ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಕುಟುಂಬಕ್ಕೆ ಪಾಲಂ ವಿಮಾನ ನಿಲ್ದಾಣದಲ್ಲಿ ಶಾಸ್ತ್ರೀಯ ನೃತ್ಯದ ಸ್ವಾಗತ
ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ತಮ್ಮ ಪತ್ನಿ ಉಷಾ ವ್ಯಾನ್ಸ್ ಹಾಗೂ ಮಕ್ಕಳೊಂದಿಗೆ ಭಾರತಕ್ಕೆ ಭೇಟಿ ನೀಡಿದ್ದಾರೆ. ಭಾರತದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅಮೆರಿಕದ ಉಪಾಧ್ಯಕ್ಷರನ್ನು ಪಾಲಂ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡರು. ದೆಹಲಿಯ ಬಿಸಿಲಿನ ನಡುವೆ ಜೆ.ಡಿ. ವ್ಯಾನ್ಸ್ ಮತ್ತು ಕುಟುಂಬಕ್ಕೆ ಶಾಸ್ತ್ರೀಯ ನೃತ್ಯದ ಮೂಲಕ ಸ್ವಾಗತ ನೀಡಲಾಯಿತು.
ನವದೆಹಲಿ, ಏಪ್ರಿಲ್ 21: ಡೊನಾಲ್ಡ್ ಟ್ರಂಪ್ ನೇತೃತ್ವದಲ್ಲಿ ಅಮೆರಿಕ ಸರ್ಕಾರದ 50ನೇ ಉಪಾಧ್ಯಕ್ಷ ಜೇಮ್ಸ್ ಡೇವಿಡ್ ವ್ಯಾನ್ಸ್ (JD Vance) ಅವರು ತಮ್ಮ ಮೊದಲ ಅಧಿಕೃತ ಭೇಟಿಗಾಗಿ ಭಾರತಕ್ಕೆ ಆಗಮಿಸಿದ್ದಾರೆ. ಜೆ.ಡಿ. ವ್ಯಾನ್ಸ್ ಅವರ ಭಾರತೀಯ ಮೂಲದ ಪತ್ನಿ ಉಷಾ ವ್ಯಾನ್ಸ್ (Usha Vance) ಮತ್ತು ಅವರ ಮೂವರು ಮಕ್ಕಳಾದ ಇವಾನ್, ಬ್ಲೇಕ್ ಮತ್ತು ಮಿರಬಲ್ ಅವರೊಂದಿಗೆ ಆಗಮಿಸಿದ್ದಾರೆ. ಈ ವೇಳೆ ಇಬ್ಬರೂ ಪುತ್ರರು ಕುರ್ತಾ ಪೈಜಾಮಾ ಧರಿಸಿದ್ದರೆ, ಕಿರಿಯ ಮಗಳು ಮಗಳು ಮಿರಬಲ್ ಅನಾರ್ಕಲಿ ಸಲ್ವಾರ್ ಧರಿಸಿದ್ದಳು. ಜೆ.ಡಿ. ವ್ಯಾನ್ಸ್ ಅವರನ್ನು ಪಾಲಂ ಏರ್ಪೋರ್ಟ್ನಲ್ಲಿ ಶಾಸ್ತ್ರೀಯ ನೃತ್ಯದ ಮೂಲಕ ಭಾರತೀಯ ಕಲಾವಿದರು ಸ್ವಾಗತಿಸಿದರು. ಕೇಂದ್ರ ಸಚಿವ ಅಶ್ವನಿ ವೈಷ್ಣವ್ ಅಮೇರಿಕದ ಉಪಾಧ್ಯಕ್ಷರ ಕುಟುಂಬವನ್ನು ಬರಮಾಡಿಕೊಂಡರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ