AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ಷರಧಾಮಕ್ಕೆ ಭೇಟಿ ನೀಡಿದ ಅಮೆರಿಕ ಉಪಾಧ್ಯಕ್ಷರ ಕುಟುಂಬ; ಭಾರತೀಯ ಉಡುಗೆಯಲ್ಲಿ ಕಂಗೊಳಿಸಿದ ಮಕ್ಕಳು

US vice-president JD Vance and family visit Aksharadham: ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರ 4 ದಿನದ ಭಾರತ ಪ್ರವಾಸದಲ್ಲಿ ಮೊದಲ ಭೇಟಿಯಲ್ಲಿ ಅಕ್ಷರಧಾಮ ಮಂದಿರಕ್ಕೆ ಹೋಗಿದ್ದರು. ತಮ್ಮ ಪತ್ನಿ ಹಾಗು ಮಕ್ಕಳ ಜೊತೆ ಅವರು ದೆಹಲಿಯ ಸ್ವಾಮಿನಾರಾಯಣ ಅಕ್ಷರಧಾಮ ಮಂದಿರಕ್ಕೆ ಹೋಗಿದ್ದರು. ಮಂದಿರದ ಸೊಬಗಿಗೆ ತಾವು ಮಾರುಹೋಗಿದ್ದಾಗಿ ವ್ಯಾನ್ಸ್ ಹೇಳಿದ್ದಾರೆ.

ಅಕ್ಷರಧಾಮಕ್ಕೆ ಭೇಟಿ ನೀಡಿದ ಅಮೆರಿಕ ಉಪಾಧ್ಯಕ್ಷರ ಕುಟುಂಬ; ಭಾರತೀಯ ಉಡುಗೆಯಲ್ಲಿ ಕಂಗೊಳಿಸಿದ ಮಕ್ಕಳು
ಅಕ್ಷರಧಾಮ ಮಂದಿರದಲ್ಲಿ ಅಮೆರಿಕ ಉಪಾಧ್ಯಕ್ಷರ ಕುಟುಂಬ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Apr 21, 2025 | 2:16 PM

Share

ನವದೆಹಲಿ, ಏಪ್ರಿಲ್ 21: ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ತಮ್ಮ ಪತ್ನಿ ಉಷಾ ಹಾಗು ಮೂವರು ಮಕ್ಕಳಾದ ಇವಾನ್, ವಿವೇಕ್ ಮತ್ತು ಮಿರಾಬೆಲ್ (JD Vance and family) ಅವರೊಂದಿಗೆ ಭಾರತಕ್ಕೆ ಆಗಮಿಸಿದ್ದಾರೆ. ಇಲ್ಲಿಗೆ ಕಾಲಿಟ್ಟ ಬಳಿಕ ಅವರ ಮೊದಲ ಭೇಟಿಯೇ ದೆಹಲಿಯ ಅಕ್ಷರಧಾಮ ಆಗಿದೆ. ವರ್ಷಗಳ ಹಿಂದೆ ಭಯೋತ್ಪಾದಕ ದಾಳಿಗೆ ಈಡಾಗಿದ್ದ ಸ್ವಾಮಿನಾರಾಯಣ ಅಕ್ಷರಧಾಮ (Swami Narayana temple) ಮಂದಿರ ಇದು. ಈ ಮಂದಿರದ ಭವ್ಯ ರಚನೆ ಮತ್ತು ಕಲಾ ವೈಭವವು ವ್ಯಾನ್ಸ್ ಕುಟುಂಬದ ಗಮನ ಸೆಳೆದಿದೆ.

‘ನನಗೆ ಮತ್ತು ನನ್ನ ಕುಟುಂಬಕ್ಕೆ ಆತಿಥ್ಯ ನೀಡಿದ ನಿಮ್ಮ ಔದಾರ್ಯಕ್ಕೆ ನಾನು ಧನ್ಯವಾದ ಹೇಳುತ್ತೇನೆ. ಬಹಳ ಅದ್ಬುತವಾದ ಮಂದಿರ ನಿರ್ಮಿಸಿ ದೇಶ ಹೆಮ್ಮೆ ಪಡುವಂತೆ ಮಾಡಿದ್ದೀರಿ. ನಮ್ಮ ಮಕ್ಕಳಿಗಂತೂ ಈ ಮಂದಿರ ಬಹಳ ಇಷ್ಟವಾಗಿದೆ. ದೇವರ ಆಶೀರ್ವಾದ ಇರಲಿ’ ಎಂದು ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ಅಕ್ಷರಧಾಮ ಮಂದಿರದ ಅತಿಥಿ ಪುಸ್ತಕದಲ್ಲಿ ಬರೆದಿದ್ದಾರೆ.

ಇದನ್ನೂ ಓದಿ
Image
ಸರ್ಕಾರಿ ನೌಕರರಿಗೆ ಜವಾಬ್ದಾರಿ ನೆನಪಿಸಿದ ಪ್ರಧಾನಿ ಮೋದಿ
Image
ಅಮೆರಿಕ ಉಪಾಧ್ಯಕ್ಷರು ಮತ್ತವರ ಭಾರತ ಮೂಲದ ಪತ್ನಿ ಕಥೆ
Image
ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ತನ್ನಿ: ಜನಾಭಿಪ್ರಾಯ
Image
ಗಾಂಧಿ, ನೆಹರು ಬಗ್ಗೆಯೇ ತಪ್ಪು ಹೇಳಿದ ರಾಹುಲ್ ಗಾಂಧಿ;ಬಿಜೆಪಿ ಸಂಸದ ವ್ಯಂಗ್ಯ

ಇದನ್ನೂ ಓದಿ: ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮತ್ತು ಪತ್ನಿ ಉಷಾ ಲವ್ ಸ್ಟೋರಿ; ನೆಟ್​​ಫ್ಲಿಕ್ಸ್​​ನಲ್ಲೂ ಇದೆ ಒಂದು ಸಿನಿಮಾ

ಭಾರತೀಯ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ವ್ಯಾನ್ಸ್ ಮಕ್ಕಳು…

ಜೆ.ಡಿ. ವ್ಯಾನ್ಸ್ ಮತ್ತು ಉಷಾ ದಂಪತಿಗೆ ಮೂವರು ಮಕ್ಕಳಿದ್ದಾರೆ. ಇವಾನ್, ವಿವೇಕ್ ಮತ್ತು ಮಿರಾಬೆಲ್. ಈ ಪುಟ್ಟ ಮಕ್ಕಳು ಭಾರತೀಯ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಗಮನ ಸೆಳೆದರು. ಗಂಡು ಮಕ್ಕಳಾದ ಇವಾನ್ ಮತ್ತು ವಿವೇಕ್ ಅವರು ಕುರ್ತಾ ಪೈಜಾಮ ಧರಿಸಿದ್ದರು. ಕಿರಿಯವಳಾದ ಮಿರಾಬೆಲ್ ನೀಲಿ ಬಣ್ಣದ ಭಾರತೀಯ ಸಾಂಪ್ರದಾಯಿಕ ವಸ್ತ್ರ ತೊಟ್ಟಿ ಆಕರ್ಷಕವಾಗಿ ಕಾಣುತ್ತಿದ್ದಳು.

ಜೆ.ಡಿ. ವ್ಯಾನ್ಸ್ ಅವರ ಪತ್ನಿ ಉಷಾ ಅವರು ಭಾರತ ಮೂಲದ ಕುಟುಂಬದಲ್ಲಿ ಜನಿಸಿದವರು. ಅವರ ತಂದೆಯು ಆಂಧ್ರದ ಪಶ್ಚಿಮ ಗೋದಾವರಿ ಜಿಲ್ಲೆಯವರು. ತಂದೆ ಮತ್ತು ತಾತ ಐಐಟಿ ಮದ್ರಾಸ್​​​ನಲ್ಲಿ ಬೋಧನೆ ಮಾಡುತ್ತಿದ್ದರು. ತಂದೆ ಎಪ್ಪತ್ತರ ದಶಕದಲ್ಲಿ ಅಮೆರಿಕಕ್ಕೆ ಹೋದರು. ಕ್ಯಾಲಿಫೋರ್ನಿಯಾದ ಸೇಂಟಿ ಡಿಯಾಗೋದಲ್ಲಿ ಉಷಾ ಜನಿಸಿದ್ದಾರೆ.

ಇದನ್ನೂ ಓದಿ: ಈ ವರ್ಷ ಭಾರತಕ್ಕೆ ಭೇಟಿ ನೀಡುತ್ತೇನೆ; ಮೋದಿ ಜೊತೆ ಮಾತುಕತೆ ಬಳಿಕ ಎಲಾನ್ ಮಸ್ಕ್ ಮಾಹಿತಿ

ಯಾಲೆ ಯೂನಿವರ್ಸಿಟಿಯಲ್ಲಿ ವ್ಯಾನ್ಸ್ ಮತ್ತು ಉಷಾ ಪರಿಚಯವಾಗಿ ಪ್ರೇಮಾಂಕುರವಾಗಿ, ಬಳಿಕ ಮದುವೆಯಾಗಿದ್ದಾರೆ.

ಜೆ.ಡಿ. ವ್ಯಾನ್ಸ್ ಅವರು ಅಮೆರಿಕ ಉಪಾಧ್ಯಕ್ಷರಾಗಿ ಭಾರತಕ್ಕೆ ನೀಡಿರುವ ಮೊದಲ ಭೇಟಿ ಇದು. ಇವತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಎರಡು ದೇಶಗಳ ನಡುವಿನ ವ್ಯಾಪಾರ ಸಂಬಂಧ ಮತ್ತಿತರ ವಿಚಾರಗಳನ್ನು ಚರ್ಚಿಸಲಿದ್ದಾರೆ. ನಂತರ, ಆಗ್ರಾ, ಜೈಪುರ್ ಮೊದಲಾದ ಸ್ಥಳಗಳಿಗೆ ವ್ಯಾನ್ಸ್ ತಮ್ಮ ಕುಟುಂಬ ಸಮೇತರಾಗಿ ಭೇಟಿ ನೀಡಲಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 2:08 pm, Mon, 21 April 25

ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ