AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಕಿಂಗ್ ಸ್ಟಾರ್ ಯಶ್​ಗೆ ಬೇಡಿಕೆಯೋ ಬೇಡಿಕೆ; ಮಧ್ಯ ಪ್ರದೇಶ ಸಿಎಂ ಜೊತೆ ಭೇಟಿ, ಮಾತುಕತೆ

ರಾಕಿಂಗ್ ಸ್ಟಾರ್ ಯಶ್ ಅವರು ಮಧ್ಯಪ್ರದೇಶದ ಪ್ರವಾಸದಲ್ಲಿ ಮುಖ್ಯಮಂತ್ರಿ ಮೋಹನ್ ಯಾದವ್ ಅವರನ್ನು ಭೇಟಿಯಾದರು. ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ ನಂತರ ಈ ಭೇಟಿ ನಡೆಯಿತು. 'ರಾಮಾಯಣ' ಚಿತ್ರದ ಚಿತ್ರೀಕರಣಕ್ಕೂ ಮುನ್ನ ಈ ಭೇಟಿ ನಡೆದಿದೆ .

ರಾಕಿಂಗ್ ಸ್ಟಾರ್ ಯಶ್​ಗೆ ಬೇಡಿಕೆಯೋ ಬೇಡಿಕೆ; ಮಧ್ಯ ಪ್ರದೇಶ ಸಿಎಂ ಜೊತೆ ಭೇಟಿ, ಮಾತುಕತೆ
ಯಶ್
Follow us
ರಾಜೇಶ್ ದುಗ್ಗುಮನೆ
|

Updated on: Apr 21, 2025 | 2:52 PM

ರಾಕಿಂಗ್ ಸ್ಟಾರ್ ಯಶ್ (Yash) ಅವರು ಸದ್ಯ ಮಧ್ಯ ಪ್ರದೇಶದ ಪ್ರವಾಸದಲ್ಲಿದ್ದಾರೆ. ‘ರಾಮಾಯಣ’ ಸಿನಿಮಾ ಶೂಟ್ ಮುಂಬೈನಲ್ಲಿ ನಡೆಯಲಿದೆ. ಅದಕ್ಕೂ ಮೊದಲು ಅವರು ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಕೆ ಮಾಡಿದ್ದಾರೆ. ಯಶ್ ಶಿವನ ಭಕ್ತರು. ಹೀಗಾಗಿ ಈ ದೇವಸ್ಥಾನಕ್ಕೆ ತೆರಳಿ ತಮ್ಮ ಕೋರಿಕೆ ಸಲ್ಲಿಸಿದ್ದಾರೆ. ಆ ಬಳಿಕ ಮಧ್ಯ ಪ್ರದೇಶ ಸಿಎಂ ಮೋಹನ್ ಯಾದವ್ ಜೊತೆ ಯಶ್ ಮಾತುಕತೆ ನಡೆಸಿದ್ದಾರೆ.

ರಾಕಿಂಗ್ ಸ್ಟಾರ್ ಯಶ್ ಖ್ಯಾತಿ ಹೆಚ್ಚಿದೆ. ‘ಕೆಜಿಎಫ್ 2’ ಬಳಿಕ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ದೇಶದ ಯಾವುದೇ ಮೂಲೆಗೆ ಹೋದರೂ ಯಶ್ ಅವರನ್ನು ಗುರುತಿಸುತ್ತಾರೆ. ಕೇವಲ ದೇಶ ಮಾತ್ರವಲ್ಲ, ವಿದೇಶದಲ್ಲೂ ಯಶ್​ಗೆ ಅಭಿಮಾನಿ ಬಳಗ ಇದೆ. ಇಷ್ಟೆಲ್ಲ ಜನಪ್ರಿಯತೆ ಹೊಂದಿರೋ ಯಶ್ ತಮ್ಮ ರಾಜ್ಯಕ್ಕೆ ಬರುತ್ತಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಮಧ್ಯ ಪ್ರದೇಶ ಸಿಎಂ ಮೋಹನ್ ಯಾದವ್ ಭೇಟಿಗೆ ಅವಕಾಶ ಕೋರಿದ್ದಾರೆ. ಆ ಬಳಿಕ ಈ ಸೌಹಾರ್ದಯುತ ಭೇಟಿ ನಡೆದಿದೆ.

ಇದನ್ನೂ ಓದಿ
Image
ಈಗ ಪತ್ನಿಯೇ ಸರ್ವಸ್ವ; ವಿಜಯಲಕ್ಷ್ಮೀ ಜೊತೆ ಭರನಾಟ್ಯ ನೋಡಲು ಬಂದ ದರ್ಶನ್
Image
ಶಿವರಾಜ್​ಕುಮಾರ್-ಗೀತಾ ಪ್ರೇಮ ನೋಡಿ ಆ ವ್ಯಕ್ತಿಗೆ ನಿಜಕ್ಕೂ ಶಾಕ್ ಆಗಿತ್ತು..
Image
ರಾವಣನಾಗಿ ‘ರಾಮಾಯಣ’ ಆರಂಭಿಸುವುದಕ್ಕೂ ಮೊದಲು ಮಹತ್ವದ ಕೆಲಸ ಮಾಡಿದ ಯಶ್  
Image
ಫ್ಯಾನ್ಸಿ ಹೆಸರಲ್ಲ.. ಮಗನಿಗೆ ಪೌರಾಣಿಕ ಪಾತ್ರದ ಹೆಸರಿಟ್ಟ ಪ್ರಣಿತಾ ಸುಭಾಷ್

ಯಶ್ ಹಾಗೂ ಮೋಹನ್ ಯಾದವ್ ಪರಸ್ಪರ ಮಾತುಕತೆ ನಡೆಸುತ್ತಿರೋದು ಫೋಟೋದಲ್ಲಿ ಇದೆ. ಯಶ್​ಗೆ ಹಸ್ತಲಾಘ ಮಾಡುವಾಗ ಮೋಹನ್ ಯಾದವ್ ಸಾಕಷ್ಟು ಹಸನ್ಮುಖಿ ಆಗಿದ್ದರು. ಯಶ್ ಅವರನ್ನು ಭೇಟಿ ಮಾಡಿದ ಖುಷಿ ಅವರಲ್ಲಿ ಇತ್ತು. ಸದ್ಯ ಅಭಿಮಾನಿಗಳ ವಲಯದಲ್ಲಿ ಈ ಫೋಟೋ ವೈರಲ್ ಆಗಿ ಗಮನ ಸೆಳೆದಿದೆ.

ರಾವಣನು ಶಿವನ ಭಕ್ತನಾಗಿದ್ದ. ಯಶ್ ಕೂಡ ಶಿವನ ಭಕ್ತರು. ಅವರ ಮನೆಯ ಕುಲದೇವರು ಕೂಡ ಶಿವನೇ. ಈಗ ಯಶ್ ‘ರಾಮಾಯಣ’ದಲ್ಲಿ ರಾವಣನ ಪಾತ್ರ ಮಾಡುತ್ತಿದ್ದು, ಅದಕ್ಕೂ ಮೊದಲು ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.

ಇದನ್ನೂ ಓದಿ: ‘ನಾನು ಶಿವನ ಭಕ್ತ, ಅದಕ್ಕಾಗಿ ಇಲ್ಲಿಗೆ ಬಂದೆ’; ಮಹಾಕಾಳೇಶ್ವರ ದೇವಾಲಯ ಭೇಟಿ ಬಳಿಕ ಯಶ್ ಮಾತು

ಯಶ್ ಅವರು ‘ಟಾಕ್ಸಿಕ್’ ಚಿತ್ರದ ಒಂದಷ್ಟು ಪೋರ್ಷನ್​ನ ಶೂಟ್ ಪೂರ್ಣಗೊಳಿಸಿದ್ದಾರೆ. ಈಗ ಅವರ ಗಮನ ‘ರಾಮಾಯಣ’ ಚಿತ್ರದ ಮೇಲೆ ಇದೆ. ಇತ್ತೀಚೆಗೆ ಹೊಂಬಾಳೆ ಫಿಲ್ಮ್ಸ್ ಕಡೆಯಿಂದ ‘ಕೆಜಿಎಫ್ 3’ ಕೆಲಸಗಳು ಶೀಘ್ರವೇ ಆರಂಭ ಆಗಲಿದೆ ಎನ್ನುವ ಸೂಚನೆ ಕೊಟ್ಟಿದ್ದಾರೆ. ಈ ಸಿನಿಮಾ ಕೆಲಸಗಳು ಪೂರ್ಣಗೊಂಡ ಬಳಿಕ ಯಶ್ ಅವರು ‘ಕೆಜಿಎಫ್ 3’ ಕೆಲಸಗಳಲ್ಲಿ ತೊಡಗಿಕೊಳ್ಳುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.