Top News: ಕೊರೊನಾ ವಾರ್ ಅಖಾಡಕ್ಕೆ ಇಳಿದ ಸೇನಾ ವೈದ್ಯರು.. ಎಲ್ಲಿ?
ಅಮೆರಿಕದ ಟೆಕ್ಸಾಸ್ ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿಯ ಕೊರತೆ ಎದುರಾಗಿದೆ. ಹೀಗಾಗಿ ಎಚ್ಚೆತ್ತ ಅಮೆರಿಕ ಸೇನಾ ವೈದ್ಯರನ್ನ ಕೊರೊನಾ ವಾರ್ ಅಖಾಡಕ್ಕೆ ಇಳಿಸಿದೆ. ಈಗಾಗಲೇ 570 ಸೇನಾ ಪಡೆಯನ್ನ ಹೋಸ್ಟನ್ ಆಸ್ಪತ್ರೆಗೆ ನಿಯೋಜಿಸಿದ್ದು, ಮೊಲದ ತಂಡದಲ್ಲಿ 86 ಸೇನಾ ವೈದ್ಯಕೀಯ ಪಡೆ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸ್ತಿದೆ. ಕೊರೊನಾ ‘ವಿಶ್ವ’ರೂಪ ಕ್ರೂರಿ ಕೊರೊನಾ ವೈರಸ್ನಿಂದಾಗಿ ಇಡೀ ವಿಶ್ವದ ಜನಜೀವನವೇ ಉಲ್ಟಾಪಲ್ಟಾ ಆಗಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗ್ತಿದ್ರೆ, ಸಾವಿನ ಸಂಖ್ಯೆ ಕೂಡ ಗಗನಕ್ಕೇರ್ತಿದೆ. ವಿಶ್ವದಾದ್ಯಂತ […]
ಅಮೆರಿಕದ ಟೆಕ್ಸಾಸ್ ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸಿಬ್ಬಂದಿಯ ಕೊರತೆ ಎದುರಾಗಿದೆ. ಹೀಗಾಗಿ ಎಚ್ಚೆತ್ತ ಅಮೆರಿಕ ಸೇನಾ ವೈದ್ಯರನ್ನ ಕೊರೊನಾ ವಾರ್ ಅಖಾಡಕ್ಕೆ ಇಳಿಸಿದೆ. ಈಗಾಗಲೇ 570 ಸೇನಾ ಪಡೆಯನ್ನ ಹೋಸ್ಟನ್ ಆಸ್ಪತ್ರೆಗೆ ನಿಯೋಜಿಸಿದ್ದು, ಮೊಲದ ತಂಡದಲ್ಲಿ 86 ಸೇನಾ ವೈದ್ಯಕೀಯ ಪಡೆ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸ್ತಿದೆ.
ಕೊರೊನಾ ‘ವಿಶ್ವ’ರೂಪ ಕ್ರೂರಿ ಕೊರೊನಾ ವೈರಸ್ನಿಂದಾಗಿ ಇಡೀ ವಿಶ್ವದ ಜನಜೀವನವೇ ಉಲ್ಟಾಪಲ್ಟಾ ಆಗಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗ್ತಿದ್ರೆ, ಸಾವಿನ ಸಂಖ್ಯೆ ಕೂಡ ಗಗನಕ್ಕೇರ್ತಿದೆ. ವಿಶ್ವದಾದ್ಯಂತ 13,94,66,39 ಜನರನ್ನ ವಕ್ಕರಿಸಿಕೊಂಡಿದ್ರೆ, ಸೋಂಕಿನಿಂದ 5,92,677 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸದ್ಯ ವೈರಸ್ನಿಂದಾಗಿ 59,936 ಜನರ ಸ್ಥಿತಿ ಚಿಂತಾಜನಕವಾಗಿದೆ.
ಅಮೆರಿಕದಲ್ಲಿ ಸೋಂಕಿತರ ದಾಖಲೆ ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಕೊರೊನಾ ವೈರಸ್ನ ರಣಕೇಕೆ ಹಾಕ್ತಿದೆ. ಕಳೆದ ಎರಡು ವಾರಗಳಿಂದ 60 ಸಾವಿರ ಸಂಖ್ಯೆಯಲ್ಲಿ ಸೋಂಕಿತರು ಪತ್ತೆಯಾಗ್ತಿದ್ರೆ, ನಿನ್ನೆ ಒಂದೇ ದಿನ 70 ಸಾವಿರ ಸೋಂಕಿತರ ಪತ್ತೆಯಾಗುವ ಮೂಲಕ ದಾಖಲೆ ನಿರ್ಮಿಸಿದೆ. ಅಮೆರಿಕದಲ್ಲಿ ಈವರೆಗೂ 36,95,025 ಜನರಿಗೆ ಸೋಂಕು ವಕ್ಕರಿಸಿದ್ರೆ, 1,41,118 ಜನರು ಪ್ರಾಣ ಕಳೆದುಕೊಂಡಿದ್ದಾರೆ.
‘HCQ ಪರಿಣಾಮಕಾರಿಯಲ್ಲ’ ಮಲೇರಿಯಾ ರೋಗಿಗಳಿಗೆ ನೀಡುವ ಭಾರತ ಮೂಲದ HCQ ಮಾತ್ರೆಯೂ ಕೊರೊನಾ ರೋಗ ನಿಯಂತ್ರಿಸಲು ಸಹಕಾರಿ ಅಂತಲೇ ಹೇಳಲಾಗ್ತಿತ್ತು. ಆದ್ರೆ, ಅಮೆರಿಕದಲ್ಲಿ ನಡೆದ ಸಂಶೋಧನೆಯ ಪ್ರಕಾರ, ಕೊರೊನಾ ರೋಗಿಗಳಿಗೆ 14 ದಿನಗಳ ಕಾಲ HCQ ಮಾತ್ರೆಯನ್ನ ನೀಡಲಾಗಿತ್ತು. ಆದ್ರೆ, ಅವರಿಗೆ ಯಾವುದೇ ರೀತಿಯ ಪರಿಣಾಮ ಬೀರಿಲ್ಲ ಅಂತಾ ಅಮೆರಿಕದ ಮಿನ್ನೆಸ್ಟೋ ವಿಶ್ವವಿದ್ಯಾಲಯವು ಹೇಳಿದೆ.
ವ್ಯಾಕ್ಸಿನ್ ಮಾಹಿತಿಗೆ ರಷ್ಯಾ ಕನ್ನ..? ಕೊರೊನಾಗೆ ಮದ್ದು ಕಂಡು ಹಿಡಿಯಲು ಇಡೀ ನಾನಾ ದೇಶಗಳು ಪ್ರಯತ್ನಿಸುತ್ತಿವೆ. ಇದ್ರ ಮಧ್ಯೆ ವ್ಯಾಕ್ಸಿನ್ ಕಂಡು ಹಿಡಿಯುವಲ್ಲಿ ನಿರತರಾಗಿರುವ ಅಮೆರಿಕ, ಕೆನಡಾ ಮತ್ತು ಇಂಗ್ಲೆಂಡ್ಗಳಿಂದ ಲಸಿಕೆ ಮಾಹಿತಿಯನ್ನ ಕದಿಯಲು ರಷ್ಯಾ ಮುಂದಾಗಿದೆಯಂತೆ. ಎಪಿಟಿ 29 ಹ್ಯಾಕಿಂಗ್ ಗುಂಪು ಕೊರೊನಾ ವೈರಸ್ ಲಸಿಕೆ ಅಭಿವೃದ್ಧಿಯಲ್ಲಿ ತೊಡಗಿರುವ ಶೈಕ್ಷಣಿಕ ಮತ್ತು ಔಷಧೀಯ ಸಂಶೋಧನಾ ಸಂಸ್ಥೆಗಳ ಮೇಲೆ ದಾಳಿ ನಡೆಸುತ್ತಿದೆ ಅಂತಾ ಮೂರೂ ದೇಶಗಳು ಆರೋಪಿಸಿವೆ.
ಆಸ್ಟ್ರೇಲಿಯಾದಲ್ಲಿ ನಿಲ್ಲದ ಆತಂಕ ಆಸ್ಟ್ರೇಲಿಯಾದಲ್ಲಿ ಹೆಮ್ಮಾರಿ ವೈರಸ್ನ ಅಟ್ಟಹಾಸಕ್ಕೆ ಕೊನೆಯೇ ಇಲ್ಲದಂತಾಗಿದ್ದು, ಸೋಂಕಿತರ ಸಂಖ್ಯೆ 11,233 ಕ್ಕೆ ಏರಿಕೆಯಾಗಿದ್ದು, 116 ಜನರು ಪ್ರಾಣ ಕಳೆದುಕೊಂಡಿದ್ದಾರೆ. ವಿಕ್ಟೋರಿಯಾದಲ್ಲಿ ಅತಿ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. 24 ಗಂಟೆಗಳ ಅವಧಿಯಲ್ಲಿ 428 ಜನರಿಗೆ ಸೋಂಕು ಕಾಣಿಸಿಕೊಂಡಿದ್ದು, ಮೊನ್ನೆ 317 ಜನರು ಪತ್ತೆಯಾಗಿದ್ದರು. ದಿನದಿಂದ ದಿನಕ್ಕ ಕಾಂಗರೂ ನಾಡಲ್ಲಿ ಕೊರೊನಾ ಅಟ್ಟಹಾಸ ಮೆರೀತಿದ್ದು ಆತಂಕಕ್ಕೆ ಕಾರಣವಾಗಿದೆ.
ಬ್ರೆಜಿಲ್ನಲ್ಲಿ 20 ಲಕ್ಷ ಸೋಂಕಿತರು ಬ್ರೆಜಿಲ್ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದ್ದು, ಸೋಂಕಿತರ ಸಂಖ್ಯೆ 2 ಲಕ್ಷದ 14 ಸಾವಿರದ 738 ಜನರಿಗೆ ಸೋಂಕು ಕಾಣಿಸಿಕೊಂಡಿದೆ. ಸುಮಾರು 76 ಸಾವಿರಕ್ಕೂ ಅಧಿಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕಳೆದ 7 ವಾರಗಳಲ್ಲಿ 7 ಸಾವಿರ ಜನರು ಪ್ರಾಣ ಕಳೆದುಕೊಂಡಿದ್ದಾರೆ.
‘ಯಮ’ನ್ನಲ್ಲಿ ಲಾಕ್ಡೌನ್ ಸಡಲಿಕೆ ಎಮನ್ ದೇಶದಲ್ಲೂ ಕೊರೊನಾ ಸೋಂಕು ಅಬ್ಬರಿಸಿ ಬೊಬ್ಬಿರಿದಿತ್ತು. ವೈರಸ್ನಿಂದಾಗಿ ದೇಶದಲ್ಲಿ 1,522 ಜನರಿಗೆ ಸೋಂಕು ಕಾಣಿಸಿಕೊಂಡಿದ್ರೆ, 438ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ರು. ಹೀಗಾಗಿ, ದೇಶದಲ್ಲಿ ಲಾಕ್ಡೌನ್ ವಿಧಿಸಲಾಗಿತ್ತು. ಸೋಂಕು ನಿಯಂತ್ರಣಕ್ಕೆ ಬಂದ ಬೆನ್ನಲ್ಲೇ, ದೇಶದಲ್ಲಿ ಲಾಕ್ಡೌನ್ ಸಡಿಲಿಕೆ ಮಾಡಿದ್ದು, ಸಾರ್ವಜನಿಕ ಸ್ಥಳಗಳು ರೆಸ್ಟೋರೆಂಟ್ಗಳನ್ನ ತೆರೆಯಲಾಗಿದೆ.
ಮನೆ ಮನೆಗೆ ಪಠ್ಯ..! ಬ್ರೆಜಿಲ್ನಲ್ಲಿ ಕೊರೊನಾ ವೈರಸ್ ಅಂಕೆ ಶಂಕೆಗೂ ಸಿಗದೇ ಮುನ್ನುಗ್ಗುತ್ತಿದ್ದು, ಕೆಲವೆಡೆ ಇನ್ನೂ ಶಾಲೆಗಳು ಓಪನ್ ಆಗಿಲ್ಲ. ಹೀಗಾಗಿ, ಗ್ರಾಮೀಣ ಪ್ರದೇಶದ ಮಕ್ಕಳು ವಿದ್ಯಾಭ್ಯಾಸ ಮಾಡುವ ಸಲುವಾಗಿ, ಕೆಲ ಸ್ವಯಂ ಸೇವಕ ಸಂಘಗಳು ಗ್ರಾಮಗಳಿಗೆ ತೆರಳಿ ಶೈಕ್ಷಣಿಕ ಕಿಟ್ಗಳನ್ನ ವಾಹನಗಳ ಮೂಲಕ ತಲುಪಿಸುತ್ತಿವೆ. ಮಕ್ಕಳು ಸದ್ಯ ಮನೆಯಲ್ಲೇ ವ್ಯಾಸಂಗ ಮಾಡಲು ಪಠ್ಯಗಳನ್ನ ಕೊಡ್ತಿದ್ದಾರೆ.