Israel Hamas Conflict: ನವೆಂಬರ್ 10ರೊಳಗೆ ಭೀಕರ ಅಗ್ನಿ ದುರಂತ; ಕರ್ನಾಟಕದ ಖ್ಯಾತ ಜ್ಯೋತಿಷಿ ಎಚ್ಚರಿಕೆ

ಭೂಕಂಪ ಲಗ್ನವು ಮಕರ ಆಗಿರುವುದರಿಂದ ಸುರಂಗಗಳಲ್ಲಿ ಇರುವಂಥ ಸ್ಫೋಟಕಗಳು ಸಹ ಸಿಡಿದು, ಅವಘಡಗಳು ಆಗಬಹುದು. ಭೂಕಂಪ ಲಗ್ನ ಎಂದು ಮಕರ ಬಂದಿದ್ದು, ಇದರ ಮೇಲೆ ಯಾವುದೇ ಶುಭ ಗ್ರಹದ ಅಥವಾ ಯಾವುದೇ ಗ್ರಹದ ದೃಷ್ಟಿ ಬೀಳುತ್ತಿಲ್ಲ. ಆ ಕಾರಣಕ್ಕೆ ಇದನ್ನು ತಪ್ಪಿಸುವುದು ಅಸಾಧ್ಯ ಎಂದು ಸಹ ಹೇಳಬಹುದು.

Israel Hamas Conflict: ನವೆಂಬರ್ 10ರೊಳಗೆ ಭೀಕರ ಅಗ್ನಿ ದುರಂತ; ಕರ್ನಾಟಕದ ಖ್ಯಾತ ಜ್ಯೋತಿಷಿ ಎಚ್ಚರಿಕೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Digi Tech Desk

Updated on:Nov 03, 2023 | 4:53 PM

ಇದೊಂದು ಲೇಖನ ಬರೆಯಬೇಕೋ ಬೇಡವೋ ಎಂಬ ವಿಶ್ಲೇಷಣೆ ಮಾಡುವುದರೊಳಗೆ ಜ್ಯೋತಿಷ್ಯ ಅಧ್ಯಯನಾಸಕ್ತರಿಗಾಗಿ ಇದನ್ನು ಬರೆದೇ ಬಿಡೋಣ ಎಂದು ಎನಿಸಿದ್ದರಿಂದ ಇದನ್ನು ನೀವು ಓದುತ್ತಿದ್ದೀರಿ. ಲೆಬನಾನ್​​​ನ ಸ್ಥಳೀಯ ಕಾಲಮಾನ ಮೂರು ಗಂಟೆಗೆ ಅಲ್ಲಿನ ಪ್ರಮುಖ ಮುಖಂಡರ ಸಭೆಯೊಂದು ನವೆಂಬರ್ 3ನೇ ತಾರೀಕು ಆಯೋಜನೆ ಆಗಿರುವುದು ಗೊತ್ತಾದ ಮೇಲೆ ನಾನೊಂದು ತತ್ಕಾಲ ಗ್ರಹ ಸ್ಥಿತಿಯ ಆಧಾರದ ಮೇಲೆ ಒಂದು ಕುಂಡಲಿ ಸಿದ್ಧ ಮಾಡಿಕೊಂಡು, ಕುತೂಹಲಕ್ಕಾಗಿ ಅದರ ಅಧ್ಯಯನವನ್ನು ಮಾಡುತ್ತಾ ಹೋದೆ. ಅದರ ಪ್ರಕಾರ, ಇನ್ನು ಏಳು ದಿನದೊಳಗೆ (ನವೆಂಬರ್ ಹತ್ತನೇ ತಾರೀಕಿನ ಒಳಗಾಗಿ) ಲೆಬನಾನ್, ಇಸ್ರೇಲ್, ಪ್ಯಾಲೆಸ್ತೀನ್ (ಅದು ವೆಸ್ಟ್ ಬ್ಯಾಂಕ್ ಅಥವಾ ಗಾಝಾ ಪಟ್ಟಿ) ಇವುಗಳ ಪೈಕಿ ಒಂದರಲ್ಲಿ ಭೀಕರ ಅಗ್ನ ದುರಂತ ಸಂಭವಿಸುವ ಸೂಚನೆಯನ್ನು ನೀಡುತ್ತಿದೆ. ಇದು ಅಕ್ಕ-ಪಕ್ಕದ ದೇಶಗಳಿಗೂ ವ್ಯಾಪಿಸಬಹುದು.

ಮೊದಲಿಗೆ ಲೆಬನಾನ್​​​​ನಲ್ಲಿ ನಡೆಯುತ್ತಿರುವ ಸಭೆಯ ಸಮಯಕ್ಕೆ ಇರುವಂಥ ಗ್ರಹ ಸ್ಥಿತಿಯನ್ನು ತಿಳಿದುಕೊಂಡು ಬಿಡಿ.

ಮೀನ ಲಗ್ನ

ಲಗ್ನದಲ್ಲಿ ರಾಹು

ದ್ವಿತೀಯ (ಮೇಷದಲ್ಲಿ) ಗುರು

ಚತುರ್ಥ (ಮಿಥುನದಲ್ಲಿ) ಚಂದ್ರ

ಸಪ್ತಮ (ಕನ್ಯಾದಲ್ಲಿ) ಶುಕ್ರ, ಕೇತು

ಅಷ್ಟಮದಲ್ಲಿ (ತುಲಾದಲ್ಲಿ) ರವಿ, ಕುಜ ಮತ್ತು ಬುಧ

ನವಮದಲ್ಲಿ (ವೃಶ್ಚಿಕದಲ್ಲಿ) ಮಾಂದಿ

ದ್ವಾದಶದಲ್ಲಿ (ಕುಂಭದಲ್ಲಿ) ಶನಿ

ಈ ಸ್ಥಿತಿಯನ್ನು ನೋಡಿದಾಗ ಅಷ್ಟಮದಲ್ಲಿ ರವಿ- ಕುಜ ಒಟ್ಟಿಗಿದ್ದಾರೆ. ಇದು ಬೆಂಕಿಯ ಅವಘಡ ಸೂಚಿಸುತ್ತದೆ. ಅಲ್ಲಿ ಎಂಬತ್ತು ಡಿಗ್ರಿಯ ಆಚೆಗೆ, ಅಂದರೆ ಮಕರ ಲಗ್ನವನ್ನು ‘ಭೂಕಂಪ’ ಲಗ್ನವನ್ನಾಗಿ ಸೂಚಿಸುತ್ತದೆ. ಇಲ್ಲಿ ಇದನ್ನು ಪದಶಃ ಅರ್ಥ ಮಾಡಿಕೊಳ್ಳುವ ಅಗತ್ಯವಿಲ್ಲ. ಆದರೆ ಇದರ ಅರ್ಥ ಭೂಮಿಯೇ ನಡುಗುವಂಥ ಅನಾಹುತ ಘಟಿಸಲಿದೆ. ಇದರ ವಿಶ್ಲೇಷಣೆ ಮಾಡಿದಾಗ ಭೂ ಮಧ್ಯ ರೇಖೆಯ ವಾಯವ್ಯದಲ್ಲಿ ಅನಾಹುತ ಸಂಭವಿಸುವುದಾಗಿ ಹೇಳಬಹುದು.

ಇನ್ನು ಭೂಕಂಪ ಲಗ್ನವು ಮಕರ ಆಗಿರುವುದರಿಂದ ಇನ್ನೂ ಒಂದು ಸಂಗತಿಯನ್ನು ಹೇಳಬಹುದು. ಅದೇನೆಂದರೆ, ಸುರಂಗಗಳಲ್ಲಿ ಇರುವಂಥ ಸ್ಫೋಟಕಗಳು ಸಹ ಸಿಡಿದು, ಅವಘಡಗಳು ಆಗಬಹುದು. ಭೂಕಂಪ ಲಗ್ನ ಎಂದು ಮಕರ ಬಂದಿದ್ದು, ಇದರ ಮೇಲೆ ಯಾವುದೇ ಶುಭ ಗ್ರಹದ ಅಥವಾ ಯಾವುದೇ ಗ್ರಹದ ದೃಷ್ಟಿ ಬೀಳುತ್ತಿಲ್ಲ. ಆ ಕಾರಣಕ್ಕೆ ಇದನ್ನು ತಪ್ಪಿಸುವುದು ಅಸಾಧ್ಯ ಎಂದು ಸಹ ಹೇಳಬಹುದು.

ಲಗ್ನಕ್ಕೆ ದ್ವಾದಶದಲ್ಲಿ ಇರುವ ಶನಿ ವಕ್ರ ತ್ಯಾಗ ಮಾಡಿದ್ದರೂ ವಕ್ರದ ಫಲವನ್ನೇ ಈಗಿನ ಗ್ರಹ ಸ್ಥಿತಿಯಲ್ಲಿ ನೀಡಲಿದೆ. ಇನ್ನು ವಕ್ರೀ ಗುರು ಮೇಷದಲ್ಲಿ ಇರುವುದರಿಂದ ಅದು ಸಹ ಈ ಘಟನೆಗೆ ಪ್ರೇರಣೆ ನೀಡಲಿದೆ. ಈ ಸಂದರ್ಭದಲ್ಲಿ ಇನ್ನೂ ಒಂದು ವಿಚಾರ ಹೇಳಬೇಕೆಂದರೆ, ಈ ಘಟನೆ ಬಗ್ಗೆ ಮುಂಚೆಯೇ ಮಾಹಿತಿ ದೊರೆತರೂ ಹಲವು ದೇಶ ಅಥವಾ ಸಂಸ್ಥೆ ಅಥವಾ ಸರ್ಕಾರಗಳು ಇದನ್ನು ತಡೆಯುವ ಪ್ರಯತ್ನವನ್ನು ಮಾಡುವುದಿಲ್ಲ.

ಇದನ್ನೂ ಓದಿ: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜನ್ಮ ಜಾತಕ ವಿಶ್ಲೇಷಣೆ ಏನು ಹೇಳುತ್ತದೆ?

ಒಬ್ಬ ಜ್ಯೋತಿಷಿ ತನ್ನ ಅನುಭವ ಹಾಗೂ ಜ್ಞಾನದ ಆಧಾರದಲ್ಲಿ ವಿಶ್ಲೇಷಣೆ ಮಾಡುವುದು ಹೌದು. ಹಾಗೆ ನೋಡಿದರೆ ಪ್ರಬಲ ಅಸ್ತ್ರದ ಪ್ರಯೋಗದ ಸಾಧ್ಯತೆಯನ್ನು ಸಹ ತಳ್ಳಿ ಹಾಕುವುದಕ್ಕೆ ಸಾಧ್ಯವಿಲ್ಲ. ಭೀಕರ ಅಗ್ನಿ ದುರಂತ ಅಂತ ಸಂಭವಿಸಿದಾಗ ಜೀವ ಹಾನಿ, ಆಸ್ತಿ ಹಾನಿ, ಕೋಲಾಹಲಗಳು ಸಂಭವಿಸುವುದು ಸಹಜ. ಆದರೆ ಇದನ್ನು ಇಷ್ಟು ಸರಳವಾಗಿ ಹೇಳಿ ಮುಗಿಸುವುದಕ್ಕೆ ಆಗುವುದಿಲ್ಲ. ಏಕೆಂದರೆ ದುರಂತದ ಪರಿಣಾಮ ಸಾಮಾನ್ಯವಾಗಿ ಇರುವುದಿಲ್ಲ.

ಜ್ಯೋತಿಷಿಗಳು ನಕಾರಾತ್ಮಕವಾದದ್ದನ್ನೇ ಹೇಳುತ್ತಾರೆ ಎಂದು ಹಲವರು ಮೂದಲಿಸುವುದು ಉಂಟು. ಅದೇ ಜನರು ಕೆಟ್ಟದ್ದು ಆಗುವಾಗ ಜ್ಯೋತಿಷಿಗಳು ಮುಂಚಿತವಾಗಿ ಎಚ್ಚರಿಸುವುದಿಲ್ಲ ಎಂದು ಸಹ ಹೇಳುತ್ತಾರೆ. ಆದರೆ ಮೂದಲಿಕೆ, ನಿಂದೆ, ಹೊಗಳಿಕೆ, ಸನ್ಮಾನ ಇವುಗಳೆಲ್ಲಕ್ಕೂ ಅತೀತವಾಗಿ ಬದುಕಬೇಕಾದದ್ದು ಜ್ಞಾನ ಜಿಜ್ಞಾಸುಗಳ ಸ್ವಭಾವ ಆಗಬೇಕು. ಇಲ್ಲಿ ಮಾಡಿರುವುದು ಸಹ ಅದನ್ನೇ. ನಮಗೆ ಈ ರೀತಿ ಗ್ರಹ ಸ್ಥಿತಿಯ ಆಧಾರದ ಮೇಲೆ ಗೋಚರಿಸುವಂಥ ದುರ್ಘಟನೆಗಳು ಸಂಭವಿಸದೆ, ನಮ್ಮ ಭವಿಷ್ಯವೇ ಸುಳ್ಳಾಗಲಿ ಎಂದು ಆ ದೇವರನ್ನು ಪ್ರಾರ್ಥನೆ ಮಾಡುತ್ತೇವೆ. ಒಳ್ಳೆಯದಾದಲ್ಲಿ ಅದು ಖಡಾಖಂಡಿತವಾಗಿ ಆಗಬೇಕು.

ಅಗ್ನಿ ಅವಘಡ, ಬೆಂಕಿಯ ಜ್ವಾಲೆ, ವಿನಾಶ ಸೂಚಿಸುತ್ತಿರುವ ಈ ಗ್ರಹ ಸ್ಥಿತಿಯ ಬಗ್ಗೆ ಇನ್ನು ಹೆಚ್ಚಿಗೆ ಹೇಳಲಿಕ್ಕೆ ಏನೂ ಇಲ್ಲ. ಒಂದು ವಾರ ಕಾದು ನೋಡಬೇಕಷ್ಟೇ.

ಲೇಖಕರು: ಪ್ರಕಾಶ್ ಅಮ್ಮಣ್ಣಾಯ, ಜ್ಯೋತಿಷಿ, ಕಾಪು (ಉಡುಪಿ)

ಇಲ್ಲಿ ಪ್ರಕಟವಾಗಿರುವ ಲೇಖನದಲ್ಲಿನ ಅಭಿಪ್ರಾಯ ಲೇಖಕರದೇ ಆಗಿರುತ್ತದೆ. ಇದನ್ನು ಜ್ಯೋತಿಷ್ಯ ಶಾಸ್ತ್ರದ ಆಧಾರದಲ್ಲಿ ವಿಶ್ಲೇಷಣೆ ಮಾಡಿ ತಿಳಿಸಲಾಗಿದೆ. ಇಲ್ಲಿ ಪ್ರಕಟವಾಗಿರುವ ಅಭಿಪ್ರಾಯ, ವಿಶ್ಲೇಷಣೆಯನ್ನು ಟಿವಿ9 ಕನ್ನಡ ವೆಬ್ ಸೈಟ್ ಆಗಲಿ ಅಥವಾ ಅದರ ಯಾವುದೇ ಸಹೋದರ ಸಂಸ್ಥೆಗಳಾಗಲೀ ಅನುಮೋದಿಸುವುದಿಲ್ಲ ಮತ್ತು ಇದಕ್ಕೆ ಸಂಬಂಧ ಇರುವುದಿಲ್ಲ.  – ಸಂಪಾದಕರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 4:38 pm, Fri, 3 November 23

ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ವೈಕುಂಠದ್ವಾರ ಸರ್ವದರ್ಶನಕ್ಕಾಗಿ ಟೋಕನ್ ಪಡೆಯಲು ನಡೆದ ದುರಂತ
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ನಂಬಿ ಮೋಸ ಹೋದ್ರಾ ಧನರಾಜ್; ಮಿಸ್ ಆಯ್ತು ಬಿಗ್ ಬಾಸ್ ಫಿನಾಲೆ ಟಿಕೆಟ್
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ