Top News: ಶ್ವಾನಗಳಿಗೂ ಸಿದ್ಧವಾಯ್ತು ಸ್ಪೆಷಲ್ ಌಂಬುಲೆನ್ಸ್.. ಎಲ್ಲಿ?
ಯುದ್ಧದ ವೇಳೆ ಗಾಯಗೊಳ್ಳೊ ಮಿಲಿಟರಿ ಶ್ವಾನಗಳಿಗೆ ವಿಶೇಷ ಌಂಬುಲೆನ್ಸ್ ರಿಲೀಸ್ ಮಾಡಲಾಗಿದೆ. ಕೊಲಂಬಿಯಾದಲ್ಲಿ ನೆಲಬಾಂಬ್ ಪತ್ತೆ ಮಾಡೋ ತಂಡದಲ್ಲಿರೋ ಶ್ವಾನಗಳಿಗೆ ವಿಶೇಷ ಌಂಬುಲೆನ್ಸ್ ಡಿಸೈನ್ ಮಾಡಲಾಗಿದೆ. ಗಾಯಗೊಂಡಿರೋ ಶ್ವಾನಗಳಿಗೆ ಌಂಬುಲೆನ್ಸ್ನಲ್ಲೇ ಫಸ್ಟ್ ಏಡ್ ಸಿಗಲಿದೆ. ಹರಡುತ್ತಿದೆ ವೈರಸ್ ವಿಷಜಾಲ ಜಗತ್ತಿನಾದ್ಯಂತ ಕೊರೊನಾ ವೈರಸ್ ವಿಷಜಾಲ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ. ಜಗತ್ತಿನಾದ್ಯಂತ ಬರೋಬ್ಬರಿ 1 ಕೋಟಿ 36 ಲಕ್ಷದ 99 ಸಾವಿರದ 622 ಜನರಿಗೆ ಸೋಂಕು ತಗುಲಿದೆ. ಇನ್ನು ಕೊರೊನಾ ಮಹಾಮಾರಿಗೆ ಇದುವರೆಗೆ 5 ಲಕ್ಷದ 86 ಸಾವಿರದ 974 […]
ಯುದ್ಧದ ವೇಳೆ ಗಾಯಗೊಳ್ಳೊ ಮಿಲಿಟರಿ ಶ್ವಾನಗಳಿಗೆ ವಿಶೇಷ ಌಂಬುಲೆನ್ಸ್ ರಿಲೀಸ್ ಮಾಡಲಾಗಿದೆ. ಕೊಲಂಬಿಯಾದಲ್ಲಿ ನೆಲಬಾಂಬ್ ಪತ್ತೆ ಮಾಡೋ ತಂಡದಲ್ಲಿರೋ ಶ್ವಾನಗಳಿಗೆ ವಿಶೇಷ ಌಂಬುಲೆನ್ಸ್ ಡಿಸೈನ್ ಮಾಡಲಾಗಿದೆ. ಗಾಯಗೊಂಡಿರೋ ಶ್ವಾನಗಳಿಗೆ ಌಂಬುಲೆನ್ಸ್ನಲ್ಲೇ ಫಸ್ಟ್ ಏಡ್ ಸಿಗಲಿದೆ.
ಹರಡುತ್ತಿದೆ ವೈರಸ್ ವಿಷಜಾಲ ಜಗತ್ತಿನಾದ್ಯಂತ ಕೊರೊನಾ ವೈರಸ್ ವಿಷಜಾಲ ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ. ಜಗತ್ತಿನಾದ್ಯಂತ ಬರೋಬ್ಬರಿ 1 ಕೋಟಿ 36 ಲಕ್ಷದ 99 ಸಾವಿರದ 622 ಜನರಿಗೆ ಸೋಂಕು ತಗುಲಿದೆ. ಇನ್ನು ಕೊರೊನಾ ಮಹಾಮಾರಿಗೆ ಇದುವರೆಗೆ 5 ಲಕ್ಷದ 86 ಸಾವಿರದ 974 ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಸಾಮೂಹಿಕ ಸಮಾಧಿ! ಬ್ರೆಜಿಲ್ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 75 ಸಾವಿರ ಗಡಿ ದಾಟಿದೆ. ಇದೇ ವೇಳೆ ಕೊರೊನಾ ಸೋಂಕಿಗೆ ಬಲಿಯಾಗುವವರ ಸಂಖ್ಯೆಯೂ ಹೆಚ್ಚಾಗ್ತಿದೆ. ಹೀಗಾಗಿ ಸ್ಮಶಾನಗಳಲ್ಲಿ ಸಾಮೂಹಿಕ ಗುಂಡಿಗಳನ್ನು ಮೊದಲೇ ತೋಡಿ ಇಡಲಾಗ್ತಿದೆ.
ಚೀನಾ ಌಪ್ಗಳಿಗೆ ದೊಡ್ಡಣ್ಣ ಬ್ರೇಕ್ ಚೀನಾ ಮೂಲದ ಮೊಬೈಲ್ ಅಪ್ಲಿಕೇಷನ್ಗಳಿಗೆ ಭಾರತ ಬ್ರೇಕ್ ಹಾಕಿದ ಬೆನ್ನಲ್ಲೇ ಅಮೆರಿಕಾದಲ್ಲೂ ಬ್ಯಾನ್ಗೆ ಚಿಂತನೆ ನಡೆಯುತ್ತಿದೆ. ಅಮೆರಿಕಾದಲ್ಲೂ ಚೀನಾಌಪ್ಗಳನ್ನು ಬ್ಯಾನ್ ಮಾಡಬೇಕು ಅಂತಾ 25 ಕಾಂಗ್ರೆಸ್ ಸದಸ್ಯರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಮನವಿ ಮಾಡಿದ್ದಾರೆ. ಭಾರತದ ಹಾದಿಯನ್ನೇ ಫಾಲೋ ಮಾಡುವಂತೆ ಟ್ರಂಪ್ಗೆ ಮನವಿ ಮಾಡಲಾಗಿದೆ.
ರೋಸ್ ಪರೇಡ್ ಕ್ಯಾನ್ಸಲ್ ಕ್ಯಾಲಿಫೋರ್ನಿಯಾದ ಪಾಸಾಡೆನಾದಲ್ಲಿ ಪ್ರತಿವರ್ಷ ನಡೆಯುತ್ತಿದ್ದ ಐತಿಹಾಸಿಕ ರೋಸ್ ಪರೇಡ್ ಈ ಬಾರಿ ಕ್ಯಾನ್ಸಲ್ ಆಗಿದೆ. 2ನೇ ಮಹಾಯುದ್ಧದ ಬಳಿಕ ಮೊದಲ ಬಾರಿಗೆ ರೋಸ್ ಪರೇಡ್ ರದ್ದಾಗಿದೆ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗ್ತಿರೋ ಹಿನ್ನೆಲೆಯಲ್ಲಿ ಆಯೋಜಕರು ಈ ಬಾರಿಯ ರೋಸ್ ಪರೇಡ್ ರದ್ದುಪಡಿಸಿದ್ದಾರೆ.
ಬೀಚ್ ಪ್ರವೇಶಕ್ಕೆ ಅನುಮತಿ ಕ್ಯೂಬಾದಲ್ಲಿ ಕೊರೊನಾ ವೈರಸ್ ಹರಡುವಿಕೆ ಕಡಿಮೆಯಾಗ್ತಿದ್ದಂತೆ ಕೆಲ ಕ್ಷೇತ್ರಗಳಿಗೆ ರಿಲೀಫ್ ನೀಡಲಾಗಿದೆ. ಬೀಚ್ಗಳಿಗೆ ತೆರಳಲು ಸ್ಥಳೀಯರಿಗೆ ಅವಕಾಶ ನೀಡಲಾಗಿದೆ. ಹಲವು ದಿನಗಳ ಲಾಕ್ಡೌನ್ ಬಳಿಕ ನೆಚ್ಚಿನ ತಾಣಕ್ಕೆ ಬಂದ ಬೀಚ್ ಪ್ರಿಯರು ಸಂತಸ ವ್ಯಕ್ತಪಡಿಸಿದ್ರು. ಸಮುದ್ರದಲ್ಲಿ ಮಿಂದೆದ್ದು ಸಂಭ್ರಮಿಸಿದ್ರು.
ಟೋಕ್ಯೋದಲ್ಲಿ ವೈರಸ್ ಕೇಕೆ ಜಪಾನ್ ರಾಜಧಾನಿ ಟೋಕ್ಯೋದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮುಂದುವರಿದಿದೆ. ಕಳೆದ 24 ಗಂಟೆಗಳಲ್ಲಿ ಟೋಕ್ಯೋ ಸಿಟಿಯಲ್ಲಿ 280 ಹೊಸ ಕೊರೊನಾ ಕೇಸ್ಗಳು ಪತ್ತೆಯಾಗಿವೆ ಅಂತಾ ಗವರ್ನರ್ ಯುರಿಕೋ ಕೊಯ್ಕೆ ಮಾಹಿತಿ ನೀಡಿದ್ರು. ಜಪಾನ್ ರಾಜಧಾನಿಯಲ್ಲೇ ಸೋಂಕಿತರ ಪ್ರಮಾಣ ಹೆಚ್ಚಳವಾಗ್ತಿರೋದು ಸರ್ಕಾರಕ್ಕೆ ತಲೆನೋವಾಗಿಬಿಟ್ಟಿದೆ.
ಲಾಕ್ಡೌನ್ ಉಲ್ಲಂಘಿಸಿದವ್ರು ಅಂದರ್ ಫಿಲಿಪ್ಪೀನ್ಸ್ನಲ್ಲಿ ಲಾಕ್ಡೌನ್ ನಿಯಮ ಉಲ್ಲಂಘಿಸಿದವ್ರನ್ನು ಪೊಲೀಸರು ಅರೆಸ್ಟ್ ಮಾಡಿದ್ರು. ರಾಜಧಾನಿ ಮನಿಲಾದಲ್ಲಿ ಕೊರೊನಾ ಸೋಂಕಿತರ ಪ್ರಮಾಣ ಮತ್ತೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಲಾಕ್ಡೌನ್ ಜಾರಿ ಮಾಡಲಾಗಿದೆ. ಹೀಗಾಗಿ ಕಟ್ಟುನಿಟ್ಟಿನ ಲಾಕ್ಡೌನ್ ಪಾಲಿಸೋ ನಿಟ್ಟಿನಲ್ಲಿ ಪೊಲೀಸರು ಹಲವರನ್ನು ಬಂಧಿಸಿದ್ರು.