Sign In

By signing in or creating an account, you agree with Associated Broadcasting Company's Terms & Conditions and Privacy Policy.

Top News: ಸ್ವೀಡನ್​ನಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಲ್ಲ!

ಇಡೀ ವಿಶ್ವವೇ ಕೊರೊನಾದಿಂದ ಬಚಾವ್ ಆಗಲು ಮಾಸ್ಕ್ ಧರಿಸೋದನ್ನ ಕಡ್ಡಾಯಗೊಳಿಸಿದೆ. ಆದ್ರೆ, ಸ್ವೀಡನ್​ ದೇಶದಲ್ಲಿ 76 ಸಾವಿರಕ್ಕೂ ಅಧಿಕ ಜನರಿಗೆ ಸೋಂಕು ಕಾಣಿಸಿಕೊಂಡಿದ್ದು, 5,545 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆದರೂ ದೇಶದಲ್ಲಿ ಜನತೆ ಮಾಸ್ಕ್ ಧರಿಸೋದನ್ನ ಕಡ್ಡಾಯಗೊಳಿಸಿಲ್ಲ. ದೈಹಿಕ ಅಂತರ ಮತ್ತು ಸ್ವಚ್ಛತೆ ಕಾಪಾಡಿಕೊಂಡರೆ ಸಾಕು ಅಂತಾ ಸ್ವೀಡನ್ ಆರೋಗ್ಯ ಇಲಾಖೆ ಹೇಳಿದೆ. ಮೋಟರ್​ ಸೈಕಲ್​ನಲ್ಲಿ ಟೆಸ್ಟಿಂಗ್ ಪೆರು ದೇಶದಲ್ಲಿ 3,33,867 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, 12,229 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ, ಜನರಲ್ಲಿ ಹೆಚ್ಚು […]

Top News: ಸ್ವೀಡನ್​ನಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಲ್ಲ!
ಬಳಸಿದ ಮುಖಗವಸು
Follow us
ಆಯೇಷಾ ಬಾನು
| Updated By: ಸಾಧು ಶ್ರೀನಾಥ್​

Updated on: Jul 15, 2020 | 3:48 PM

ಇಡೀ ವಿಶ್ವವೇ ಕೊರೊನಾದಿಂದ ಬಚಾವ್ ಆಗಲು ಮಾಸ್ಕ್ ಧರಿಸೋದನ್ನ ಕಡ್ಡಾಯಗೊಳಿಸಿದೆ. ಆದ್ರೆ, ಸ್ವೀಡನ್​ ದೇಶದಲ್ಲಿ 76 ಸಾವಿರಕ್ಕೂ ಅಧಿಕ ಜನರಿಗೆ ಸೋಂಕು ಕಾಣಿಸಿಕೊಂಡಿದ್ದು, 5,545 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆದರೂ ದೇಶದಲ್ಲಿ ಜನತೆ ಮಾಸ್ಕ್ ಧರಿಸೋದನ್ನ ಕಡ್ಡಾಯಗೊಳಿಸಿಲ್ಲ. ದೈಹಿಕ ಅಂತರ ಮತ್ತು ಸ್ವಚ್ಛತೆ ಕಾಪಾಡಿಕೊಂಡರೆ ಸಾಕು ಅಂತಾ ಸ್ವೀಡನ್ ಆರೋಗ್ಯ ಇಲಾಖೆ ಹೇಳಿದೆ.

ಮೋಟರ್​ ಸೈಕಲ್​ನಲ್ಲಿ ಟೆಸ್ಟಿಂಗ್ ಪೆರು ದೇಶದಲ್ಲಿ 3,33,867 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, 12,229 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ, ಜನರಲ್ಲಿ ಹೆಚ್ಚು ಜಾಗೃತಿ ವಹಿಸುವ ಸಲುವಾಗಿ, ಲಿಮಾ ನಗರದಲ್ಲಿ, ಮೋಟರ್ ಸೈಕಲ್​ನಲ್ಲಿ ತೆರಳಿ ಕೊವಿಡ್ ಟೆಸ್ಟ್ ಮಾಡೋದ್ರ ಜೊತೆಗೆ, ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಇಂಜೆಕ್ಷನ್ ಮಾಡಲಾಯ್ತು.

ಕೊರೊನಾ ‘ಕೂಪ’ ಕೊರೊನಾ ತನ್ನ ವಿಷಜಾಲವನ್ನೂ ಇಡೀ ವಿಶ್ವಕ್ಕೆ ವ್ಯಾಪಿಸುತ್ತಿದೆ… ಜಗತ್ತಿನಾದ್ಯಂತ ಸೋಂಕಿತರ ಸಂಖ್ಯೆ 1,34,57,476 ಕ್ಕೆ ಏರಿಕೆಯಾಗಿದೆ. ವೈರಸ್​ನಿಂದಾಗಿ 5,81,221 ಜನರು ಪ್ರಾಣ ಕಳೆದುಕೊಂಡಿದ್ರೆ, 59,579 ಜನರ ಸ್ಥಿತಿ ಚಿಂತಾಜನಕವಾಗಿದೆ. ಸೋಂಕಿನಿಂದ 78,47,229 ಜನರು ವೈರಸ್ ವಿರುದ್ಧ ಹೋರಾಡಿ ಗುಣಮುಖರಾಗಿದ್ದಾರೆ.

‘WHO’ ಚೀನಾದ ಕೈ ಗೊಂಬೆ! ಕೊರೊನಾ ವೈರಸ್ ಬಂದಾಗಿನಿಂದ ಚೀನಾದ ವಿರುದ್ಧ ಮುಗಿಬೀಳ್ತಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮತ್ತೆ ಡ್ರ್ಯಾಗನ್ ನಾಡಿನ ವಿರುದ್ಧ ಕೆಂಡ ಕಾರಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯೂ ಚೀನಾದ ಕೈಗೊಂಬೆಯಾಗಿದೆ. ವೈರಸ್​ನ್ನ ಮರೆಮಾಚುವ ಕೆಲಸವನ್ನ ಚೀನಾ ಮಾಡಿದೆ. ಚೀನಾ ಕುತಂತ್ರವನ್ನ ಪ್ರಪಂಚದ ಮುಂದೆ ಬಿಚ್ಚಿಡುವ ಜವಾಬ್ದಾರಿ ನಮಗಿದೆ ಅಂತಾ ಚೀನಾ ಮತ್ತು ವಿಶ್ವ ಆರೋಗ್ಯ ಸಂಸ್ಥೆ ವಿರುದ್ಧ ಟ್ರಂಪ್ ವಾಗ್ದಾಳಿ ನಡೆಸಿದ್ದಾರೆ.

ಬ್ರೆಜಿಲ್​ನಲ್ಲಿ ಆಕ್ರೋಶದ ಕಿಚ್ಚು ಬ್ರೆಜಿಲ್​ನಲ್ಲಿ ಕೊರೊನಾ ವೈರಸ್​ನಿಂದಾಗಿ ಸೋಂಕಿತರ ಸಂಖ್ಯೆ 19,31,204ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ ಈವರೆಗೂ 74 ಸಾವಿರಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಖುದ್ದು ಬ್ರೆಜಿಲ್ ಅಧ್ಯಕ್ಷ ಬೊಲ್ಸೊನಾರೋ ಕೂಡ ವೈರಸ್​ಗೆ ತುತ್ತಾಗಿದ್ದಾರೆ. ಇದ್ರಿಂದ ಆಕ್ರೋಶಗೊಂಡ ನೂರಾರು ಸಾರ್ವಜನಿಕರು ಬ್ರಾಸಿಲಿಯಾದಲ್ಲಿ ಜಮಾಯಿಸಿ, ಬೊಲ್ಸೊನಾರೋ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.

ಪಾಕ್​ನಲ್ಲಿ ಟೆಸ್ಟಿಂಗ್ ವಿವಾದ ಪಾಕಿಸ್ತಾನದಲ್ಲಿ ಕೊರೊನಾ ವೈರಸ್​ ರಣಕೇಕೆ ಹಾಕ್ತಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ 2,53, 604ಕ್ಕೆ ಏರಿಕೆಯಾದ್ರೆ, ಸೋಂಕಿನಿಂದ 5,320ಕ್ಕೂ ಹೆಚ್ಚು ಜನರು ಉಸಿರು ಚೆಲ್ಲಿದ್ದಾರೆ. ಪಾಕ್​ನಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೂ ಇಮ್ರಾನ್ ಖಾನ್ ಸರ್ಕಾರ ಟೆಸ್ಟಿಂಗ್​ ಮಾಡುವ ಪ್ರಮಾಣ ನಿಲ್ಲಿಸಿದ್ದು, ಜನರ ಸಾವಿಗೆ ಕಾರಣವಾಗ್ತಿದ್ದಾರೆ ಅಂತಾ ಬಿಲಾವಲ್ ಭುಟ್ಟೋ ಜರ್ದಾರಿ ಆರೋಪಿಸಿದ್ದಾರೆ.

ಕಟ್ಟುನಿಟ್ಟಿನ ಲಾಕ್​ಡೌನ್ ಕೊಲಂಬಿಯಾದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1 ಲಕ್ಷದ 59 ಸಾವಿರದ 898ಕ್ಕೆ ಏರಿಕೆಯಾಗಿದೆ. ವೈರಸ್ ಅಟ್ಟಹಾಸದಿಂದಾಗಿ 5,625 ಜನರು ಪ್ರಾಣ ಕಳೆದುಕೊಂಡಿದ್ದಾರೆ. ದಿನೇ ದಿನೇ ದೇಶದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗ್ತಿದ್ದು, ಕೊಲಂಬಿಯಾದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಂಡಿದೆ. ಲಾಕ್​ಡೌನ್ ವೇಳೆ ಹಲವು ನಿರ್ಬಂಧಗಳನ್ನ ವಿಧಿಸಿದ್ದು, ಫೇಸ್ ಶೀಲ್ಡ್, ಮಾಸ್ಕ್ ಧರಿಸೋದು ಕಡ್ಡಾಯ ಮಾಡಲಾಗಿದೆ.

ಆರ್ಥಿಕತೆಗೆ ದಶಕಗಳ ಹೊಡೆತ ಕೊರೊನಾ ವೈರಸ್​ನಿಂದಾಗಿ ಇಡೀ ವಿಶ್ವದಲ್ಲಿ ಎಲ್ಲಾ ಉದ್ಯಮಗಳು ಮತ್ತು ನಾನಾ ರೀತಿ ಕೆಲಸಗಳು ಸ್ಥಗಿತಗೊಂಡಿದ್ದು, ಆರ್ಥಿಕತೆಗೆ ದೊಡ್ಡ ಹೊಡೆತ ಕೊಟ್ಟಿದೆ. 1870 ರಲ್ಲಿ ಇಡೀ ವಿಶ್ವವೇ ಎದುರಿಸಿದ್ದ ಆರ್ಥಿಕ ಹಿಂಜರಿತವನ್ನ ದಶಕಗಳ ಬಳಿಕ ಈಗ ಮತ್ತೆ ಎದುರಿಸುವಂತಾಗಿದೆ ಅಂತಾ ವಿಶ್ವ ಸಂಸ್ಥೆಯ ಮುಖ್ಯಸ್ಥ ಅಂಟೊನಿಯಾ ಹೇಳಿದ್ದಾರೆ. ಬಡತನದ ಜೊತೆಗೆ ಆಹಾರದ ಅಭದ್ರತೆಯೂ ಕಾಡಲಿದೆ ಅಂತಾ ಎಚ್ಚರಿಸಿದ್ದಾರೆ.

ಕೆನಡಾ-ಅಮೆರಿಕ ಗಡಿ ತೆರೆಯಲ್ಲ ಅಮೆರಿಕದಲ್ಲಿ ಕೊರೊನಾ ವೈರಸ್​ ಅಬ್ಬರಿಸುತ್ತಿರೋದ್ರಿಂದ ಮಾರ್ಚ್ 18 ರಿಂದಲೇ ಎಚ್ಚೆತ್ತ ಕೆನಡಾ ತನ್ನ ಗಡಿಯನ್ನ ಬಂದ್ ಮಾಡಿತ್ತು. ಎರಡೂ ದೇಶಗಳ ಸರ್ಕಾರಗಳು ಮಾತುಕತೆ ಮೂಲಕ ಗಡಿ ಬಂದ್ ಮಾಡಲು ಒಪ್ಪಂದ ಮಾಡಿಕೊಂಡಿದ್ದವು. ಆದ್ರೆ, ಇನ್ನೂ ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಮುಂದಿನ ಆಗಸ್ಟರ್ 21 ರವರೆಗೂ ಗಡಿ ತೆರೆಯದಿರಲು ಕೆನಡಾ ಸರ್ಕಾರ ನಿರ್ಧರಿಸಿದೆ. ದೇಶದ ಜನರ ರಕ್ಷಣೆಯೇ ನಮ್ಮ ಮೊದಲ ಆದ್ಯತೆ ಅಂತಾ ಸರ್ಕಾರ ಹೇಳಿದೆ.