
ಯುಎಸ್ನ ನೌಕಾಪಡೆಗೆ ಸೇರಿದ ಮಿಲಿಟರಿ ಹೆಲಿಕಾಪ್ಟರ್ ಸಮುದ್ರದಲ್ಲಿ ಪತನವಾಗಿದ್ದು, ಅದರಲ್ಲಿದ್ದವರ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಯುಎಸ್ಎಸ್ಎಸ್ನ ಅಬ್ರಾಹಂ ಲಿಂಕನ್ನಿಂದ ಹೊರಟಿದ್ದ ಈ ಸೇನಾ ಹೆಲಿಕಾಪ್ಟರ್ ಸ್ಯಾನ್ ಡಿಯಾಗೋ ಕರಾವಳಿ ತೀರದ ಬಳಿ ಸಮುದ್ರಕ್ಕೆ ಅಪ್ಪಳಿಸಿದೆ ಎಂದು ಯುಎಸ್ ನೇವಿಯ ಫೆಸಿಪಿಕ್ ಫ್ಲೀಟ್ ತಿಳಿಸಿದೆ.
ಟ್ವೀಟ್ ಮಾಡಿರುವ ಯುಎಸ್ ನೇವಿ ಫೆಸಿಪಿಕ್ ಫ್ಲೀಟ್, ಮಿಲಿಟರಿ ಹೆಲಿಕಾಪ್ಟರ್ ಎಂಎಚ್-60ಎಸ್ ವಾಡಿಕೆಯ ಹಾರಾಟ ನಡೆಸುತ್ತಿತ್ತು. ಹಾಗೇ, ಯುಎಸ್ಎಸ್ ಅಬ್ರಾಹಂ ಲಿಂಕ್ನಿಂದ ಟೇಕ್ ಆಫ್ ಆಗಿ ಹೊರಟಿತ್ತು. ಆಗಸ್ಟ್ 31ರ ಸಂಜೆ 4.30ರ ಹೊತ್ತಿಗೆ, ಸ್ಯಾನ್ ಡಿಯಾಗೋ ಕರಾವಳಿ ತೀರದಿಂದ ಸುಮಾರು 60 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಸಮುದ್ರದಲ್ಲಿ ಪತನಗೊಂಡಿದೆ ಎಂದು ತಿಳಿಸಿದೆ. ಹೆಲಿಕಾಪ್ಟರ್ನಲ್ಲಿದ್ದವರ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಇದಕ್ಕಾಗಿ ಹಲವು ಕರಾವಳಿ ರಕ್ಷಣಾ ಪಡೆಗಳು ಇಲ್ಲಿಗೆ ಧಾವಿಸಿವೆ ಎಂದೂ ಮಾಹಿತಿ ನೀಡಿದೆ.
BREAKING: An MH-60S helicopter embarked aboard USS Abraham Lincoln (CVN 72) crashed into the sea while conducting routine flight operations approximately 60 nautical miles off the coast of San Diego at 4:30 p.m. PST, Aug. 31. (1/2)
— U.S. Pacific Fleet (@USPacificFleet) September 1, 2021
ಮಂಡ್ಯದಲ್ಲಿ ಸ್ವಂತ ಮನೆ ನಿರ್ಮಾಣಕ್ಕೆ ಸುಮಲತಾ ಗುದ್ದಲಿ ಪೂಜೆ; ಪುತ್ರನ ರಾಜಕೀಯ ಅಭಿಷೇಕಕ್ಕೆ ಅಡಿಪಾಯ ಹಾಕಿದರಾ?
Published On - 9:49 am, Wed, 1 September 21