ಸಿರಿಯಾದಲ್ಲಿ ಇರಾನ್​ನ ಬೆಂಬಲಿತ ಶಸ್ತ್ರಾಸ್ತ್ರ ಸಂಗ್ರಹಾಗಾರದ ಮೇಲೆ ಅಮೆರಿಕ ದಾಳಿ, 9 ಮಂದಿ ಸಾವು

|

Updated on: Nov 09, 2023 | 9:25 AM

ಸಿರಿಯಾದಲ್ಲಿ ಇರಾನ್ ಬೆಂಬಲಿತ ಭಯೋತ್ಪಾದಕ ಗುಂಪುಗಳೊಂದಿಗೆ ಸಂಬಂಧ ಹೊಂದಿರುವ ಶಸ್ತ್ರಾಸ್ತ್ರ ಸಂಗ್ರಹಣಾಗಾರದ ಮೇಲೆ ಅಮೆರಿಕ ದಾಳಿ ನಡೆಸಿದ್ದು, 9 ಮಂದಿ ಸಾವನ್ನಪ್ಪಿದ್ದಾರೆ. ಎರಡು ವಾರಗಳಲ್ಲಿ ಎರಡನೇ ಬಾರಿಗೆ, ಸಿರಿಯಾದಲ್ಲಿ ಒಂದು ಸ್ಥಳವನ್ನು ಗುರಿಯಾಗಿಸಲಾಗಿದೆ. ಕಳೆದ ತಿಂಗಳು, ಈ ಗುಂಪುಗಳು ಸಿರಿಯಾದಲ್ಲಿ ಅಮೆರಿಕದ ಸೈನಿಕರು ಮತ್ತು ಸೇನಾ ಕೇಂದ್ರಗಳ ಮೇಲೆ ದಾಳಿ ನಡೆಸಿದ್ದವು.

ಸಿರಿಯಾದಲ್ಲಿ ಇರಾನ್​ನ ಬೆಂಬಲಿತ ಶಸ್ತ್ರಾಸ್ತ್ರ ಸಂಗ್ರಹಾಗಾರದ ಮೇಲೆ ಅಮೆರಿಕ ದಾಳಿ, 9 ಮಂದಿ ಸಾವು
ಅಮೆರಿಕ ಯುದ್ಧ ವಿಮಾನ
Image Credit source: India Today
Follow us on

ಸಿರಿಯಾದಲ್ಲಿ ಇರಾನ್(Iran) ಬೆಂಬಲಿತ ಭಯೋತ್ಪಾದಕ ಗುಂಪುಗಳೊಂದಿಗೆ ಸಂಬಂಧ ಹೊಂದಿರುವ ಶಸ್ತ್ರಾಸ್ತ್ರ ಸಂಗ್ರಹಣಾಗಾರದ ಮೇಲೆ ಅಮೆರಿಕ ದಾಳಿ ನಡೆಸಿದ್ದು, 9 ಮಂದಿ ಸಾವನ್ನಪ್ಪಿದ್ದಾರೆ. ಎರಡು ವಾರಗಳಲ್ಲಿ ಎರಡನೇ ಬಾರಿಗೆ, ಸಿರಿಯಾದಲ್ಲಿ ಒಂದು ಸ್ಥಳವನ್ನು ಗುರಿಯಾಗಿಸಲಾಗಿದೆ. ಕಳೆದ ತಿಂಗಳು, ಈ ಗುಂಪುಗಳು ಸಿರಿಯಾದಲ್ಲಿ ಅಮೆರಿಕದ ಸೈನಿಕರು ಮತ್ತು ಸೇನಾ ಕೇಂದ್ರಗಳ ಮೇಲೆ ದಾಳಿ ನಡೆಸಿದ್ದವು.

ಇರಾನ್ ಬೆಂಬಲಿತ ಗುಂಪುಗಳೊಂದಿಗೆ ಸಂಬಂಧ ಹೊಂದಿರುವ ಒಂಬತ್ತು ಜನರು ಸಾವನ್ನಪ್ಪಿದ್ದಾರೆ. ಇಸ್ರೇಲ್-ಹಮಾಸ್ ಹೋರಾಟವನ್ನು ಪ್ರಾದೇಶಿಕ ಯುದ್ಧವಾಗಿ ಪರಿವರ್ತಿಸುವುದರಿಂದ ಇರಾನ್ ಮತ್ತು ಅದರ ಪ್ರಾಕ್ಸಿಗಳನ್ನು ತಡೆಯಲು ಯುನೈಟೆಡ್ ಸ್ಟೇಟ್ಸ್ ಪ್ರಯತ್ನಿಸುತ್ತಿದೆ. ಆದರೆ ಪುನರಾವರ್ತಿತ ದಾಳಿಗಳು ವಾಷಿಂಗ್ಟನ್ ಮತ್ತು ಟೆಹ್ರಾನ್ ನಡುವಿನ ಸಂಘರ್ಷಕ್ಕೆ ಅಪಾಯವನ್ನುಂಟು ಮಾಡುತ್ತವೆ.

ಯುಎಸ್ ಮಿಲಿಟರಿಯು ಅಕ್ಟೋಬರ್ 26 ರಂದು ಸಿರಿಯಾದಲ್ಲಿ ಎರಡು ಕಡೆ ದಾಳಿ ನಡೆಸಿತ್ತು.ಅಕ್ಟೋಬರ್ 17 ರಿಂದ ರಾಕೆಟ್‌ಗಳು ಮತ್ತು ಡ್ರೋನ್‌ಗಳಿಂದ 40 ಕ್ಕೂ ಹೆಚ್ಚು ಬಾರಿ ಗುರಿಯಾಗಿಸಿಕೊಂಡು ದಾಳಿ ಮಾಡಿತ್ತು ಎಂದು ಹೇಳಿದೆ.

ಮತ್ತಷ್ಟು ಓದಿ: ಇಸ್ರೇಲ್​ನಿಂದ ವೈಮಾನಿಕ ದಾಳಿ, 8 ಸಿರಿಯಾ ಸೈನಿಕರು ಸಾವು

ಅಕ್ಟೋಬರ್ 26 ರಂದು ಸಿರಿಯಾದಲ್ಲಿ ಇರಾನ್​ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್​ ಕಾರ್ಪ್ಸ್​ ಮತ್ತು ಬೆಂಬಲಿತ ಗುಂಪುಗಳ ಎರಡು ನೆಲೆಗಳ ಮೇಲೆ ಅಮೆರಿಕ ಸೇನೆ ದಾಳಿ ನಡೆಸಿತ್ತು.

ಸಿರಿಯಾ ಹಾಗೂ ಇರಾಕ್​ನಲ್ಲಿ ಅಮೆರಿಕದ ಸೇನೆ ವಿರುದ್ಧ ನಡೆಸಿದ ದಾಳಿಗೆ ಪ್ರತಿಯಾಗಿ ದಆಳಿ ನಡೆಸಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ಆದೇಶ ಹೊರಡಿಸಿದ್ದರು.

ಇಸ್ರೇಲ್ ಹಾಗೂ ಹಮಾಸ್ ನಡುವಿನ ಸಂಘರ್ಷ ತೀವ್ರಗೊಂಡಿರುವ ಹಾಗೆಯೇ ಇರಾಕ್ ಹಾಗೂ ಸಿರಿಯಾದಲ್ಲಿ ಇರಾನ್ ಬೆಂಬಲಿತ ಪಡೆಗಳು ಅಮೆರಿಕ ಮತ್ತು ಮೈತ್ರಿ ಪಡೆಗಳ ಮೇಲೆ ಕನಿಷ್ಠ 19 ಬಾರಿ ದಾಳಿ ನಡೆಸಿವೆ.

ಅಮೆರಿಕ ಸೇನೆಯ ವಿರುದ್ಧ ಬೆಂಬಲಿತ ಪಡೆಗಳ ದಾಳಿ ತಕ್ಷಣ ನಿಲ್ಲಬೇಕು, ಒಂದು ವೇಳೆ ದಾಳಿ ಮುಂದುವರೆದರೆ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೆಂಟಗನ್ ಎಚ್ಚರಿಸಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Published On - 9:21 am, Thu, 9 November 23