ಕಾಶ್ಮೀರಿ ಪಂಡಿತರ ಕುಟುಂಬದ ಶೆಫಾಲಿ ರಜ್ದಾನ್ ನೆದರ್ಲ್ಯಾಂಡ್ನ ಯುಎಸ್ ರಾಯಭಾರಿ; ಅಧ್ಯಕ್ಷ ಜೋ ಬೈಡನ್ರಿಂದ ನೇಮಕ
ಶೆಫಾಲಿಯವರು ಜಮ್ಮು-ಕಾಶ್ಮೀರದ ಕಾಶ್ಮೀರಿ ಪಂಡಿತರ ಕುಟುಂಬಕ್ಕೆ ಸೇರಿದವರು. ಹುಟ್ಟಿದ್ದು ಉತ್ತರಪ್ರದೇಶದ ಹರಿದ್ವಾರದಲ್ಲಿ. ಇವರಿಗೆ ಎರಡು ವರ್ಷವಾಗಿದ್ದಾಗ ಕುಟುಂಬ ಯುಎಸ್ನ ಪಿಟ್ಸ್ಬರ್ಗ್ಗೆ ಹೋಗಿ ನೆಲೆಸಿತು
ಜೋ ಬೈಡನ್ (Joe Biden) ಅಮೆರಿಕ ಅಧ್ಯಕ್ಷರಾದ ಮೇಲೆ ಸರ್ಕಾರದ ಹಲವು ಪ್ರಮುಖ ಹುದ್ದೆಗಳಲ್ಲಿ ಭಾರತೀಯ ಮೂಲದವರಿಗೆ ಅವಕಾಶ ಕೊಟ್ಟಿದ್ದಾರೆ. ಸದ್ಯ ಯುಎಸ್ನ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಕೂಡ ಭಾರತ ಮೂಲದವರೇ. ಇದೀಗ ಜೋ ಬೈಡನ್ ನೆದರ್ಲ್ಯಾಂಡ್ಗೆ ಅಮೆರಿಕದ ರಾಯಭಾರಿ ಹೆಸರನ್ನು ಘೋಷಣೆ ಮಾಡಿದ್ದು, ಅವರೂ ಕೂಡ ಭಾರತ ಮೂಲದ ರಾಜಕೀಯ ಕಾರ್ಯಕರ್ತೆ ಎಂಬುದು ಗಮನಾರ್ಹ ಸಂಗತಿ. ಶೆಫಾಲಿ ರಜ್ದಾನ್ ದುಗ್ಗಲ್ (Shefali Razdan Duggal) (50)ನೆದರ್ಲ್ಯಾಂಡ್ನ ಅಮೆರಿಕ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದ್ದು, ಇವರು ಮೂಲತಃ ಜಮ್ಮು-ಕಾಶ್ಮೀರದವರು. ಆದರೆ ಪಾಲಕರು =ಯುಸ್ಗೆ ವಲಸೆ ಹೋಗಿದ್ದರಿಂದ ಶೆಫಾಲಿ ಅಲ್ಲಿಯೇ ಬೆಳೆದಿದ್ದಾರೆ. ನ್ಯೂಯಾರ್ಕ್, ಬಾಸ್ಟನ್, ಚಿಕಾಗೋಗಳಲ್ಲಿ ವಾಸವಾಗಿದ್ದರು.
ಶುಕ್ರವಾರ ಯುಎಸ್ನ ಹಲವು ಪ್ರಮುಖ ರಾಜತಾಂತ್ರಿಕ ಹುದ್ದೆಗಳಿಗೆ ಹೊಸ ನೇಮಕಾತಿ ಮಾಡಲಾಗಿದ್ದು, ಹೆಸರನ್ನು ವೈಟ್ಹೌಸ್ ಘೋಷಣೆ ಮಾಡಿದೆ. ಅದರಲ್ಲಿ ಪ್ರಮುಖವಾಗಿ ಶೆಫಾಲಿ ರಾಜ್ದನ್ರನ್ನು ನೆದರ್ಲ್ಯಾಂಡ್ ರಾಯಭಾರಿಯಾಗಿ ನೇಮಕಮಾಡಲಾಗಿದ್ದು, ಇವರು ಅನುಭವಿ ರಾಜತಾಂತ್ರಿಕರು. ಮಹಿಳಾ ಹಕ್ಕುಗಳ ಪರ ವಕೀಲರು ಮತ್ತು ಮಾನವ ಹಕ್ಕುಗಳ ಪರ ಹೋರಾಟಗಾರರು ಎಂದು ವೈಟ್ ಹೌಸ್ ಹೇಳಿದೆ. ಇಬ್ಬರು ಮಕ್ಕಳ ತಾಯಿಯಾಗಿರುವ ಶೆಫಾಲಿ ಯುನೈಟೆಡ್ ಸ್ಟೇಟ್ಸ್ ಹೋಲೋಕಾಸ್ಟ್ ಮೆಮೋರಿಯಲ್ ಮ್ಯೂಸಿಯಂ ಕೌನ್ಸಿಲ್ನ ಮಾಜಿ ಅಧ್ಯಕ್ಷರು. ಆ ಸ್ಥಾನಕ್ಕೆ ಹಿಂದಿನ ಅಧ್ಯಕ್ಷ ಬರಾಕ್ ಒಬಾಮಾರಿಂದ ನೇಮಕಗೊಂಡಿದ್ದರು. ಸದ್ಯ ಪಾಶ್ಚಿಮಾತ್ಯ ಪ್ರಾದೇಶಿಕ ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಶೆಫಾಲಿಯವರು ಜಮ್ಮು-ಕಾಶ್ಮೀರದ ಕಾಶ್ಮೀರಿ ಪಂಡಿತರ ಕುಟುಂಬಕ್ಕೆ ಸೇರಿದವರು. ಹುಟ್ಟಿದ್ದು ಉತ್ತರಪ್ರದೇಶದ ಹರಿದ್ವಾರದಲ್ಲಿ. ಇವರಿಗೆ ಎರಡು ವರ್ಷವಾಗಿದ್ದಾಗ ಕುಟುಂಬ ಯುಎಸ್ನ ಪಿಟ್ಸ್ಬರ್ಗ್ಗೆ ಹೋಗಿ ನೆಲೆಸಿತು. ಅದಾದ ಬಳಿಕ 5ನೇ ವರ್ಷದಲ್ಲಿದ್ದಾಗ ಒಹಿಯೋದ ಸಿನ್ಸಿನಾಟಿಗೆ ತೆರಳಿ ನೆಲೆಸಿದರು. ಸೈಕಾಮೋರ್ ಹೈಸ್ಕೂಲ್ನಲ್ಲಿ ಮಾಧ್ಯಮಿಕ ಶಿಕ್ಷಣ ಕಲಿತು, ಒಹಿಯೋದ ಮೈಮಿ ಯೂನಿವರ್ಸಿಟಿಯಲ್ಲಿ ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಅದಾದ ಬಳಿಕ ನ್ಯೂಯಾರ್ಕ್ಗೆ ತೆರಳಿದ್ದಾರೆ. ನಂತರ ಡೆಮಾಕ್ರಟಿಕ್ ಪಕ್ಷದಲ್ಲಿ ರಾಜಕೀಯ ವೃತ್ತಿಯಲ್ಲಿ ತೊಡಗಿಕೊಂಡರು. ಇವರು ಹ್ಯೂಮನ್ ರೈಟ್ಸ್ ವಾಚ್ನ ಸ್ಯಾನ್ ಫ್ರಾನ್ಸಿಸ್ಕೋ ಸಮಿತಿಯ ಸದಸ್ಯರು, ವೇಕ್ ಫಾರೆಸ್ಟ್ ಯೂನಿವರ್ಸಿಟಿ ಲೀಡರ್ಶಿಪ್ ಮತ್ತು ಕ್ಯಾರೆಕ್ಟರ್ ಕೌನ್ಸಿಲ್ ಸದಸ್ಯರೂ ಆಗಿದ್ದರು. ಹೀಗೆ ಹಲವು ಪ್ರಮುಖ ಹುದ್ದೆಗಳಲ್ಲಿ ಕೆಲಸ ಮಾಡಿ ಅನುಭವ ಉಳ್ಳ ಇವರು, ಬರಾಕ್ ಒಬಾಮಾ, ಹಿಲರಿ ಕ್ಲಿಂಟನ್ ಅವರ ಜತೆಗೂ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: ನೀಟ್ ನಿಷೇಧಕ್ಕೆ ಆಗ್ರಹಿಸಿ ಟ್ವಿಟರ್ನಲ್ಲಿ ಕರವೇ ಅಭಿಯಾನ: 35 ಸಾವಿರ ಟ್ವೀಟ್
Published On - 10:38 am, Sat, 12 March 22