ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ಗೆ ಕರೆ ಮಾಡಿ ಖಡಕ್ ಎಚ್ಚರಿಕೆ ನೀಡಿದ ಯುಎಸ್ ಅಧ್ಯಕ್ಷ ಜೋ ಬೈಡನ್
ಉಕ್ರೇನ್ನ್ನು ನ್ಯಾಟೋ ಪಡೆಗೆ ಸೇರಿಸಬಾರದು ಮತ್ತು ಪೂರ್ವ ಯುರೋಪ್ನಿಂದ ಈಗ ನ್ಯಾಟೋವನ್ನು ಹಿಂಪಡೆಯಬೇಕು ಎಂದು ಮನವಿ ಮಾಡಿದ್ದೇವೆ. ಆದರೆ ಇದಕ್ಕೆ ಅಮೆರಿಕವಾಗಲೀ, ನ್ಯಾಟೋ ಆಗಲಿ ಸರಿಯಾಗಿ ಸ್ಪಂದಿಸಿಲ್ಲ ಎಂದು ರಷ್ಯಾದ ಅಧ್ಯಕ್ಷ ಪುಟಿನ್ ಆರೋಪಿಸಿದ್ದಾರೆ.
ವಿಶ್ವದ ಕಣ್ಣು ರಷ್ಯಾ-ಉಕ್ರೇನ್ನತ್ತ (Russia-Ukraine) ನೆಟ್ಟಿದೆ. ರಷ್ಯಾ ಗಡಿಯಾದ್ಯಂತ ಸುಮಾರು ಲಕ್ಷ ಸೈನಿಕರನ್ನು ನಿಯೋಜಿಸಿದೆ. ಯಾವುದೇ ಕ್ಷಣದಲ್ಲಾದರೂ ಉಕ್ರೇನ್ ಮೇಲೆ ರಷ್ಯಾ ದಂಡೆತ್ತಿ ಹೋಗಬಹುದು ಎಂದು ಅಮೆರಿಕ ಈಗಾಗಲೇ ಹೇಳಿದ್ದು, ಉಕ್ರೇನ್ನಲ್ಲಿರುವ ಯುಎಸ್ ನಾಗರಿಕರು ಆದಷ್ಟು ಶೀಘ್ರವೇ ದೇಶಕ್ಕೆ ಮರಳಿ ಎಂದು ಶ್ವೇತಭವನ ಸೂಚನೆ ನೀಡಿದೆ. ಇಷ್ಟೆಲ್ಲದರ ಮಧ್ಯೆ ಶನಿವಾರ ಯುಎಸ್ ಅಧ್ಯಕ್ಷ ಜೋ ಬೈಡನ್ (Joe Biden) ಅವರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ಗೆ ಖಡಕ್ ಎಚ್ಚರಿಕೆಯೊಂದನ್ನು ನೀಡಿದ್ದಾರೆ. ಉಕ್ರೇನ್ ದೇಶವನ್ನು ಅತಿಕ್ರಮಣ ಮಾಡುವುದನ್ನು ರಷ್ಯಾ ಮುಂದುವರಿಸಿದರೆ ಯುಎಸ್, ಯುಎಸ್ ಮತ್ತು ನಮ್ಮ ಮಿತ್ರ ರಾಷ್ಟ್ರಗಳು ಕೂಡ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಬೇಕಾಗುತ್ತದೆ. ಅದರಲ್ಲೂ ಯುಎಸ್, ರಷ್ಯಾದ ಮೇಲೆ ಅತ್ಯಂತ ದುಬಾರಿ ವೆಚ್ಚದ ನಿರ್ಬಂಧಗಳನ್ನು ಹೇರಲಿದೆ ಎಂದು ಹೇಳಿದ್ದಾರೆ.
ಜೋ ಬೈಡನ್ ಅವರು ಶನಿವಾರ ಪುಟಿನ್ಗೆ ಫೋನ್ ಕಾಲ್ ಮಾಡಿರುವ ಬಗ್ಗೆ ಶ್ವೇತ ಭವನ ಹೇಳಿಕೆ ಬಿಡುಗಡೆ ಮಾಡಿದೆ. ಅದರಲ್ಲಿ ಅಧ್ಯಕ್ಷ ಬೈಡನ್, ರಷ್ಯಾ ಅಧ್ಯಕ್ಷನಿಗೆ ಕರೆ ಮಾಡಿ ಮಾತನಾಡಿದ್ದನ್ನು ವಿವರಿಸಲಾಗಿದೆ. ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಿದರೆ, ಅನೇಕ ಹಾನಿಯಾಗಲಿದೆ. ಅದೆಷ್ಟೋ ಜನರ ಜೀವ ಬಲಿಯಾಗುತ್ತದೆ. ಅಷ್ಟೇ ಅಲ್ಲ, ಈ ದಾಳಿ ರಷ್ಯಾದ ಪ್ರತಿಷ್ಠೆಗೆ ಕುಂದಾಗಲಿದೆ. ಜಾಗತಿಕವಾಗಿ ಅದರ ಸ್ಥಾನಮಾನ ಕಡಿಮೆಯಾಗುತ್ತದೆ. ರಷ್ಯಾ ಉಕ್ರೇನ್ ಮೇಲಿನ ಆಕ್ರಮಣ ಹೀಗೆ ಮುಂದುವರಿಸಿದರೆ, ಯುಎಸ್ ಕೂಡ ಎಲ್ಲದಕ್ಕೂ ಸಿದ್ಧವಾಗುತ್ತದೆ. ಯುಎಸ್ ಮತ್ತು ಮಿತ್ರರಾಷ್ಟ್ರಗಳು ರಷ್ಯಾ ಮೇಲೆ ತೀವ್ರ ಹಾಗೂ ಹೆಚ್ಚಿನ ಪ್ರಮಾಣದ ವೆಚ್ಚಗಳನ್ನು ಹೇರಬೇಕಾಗುತ್ತದೆ. ಇದರಿಂದ ಮುಂದಿನ ದಿನಗಳಲ್ಲಿ ವ್ಯಾಪಾರ-ವಹಿವಾಟಿಗೆ ತೊಂದರೆಯಾಗುವ ಜತೆ ರಷ್ಯಾ ಆರ್ಥಿಕತೆಗೆ ಹೊಡೆತ ಬೀಳುತ್ತದೆ ಎಂದು ಬೈಡನ್ ಎಚ್ಚರಿಕೆ ನೀಡಿದ್ದಾರೆ. ಅಂದಹಾಗೇ, ಜೋ ಬೈಡನ್ ಸುಮಾರು ಒಂದು ತಾಸುಗಳ ಕಾಲ ಪುಟಿನ್ ಜತೆ ಮಾತನಾಡಿದ್ದಾರೆ ಎನ್ನಲಾಗಿದೆ.
President Joe Biden spoke with Russian Pres Vladimir Putin over military buildup on Ukraine borders. Biden reiterated that further Russian invasion of Ukraine would produce widespread human suffering & diminish Russia’s standing. US together with allies will respond decisively. pic.twitter.com/rgm8F4Gct7
— ANI (@ANI) February 12, 2022
ಉಕ್ರೇನ್ನ್ನು ನ್ಯಾಟೋ ಪಡೆಗೆ ಸೇರಿಸಬಾರದು ಮತ್ತು ಪೂರ್ವ ಯುರೋಪ್ನಿಂದ ಈಗ ನ್ಯಾಟೋವನ್ನು ಹಿಂಪಡೆಯಬೇಕು ಎಂದು ಮನವಿ ಮಾಡಿದ್ದೇವೆ. ಆದರೆ ಇದಕ್ಕೆ ಅಮೆರಿಕವಾಗಲೀ, ನ್ಯಾಟೋ ಆಗಲಿ ಸರಿಯಾಗಿ ಸ್ಪಂದಿಸಿಲ್ಲ ಎಂದು ರಷ್ಯಾದ ಅಧ್ಯಕ್ಷ ಪುಟಿನ್ ಆರೋಪಿಸಿದ್ದಾರೆ. ನಮಗೆ ಉಕ್ರೇನ್ ಮೇಲೆ ಯುದ್ಧ ಸಾರುವ ಇರಾದೆ ಇಲ್ಲ ಎಂದೂ ಹೇಳಿದ್ದಾರೆ. ಹಾಗಿದ್ದಾಗ್ಯೂ ಉಕ್ರೇನ್ನ್ನು ರಷ್ಯಾ ಸೈನಿಕರು ಮೂರು ಕಡೆಯಿಂದ ಸುತ್ತುವರಿದಿದ್ದಾರೆ. ಈ ಮಧ್ಯೆ ಆಸ್ಟ್ರೇಲಿಯಾ, ಉಕ್ರೇನ್ ರಾಜಧಾನಿ ಕೈವ್ನಲ್ಲಿರುವ ತನ್ನ ರಾಯಭಾರಿ ಕಚೇರಿಯನ್ನು ಸ್ಥಳಾಂತರ ಮಾಡುವುದಾಗಿ ಹೇಳಿಕೆ ನೀಡಿದೆ.