AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೈವ್​ ಸುದ್ದಿ ಓದುವಾಗಲೇ Anchor ದಂತ ಭಗ್ನ! ಆಮೇಲೆ ಏನಾಯ್ತು ಗೊತ್ತಾ?

ಲೈವ್​ ಸುದ್ದಿ ಓದುವಾಗ ಌಂಕರ್ ಓಬ್ಬರ ಹಲ್ಲು ಉದುರಿದ ಸ್ವಾರಸ್ಯಕರ ಘಟನೆಯೊಂದು ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ. ಅಂದ ಹಾಗೆ, ಈ ಘಟನೆ ನಡೆದಿರೋದು ಯುಕ್ರೇನ್​ ದೇಶದಲ್ಲಿ. ಹೌದು, ದೇಶದ ಖಾಸಗಿ ಸುದ್ದಿವಾಹಿನಿಯೊಂದರ ಜನಪ್ರಿಯ ಌಂಕರ್​ ಆಗಿರುವ ಮರೀಚ್ಕಾ ಪಡಾಲ್ಕೋ (Marichka Padalko) ಬುಲೆಟಿನ್​ ಓದುವಾಗ ಇದಕ್ಕಿದಂತೆ ಅಲುಗಾಡುತ್ತಿದ್ದ ಅವರ ಮುಂದಿನ ಹಲ್ಲು ಹಾಗೇ ಉದುರಿಬಂತು. ಇದನ್ನು ಗಮನಿಸಿದ ಮರೀಚ್ಕಾ ತನ್ನ ಸ್ಥಿತಪ್ರಜ್ಞೆಯನ್ನ ಕಳೆದುಕೊಳ್ಳಲಿಲ್ಲ. ಏನೂ ಆಗೇ ಇಲ್ಲ ಅನ್ನೋ ರೀತಿಯಲ್ಲಿ ಬಹಳ ಕೂಲ್​ […]

ಲೈವ್​ ಸುದ್ದಿ ಓದುವಾಗಲೇ Anchor ದಂತ ಭಗ್ನ! ಆಮೇಲೆ ಏನಾಯ್ತು ಗೊತ್ತಾ?
Follow us
KUSHAL V
| Updated By: ಸಾಧು ಶ್ರೀನಾಥ್​

Updated on: Jul 18, 2020 | 2:11 PM

ಲೈವ್​ ಸುದ್ದಿ ಓದುವಾಗ ಌಂಕರ್ ಓಬ್ಬರ ಹಲ್ಲು ಉದುರಿದ ಸ್ವಾರಸ್ಯಕರ ಘಟನೆಯೊಂದು ಇದೀಗ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ. ಅಂದ ಹಾಗೆ, ಈ ಘಟನೆ ನಡೆದಿರೋದು ಯುಕ್ರೇನ್​ ದೇಶದಲ್ಲಿ.

ಹೌದು, ದೇಶದ ಖಾಸಗಿ ಸುದ್ದಿವಾಹಿನಿಯೊಂದರ ಜನಪ್ರಿಯ ಌಂಕರ್​ ಆಗಿರುವ ಮರೀಚ್ಕಾ ಪಡಾಲ್ಕೋ (Marichka Padalko) ಬುಲೆಟಿನ್​ ಓದುವಾಗ ಇದಕ್ಕಿದಂತೆ ಅಲುಗಾಡುತ್ತಿದ್ದ ಅವರ ಮುಂದಿನ ಹಲ್ಲು ಹಾಗೇ ಉದುರಿಬಂತು. ಇದನ್ನು ಗಮನಿಸಿದ ಮರೀಚ್ಕಾ ತನ್ನ ಸ್ಥಿತಪ್ರಜ್ಞೆಯನ್ನ ಕಳೆದುಕೊಳ್ಳಲಿಲ್ಲ. ಏನೂ ಆಗೇ ಇಲ್ಲ ಅನ್ನೋ ರೀತಿಯಲ್ಲಿ ಬಹಳ ಕೂಲ್​ ಆಗಿ ತನ್ನ ಬಾಯಿಗೆ ಅಡ್ಡವಾಗಿ ಕೈಯನ್ನ ಚಾಚಿ ದಂತವನ್ನ ಹಾಗೇ ತೆಗೆದುಬಿಟ್ಟುಳು. ನಂತರ ಸ್ವಾಭಾವಿಕವಾಗಿಯೇ ಸುದ್ದಿ ಓದಲು ಮುಂದುವರೆಸಿದರು.

ಆದರೆ, ಇದನ್ನು ಗಮನಿಸಿದ ಪ್ರೇಕ್ಷಕ ಪ್ರಭುಗಳು ಬಿಡುವರೇ. ಕೂಡಲೇ ಆ ಪ್ರಸಂಗವನ್ನ ಗಮನಿಸಿದ ವೀಕ್ಷಕರು ಅದರ ವಿಡಿಯೋ ತುಣುಕನ್ನ ಸೋಷಿಯಲ್​ ಮೀಡಿಯಾಗೆ ಅಪ್​ಲೋಡ್​ ಮಾಡಿ ಮರೀಚ್ಕಾ ಸ್ಥಿತಪ್ರಜ್ಞೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋ ಇದೀಗ ಸಖತ್​ ವೈರಲ್​ ಆಗಿದೆ.

ದಂತ ಭಗ್ನಕ್ಕೆ ಕಾರಣವೇನು? ಅಂದ ಹಾಗೆ ಈ ಪ್ರಸಂಗದ ಬಗ್ಗೆ ಪ್ರತಿಕ್ರಿಯಿಸಿರುವ ಮರೀಚ್ಕಾ ನನ್ನ 20 ವರ್ಷಗಳ ವೃತ್ತಿಜೀವನದಲ್ಲಿ ಇದೇ ಮೊದಲು ಬಾರಿ ಇಂಥ ಪ್ರಸಂಗ ಎದುರಾಗಿದ್ದು ಎಂದು ಹೇಳಿದ್ದಾರೆ. ವೀಕ್ಷಕರು ಇದನ್ನು ಅಷ್ಟು ಗಮನಿಸೋದಿಲ್ಲ ಅಂದುಕೊಂಡಿದ್ದೆ. ಆದರೆ, ಅವರ ಗಮನ ಎಷ್ಟು ಸೂಕ್ಷ್ಮವಾಗಿದೆ ಎಂದು ತಿಳಿದುಬರುತ್ತೆ ಎಂದಿದ್ದಾರೆ. ಜೊತೆಗೆ, ಹತ್ತು ವರ್ಷಗಳ ಹಿಂದೆ ತನ್ನ ಪುಟ್ಟ ಮಗಳೊಂದಿಗೆ ಆಟವಾಡುವಾಗ ಅವಳು ನನ್ನ ಹಲ್ಲಿಗೆ ಟೇಬಲ್​ ಕ್ಲಾಕ್​ ತಾಕಿಸಿದ್ದಳು. ಹೀಗಾಗಿ, ಅದು ತುಸು ಭಗ್ನವಾಗಿತ್ತು. ಇದೀಗ ಸಂಪೂರ್ಣವಾಗಿ ಉದುರಿಬಂತು ಎಂದು ಹೇಳಿದ್ದಾರೆ.

https://www.instagram.com/p/CCqr6gsJ-1_/?utm_source=ig_web_copy_link