ಅಮೆರಿಕದಲ್ಲಿ (US) ವಿಮಾನ ನಿಲ್ದಾಣದಲ್ಲಿ(Airport) ತನ್ನ ಸಾಮಾನುಗಳನ್ನು ಕಳೆದುಕೊಂಡ ವ್ಯಕ್ತಿಯೊಬ್ಬರು ಆಪಲ್‌ನ ಏರ್‌ಟ್ಯಾಗ್ (Airtag) ಬಳಸಿ ಸೂಟ್‌ಕೇಸ್ ಅನ್ನು ಟ್ರ್ಯಾಕ್ ಮಾಡಿದಾಗ ವ್ಯಕ್ತಿಯೊಬ್ಬ ಆತನ ಬಟ್ಟೆಗಳನ್ನು ಧರಿಸಿರುವುದನ್ನು ಕಂಡು ಶಾಕ್ ಆಗಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಜಮೀಲ್ ರೀಡ್ ಎಂಬ ವ್ಯಕ್ತಿ ಲಾಸ್ ಏಂಜಲೀಸ್‌ನಿಂದ ಜಾರ್ಜಿಯಾದ ಅಟ್ಲಾಂಟಾಗೆ ಪ್ರಯಾಣಿಸುತ್ತಿದ್ದಾಗ, ಬ್ಯಾಗೇಜ್ ಕಾರೂಹ್ಸೆಲ್ ನಲ್ಲಿ ತನ್ನ ಬ್ಯಾಗ್ ಇಲ್ಲ ಎಂಬುದನ್ನು ಗಮನಿಸಿದರು. ಯಾರೋ ಅದನ್ನು ತೆಗೆದುಕೊಂಡು ಹೋಗಿರಬೇಕು ಎಂದು ಅಂದುಕೊಂಡರು. ಅರ್ಧ ಗಂಟೆ ಕಾದರೂ ಅವರ ಲಗೇಜ್ ಬರಲಿಲ್ಲ. ಅವರ ಪ್ರಕಾರ, ಅವರ ಬ್ಯಾಗ್‌ನಲ್ಲಿ ಸುಮಾರು 3,000 ಡಾಲರ್ (2.4 ಲಕ್ಷ ರೂ.) ಮೌಲ್ಯದ ವಸ್ತುಗಳು ಇದ್ದವು.
ನಾನು ಲಗೇಜ್ ಕ್ಲೈಮ್ ಮಾಡಲು ಹೋಗುತ್ತಿದ್ದೇನೆ. ನಾನು ನನ್ನ ಸಾಮಾನುಗಳನ್ನು ಹುಡುಕಲು ಪ್ರಯತ್ನಿಸುತ್ತಿದ್ದೇನೆ. ನಾನು ಸುಮಾರು 30 ನಿಮಿಷಗಳ ಕಾಲ ಅಲ್ಲಿಯೇ ನಿಂತಿದ್ದೇನೆ.ನನಗದು ಸಿಕ್ಕಲ್ಲ. ಕೊನೆಯದಾಗಿ ನನ್ನ ಫೋನ್ ತೆಗೆದು ನೋಡಿದೆ.ನನ್ನ ಲಗೇಜ್‌ನಲ್ಲಿ ಏರ್ ಟ್ಯಾಗ್ ಇದೆ ಎಂದು ಅವರು WSB-TV ಗೆ ಹೇಳಿದ್ದರು.
ಬ್ಯಾಗ್‌ನಲ್ಲಿರುವ ಟ್ರ್ಯಾಕಿಂಗ್ ಸಾಧನ ಬ್ಯಾಗ್ ಆಗಲೇ ವಿಮಾನ ನಿಲ್ದಾಣದಿಂದ ಹೊರಬಂದಿದೆ ಎಂದು ತೋರಿಸಿತು. ಅದು ಬೇರೆ ಕಡೆಗೆ ಚಲಿಸುತ್ತಿರುವುದನ್ನು ಗಮನಿಸಿದಾಗ ರೀಡ್ ತಕ್ಷಣ ಪೊಲೀಸರಿಗೆ ಕರೆ ಮಾಡಿದ್ದಾನೆ. ಅವರು ಸೂಟ್‌ಕೇಸ್ ಅನ್ನು ವಿಮಾನ ನಿಲ್ದಾಣಕ್ಕೆ ಹಿಂತಿರುಗುವವರೆಗೂ ಹಿಂಬಾಲಿಸಿದರು, ಆ ಸಮಯದಲ್ಲಿ ಅವರು ನೆಲ್ಸನ್ ಎಂಬ ವ್ಯಕ್ತಿ ಸಿಕ್ಕಿದ. ಆತ ನಿರಾಶ್ರಿತರು ಎಂದು ಹೇಳಿಕೊಂಡಿದ್ದ.
ಓಹ್, ನನ್ನ ಬಳಿ ಟ್ರ್ಯಾಕಿಂಗ್ ಸಾಧನವಿದೆ. ನಾನು ಅದರಿಂದ ಟ್ರ್ಯಾಕ್ ಮಾಡಿದಾಗ ನೀವು ಸಿಕ್ಕಿದಿರಿ. ನೀವು ಧರಿಸಿರುವುದ ನನ್ನ ಶರ್ಟ್. ಇದು ಹುಚ್ಚುತನ. ನನ್ನ ಶರ್ಟ್ ಮತ್ತು ನನ್ನ ಜೀನ್ಸ್. ಆ ವ್ಯಕ್ತಿ ನನ್ನ ಲಗೇಜ್ ಕದ್ದಿದ್ದಾನೆ . ಅದರಲ್ಲಿ ಸುಮಾರು $3,000 ಮೌಲ್ಯದ ವಸ್ತುಗಳಿತ್ತು ಎಂದು ರೀಡ್ ಹೇಳಿದ್ದಾರೆ. ಪೊಲೀಸರು ಅಂತಿಮವಾಗಿ ಕೈಕೋಳ ಹಾಕುವ ಮೊದಲು ನೆಲ್ಸನ್ ವಿಮಾನ ನಿಲ್ದಾಣದ ನೆಲದ ಮೇಲೆ ಮಲಗಿರುವ ವಿಡಿಯೊವನ್ನು ಸಹ ಅವರು ಸೆರೆಹಿಡಿದಿದ್ದಾರೆ.
ಇದನ್ನೂ ಓದಿ: H-1B Visa: ಭಾರತೀಯರಿಗೆ ಖುಷಿ ಸುದ್ದಿ: ಅಮೆರಿಕದಲ್ಲಿ ಎಚ್-1 ಬಿ ವೀಸಾ ಹೊಂದಿರುವ ಸಂಗಾತಿಗೂ ಕೆಲಸ ಮಾಡಲು ಅವಕಾಶ
ವರದಿ ಪ್ರಕಾರ ನೆಲ್ಸನ್ ವಿರುದ್ಧ ಅಕ್ರಮ ಅತಿಕ್ರಮಣ, ಸಾಮಾನುಗಳನ್ನು ಅನಧಿಕೃತವಾಗಿ ತೆಗೆಯುವುದು ಮತ್ತುಕಳ್ಳತನದ ಆರೋಪ ಹೊರಿಸಲಾಗಿದೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:26 pm, Fri, 31 March 23