಟ್‌ಬಾಕ್ಸ್ ಸಾಧನವಾದ ಚಾಟ್ ಜಿಪಿಟಿ (ChatGPT) ಅನ್ನು ಬಳಸಿಕೊಂಡು ಭಾಷಣ ಮಾಡಿದ್ದಾರೆ. ಸದನದಲ್ಲಿ AI-ಲಿಖಿತ ಭಾಷಣವನ್ನು ಓದಿದ್ದು ಇದೇ ಮೊದಲು ಎಂದು ಜೇಕ್ ಆಚಿನ್‌ಕ್ಲೋಸ್ ಸಿಬ್ಬಂದಿ ಹೇಳಿದ್ದಾರೆ. ಎರಡು-ಪ್ಯಾರಾಗ್ರಾಫ್ ಭಾಷಣದಲ್ಲಿ ಆಚಿನ್‌ಕ್ಲೋಸ್ ಯುಎಸ್-ಇಸ್ರೇಲ್ ಕೃತಕ ಬುದ್ಧಿಮತ್ತೆ ಕೇಂದ್ರವನ್ನು ರಚಿಸುವ ಮಸೂದೆಯನ್ನು ಪರಿಚಯಿಸಿದ್ದಾರೆ. ಭಾಷಣವನ್ನು ಬರೆಯಲು AI ಅನ್ನು ಆಯ್ಕೆ ಮಾಡಿದ್ದು, ಅದರ ಸಾಮರ್ಥ್ಯ ಮತ್ತು ಶಕ್ತಿಯನ್ನು ತೋರಿಸುವುದಕ್ಕಾಗಿ ಆಗಿದೆ. ಹೆಚ್ಚು ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಹೂಡಿಕೆಯ ಅಗತ್ಯವಿದೆ ಎಂದು ತೋರಿಸುವುದಕ್ಕಾಗಿ ಅವರು ಈ ರೀತಿ ಭಾಷಣ ಮಾಡಿದ್ದಾರೆ.

ನಾನು ಇಲ್ಲಿ ಕಿರಿಯ ಪೋಷಕರಲ್ಲಿ ಒಬ್ಬನಾಗಿದ್ದೇನೆ. ಈ ತಂತ್ರಜ್ಞಾನವು ಮುಂದಿನ ದಶಕಗಳವರೆಗೆ ನನ್ನ ವೃತ್ತಿಜೀವನದ ಭಾಗವಾಗಲಿದೆ ಎಂದು ನನಗೆ ತಿಳಿದಿದೆ. ಇದು ನನ್ನ ಮಕ್ಕಳಿಗೆ ಸಾಮಾನ್ಯ ಉದ್ದೇಶದ ತಂತ್ರಜ್ಞಾನವಾಗಿರಬಹುದು. ನನ್ನ ಅರ್ಥವೇನೆಂದರೆ, ಅವರು ಕೆಲಸ ಮಾಡಲು ಆಯ್ಕೆ ಮಾಡುವ ಯಾವುದೇ ವಲಯದಲ್ಲಿ, ಅವರು ಬಳಸಬೇಕಾದ ಪ್ರಮುಖ ಸಾಧನವಾಗಿದೆ ಇದು ಎಂದು AI ಬರೆದ ಭಾಷಣವನ್ನು ಓದುವ ನಿರ್ಧಾರದ ಬಗ್ಗೆ ಆಚಿನ್‌ಕ್ಲೋಸ್ ಸಿಎನ್ಎನ್ ಗೆ ತಿಳಿಸಿದ್ದಾರೆ.


ನಾನು ಇದನ್ನು ಸದನದಲ್ಲಿ ಹೈಲೈಟ್ ಮಾಡಲು ಬಯಸುತ್ತೇನೆ, ಇದರಿಂದಾಗಿ ನಾವು ಈಗ AI ಗಾಗಿ ಉದ್ದೇಶಪೂರ್ವಕ ನೀತಿಯ ಬಗ್ಗೆ ಚರ್ಚೆಯನ್ನು ಹೊಂದಿದ್ದೇವೆ. ನಾವು ನೀತಿ ರೂಪಿಸುವುದಲ್ಲಿ 10 ವರ್ಷ ಹಿಂದೆ ಉಳಿಯಬಾರದು ಎಂದು ಅವರು ಹೇಳಿದರು.
voicebot.ai ಪ್ರಕಾರ, ಆಚಿನ್‌ಕ್ಲೋಸ್ ಮತ್ತು ಅವರ ಸಿಬ್ಬಂದಿ ಬಿಲ್ ಬಗ್ಗೆ “ಪ್ರತಿನಿಧಿಗಳ ಸಭೆಯನ್ನು ಉದ್ದೇಶಿಸಿ ಮಾತಮಾಡಲು 100 ಪದಗಳನ್ನು ಬರೆಯಿರಿ ಎಂದು AI ವ್ಯವಸ್ಥೆಗೆ ಪ್ರಾಂಪ್ಟ್ ನೀಡಿದರು. ನಂತರ ಅವರು ಮಸೂದೆಯ ಪಠ್ಯವನ್ನು ಮತ್ತು ಅದರ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ಸಲ್ಲಿಸಿದರು.

ಸದನದಲ್ಲಿ ಓದಲು ಅಂತಿಮ ಪಠ್ಯವನ್ನು ಪಡೆಯುವ ಮೊದಲು ಶಾಸಕರು ಇದನ್ನು ಹಲವಾರು ಬಾರಿ ಪರಿಷ್ಕರಿಸಿದ್ದಾರೆ
ಸಂಭಾಷಣೆಯ ಸಾಧನವಾಗಿ ChatGPT ಬಹಳ ಜನಪ್ರಿಯವಾಗುತ್ತಿದೆ. ಡಿಸೆಂಬರ್‌ನಲ್ಲಿ, ಬ್ರಿಟಿಷ್ ಪಾರ್ಲಿಮೆಂಟ್ ಸದಸ್ಯ ಲ್ಯೂಕ್ ಇವಾನ್ಸ್ ಅವರು ಇದರಲ್ಲಿ ಭಾಷಣ ಬರೆದು ಸದನದಲ್ಲಿ ಓದಿದ್ದರು.

ಮತ್ತಷ್ಟು ವಿದೇಶ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:17 pm, Fri, 27 January 23