ವಿಶ್ವ ಶಾಂತಿಗಾಗಿ ಅಮೆರಿಕ ಜವಾಬ್ದಾರಿಗಳನ್ನು ತೆಗೆದುಕೊಳ್ಳಬೇಕು: ಬೈಡನ್ ಜತೆ ಷಿ ಜಿನ್‌ಪಿಂಗ್ ಮಾತುಕತೆ

| Updated By: ರಶ್ಮಿ ಕಲ್ಲಕಟ್ಟ

Updated on: Mar 18, 2022 | 10:15 PM

ಬೈಡನ್ ಅವರೊಂದಿಗಿನ ವರ್ಚುವಲ್ ಸಭೆಯಲ್ಲಿ ಜಿನ್‌ಪಿಂಗ್, "ವಿಶ್ವದ ಶಾಂತಿ ಮತ್ತು ನೆಮ್ಮದಿಯ ಪ್ರಯತ್ನಗಳ ಭಾಗವಾಗಿ ವಿಶ್ವದ ಅಗ್ರ ಎರಡು ಆರ್ಥಿಕತೆಗಳ ನಡುವಿನ ಸಂಬಂಧಗಳು ಸರಿಯಾದ ಹಾದಿಯಲ್ಲಿ ಸಾಗಬೇಕು ಎಂದು ಹೇಳಿದ್ದಾರೆ.

ವಿಶ್ವ ಶಾಂತಿಗಾಗಿ ಅಮೆರಿಕ ಜವಾಬ್ದಾರಿಗಳನ್ನು ತೆಗೆದುಕೊಳ್ಳಬೇಕು: ಬೈಡನ್ ಜತೆ ಷಿ ಜಿನ್‌ಪಿಂಗ್ ಮಾತುಕತೆ
ಬೈಡನ್ ಜತೆ ಷಿ ಜಿನ್ಪಿಂಗ್ ಮಾತುಕತೆ
Follow us on

ರಾಜ್ಯಗಳ ನಡುವಿನ ಘರ್ಷಣೆಗಳು ಯಾರ ಹಿತಾಸಕ್ತಿಯಲ್ಲ ಮತ್ತು ವಿಶ್ವ ಶಾಂತಿಗಾಗಿ ಅಮೆರಿಕ ಸರಿಯಾದ ಜವಾಬ್ದಾರಿಗಳನ್ನು ತೆಗೆದುಕೊಳ್ಳಬೇಕು ಎಂದು ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ (Xi Jinping) ಶುಕ್ರವಾರ ಅಮೆರಿಕನ್ ಅಧ್ಯಕ್ಷ ಜೋ ಬೈಡನ್​ಗೆ (Joe Biden) ಹೇಳಿದ್ದಾರೆ ಎಂದು ಸುದ್ದಿ ಸಂಸ್ಥೆ ಎಎಫ್‌ಪಿ ಚೀನಾದ ರಾಜ್ಯ ಪ್ರಸಾರ ಸಿಸಿಟಿವಿಯನ್ನು ಉಲ್ಲೇಖಿಸಿದೆ. ಉಕ್ರೇನ್ ಮತ್ತು ರಷ್ಯಾ ನಡುವಿನ ಉಗ್ರ ಹೋರಾಟ 23ನೇ ದಿನಕ್ಕೆ ತಲುಪಿದೆ. ಈ ನಡುವೆ “ರಾಜ್ಯದಿಂದ ರಾಜ್ಯ ಸಂಬಂಧಗಳು ಮಿಲಿಟರಿ ಹಗೆತನದ ಹಂತಕ್ಕೆ ಹೋಗಲು ಸಾಧ್ಯವಿಲ್ಲ” ಎಂದು ಚೀನಾದ ಅಧ್ಯಕ್ಷರು ಹೇಳಿದರು. ಅದೇ ವೇಳೆ ಶಾಂತಿ ಮತ್ತು ಭದ್ರತೆ ಅಂತರರಾಷ್ಟ್ರೀಯ ಸಮುದಾಯದ ಅಮೂಲ್ಯ ಸಂಪತ್ತು ಎಂದು ಹೇಳಿದರು. ಬೈಡನ್ ಅವರೊಂದಿಗಿನ ವರ್ಚುವಲ್ ಸಭೆಯಲ್ಲಿ ಜಿನ್‌ಪಿಂಗ್, “ವಿಶ್ವದ ಶಾಂತಿ ಮತ್ತು ನೆಮ್ಮದಿಯ ಪ್ರಯತ್ನಗಳ ಭಾಗವಾಗಿ ವಿಶ್ವದ ಅಗ್ರ ಎರಡು ಆರ್ಥಿಕತೆಗಳ ನಡುವಿನ ಸಂಬಂಧಗಳು ಸರಿಯಾದ ಹಾದಿಯಲ್ಲಿ ಸಾಗಬೇಕು ಎಂದು ಹೇಳಿದ್ದಾರೆ. ಫೆಬ್ರುವರಿ 24 ರಂದು ಉಕ್ರೇನ್ ಮೇಲೆ ಪೂರ್ಣ ಪ್ರಮಾಣದ ಆಕ್ರಮಣವನ್ನು ರಷ್ಯಾ ಪ್ರಾರಂಭಿಸಿದ ನಂತರ ಇದು ಇಬ್ಬರು ನಾಯಕರ ನಡುವಿನ ಮೊದಲ ಮಾತುಕತೆಯಾಗಿದೆ . ರಷ್ಯಾ-ಉಕ್ರೇನ್ ಯುದ್ಧದ ಬಗ್ಗೆ ಬೀಜಿಂಗ್ ನಿಲುವು ಏನು ಎಂಬುದನ್ನು ಮೌಲ್ಯಮಾಪನ ಮಾಡಲು ಈ ಮಾತುಕತೆ ಬೈಡನ್ ಅವರಿಗೆ ಸಿಕ್ಕ ಅವಕಾಶ ಎಂದು ಪರಿಗಣಿಸಲಾಗುತ್ತಿದೆ. ಯಾಕೆಂದರೆ ವಿಶೇಷವಾಗಿ ಕೆಲವು ಚೀನೀ ಸರ್ಕಾರಿ ಅಧಿಕಾರಿಗಳು ಉಕ್ರೇನ್ ಮತ್ತು ರಷ್ಯಾಕ್ಕೆ ತಮ್ಮ ಬೆಂಬಲದ ಕುರಿತು ವಿಭಿನ್ನ ಹೇಳಿಕೆಗಳನ್ನು ನೀಡಿದ್ದರು.

“ರಷ್ಯಾದ ಆಕ್ರಮಣವನ್ನು ಬೆಂಬಲಿಸಲು ಚೀನಾ ತೆಗೆದುಕೊಳ್ಳುವ ಯಾವುದೇ ಕ್ರಮಗಳಿಗೆ ಚೀನಾ ಜವಾಬ್ದಾರಿಯನ್ನು ಹೊರುತ್ತದೆ ಮತ್ತು ವೆಚ್ಚವನ್ನು ವಿಧಿಸಲು ನಾವು ಹಿಂಜರಿಯುವುದಿಲ್ಲ ಎಂದು ಬೈಡನ್ ಸ್ಪಷ್ಟಪಡಿಸುತ್ತಾರೆ” ಎಂದು ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ವರ್ಚುವಲ್ ಸಭೆಯ ಮುನ್ನ ಹೇಳಿದ್ದಾರೆ.

ಇಲ್ಲಿಯವರೆಗೆ ಚೀನಾ ಉಕ್ರೇನ್‌ನ ಮೇಲಿನ ಆಕ್ರಮಣಕ್ಕಾಗಿ ಪುಟಿನ್ ಅವರನ್ನು ಖಂಡಿಸಲು ನಿರಾಕರಿಸಿದೆ. ಹಾಗಾಗಿ ಬೀಜಿಂಗ್ ಮಾಸ್ಕೊಗೆ ಆರ್ಥಿಕ ಮತ್ತು ಮಿಲಿಟರಿ ಬೆಂಬಲವನ್ನು ನೀಡಬಹುದೆಂಬ ಭಯ ಅಮೆರಿಕಕ್ಕಿದೆ.
ಷಿ ಜಿನ್‌ಪಿಂಗ್ ಮತ್ತು ವ್ಲಾಡಿಮಿರ್ ಪುಟಿನ್ ಅವರು ಬೀಜಿಂಗ್‌ನಲ್ಲಿ ಫೆಬ್ರುವರಿ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದ್ದರು.

ಇದನ್ನೂ  ಓದಿ: PAK vs AUS: ಪಾಕಿಸ್ತಾನದಲ್ಲಿ ರಾಜಕೀಯ ಅರಾಜಕತೆ! ದಾಳಿ ನಡೆಯುವ ಸಂಭವ; ಏಕದಿನ ಸರಣಿ ಸ್ಥಳಾಂತರ