AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹೀರೋಗಳು ಮಾಸ್ಕ್ ಧರಿಸುತ್ತಾರೆ’ ಅಂದ ಕಾರು ಕಂಪನಿಯಿಂದ ಫೇಸ್ ಮಾಸ್ಕ್ ತಯಾರಿಕೆ

ಖ್ಯಾತ ಕಾರು ಉತ್ಪಾದನೆ ಕಂಪನಿ ಫೋರ್ಡ್ ಸಂಸ್ಥೆಯೀಗ, ಫೇಸ್ ಮಾಸ್ಕ್ ತಯಾರಿಕೆಗೆ ಮುಂದಾಗಿದೆ. ಹೀರೋಗಳು ಮಾಸ್ಕ್ ಧರಿಸುತ್ತಾರೆ ಅನ್ನುವ ಕ್ಯಾಚಿ ಸ್ಲೋಗನ್​ಗಳನ್ನ ಫೇಸ್ ಮಾಸ್ಕ್​ ಮೇಲೆ ನಮೂದಿಸಿದ್ದು, ಗ್ರಾಹಕರನ್ನ ಸೆಳೆಯಲು ಪ್ಲ್ಯಾನ್ ಮಾಡಿದೆ. ಪ್ಲೇ ಮೌತ್ ಟೌನ್​​ಶಿಪ್​ನಲ್ಲಿ ಫೇಸ್ ಮಾಸ್ಕ್ ತಯಾರಿಸಲಾಗ್ತಿದೆ. ಕಳೆದ ವಾರವಷ್ಟೇ ಡೊನಾಲ್ಡ್ ಟ್ರಂಪ್ ಕೂಡ ಈ ಘಟಕಕ್ಕೆ ಭೇಟಿ ಕೊಟ್ಟು ತೆರೆಮರೆಯಲ್ಲಿ ಮಾಸ್ಕ್ ಧರಿಸಿದ್ರು. ಬೋಯಿಂಗ್​ನಲ್ಲಿ ಉದ್ಯೋಗ ಕಡಿತ: ಕೊರೊನಾ ವೈರಸ್ ಜಗತ್ತಿನಾದ್ಯಂತ ನಿರುದ್ಯೋಗ ಸಮಸ್ಯೆ ಸೃಷ್ಟಿಸಿದೆ. ವಿಶ್ವದ ಅತ್ಯಂತ ಖ್ಯಾತ ಬೋಯಿಂಗ್ […]

‘ಹೀರೋಗಳು ಮಾಸ್ಕ್ ಧರಿಸುತ್ತಾರೆ’  ಅಂದ ಕಾರು ಕಂಪನಿಯಿಂದ ಫೇಸ್ ಮಾಸ್ಕ್ ತಯಾರಿಕೆ
ಸಾಧು ಶ್ರೀನಾಥ್​
|

Updated on:May 29, 2020 | 3:47 PM

Share

ಖ್ಯಾತ ಕಾರು ಉತ್ಪಾದನೆ ಕಂಪನಿ ಫೋರ್ಡ್ ಸಂಸ್ಥೆಯೀಗ, ಫೇಸ್ ಮಾಸ್ಕ್ ತಯಾರಿಕೆಗೆ ಮುಂದಾಗಿದೆ. ಹೀರೋಗಳು ಮಾಸ್ಕ್ ಧರಿಸುತ್ತಾರೆ ಅನ್ನುವ ಕ್ಯಾಚಿ ಸ್ಲೋಗನ್​ಗಳನ್ನ ಫೇಸ್ ಮಾಸ್ಕ್​ ಮೇಲೆ ನಮೂದಿಸಿದ್ದು, ಗ್ರಾಹಕರನ್ನ ಸೆಳೆಯಲು ಪ್ಲ್ಯಾನ್ ಮಾಡಿದೆ. ಪ್ಲೇ ಮೌತ್ ಟೌನ್​​ಶಿಪ್​ನಲ್ಲಿ ಫೇಸ್ ಮಾಸ್ಕ್ ತಯಾರಿಸಲಾಗ್ತಿದೆ. ಕಳೆದ ವಾರವಷ್ಟೇ ಡೊನಾಲ್ಡ್ ಟ್ರಂಪ್ ಕೂಡ ಈ ಘಟಕಕ್ಕೆ ಭೇಟಿ ಕೊಟ್ಟು ತೆರೆಮರೆಯಲ್ಲಿ ಮಾಸ್ಕ್ ಧರಿಸಿದ್ರು.

ಬೋಯಿಂಗ್​ನಲ್ಲಿ ಉದ್ಯೋಗ ಕಡಿತ: ಕೊರೊನಾ ವೈರಸ್ ಜಗತ್ತಿನಾದ್ಯಂತ ನಿರುದ್ಯೋಗ ಸಮಸ್ಯೆ ಸೃಷ್ಟಿಸಿದೆ. ವಿಶ್ವದ ಅತ್ಯಂತ ಖ್ಯಾತ ಬೋಯಿಂಗ್ ವಿಮಾನ ಸಂಸ್ಥೆ ಕೂಡ ತನ್ನ ಸಿಬ್ಬಂದಿಗೆ ಕೊಕ್ ಕೊಟ್ಟಿದೆ. ಲಾಕ್​ಡೌನ್​ನಿಂದಾಗಿ ಸುಮರು 13 ಸಾವಿರ ನೌಕರರನ್ನ ಕೆಲಸದಿಂದ ತೆಗೆಯಲು ನಿರ್ಧರಿಸಿದೆಯಂತೆ.ಲಾಕ್​ಡೌನ್​ನಿಂದಾಗಿ ಜಗತ್ತಿನಾದ್ಯಂತ ಅಂತಾರಾಷ್ಟ್ರೀಯ ವಿಮಾನ ಹಾರಾಟ ಸ್ಥಗಿತಗೊಂಡಿದ್ದರಿಂದ ಬೋಯಿಂಗ್​ಗೆ ಹೊಡೆತ ಬಿದ್ದಿದೆ.

ಸ್ಮಶಾನಗಳು ಭರ್ತಿ: ಅಮೆರಿಕದ ನಂತರ ಕೊರೊಣಾ ವೈರಸ್ ಹೆಚ್ಚು ತಾಂಡವವಾಡ್ತಿರೋದೇ ಬ್ರೆಜಿಲ್​ ದೇಶದಲ್ಲಿ. ಸೋಂಕಿತರ ಸಾವಿನ ಸಂಖ್ಯೆ ದಿನೇ ದಿನೆ ಹೆಚ್ಚಾಗ್ತಿದ್ದು, ಬ್ರೆಜಿಲ್ ರಾಜಧಾನಿ ಸಾಹೋಪೌಲೋದಲ್ಲಿನ ಸ್ಮಶಾನ ಹೆಣಗಳಿಂದಲೇ ತುಂಬಿ ಹೋಗ್ತಿದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸಾವಿನ ಸಂಖ್ಯೆ ಏರಿಕೆಯಾಗ್ತಿರೋದ್ರಿಂದ, ಮುನ್ನೆಚ್ಚರಿಕೆಯಿಂದ ಈಗಾಗಲೇ ಸ್ಮಶಾನದಲ್ಲಿ ಗುಂಡಿಗಳನ್ನ ತೆರೆಯಲಾಗಿದೆ. ಸ್ಮಶಾನದ ದೃಶ್ಯವನ್ನ ನೋಡುದ್ರೆ ಕೊರೊನಾದ ತೀವ್ರತೆ ಎಷ್ಟು ಅನ್ನೋದು ಗೊತ್ತಾಗುತ್ತೆ.

ಕೀನ್ಯಾ ಕಂಗಾಲು: ಆಫ್ರಿಕಾ ದೇಶಗಳಲ್ಲಿ ಕೊರೊನಾ ವೈರಸ್ ನಿಧಾನವಾಗಿ ತನ್ನ ಕಬಂಧ ಬಾಹುವನ್ನ ಚಾಚುತ್ತಿದೆ. ಕೀನ್ಯಾದಲ್ಲಿ ಸೋಂಕಿನ ಸಂಖ್ಯೆ ನಿರೀಕ್ಷೆಗೂ ಮೀರಿ ಹಬ್ಬುತ್ತಿದ್ದು, ರಾಜಧಾನಿ ನೈರೋಬಿ ತಲ್ಲಣಗೊಂಡಿದೆ. ಈಗಾಗಲೇ ಸೋಂಕಿತರು ಸಾವಿರಾರು ಸಂಖ್ಯೆಯಲ್ಲಿದ್ದು, ಸಾವಿನ ಸಂಖ್ಯೆ ಹಾಫ್ ಸೆಂಚುರಿ ಬಾರಿಸಿದೆ. ಮೃತದೇಹವನ್ನ ಸ್ಮಶಾನಕ್ಕೆ ರವಾನೆ ಮಾಡುವ ವೇಳೆಯೂ ಸಾಕಷ್ಟು ಎಚ್ಚರಿಕೆ ವಹಿಸುತ್ತಿದ್ದು, ಕೆಮಿಕಲ್ ಸಿಂಪಡಣೆ ಮಾಡಲಾಗ್ತಿದೆ.

ವಾರಿಯರ್ಸ್​ಗೆ ಕಲಾವಿದನ ಗೌರವ: ಕೊರೊನಾ ವೈರಸ್ ಬಂದಾಗಿನಿಂದ ವೈದ್ಯಕೀಯ ಸಿಬ್ಬಂದಿ ಜೀವದ ಹಂಗು ತೊರೆದು ಕೆಲಸದಲ್ಲಿ ತೊಡಗಿದ್ದಾರೆ. ಇವರ ಶ್ರಮಕ್ಕೆ ಗೌರವ ಸೂಚಿಸುವ ಸಲುವಾಗಿ ಕಲಾವಿದರು ಕುಂಚದ ಮೂಲಕ ಗೌರವ ಸೂಚಿಸಿದ್ದಾರೆ. ನ್ಯೂಯಾರ್ಕ್​ನಲ್ಲಿ ಕಲಾವಿದ ಜಾರ್ಜ್ ರೋಡ್ರಿಕ್ಯೂ ಮತ್ತು ಜರ್ಡಾ ಫೇಸ್ ಮಾಸ್ಕ್ ಧರಿಸಿದ್ದ ವೈದ್ಯಕೀಯ ಸಿಬ್ಬಂದಿಯ ಭಾವಚಿತ್ರವನ್ನ ಕುಂಚದಲ್ಲಿ ಅರಳಿಸಿದ್ದಾರೆ. ಸುಮಾರು 20 ಸಾವಿರ ಅಡಿ ಬೃಹತ್ ಚಿತ್ರ ಬಿಡಿಸಿ ಗೌರವ ಸೂಚಿಸಿದ್ದಾರೆ.

ಟ್ವಿಟ್ಟರ್ ವಿರುದ್ಧ ಟ್ರಂಪ್ ಸಮರ: ಕೊರೊನಾ ವೈರಸ್ ಬಂದಾಗಿನಿಂದ ಅಮೆರಿಕ ಅಧ್ಯಕ್ಷ ಕೊಡುವ ಒಂದೊಂದು ಹೇಳಿಕೆಗಳು ಜಾಲಾತಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿವೆ. ಇದ್ರಿಂದ ಎಚ್ಚೆತ್ತ ಟ್ರಂಪ್ ಸೋಷಿಯಲ್ ಮೀಡಿಯಾಗಳ ವಿರುದ್ಧ ಕಿಡಿಕಾರಿದ್ದು, ಸೆನ್ಸಾರ್ ತಡೆ ಆದೇಶಕ್ಕೆ ಸಹಿ ಹಾಕಿದ್ದಾರೆ. ಟ್ವಿಟರ್​ನಲ್ಲಿ ಟ್ರಂಪ್ ಹೇಳಿಕೆಯ ಫ್ಯಾಕ್ಟ್ ಚೆಕ್​ಗೆ ಸೂಚಿಸಿದ್ದಕ್ಕೆ ಟ್ವಿಟ್ಟರ್ ವಿರುದ್ಧ ಟ್ರಂಪ್ ಕಿಡಿಕಾರಿದ್ರು. ಹೀಗಾಗಿ, ಸೆನ್ಸಾರ್ ತಡೆ ಕಾರ್ಯಕಾರಿ ಆದೇಶಕ್ಕೆ ಟ್ರಂಪ್ ಸಹಿ ಮಾಡಿದ್ದಾರೆ.

Published On - 3:43 pm, Fri, 29 May 20