ಕೊರೊನಾ ಲಸಿಕೆ ಪ್ರಯೋಗದ ಮೊದಲ ಹಂತದ ಫಲಿತಾಂಶ ಯಶಸ್ವಿ ..ಎಲ್ಲಿ?

|

Updated on: Jul 15, 2020 | 12:55 PM

ದೆಹಲಿ:ಕೊರೊನಾ ಮಾರಿಯಿಂದ ಬೇಸತ್ತಿರುವ ಪ್ರತಿಯೊಂದು ದೇಶವು ಕೊರೊನಾ ನಿಯಂತ್ರಿಸುವ ಲಸಿಕೆಯ ತಯಾರಿಕೆಯ ಹಿಂದೆ ಬಿದ್ದಿದೆ. ಕೆಲವೊಂದು ಲಸಿಕೆಗಳ ಪ್ರಯೋಗದಲ್ಲಿ ಕೊಂಚ ಮಟ್ಟಿನ ಯಶ ಸಿಕಿದ್ದು ಎಲ್ಲರಲ್ಲೂ ನಿರಾಳತೆಯ ಭಾವ ಮೂಡಿದೆ. ಈಗ ಅಂತಹುದೆ ಲಸಿಕೆಯ ಪ್ರಯೋಗದಲ್ಲಿ ಅಮೆರಿಕಾದ ಮಾಡರ್ನಾ ಸಂಸ್ಥೆ ಮೊದಲ ಹಂತದ ಪ್ರಯೋಗದಲ್ಲಿ ಯಶಸ್ವಿಯಾಗಿದೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ಭರವಸೆ ಮೂಡಿಸಿರುವ ಅಮೆರಿಕಾದ ಮಾಡರ್ನಾ ಕಂಪನಿಯ (Moderna Inc) ಲಸಿಕೆ ಪ್ರಯೋಗದ ಮೊದಲ ಹಂತದ ಫಲಿತಾಂಶ ಭಾಗಶಃ ಯಶಸ್ವಿಯಾಗಿದೆ. ಆರಂಭಿಕ ಹಂತದ ಪ್ರಯೋಗದಲ್ಲಿ 45 ಸ್ವಯಂಸೇವಕರನ್ನು […]

ಕೊರೊನಾ ಲಸಿಕೆ ಪ್ರಯೋಗದ ಮೊದಲ ಹಂತದ ಫಲಿತಾಂಶ ಯಶಸ್ವಿ ..ಎಲ್ಲಿ?
ಸಾಂದರ್ಭಿಕ ಚಿತ್ರ
Follow us on

ದೆಹಲಿ:ಕೊರೊನಾ ಮಾರಿಯಿಂದ ಬೇಸತ್ತಿರುವ ಪ್ರತಿಯೊಂದು ದೇಶವು ಕೊರೊನಾ ನಿಯಂತ್ರಿಸುವ ಲಸಿಕೆಯ ತಯಾರಿಕೆಯ ಹಿಂದೆ ಬಿದ್ದಿದೆ. ಕೆಲವೊಂದು ಲಸಿಕೆಗಳ ಪ್ರಯೋಗದಲ್ಲಿ ಕೊಂಚ ಮಟ್ಟಿನ ಯಶ ಸಿಕಿದ್ದು ಎಲ್ಲರಲ್ಲೂ ನಿರಾಳತೆಯ ಭಾವ ಮೂಡಿದೆ. ಈಗ ಅಂತಹುದೆ ಲಸಿಕೆಯ ಪ್ರಯೋಗದಲ್ಲಿ ಅಮೆರಿಕಾದ ಮಾಡರ್ನಾ ಸಂಸ್ಥೆ ಮೊದಲ ಹಂತದ ಪ್ರಯೋಗದಲ್ಲಿ ಯಶಸ್ವಿಯಾಗಿದೆ.

ಕೊರೊನಾ ವಿರುದ್ಧದ ಹೋರಾಟದಲ್ಲಿ ಭರವಸೆ ಮೂಡಿಸಿರುವ ಅಮೆರಿಕಾದ ಮಾಡರ್ನಾ ಕಂಪನಿಯ (Moderna Inc) ಲಸಿಕೆ ಪ್ರಯೋಗದ ಮೊದಲ ಹಂತದ ಫಲಿತಾಂಶ ಭಾಗಶಃ ಯಶಸ್ವಿಯಾಗಿದೆ. ಆರಂಭಿಕ ಹಂತದ ಪ್ರಯೋಗದಲ್ಲಿ 45 ಸ್ವಯಂಸೇವಕರನ್ನು ಬಳಸಿಕೊಳ್ಳಲಾಗಿದ್ದು, ಎಲ್ಲರಲ್ಲೂ ರೋಗ ನಿರೋಧಕ ಪ್ರತಿಕ್ರಿಯೆ ವೃದ್ಧಿಸಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಆರಂಭಿಕ ಹಂತದ ಪ್ರಯೋಗದಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಸ್ವಯಂಸೇವಕರಲ್ಲಿ ಸಣ್ಣ ಪ್ರಮಾಣದ ಆಯಾಸ, ತಲೆನೋವು, ಶೀತ, ಸ್ನಾಯು ನೋವು ಕಾಣಿಸಿಕೊಂಡಿದೆ ಎಂದು ತಜ್ಞರು ತಿಳಿಸಿದ್ದಾರೆ.

Published On - 12:34 pm, Wed, 15 July 20