ಆಪ್​ ಟಾರ್ಗೆಟ್​: ಪಂಜಾಬ್​ ಆಯ್ತು ಈಗ ಇನ್ನೆರಡು ರಾಜ್ಯಗಳ ಮೇಲೆ ಕಣ್ಣಿಟ್ಟಿದ್ದೇವೆ ಎಂದ ಆಮ್​ ಆದ್ಮಿ ಪಾರ್ಟಿ ಮುಖಂಡ

ನಮ್ಮನ್ನು ಹೆಚ್ಚಿನ ಚುನಾವಣೋತ್ತರ ಸಮೀಕ್ಷೆಗಳು ಪರಿಗಣಿಸುವುದಿಲ್ಲ. ರಾಜಕೀಯ ದಿಗ್ಗಜರೂ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಆದರೆ ಈಗ ನೋಡಿ, ದಿಗ್ಗಜ ಪಕ್ಷವೆನಿಸಿದ್ದ ಕಾಂಗ್ರೆಸ್​​ನ್ನು ಸೋಲಿಸಿದ್ದೇವೆ. ಬಿಜೆಪಿಯೂ ನಮಗೆ ಸ್ಪರ್ಧೆ ಕೊಡಲು ಸಾಧ್ಯವಾಗಲಿಲ್ಲ ಎಂದು ಆಪ್​ ಮುಖಂಡ ಹೇಳಿದ್ದಾರೆ.

ಆಪ್​ ಟಾರ್ಗೆಟ್​: ಪಂಜಾಬ್​ ಆಯ್ತು ಈಗ ಇನ್ನೆರಡು ರಾಜ್ಯಗಳ ಮೇಲೆ ಕಣ್ಣಿಟ್ಟಿದ್ದೇವೆ ಎಂದ ಆಮ್​ ಆದ್ಮಿ ಪಾರ್ಟಿ ಮುಖಂಡ
ಅರವಿಂದ್ ಕೇಜ್ರಿವಾಲ್​
Follow us
TV9 Web
| Updated By: Lakshmi Hegde

Updated on: Mar 12, 2022 | 1:11 PM

ಆಮ್​ ಆದ್ಮಿ ಪಕ್ಷ (Aam Aadmy Party) ಲೋಕಸಭೆ ಚುನಾವಣೆಯಲ್ಲಿ ಎಷ್ಟರಮಟ್ಟಿಗೆ ಪ್ರಬಲ ಪಕ್ಷವೋ ಗೊತ್ತಿಲ್ಲ, ಆದರೆ ಆ ಪಕ್ಷವನ್ನು ನಿರ್ಲಕ್ಷ್ಯ ಮಾಡುವಂತೆ ಇಲ್ಲ. ಅದರಲ್ಲೂ ವಿಧಾನಸಭೆ ಚುನಾವಣೆಯಲ್ಲಿ ಈಗಾಗಲೇ ಕಾಂಗ್ರೆಸ್​​ಗೆ ಪರ್ಯಾಯವಾಗಿ ಹೊರಹೊಮ್ಮುವ ಎಲ್ಲ ಲಕ್ಷಣಗಳೂ ಸ್ಪಷ್ಟವಾಗಿ ಗೋಚರಿಸುತ್ತಿವೆ. ಅದರಲ್ಲೂ ಪಂಜಾಬ್​ನಲ್ಲಿ ಆಡಳಿತ ರೂಢ ಕಾಂಗ್ರೆಸ್​ ಪಕ್ಷವನ್ನು ಸೋಲಿಸಿ, ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಕೆಲವೇ ದಿನಗಳಲ್ಲಿ ಪಂಜಾಬ್​ನಲ್ಲಿ ಆಪ್ ಸರ್ಕಾರ ರಚನೆ ಮಾಡಲಿದೆ. ಭಗವಂತ್ ಮಾನ್​ ಅವರು ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. 

ಪಂಜಾಬ್​ ಗೆಲುವಿನ ಬೆನ್ನಲ್ಲೇ ಮಾಧ್ಯಮವೊಂದರೊಂದಿಗೆ ಮಾತನಾಡಿದ ಆಪ್​ ಮುಖಂಡ ಅಕ್ಷಯ್ ಮರಾಠೆ, ನಮ್ಮ ಪಕ್ಷ ಪಂಜಾಬ್​​ನಲ್ಲಿ ಅದ್ಭುತ ಗೆಲುವು ಸಾಧಿಸಿದೆ. ಈಗ ಇನ್ನೆರಡು ರಾಜ್ಯಗಳ ಮೇಲೆ ಕಣ್ಣಿಟ್ಟಿದ್ದು, ಅಲ್ಲಿಯೂ ಕೂಡ ಅಧಿಕಾರಕ್ಕೆ ಬರಲು ಈಗಿನಿಂದಲೇ ಪ್ರಯತ್ನಗಳು ಶುರುವಾಗಿದೆ ಎಂದು ಹೇಳಿದ್ದಾರೆ.  ಅಂದಹಾಗೇ, ಆಮ್​ ಆದ್ಮಿ ಪಕ್ಷ ಕಣ್ಣಿಟ್ಟಿರುವ ಎರಡು ರಾಜ್ಯಗಳು ಗುಜರಾತ್ ಮತ್ತು ಹಿಮಾಚಲ ಪ್ರದೇಶ. ಗುಜರಾತ್​ನಲ್ಲಿ 2022ರ ಡಿಸೆಂಬರ್​ನಲ್ಲಿ ಚುನಾವಣೆ ನಡೆಯಲಿದ್ದು, ಹಿಮಾಚಲ ಪ್ರದೇಶದಲ್ಲಿ ನವೆಂಬರ್ ಅಷ್ಟೊತ್ತಿಗೆ ವಿಧಾನಸಭೆ ಚುನಾವಣೆ ನಡೆಯಲಿದೆ.

ಎನ್​ಡಿಟಿವಿ ಮಾಧ್ಯಮದೊಂದಿಗೆ ಮಾತನಾಡಿದ ಆಪ್​ ಮುಖಂಡ ಅಕ್ಷಯ್ ಮರಾಠೆ, ಗುಜರಾತ್​ ಮತ್ತು ಹಿಮಾಚಲಯ ಪ್ರದೇಶಗಳ ಚುನಾವಣೆಯ ಮೇಲೆ ನಾವು ತುಂಬ ಗಮನನೆಟ್ಟಿದ್ದೇವೆ. ಅಲ್ಲಿಗೆ ನಮ್ಮ ಕಾರ್ಯಕರ್ತರನ್ನು ಕಳಿಸುವ ಸಿದ್ಧತೆಗಳು ನಡೆಯುತ್ತಿವೆ. ಅದೆಷ್ಟೋ ದಶಕಗಳಿಂದ ಭಾರತದ ಜನರು ಬಿಜೆಪಿ ಮತ್ತು ಕಾಂಗ್ರೆಸ್ ಎರಡೇ ಪಕ್ಷಗಳನ್ನು ಆಯ್ಕೆ ಮಾಡುತ್ತ ಬಂದರು. ಆದರೆ ಇವೆರಡೂ ಪಕ್ಷಗಳು ಸಾಮಾನ್ಯ ಜನರಿಗಾಗಿ ಏನೇನೂ ಕೆಲಸ ಮಾಡಲಿಲ್ಲ. ಇದೇ ಮೊದಲ ಬಾರಿಗೆ ಜನರು ಪರ್ಯಾಯ ಪಕ್ಷದತ್ತ ಒಲವು ತೋರುತ್ತಿದ್ದಾರೆ. ಅದಕ್ಕೆ ಸಾಕ್ಷಿ ಪಂಜಾಬ್​​ನಲ್ಲಿ ಆಪ್​ ಗೆಲುವು ಎಂದು ವಿಶ್ಲೇಷಣೆ ಮಾಡಿದರು.

ನಮ್ಮನ್ನು ಹೆಚ್ಚಿನ ಚುನಾವಣೋತ್ತರ ಸಮೀಕ್ಷೆಗಳು ಪರಿಗಣಿಸುವುದಿಲ್ಲ. ರಾಜಕೀಯ ದಿಗ್ಗಜರೂ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ. ಆದರೆ ಈಗ ನೋಡಿ, ದಿಗ್ಗಜ ಪಕ್ಷವೆನಿಸಿದ್ದ ಕಾಂಗ್ರೆಸ್​​ನ್ನು ಸೋಲಿಸಿದ್ದೇವೆ. ಬಿಜೆಪಿಯೂ ನಮಗೆ ಸ್ಪರ್ಧೆ ಕೊಡಲು ಸಾಧ್ಯವಾಗಲಿಲ್ಲ. ಕಳೆದ 10 ವರ್ಷಗಳಿಂದ ದೆಹಲಿಯಲ್ಲಿ ಆಡಳಿತ ನಡೆಸಿದ ಆಪ್​ ಸರ್ಕಾರದ ಕೆಲಸವನ್ನು ಜನರು ನೋಡಿದ್ದಾರೆ. ನಾವು ಮಾನವೀಯತೆಯ ಆಧಾರದ ಮೇಲೆ ಜನ ಸೇವೆ ಮಾಡುತ್ತಿದ್ದೇವೆ. ಹಾಗಾಗಿ ಈಗ ಪಂಜಾಬ್​​ನಲ್ಲಿಯೂ ಅಧಿಕಾರ ಸಿಕ್ಕಿತು ಎಂದು ಹೇಳಿಕೊಂಡಿದ್ದಾರೆ.

ಇನ್ನೊಂದೆಡೆ ಹಿಮಾಚಲ ಪ್ರದೇಶದ ಆಮ್​ ಆದ್ಮಿ ಪಕ್ಷದ ಅಧ್ಯಕ್ಷ ಅನೂಪ್ ಕೇಸರಿ ಕೂಡ ಇದೇ ಮಾತುಗಳನ್ನಾಡಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಕೂಡ ಆಪ್​ ಅಧಿಕಾರಕ್ಕೆ ಬರುತ್ತದೆ. ಪಂಜಾಬ್​​ನಲ್ಲಿ ಇತಿಹಾಸ ಸೃಷ್ಟಿಸಿದಂತೆ, ಹಿಮಾಚಲ ಪ್ರದೇಶದಲ್ಲೂ ಇತಿಹಾಸ ಸೃಷ್ಟಿ ಮಾಡುತ್ತದೆ. ಜನರು ಬಿಜೆಪಿ ಮತ್ತು ಕಾಂಗ್ರೆಸ್​ ಬಗ್ಗೆ ತುಂಬ ಬೇಸರಗೊಂಡಿದ್ದಾರೆ ಎಂದು ಅನೂಪ್​ ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ. ಆದರೆ ಬಿಜೆಪಿ ಇದಕ್ಕೆ ತಿರುಗೇಟು ನೀಡಿದೆ. ಹಿಮಾಚಲ ಪ್ರದೇಶದಲ್ಲಿ ಬಿಜೆಪಿಯೇ ಮತ್ತೆ ಅಧಿಕಾರ ಹಿಡಿಯಲಿದೆ ಎಂಬ ಭರವಸೆಯನ್ನು ರಾಜ್ಯ ಬಿಜೆಪಿ ಮುಖ್ಯ ವಕ್ತಾರ ರಣಧೀರ್ ಶರ್ಮಾ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಸೋಲಿಗೆ ಮಾಧ್ಯಮಗಳು ಕಾರಣವೆಂದ ಮಾಯಾವತಿ; ಟಿವಿ ಡಿಬೇಟ್​ಗಳನ್ನು ಬಹಿಷ್ಕರಿಸಿದ ಬಹುಜನ ಸಮಾಜ ಪಕ್ಷ

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು