Advance Booking: ಕೊರೊನಾ ಲಸಿಕೆಗೆ ಅಮೆರಿಕ ಕೊಟ್ಟ ಕೋಟಿಗಳೆಷ್ಟು ಗೊತ್ತಾ?
ಕೊರೊನಾ ಹೆಮ್ಮಾರಿಯು ಹೊಡೆತಕ್ಕೆ ಸಿಲುಕಿ ಅತಿ ಹೆಚ್ಚು ಹಾನಿಗೊಳಗಾಗಿದ್ದು ಅಮೆರಿಕ. ಇಂಥ ಬಲಾಡ್ಯ ರಾಷ್ಟ್ರ ಈಗ ಕೊರೊನಾ ವಿರುದ್ಧ ತನ್ನ ಹೋರಾಟವನ್ನ ತೀವ್ರಗೊಳಿಸಿದೆ. ಫೈಜರ್ ಇಂಕ್ ಮತ್ತು ಜರ್ಮನ್ ಬಯೋಎನ್‌ಟೆಕ್ ಎಸ್‌ಈ ತಯಾರಿಸುತ್ತಿರುವ ಕೊರೊನಾ ಲಸಿಕೆಗೆ 1.95 ಬಿಲಿಯನ್ ಅಮೆರಿಕನ್ ಡಾಲರ್ ನೀಡಿ ಅಡ್ವಾನ್ಸ್ ಬುಕಿಂಗ್ ಮಾಡಿದೆ. ಹೌದು ಫೈಜರ್ ಇಂಕ್ ಮತ್ತು ಜರ್ಮನಿಯ ಬಯೋಎನ್‌ಟೆಕ್ ಎಸ್‌ಈ ಕಂಪನಿಯ ಜತೆ ಒಪ್ಪಂದ ಮಾಡಿಕೊಂಡಿರುವ ಅಮೆರಿಕ ಈ ಕಂಪನಿಗಳಿಂದ 1.95 ಬಿಲಿಯನ್ ಡಾಲರ್ ( 190 ಕೋಟಿ ಡಾಲರ್ […]
ಕೊರೊನಾ ಹೆಮ್ಮಾರಿಯು ಹೊಡೆತಕ್ಕೆ ಸಿಲುಕಿ ಅತಿ ಹೆಚ್ಚು ಹಾನಿಗೊಳಗಾಗಿದ್ದು ಅಮೆರಿಕ. ಇಂಥ ಬಲಾಡ್ಯ ರಾಷ್ಟ್ರ ಈಗ ಕೊರೊನಾ ವಿರುದ್ಧ ತನ್ನ ಹೋರಾಟವನ್ನ ತೀವ್ರಗೊಳಿಸಿದೆ. ಫೈಜರ್ ಇಂಕ್ ಮತ್ತು ಜರ್ಮನ್ ಬಯೋಎನ್‌ಟೆಕ್ ಎಸ್‌ಈ ತಯಾರಿಸುತ್ತಿರುವ ಕೊರೊನಾ ಲಸಿಕೆಗೆ 1.95 ಬಿಲಿಯನ್ ಅಮೆರಿಕನ್ ಡಾಲರ್ ನೀಡಿ ಅಡ್ವಾನ್ಸ್ ಬುಕಿಂಗ್ ಮಾಡಿದೆ.
ಹೌದು ಫೈಜರ್ ಇಂಕ್ ಮತ್ತು ಜರ್ಮನಿಯ ಬಯೋಎನ್‌ಟೆಕ್ ಎಸ್‌ಈ ಕಂಪನಿಯ ಜತೆ ಒಪ್ಪಂದ ಮಾಡಿಕೊಂಡಿರುವ ಅಮೆರಿಕ ಈ ಕಂಪನಿಗಳಿಂದ 1.95 ಬಿಲಿಯನ್ ಡಾಲರ್ ( 190 ಕೋಟಿ ಡಾಲರ್ ಅದ್ರೆ 12 ಸಾವಿರ ಕೋಟಿ ರೂ) ನೀಡಿ ಲಸಿಕೆ ಖರೀದಿಯ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಒಪ್ಪಂದದ ಪ್ರಕಾರ ಫೈಜರ್ ಇಂಕ್ ಕಂಪನಿ ಅಮೆರಿಕಾಗೆ ಅಕ್ಟೋಬರ್ ಕೊನೆಯೊಳಗೆ 100 ಮಿಲಿಯನ್ ಡೋಸ್ ಲಸಿಕೆಗಳನ್ನ ಪೂರೈಸಬೇಕು. ಜತೆಗೆ ಈ ಒಪ್ಪಂದದಿಂದಾಗಿ ಅಮೆರಿಕ ಹೆಚ್ಚುವರಿಯಾಗಿ 500 ಮಿಲಿಯನ್ ಲಸಿಕೆಗಳನ್ನ ಪಡೆಯಲಿದೆ ಎಂದು ಅಮೆರಿಕದ ಆರೋಗ್ಯ ಮತ್ತು ಮಾನವ ಸಂಪನ್ಮೂಲ ಸೇವೆ ಹಾಗೂ ರಕ್ಷಣಾ ಸಚಿವಾಲಯಗಳು ತಿಳಿಸಿವೆ.
ಅಮೆರಿಕ ಕೊರೊನಾ ವಿರುದ್ಧ ಸಮರ ಸಾರಿದ್ದು ಇದಕ್ಕೆ ಆಪರೇಶನ್ ವಾರ್ಪ್ ಸ್ಪೀಡ್ ಹೆಸರಿನಲ್ಲಿ ಲಸಿಕೆ ತಯಾರಿಕೆಯನ್ನ ತ್ವರೀತಗೊಳಿಸಿದೆ. ಈಗಾಗಲೇ ಜಗತ್ತಿನಾದ್ಯಂತ 150ಕ್ಕೂ ಹೆಚ್ಚು ಕೊರೊನಾ ಲಸಿಕೆಗಳು ಅಭಿವೃದ್ಧಿ ಹೊಂದುತ್ತಿವೆ.
ಇವುಗಳಲ್ಲಿ 24ಕ್ಕೂ ಹೆಚ್ಚು ಲಸಿಕೆಗಳ ಮಾನವ ಪ್ರಯೋಗ ನಡೆಯುತ್ತಿದೆ. ಈಗಾಗಲೇ ಕೆಲವೊಂದು ಸರ್ಕಾರಗಳು ಇಂಥ ಕಂಪನಿಗಳ ಜತೆ ಲಸಿಕೆಗಳಿಗಾಗಿ ಒಪ್ಪಂದ ಕೂಡಾ ಮಾಡಿಕೊಂಡಿವೆ.
ಪೈಜರ್ ಇಂಕ್ ಮತ್ತು ಜರ್ಮನ್ ಬಯೋಎನ್‌ಟೆಕ್ ಕಂಪನಿಗಳು ಈಗಾಗಲೇ 2020ರ ಅಂತ್ಯದೊಳಗೆ 100 ಮಿಲಿಯನ್ ಡೋಸ್‌ಗಳನ್ನು ತಯಾರಿಸುವ ಗುರಿ ಹೊಂದಿವೆ. ಹಾಗೇನೆ 2021ರೊಳಗೆ 1.3 ಬಿಲಿಯನ್ ಡೋಸ್‌ಗಳನ್ನು ತಯಾರಿಸುವ ಯೋಜನೆ ಹೊಂದಿವೆ.
Published On - 2:59 pm, Thu, 23 July 20