Usha Vance: ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮತ್ತು ಪತ್ನಿ ಉಷಾ ಲವ್ ಸ್ಟೋರಿ; ನೆಟ್ಫ್ಲಿಕ್ಸ್ನಲ್ಲೂ ಇದೆ ಒಂದು ಸಿನಿಮಾ
Story of US vice-president JD Vance and wife Usha: ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ಅಮೆರಿಕದ ಭಾರತೀಯ ಸಮುದಾಯದವರಲ್ಲಿ ಜನಪ್ರಿಯತೆ ಹೊಂದಲು ಪ್ರಮುಖ ಕಾರಣಗಳಲ್ಲಿ ಅವರ ಪತ್ನಿಯದ್ದೂ ಒಂದು. ವ್ಯಾನ್ಸ್ ಅವರ ಪತ್ನಿ ಉಷಾ ಅವರು ಭಾರತ ಮೂಲದ ಕುಟುಂಬಕ್ಕೆ ಸೇರಿದವರು. ಇವರ ತಂದೆಯವರು ಆಂಧ್ರದ ವೆಸ್ಟ್ ಗೋದಾವರಿಯ ಒಂದು ಹಳ್ಳಿಯವರಾದರೂ ಸಾಕಷ್ಟು ಓದು ಕಲಿತವರು.

ನವದೆಹಲಿ, ಏಪ್ರಿಲ್ 21: ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ಕುಟುಂಬ (JD Vance and family) ಸಮೇತ ಭಾರತಕ್ಕೆ ಭೇಟಿ ನೀಡಿದ್ದಾರೆ. ಇಂದು ಬೆಳಗ್ಗೆ ದೆಹಲಿಗೆ ಬಂದಿರುವ ಅವರು, ಇಂದೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಮಹತ್ವದ ಮಾತುಕತೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಾದ ಬಳಿಕ ಪ್ರಧಾನಿ ಮೋದಿ ಅವರು ನಾಳೆ ಬೇರೆ ದೇಶಕ್ಕೆ ಭೇಟಿ ನೀಡಲು ಹೊರಡುತ್ತಿದ್ದಾರೆ. ಜೆ.ಡಿ. ವ್ಯಾನ್ಸ್ ಅವರು ಇಲ್ಲೇ ಇದ್ದು ಜೈಪುರ್, ಆಗ್ರಾ ಪ್ರವಾಸ ಮಾಡಿ, ಏಪ್ರಿಲ್ 24ರಂದು ಅಮೆರಿಕಕ್ಕೆ ವಾಪಸ್ಸಾಗಲಿದ್ದಾರೆ. ಜೆ.ಡಿ. ವ್ಯಾನ್ಸ್ ಭೇಟಿಯಲ್ಲಿ ಭಾರತ ಅಮೆರಿಕ ನಡುವಿನ ವ್ಯಾಪಾರ ಸಂಬಂಧದ ಕುರಿತು ನಿರೀಕ್ಷೆಗಳಿವೆ. ಹಾಗೆಯೇ, ವ್ಯಾನ್ಸ್ ಕುಟುಂಬದ ಬಗ್ಗೆಯೂ ಭಾರತೀಯರಿಗೆ ಕುತೂಹಲ ಇದೆ. ಅದಕ್ಕೆ ಕಾರಣ, ವ್ಯಾನ್ಸ್ ಅವರ ಪತ್ನಿ ಉಷಾ.
ಉಷಾ ವ್ಯಾನ್ಸ್ ಅವರು ಭಾರತ ಮೂಲದವರು, ಆಂಧ್ರ ಮೂಲದವರು. ಇವರು ಹುಟ್ಟಿದ್ದು ಅಮೆರಿಕದಲ್ಲೇ ಆದರೂ ಇವರ ತಂದೆ ಆಂಧ್ರದ ವೆಸ್ಟ್ ಗೋದಾವರಿಯ ತನುಕು ಎಂಬ ಪಟ್ಟಣದ ಸಮೀಪ ಇರುವ ವಡ್ಡೂರು ಗ್ರಾಮದವರು. ಇವರದ್ದು ಸುಶಿಕ್ಷಿತ ಕುಟುಂಬ.
ಉಷಾ ಅವರ ಅಜ್ಜ ರಾಮಶಾಸ್ತ್ರಿ ಚಿಲುಕುರಿ ಅವರು ಐಐಟಿ ಚೆನ್ನೈನಲ್ಲಿ ಪಾಠ ಮಾಡುತ್ತಿದ್ದವರು. ಉಷಾ ಅವರ ತಂದೆ ಮೆಕ್ಯಾನಿಕಲ್ ಎಂಜಿನಿಯರ್. ಅವರೂ ಕೂಡ ಐಐಟಿಯಲ್ಲಿ ಪಾಠ ಮಾಡಿದವರು. ಉಷಾ ತಾಯಿ ಮಾಲಿಕ್ಯುಲಾರ್ ಬಯೋಲಜಿಸ್ಟ್.
ಇದನ್ನೂ ಓದಿ: ಹಿಂದೂಫೋಬಿಯಾ ವಿರುದ್ಧ ಸಂಸತ್ನಲ್ಲಿ ಗೊತ್ತುವಳಿ; ಸ್ಕಾಟ್ಲ್ಯಾಂಡ್ ಇತಿಹಾಸದಲ್ಲಿ ಇದೇ ಮೊದಲು
ಎಪ್ಪತ್ತರ ದಶಕದ ಕೊನೆಯಲ್ಲಿ ಉಷಾ ಪೋಷಕರು ಅಮೆರಿಕಕ್ಕೆ ಹೋಗುತ್ತಾರೆ. ಕ್ಯಾಲಿಫೋರ್ಇಯಾದ ಸ್ಯಾನ್ ಡಿಯೆಗೋದಲ್ಲಿ ಉಷಾ ಹುಟ್ಟುತ್ತಾರೆ. ಯಾಲೆ ಯೂನಿವರ್ಸಿಟಿ, ಕೇಂಬ್ರಿಡ್ಜ್ ಯೂನಿವರ್ಸಿಟಿಯಲ್ಲಿ ಉಷಾ ಓದುತ್ತಾರೆ.
ನೆಟ್ಫ್ಲಿಕ್ಸ್ನಲ್ಲಿ ಉಷಾ, ಜೆ.ಡಿ. ವ್ಯಾನ್ಸ್ ಕಥೆ ನೋಡಿ…
ಜೆಡಿ ವ್ಯಾನ್ಸ್ ಮತ್ತು ಉಷಾ ಮೊದಲು ಭೇಟಿಯಾಗಿದ್ದು ಯಾಲೆ ಲಾ ಸ್ಕೂಲ್ನಲ್ಲಿ. ಯಾವುದೋ ಚರ್ಚಾ ಕೂಟದಲ್ಲಿ ಇಬ್ಬರೂ ಒಂದೇ ಗ್ರೂಪ್ನಲ್ಲಿದ್ದರು. ವ್ಯಾನ್ಸ್ಗೆ ಮೊದಲ ನೋಟದಲ್ಲೇ ಪ್ರೇಮಾಂಕುರವಾಗಿತ್ತು. ಎರಡನೇ ಭೇಟಿಯಲ್ಲಿ ಅವರು ಲವ್ ಪ್ರೊಪೋಸ್ ಮಾಡಿದ್ದರಂತೆ.
ಜೆ.ಡಿ. ವ್ಯಾನ್ಸ್ ಅವರಿಗೆ ಉಷಾ ಅವರ ಎಲ್ಲಾ ಗುಣಗಳೂ ಇಷ್ಟವಾಗಿದ್ದರು. ಆಕೆ ಮಾದರಿ ಎನಿಸುವ ಗುಣಗಳನ್ನು ಹೊಂದಿದ್ದರು ಎಂದು ವ್ಯಾನ್ಸ್ ಹೇಳುತ್ತಾರೆ
ಜೆ.ಡಿ. ವ್ಯಾನ್ಸ್ ಅವರು 2016ರಲ್ಲಿ ‘ಹಿಲ್ಬಿಲ್ಲಿ ಎಲಿಜಿ’ (Hillbilly Elegy) ಎನ್ನುವ ಆತ್ಮಕಥನವೊಂದನ್ನು ಬರೆದಿದ್ದಾರೆ. ಅದು ಬಹಳ ಜನಪ್ರಿಯವಾಗಿರುವ ಪುಸ್ತಕವೂ ಹೌದು. ಈ ಪುಸ್ತಕದಲ್ಲಿ ವ್ಯಾನ್ಸ್ ಅವರು ತಮ್ಮ ಪತ್ನಿ ಬಗ್ಗೆಯೂ ಬರೆದಿದ್ದಾರೆ.
ಇದನ್ನೂ ಓದಿ: ಕೆನಡಾದಲ್ಲಿ ಗುಂಡಿನ ದಾಳಿ: ಭಾರತೀಯ ವಿದ್ಯಾರ್ಥಿನಿ ಹರ್ಸಿಮ್ರತ್ ರಾಂಧಾವಾ ಸಾವು
ನೆಟ್ಫ್ಲಿಕ್ಸ್ನಲ್ಲಿ Hillbilly Elegy ಸಿನಿಮಾ
ಇದೇ ಹೆಸರಿನಲ್ಲಿ 2020ರಲ್ಲಿ ನೆಟ್ಫ್ಲಿಕ್ಸ್ನಲ್ಲಿ ಒಂದು ಸಿನಿಮಾ ಕೂಡ ಬಂದಿದೆ. ರಾನ್ ಹೋವರ್ಡ್ ಎಂಬುವವರು ನಿರ್ದೇಶಿಸಿದ್ದಾರೆ. ಇದರಲ್ಲಿ ಉಷಾ ಅವರು ತಮ್ಮ ಕುಟುಂಬ ಮೂಲದ ಬಗ್ಗೆ ಮಾತನಾಡಿದ್ದಾರೆ.
ತಮ್ಮ ತಂದೆ ಹಿಂದೂಗಳಾಗಿದ್ದರಿಂದ ಬಹಳ ಉತ್ತಮ ಸ್ವಭಾವದವರಾಗಿದ್ದರು ಎಂದು ಆಕೆಯ ಈ ಸಿನಿಮಾದಲ್ಲಿ ಹೇಳುತ್ತಾರೆ. ತಮ್ಮ ತಂದೆ ಏನೂ ಇಲ್ಲದೆ ಅಮೆರಿಕಕ್ಕೆ ಬಂದು ಬದುಕು ಕಟ್ಟಿಕೊಂಡ ಕಥೆಯನ್ನು ಆಕೆ ಬಿಚ್ಚಿಟ್ಟಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ