+ve ಸುದ್ದಿ.. ರೆಡಿ ಆಯ್ತಾ ಕೊರೊನಾಗೆ ಮದ್ದು, ಇದೇ ಜುಲೈ 20ರಂದು ಘೋಷಣೆ ಆಗುತ್ತಾ?
ಮಹಾಮಾರಿ ಕೊರೊನಾ ಕಪಿಮುಷ್ಟಿಯಲ್ಲಿ ಸಿಲುಕಿರುವ ಜನತೆಗೆ ಸಿಕ್ಕಿದೆ ಸಂತಸದ ಸುದ್ದಿ. ಕೋವಿಡ್-19 ಮಾರಿಗೆ ಬ್ರಿಟನ್‌ನ ಆಕ್ಸಫರ್ಡ್ ವಿಶ್ವವಿದ್ಯಾಲಯ ಕಂಡುಹಿಡಿದಿರುವ ಲಸಿಕೆ ಶೀಘ್ರದಲ್ಲಿಯೇ ಮಾರುಕಟ್ಟೆಯಲ್ಲಿ ಸಿಗಲಿದೆ. ಅಂದ್ರೆ ಎಲ್ಲವೂ ಅಂದುಕೊಂಡಂತೆ ನಡೆದ್ರೆ, ಬಹುತೇಕ ಇದೇ ವರ್ಷ ಕೊರೊನಾ ಸೋಂಕಿತರ ಚಿಕಿತ್ಸೆಗೆ ಲಭ್ಯವಾಗಲಿದೆ. ಹೌದು ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಮತ್ತು ಅಸ್ಟ್ರಾಜೆನೆಕ್ ಔಷಧ ತಯಾರಿಕಾ ಕಂಪನಿ ಜೊತೆಗೂಡಿ ಕೊರೊನಾಗೆ ಔಷಧಿ ಅಭಿವೃದ್ಧಿಪಡಿಸುತ್ತಿದೆ. ಈಗಾಗಲೇ ಒಂದು ಮತ್ತು ಎರಡನೇ ಹಂತದಲ್ಲಿ ಮಾನವನ ಮೇಲಿನ ಪ್ರಯೋಗ ಪೂರ್ಣಗೊಂಡಿದೆ. ಮೂರನೇ ಹಂತದಲ್ಲಿ ಸಾವಿರಾರು ಜನರ ಮೇಲೆ […]
ಮಹಾಮಾರಿ ಕೊರೊನಾ ಕಪಿಮುಷ್ಟಿಯಲ್ಲಿ ಸಿಲುಕಿರುವ ಜನತೆಗೆ ಸಿಕ್ಕಿದೆ ಸಂತಸದ ಸುದ್ದಿ. ಕೋವಿಡ್-19 ಮಾರಿಗೆ ಬ್ರಿಟನ್‌ನ ಆಕ್ಸಫರ್ಡ್ ವಿಶ್ವವಿದ್ಯಾಲಯ ಕಂಡುಹಿಡಿದಿರುವ ಲಸಿಕೆ ಶೀಘ್ರದಲ್ಲಿಯೇ ಮಾರುಕಟ್ಟೆಯಲ್ಲಿ ಸಿಗಲಿದೆ. ಅಂದ್ರೆ ಎಲ್ಲವೂ ಅಂದುಕೊಂಡಂತೆ ನಡೆದ್ರೆ, ಬಹುತೇಕ ಇದೇ ವರ್ಷ ಕೊರೊನಾ ಸೋಂಕಿತರ ಚಿಕಿತ್ಸೆಗೆ ಲಭ್ಯವಾಗಲಿದೆ.
ಹೌದು ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಮತ್ತು ಅಸ್ಟ್ರಾಜೆನೆಕ್ ಔಷಧ ತಯಾರಿಕಾ ಕಂಪನಿ ಜೊತೆಗೂಡಿ ಕೊರೊನಾಗೆ ಔಷಧಿ ಅಭಿವೃದ್ಧಿಪಡಿಸುತ್ತಿದೆ. ಈಗಾಗಲೇ ಒಂದು ಮತ್ತು ಎರಡನೇ ಹಂತದಲ್ಲಿ ಮಾನವನ ಮೇಲಿನ ಪ್ರಯೋಗ ಪೂರ್ಣಗೊಂಡಿದೆ. ಮೂರನೇ ಹಂತದಲ್ಲಿ ಸಾವಿರಾರು ಜನರ ಮೇಲೆ ಔಷಧಿ ಪ್ರಯೋಗ ನಡೆಯಲಿದ್ದು ಸಿದ್ದತೆ ಆರಂಭಗೊಂಡಿದೆ.
ಇದುವರೆಗಿನ ಪ್ರಯೋಗದಲ್ಲಿ ಕೊರೊನಾ ವೈರಸ್ ವಿರುದ್ದ ಆಕ್ಸಫರ್ಡ್ ಔಷಧಿ ಶೇ. 80 ರಷ್ಟು ಪರಿಣಾಮಕಾರಿಯಾಗಿದೆ. ಪ್ರಾಣಿಗಳ ಮೇಲೆ ಇದುವರೆಗೆ ನಡೆಸಿದ ಪ್ರಯೋಗ ಯಶಸ್ವಿಯಾಗಿದ್ದು, ಯಾವುದೇ ನ್ಯೂಮೋನಿಯಾ ಕಂಡು ಬಂದಿಲ್ಲ. ಆದ್ರೆ ಈ ಔಷಧಿಯಿಂದ ಕೊರೊನಾ ವೈರಸ್ ಸಾವನ್ನಪ್ಪಿವೆ. ಈ ಔಷಧಿಯ ಪ್ರಯೋಗ ಯಶಸ್ವಿಯಾದರೆ ಈ ವರ್ಷವೇ 200 ಕೋಟಿ ಔಷಧ ಉತ್ಪಾದನೆಯ ಗುರಿ ಹೊಂದಲಾಗಿದೆ. ಸದ್ಯ ಬ್ರೆಜಿಲ್ ದೇಶದಲ್ಲಿ ಕೊರೊನಾ ರೋಗಿಗಳ ಮೇಲೆ ಆಕ್ಸಫರ್ಡ್ ಔಷಧಿಯ ಪ್ರಯೋಗ ಮಾಡುತ್ತಿದೆ.
ಆಕ್ಸಫರ್ಡ್ ವಿವಿಯು ಔಷಧಿಗೆ AZD 1222 ಎಂದು ನಾಮಕರಣ ಮಾಡಿದ್ದು, ಮನುಷ್ಯರ ಮೇಲೆ ಮೂರನೇ ಹಂತದ ಪ್ರಯೋಗ ಮಾತ್ರ ಬಾಕಿ ಇದೆ. ಮೊದಲ ಹಂತದ ಪ್ರಯೋಗದ ವರದಿ ಅಂತಿಮ ಹಂತದಲ್ಲಿದ್ದು ಜುಲೈ 20, ಸೋಮವಾರ ಬಿಡುಗಡೆ ಮಾಡಲಾಗುವುದು ಎಂದು ಬ್ರಿಟನ್‌ನ ಐ ಟಿವಿ ಸಂಪಾದಕ ರಾಬರ್ಟ್ ಪೆಟ್ಸೋನ್ ತಿಳಿಸಿದ್ದಾರೆ.
ಇನ್ನೊಂದೆಡೆ ಆಮೆರಿಕಾದ ಮೋಡರ್ನಾ ಕಂಪನಿ ಕೂಡಾ ಜುಲೈ 27 ರಿಂದ ಮೂರನೇ ಹಂತದ ಪ್ರಯೋಗ ಆರಂಭಿಸಲಿದೆ. ರಷ್ಯಾ ಈಗಾಗಲೇ ಮೂರು ಹಂತದ ಪ್ರಯಗಳನ್ನು ಯಶಸ್ವಿಯಾಗಿ ಮುಗಿಸಿದೆ. ಭಾರತದಲ್ಲಿ ಕೂಡಾ ಕೋವಾಕ್ಸಿನ್ ಸೇರಿದಂತೆ ಎರಡು ವ್ಯಾಕ್ಸಿನ್‌ಗಳ ಪ್ರಯೋಗದಲ್ಲಿದೆ. ಈ ಸಂಬಂಧ ಐಸಿಎಂಆರ್ ಈ ಕಂಪನಿಗಳಿಗೆ ಆಗಸ್ಟ್ 15ರ ಗಡುವು ನೀಡಿದೆ.
Published On - 4:21 pm, Thu, 16 July 20