Pakistan US Defence Deal: ಪಾಕಿಸ್ತಾನಕ್ಕೆ ಅಪಾಯಕಾರಿ ಕ್ಷಿಪಣಿಗಳನ್ನು ನೀಡಲಿದೆ ಅಮೆರಿಕ, ರಹಸ್ಯವಾಗಿ ನಡೆದಿದೆ ದೊಡ್ಡ ಒಪ್ಪಂದ

ಆಪರೇಷನ್ ಸಿಂಧೂರ್ ಬಳಿಕ ಅಮೆರಿಕ(America) ಹಾಗೂ ಪಾಕಿಸ್ತಾನ(Pakistan) ತೀರಾ ಹತ್ತಿರವಾಗಿವೆ. ಎರಡೂ ದೇಶಗಳ ನಡುವಿನ ಕ್ಷಿಪಣಿ ರಕ್ಷಣಾ ಒಪ್ಪಂದದಿಂದ ಇದಕ್ಕೆ ಹೊಸ ಪುರಾವೆ ಸಿಕ್ಕಂತಾಗಿದೆ. ಪಾಕ್ ಹಾಗೂ ಅಮೆರಿಕದ ನಡುವೆ ರಹಸ್ಯ ಒಪ್ಪಂದ ನಡೆದಿದೆ. ಪಾಕಿಸ್ತಾನವು ಅಮೆರಿಕದಿಂದ AIM-120 ಅಡ್ವಾನ್ಸ್ಡ್ ಮೀಡಿಯಂ-ರೇಂಜ್ ಏರ್-ಟು-ಏರ್ ಕ್ಷಿಪಣಿಗಳನ್ನು (AMRAAM) ಪಡೆಯುವ ಸಾಧ್ಯತೆಯಿದೆ. ಅಮೆರಿಕ ಯುದ್ಧ ಇಲಾಖೆಯು ಇತ್ತೀಚಿಗೆ ಮಾಡಿಕೊಂಡಿರುವ ಕೆಲವು ಒಪ್ಪಂದದಲ್ಲಿ ಪಾಕಿಸ್ತಾನವೂ ಸೇರಿದೆ.

Pakistan US Defence Deal: ಪಾಕಿಸ್ತಾನಕ್ಕೆ ಅಪಾಯಕಾರಿ ಕ್ಷಿಪಣಿಗಳನ್ನು ನೀಡಲಿದೆ ಅಮೆರಿಕ, ರಹಸ್ಯವಾಗಿ ನಡೆದಿದೆ ದೊಡ್ಡ ಒಪ್ಪಂದ
ಡೊನಾಲ್ಡ್​ ಟ್ರಂಪ್

Updated on: Oct 08, 2025 | 12:39 PM

ವಾಷಿಂಗ್ಟನ್, ಅಕ್ಟೋಬರ್ 08: ಆಪರೇಷನ್ ಸಿಂಧೂರ್ ಬಳಿಕ ಅಮೆರಿಕ(America) ಹಾಗೂ ಪಾಕಿಸ್ತಾನ(Pakistan) ತೀರಾ ಹತ್ತಿರವಾಗಿವೆ. ಎರಡೂ ದೇಶಗಳ ನಡುವಿನ ಕ್ಷಿಪಣಿ ರಕ್ಷಣಾ ಒಪ್ಪಂದದಿಂದ ಇದಕ್ಕೆ ಹೊಸ ಪುರಾವೆ ಸಿಕ್ಕಂತಾಗಿದೆ. ಪಾಕ್ ಹಾಗೂ ಅಮೆರಿಕದ ನಡುವೆ ರಹಸ್ಯ ಒಪ್ಪಂದ ನಡೆದಿದೆ. ಪಾಕಿಸ್ತಾನವು ಅಮೆರಿಕದಿಂದ AIM-120 ಅಡ್ವಾನ್ಸ್ಡ್ ಮೀಡಿಯಂ-ರೇಂಜ್ ಏರ್-ಟು-ಏರ್ ಕ್ಷಿಪಣಿಗಳನ್ನು (AMRAAM) ಪಡೆಯುವ ಸಾಧ್ಯತೆಯಿದೆ. ಅಮೆರಿಕ ಯುದ್ಧ ಇಲಾಖೆಯು ಇತ್ತೀಚಿಗೆ ಮಾಡಿಕೊಂಡಿರುವ ಕೆಲವು ಒಪ್ಪಂದದಲ್ಲಿ ಪಾಕಿಸ್ತಾನವೂ ಸೇರಿದೆ.

ಈ ಒಪ್ಪಂದವು ಬ್ರಿಟನ್, ಪೋಲೆಂಡ್, ಪಾಕಿಸ್ತಾನ, ಜರ್ಮನಿ, ಫಿನ್ಲ್ಯಾಂಡ್, ಆಸ್ಟ್ರೇಲಿಯಾ, ರೊಮೇನಿಯಾ, ಕತಾರ್, ಓಮನ್, ಕೊರಿಯಾ, ಗ್ರೀಸ್, ಸ್ವಿಟ್ಜರ್ಲೆಂಡ್, ಪೋರ್ಚುಗಲ್, ಸಿಂಗಾಪುರ, ನೆದರ್ಲ್ಯಾಂಡ್ಸ್, ಜೆಕ್ ಗಣರಾಜ್ಯ, ಜಪಾನ್, ಸ್ಲೋವಾಕಿಯಾ, ಡೆನ್ಮಾರ್ಕ್, ಕೆನಡಾ, ಬೆಲ್ಜಿಯಂ, ಬಹ್ರೇನ್, ಸೌದಿ ಅರೇಬಿಯಾ, ಇಟಲಿ, ನಾರ್ವೆ, ಸ್ಪೇನ್, ಕುವೈತ್, ಫಿನ್ಲ್ಯಾಂಡ್, ಸ್ವೀಡನ್, ತೈವಾನ್, ಲಿಥುವೇನಿಯಾ, ಇಸ್ರೇಲ್, ಬಲ್ಗೇರಿಯಾ, ಹಂಗೇರಿ ಮತ್ತು ಟರ್ಕಿಗಳಿಗೆ ವಿದೇಶಿ ಮಿಲಿಟರಿ ಶಸ್ತ್ರಾಸ್ತ್ರಗಳ ಮಾರಾಟ ಕೂಡ ಒಳಗೊಂಡಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪಾಕಿಸ್ತಾನಿ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಆಸಿಮ್ ಮುನೀರ್ ನಡುವಿನ ಸಭೆಯ ಕೆಲವೇ ದಿನಗಳ ನಂತರ ಈ ಒಪ್ಪಂದವಾಗಿದೆ. ಭೇಟಿಯ ಸಮಯದಲ್ಲಿ, ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಕಡಿಮೆ ಮಾಡುವಲ್ಲಿ ತಾವು ಪಾತ್ರ ವಹಿಸಿರುವುದಾಗಿ ಟ್ರಂಪ್ ಹೇಳಿದ್ದಾರೆ.

ಮತ್ತಷ್ಟು ಓದಿ:ಭಾರತದ ರಕ್ಷಣಾ ವಲಯಕ್ಕೆ ಮತ್ತಷ್ಟು ಬಲ, ರೈಲಿನಿಂದ ಉಡಾಯಿಸಬಹುದಾದ ಅಗ್ನಿ ಪ್ರೈಂ ಕ್ಷಿಪಣಿ ಪರೀಕ್ಷೆ ಯಶಸ್ವಿ

ಈ ಒಪ್ಪಂದವು ಪಾಕಿಸ್ತಾನ ಮತ್ತು ಅಮೆರಿಕ ನಡುವಿನ ಹೊಸ ಕಾರ್ಯತಂತ್ರದ ನಿಕಟತೆಯನ್ನು ಸೂಚಿಸುತ್ತದೆ ಎಂದು ರಕ್ಷಣಾ ತಜ್ಞರು ನಂಬುತ್ತಾರೆ. ಈ ಒಪ್ಪಂದದ ಮೂಲಕ, ಅಮೆರಿಕವು ಚೀನಾ ಮತ್ತು ರಷ್ಯಾದ ಪ್ರಭಾವವನ್ನು ಸಮತೋಲನಗೊಳಿಸಲು ಪ್ರಯತ್ನಿಸುತ್ತಿರಬಹುದು.

ಈ ಕ್ಷಿಪಣಿ ಒಪ್ಪಂದದ ನಂತರ, ಪಾಕಿಸ್ತಾನ ತನ್ನ F-16 ಫೈಟರ್ ಜೆಟ್ ಫ್ಲೀಟ್ ಅನ್ನು ನವೀಕರಿಸಬಹುದು ಎಂದು ಊಹಿಸಲಾಗಿದೆ. ಎಕ್ಸ್‌ಪ್ರೆಸ್ ಟ್ರಿಬ್ಯೂನ್‌ನಲ್ಲಿನ ವರದಿಯ ಪ್ರಕಾರ, AIM-120 AMRAAM ಕ್ಷಿಪಣಿಗಳನ್ನು F-16 ವಿಮಾನಗಳೊಂದಿಗೆ ಬಳಸಬಹುದು. ಫೆಬ್ರವರಿ 2019 ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ವೈಮಾನಿಕ ಘರ್ಷಣೆಯ ಸಮಯದಲ್ಲಿ ಪಾಕಿಸ್ತಾನವು ಭಾರತೀಯ ವಿಮಾನಗಳ ವಿರುದ್ಧ ಇದೇ ಕ್ಷಿಪಣಿಯನ್ನು ಬಳಸಿತು. ಈ ಒಪ್ಪಂದವನ್ನು ಈಗ F-16 ವಿಮಾನಗಳ ಸಾಮರ್ಥ್ಯಗಳನ್ನು ಹೆಚ್ಚಿಸುವತ್ತ ಮತ್ತೊಂದು ಪ್ರಮುಖ ಹೆಜ್ಜೆ ಎಂದು ಪರಿಗಣಿಸಲಾಗಿದೆ.

ಪಾಕಿಸ್ತಾನವು AIM-120 ಕ್ಷಿಪಣಿಗಳನ್ನು ಸ್ವಾಧೀನಪಡಿಸಿಕೊಳ್ಳುವುದು ಮತ್ತು F-16 ನವೀಕರಣಗಳು ಅದರ ವಾಯು ಶಕ್ತಿಯನ್ನು ಸುಧಾರಿಸುತ್ತದೆ. ಭಾರತವು ಈಗಾಗಲೇ ರಫೇಲ್ ಮತ್ತು ಸುಖೋಯ್-30MKI ನಂತಹ ಸುಧಾರಿತ ಯುದ್ಧವಿಮಾನಗಳನ್ನು ಹೊಂದಿದ್ದು, ಅವು ಮೆಟಿಯೋರ್ ಕ್ಷಿಪಣಿಯನ್ನು ಬಳಸುತ್ತವೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ