ಇರಾನ್ ಮಾದಕವಸ್ತು ವ್ಯಸನ ಮುಕ್ತಿ ಕೇಂದ್ರದಲ್ಲಿ ಶುಕ್ರವಾರ ಭಾರೀ ಅಗ್ನಿ ದುರಂತ: 32 ಮಂದಿ ಸಾವು
ಕೇಂದ್ರವು 40 ರೋಗಿಗಳ ಸಾಮರ್ಥ್ಯವನ್ನು ಹೊಂದಿದೆ ಎಂದು ಟಿವಿ ವರದಿ ಹೇಳಿದೆ. ಮುಂಜಾನೆ ಬೆಂಕಿ ಹೊತ್ತಿಕೊಂಡಾಗ ಎಷ್ಟು ಸಿಬ್ಬಂದಿ ಕೆಲಸ ಮಾಡುತ್ತಿದ್ದರು ಎಂಬುದು ಸ್ಪಷ್ಟವಾಗಿಲ್ಲ. ಹಿಂದಿನ ಪ್ರಸಾರದಲ್ಲಿ 27 ಜನರು ಸಾವನ್ನಪ್ಪಿದ್ದಾರೆ ಮತ್ತು 17 ಜನರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿತ್ತು.
ಟೆಹ್ರಾನ್, ನವೆಂಬರ್ 4: ಉತ್ತರ ಇರಾನ್‌ನಲ್ಲಿರುವ ಖಾಸಗಿ ಮಾದಕವಸ್ತು ವ್ಯಸನ ಮುಕ್ತಿ ಕೇಂದ್ರದಲ್ಲಿ ನಿನ್ನೆ ಶುಕ್ರವಾರ ಸಂಭವಿಸಿದ ಬೆಂಕಿಯಲ್ಲಿ 32 ಜನರು ಸಾವನ್ನಪ್ಪಿದ್ದಾರೆ. ಇರಾನ್ ಮಾಧ್ಯಮಗಳು ಈ ಹಿಂದೆ ವರದಿ ಮಾಡಿದ್ದಕ್ಕಿಂತ ಐದು ಮಂದಿ ಹೆಚ್ಚು ಸಾವಿಗೀಡಾಗಿದ್ದಾರೆ. ರಾಜಧಾನಿ ಟೆಹ್ರಾನ್‌ನ ವಾಯವ್ಯಕ್ಕೆ 200 ಕಿಲೋಮೀಟರ್ ದೂರದಲ್ಲಿರುವ ಲ್ಯಾಂಗ್‌ರೌಡ್‌ನಲ್ಲಿ ಈ ಅವಘಡವಾಗಿದ್ದು, ಇತರೆ 16 ಜನರು ಗಾಯಗೊಂಡಿದ್ದು ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ ಎಂದು ಸ್ಟೇಟ್ ಟಿವಿ ಹೇಳಿದೆ.
ಕೇಂದ್ರವು 40 ರೋಗಿಗಳ ಸಾಮರ್ಥ್ಯವನ್ನು ಹೊಂದಿದೆ ಎಂದು ಟಿವಿ ವರದಿ ಹೇಳಿದೆ. ಮುಂಜಾನೆ ಬೆಂಕಿ ಹೊತ್ತಿಕೊಂಡಾಗ ಎಷ್ಟು ಸಿಬ್ಬಂದಿ ಕೆಲಸ ಮಾಡುತ್ತಿದ್ದರು ಎಂಬುದು ಸ್ಪಷ್ಟವಾಗಿಲ್ಲ. ಹಿಂದಿನ ಪ್ರಸಾರದಲ್ಲಿ 27 ಜನರು ಸಾವನ್ನಪ್ಪಿದ್ದಾರೆ ಮತ್ತು 17 ಜನರು ಗಾಯಗೊಂಡಿದ್ದಾರೆ ಎಂದು ಹೇಳಲಾಗಿತ್ತು. ಕತ್ತಲೆಯ ಆಕಾಶದಲ್ಲಿ ಭಾರೀ ಜ್ವಾಲೆಗಳು ಮತ್ತು ಹೊಗೆ ಉಗುಳುತ್ತಿರುವುದನ್ನು ವೀಡಿಯೊ ಕಾಣಬಹುದಾಗಿದೆ. ನಂತರ ಬೆಂಕಿಯನ್ನು ನಂದಿಸಲಾಯಿತು. ಅಗ್ನಿ ಆಕಸ್ಮಿಕಕ್ಕೆ ಕಾರಣವೇನೆಂದು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಟಿವಿ ವರದಿ ತಿಳಿಸಿದೆ.
27 dead, several injured in #fire at drug rehabilitation centre in Northern #Iran
READ: https://t.co/FOYZJS3uRA pic.twitter.com/DRCivfmKT7
— News9 (@News9Tweets) November 3, 2023
ಇರಾನ್‌ನ ನ್ಯಾಯಾಂಗ ಇಲಾಖೆ ಮುಖ್ಯಸ್ಥ ಘೋಲಮ್‌ಹೊಸ್ಸೇನ್ ಮೊಹ್ಸೇನಿ ಎಜೀ ಅವರು ಸಂಪೂರ್ಣ ತನಿಖೆಗೆ ಆದೇಶಿಸಿದ್ದಾರೆ. ಮುಖ್ಯವಾಗಿ ಸುರಕ್ಷತಾ ಕ್ರಮಗಳ ನಿರ್ಲಕ್ಷ್ಯ, ಹಳೆಯದಾದ ಸೌಲಭ್ಯಗಳು ಮತ್ತು ಅಸಮರ್ಪಕ ತುರ್ತು ಸೇವೆಗಳ ಕಾರಣದಿಂದಾಗಿ ಸಂಭವಿಸಿದೆ. ಆದರೆ ಇಂತಹ ಮಾರಣಾಂತಿಕ ಬೆಂಕಿ ಅವಘಡಗಳು ದೇಶದಲ್ಲಿ ಅಪರೂಪವಲ್ಲ. ಕಳೆದ ಸೆಪ್ಟೆಂಬರ್‌ನಲ್ಲಿ ಇರಾನ್‌ನ ರಕ್ಷಣಾ ಸಚಿವಾಲಯದ ಒಡೆತನದ ಕಾರ್ ಬ್ಯಾಟರಿ ಕಾರ್ಖಾನೆಯಲ್ಲಿ ಒಂದು ವಾರದೊಳಗೆ ಎರಡನೇ ಬಾರಿಗೆ ಬೆಂಕಿ ಕಾಣಿಸಿಕೊಂಡಿತ್ತು. ಯಾವುದೇ ಸಾವು-ನೋವುಗಳ ವರದಿಯಾಗಿಲ್ಲ.