AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Narendra Modi: ಇವತ್ತಿನ ನಿರ್ಧಾರಗಳು ಸಾವಿರಾರು ವರ್ಷಗಳ ಭವಿಷ್ಯಕ್ಕೆ ಬುನಾದಿ: ನರೇಂದ್ರ ಮೋದಿ

Narendra Modi speech in 17th civil services day: ಅಪ್ರಸ್ತುತ ವ್ಯವಸ್ಥೆಯನ್ನು ಇಟ್ಟುಕೊಂಡು ನೀತಿ ರೂಪಿಸಲಾಗಲೀ, ಆಡಳಿತ ನಿರ್ವಹಿಸುವುದಾಗಲಿ ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಸರ್ದಾರ್ ವಲ್ಲಭಭಾಯ್ ಪಟೇಲ್ 1947ರಲ್ಲಿ ಸರ್ಕಾರಿ ನೌಕರರನ್ನು ಭಾರತದ ಉಕ್ಕಿನ ಕವಚ ಎಂದು ಕರೆದಿದ್ದನ್ನು ಮೋದಿ ನೆನಪಿಸಿದ್ದಾರೆ. ಇವತ್ತು ರೂಪಿಸಲಾಗುತ್ತಿರುವ ನೀತಿಗಳು ಮುಂದಿನ ಸಾವಿರ ವರ್ಷಗಳ ಭವಿಷ್ಯಕ್ಕೆ ಅಡಿಪಾಯ ಹಾಕಿದಂತೆ ಎಂದು ಅಭಿಪ್ರಾಯಪಟ್ಟಿದ್ಧಾರೆ.

Narendra Modi: ಇವತ್ತಿನ ನಿರ್ಧಾರಗಳು ಸಾವಿರಾರು ವರ್ಷಗಳ ಭವಿಷ್ಯಕ್ಕೆ ಬುನಾದಿ: ನರೇಂದ್ರ ಮೋದಿ
ನರೇಂದ್ರ ಮೋದಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Apr 21, 2025 | 1:37 PM

Share

ನವದೆಹಲಿ, ಏಪ್ರಿಲ್ 21: ಅಪ್ರಸ್ತುತ ವ್ಯವಸ್ಥೆಗಳಲ್ಲಿ ನೀತಿ ರೂಪಿಸಲು ಮತ್ತು ಆಡಳಿತ ನಿರ್ವಹಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. ರಾಷ್ಟ್ರ ರಾಜಧಾನಿಯ ವಿಜ್ಞಾನ ಭವನದಲ್ಲಿ ಇಂದು ಸೋಮವಾರ ನಡೆದ 17ನೇ ಸಿವಿಲ್ ಸರ್ವಿಸಸ್ ದಿನದ (Civil Services Day) ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು, ನಾಗರಿಕ ಸೇವೆಯ ಮಹತ್ವದ ಕುರಿತು ಹೇಳಿದರು. ಈ ವರ್ಷ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150ನೇ ಜಯಂತಿ ಇರುವುದನ್ನು ಸ್ಮರಿಸಿದ ನರೇಂದ್ರ ಮೋದಿ, ದೇಶದಲ್ಲಿ ಆಡಳಿತಶಾಹಿ ಹೇಗಿರಬೇಕು ಎಂದು ಪಟೇಲ್ ಹಾಕಿಕೊಟ್ಟ ಮಾರ್ಗದರ್ಶನವನ್ನೂ ನೆನಪಿಸಿದರು.

‘1947ರ ಏಪ್ರಿಲ್ 21ರಂದು ವಲ್ಲಭಭಾಯ್ ಪಟೇಲ್ ಅವರು ಆಡಳಿತಶಾಹಿಯ ಎಲ್ಲರನ್ನೂ ಭಾರತದ ಉಕ್ಕಿನ ಚೌಕಟ್ಟು ಎಂದು ಕರೆದಿದ್ದರು. ಸರ್ಕಾರಿ ನೌಕರರು ದೇಶಸೇವೆಯೇ ತಮ್ಮ ಆದ್ಯ ಕರ್ತವ್ಯ ಎಂದು ಭಾವಿಸಬೇಕು. ಪ್ರಜಾತಂತ್ರಾತ್ಮಕವಾಗಿ ಆಡಳಿತ ನಿರ್ವಹಿಸಬೇಕು. ಪ್ರಾಮಾಣಿಕತೆ, ಶಿಸ್ತು ಮತ್ತು ಬದ್ಧತೆಯಿಂದ ಕೆಲಸ ಮಾಡಬೇಕು. ರಾಷ್ಟ್ರ ಗುರಿಗಾಗಿ ಹಗಲು ರಾತ್ರಿ ಸೇವೆ ಸಲ್ಲಿಸಬೇಕು ಎಂಬುದು ವಲ್ಲಭಭಾಯ್ ಪಟೇಲ್ ಅವರ ಕನಸಾಗಿತ್ತು. ಇವತ್ತು ನಾವು ವಿಕಸಿತ ಭಾರತವನ್ನು ಸಾಕಾರಗೊಳಿಸುವತ್ತ ಸಾಗುತ್ತಿದ್ದೇವೆ’ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.

ಇದನ್ನೂ ಓದಿ: ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮತ್ತು ಪತ್ನಿ ಉಷಾ ಲವ್ ಸ್ಟೋರಿ; ನೆಟ್​​ಫ್ಲಿಕ್ಸ್​​ನಲ್ಲೂ ಇದೆ ಒಂದು ಸಿನಿಮಾ

‘ಸಣ್ಣ ಸಣ್ಣ ಬದಲಾವಣೆಗಳು ಆಗುವುದು ನಿಜವಾದ ಪ್ರಗತಿಯಲ್ಲ. ದೊಡ್ಡ ಮಟ್ಟದಲ್ಲಿ ಮತ್ತು ಸಕಾರಾತ್ಮಕವಾಗಿ ಪರಿಣಾಮ ಬೀರುವುದೇ ನಿಜವಾದ ಪ್ರಗತಿ. ಇವತ್ತು ನಾವು ರೂಪಿಸುತ್ತಿರುವ ನೀತಿಗಳು ಮತ್ತು ತೆಗೆದುಕೊಳ್ಳುತ್ತಿರುವ ನಿರ್ಧಾರಗಳು ಮುಂದಿನ ಸಾವಿರ ವರ್ಷದ ಭವಿಷ್ಯಕ್ಕೆ ಬುನಾದಿ ಹಾಕುತ್ತವೆ’ ಎಂದು ಪ್ರಧಾನಿಗಳು ಹೇಳಿದರು.

‘ಭಾರತದ ಯುವಜನರು, ರೈತರು ಮತ್ತು ಮಹಿಳೆಯರ ಕನಸುಗಳು ಹೊಸ ಎತ್ತರಕ್ಕೆ ಹೋಗುತ್ತಿವೆ. ಇದನ್ನು ಆಶೋತ್ತರಗಳು ಈಡೇರಬೇಕಾದರೆ ಅಸಾಧಾರಣ ವೇಗದ ಪ್ರಗತಿ ಅವಶ್ಯಕ… ದೇಶದ ಪ್ರಗತಿಯಲ್ಲಿ ಯಾವ ಹಳ್ಳಿಯೂ, ಯಾವ ಕುಟುಂಬವೂ ಮತ್ತು ಯಾವ ನಾಗರಿಕನೂ ಹಿಂದುಳಿಯಬಾರದು. ಎಲ್ಲರ ಸಮಗ್ರ ಅಭ್ಯುದಯ ಆಗಬೇಕು’ ಎಂದರು.

ಇದನ್ನೂ ಓದಿ: ಮುರ್ಷಿದಾಬಾದ್ ಹಿಂಸಾಚಾರ; ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಬೇಕು: ಅತಿದೊಡ್ಡ ಐವಿಆರ್​​ಎಸ್ ಸಮೀಕ್ಷೆಯಲ್ಲಿ ಜನಾಭಿಪ್ರಾಯ

‘ಭಾರತವು ಆಡಳಿತದಲ್ಲಿ, ಪಾರದರ್ಶಕತೆಯಲ್ಲಿ, ಮತ್ತು ನಾವೀನ್ಯತೆಯಲ್ಲಿ ಹೊಸ ಮಾದರಿ ಸ್ಥಾಪಿಸುತ್ತಿದೆ. ನಮ್ಮ ಯೋಜನೆಗಳು ಜನಸಾಮಾನ್ಯರನ್ನು ಎಷ್ಟರಮಟ್ಟಿಗೆ ತಲುಪುತ್ತದೆ. ಅದರ ವಾಸ್ತವ ಪರಿಣಾಮ ಏನು ಎಂಬುದು ಆಡಳಿತದ ಗುಣಮಟ್ಟದ ಸೂಚಕವಾಗಿರುತ್ತದೆ’ ಎಂದು ಸಿವಿಲ್ ಸರ್ವಿಸ್ ದಿನಾಚರಣೆಯ ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರಿಗೆ ಪ್ರಧಾನಿಗಳು ಕರೆ ನೀಡಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!