Sign In

By signing in or creating an account, you agree with Associated Broadcasting Company's Terms & Conditions and Privacy Policy.

Joe Biden: ಲಸಿಕೆ ಪಡೆಯದವರಿಗೆ ‘ಸಾವಿನ ಚಳಿಗಾಲ’ ಮುಂದಿದೆ; ಒಮಿಕ್ರಾನ್ ಕುರಿತು ಅಮೇರಿಕಾ ಅಧ್ಯಕ್ಷ ಬಿಡೆನ್ ಹೇಳಿಕೆ

Covid 19: ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಚಳಿಗಾಲವು ಲಸಿಕೆ ಪಡೆಯದವರಿಗೆ ತೀವ್ರ ಹಾನಿ ಮಾಡಬಹುದು ಎಂದು ಎಚ್ಚರಿಸಿದ್ದಾರೆ. ಅಲ್ಲದೇ ಜನರಿಗೆ ಬೇಗ ಲಸಿಕೆ ಪಡೆಯುವಂತೆ ತಿಳಿಸಿದ್ದಾರೆ.

Joe Biden: ಲಸಿಕೆ ಪಡೆಯದವರಿಗೆ ‘ಸಾವಿನ ಚಳಿಗಾಲ’ ಮುಂದಿದೆ; ಒಮಿಕ್ರಾನ್ ಕುರಿತು ಅಮೇರಿಕಾ ಅಧ್ಯಕ್ಷ ಬಿಡೆನ್ ಹೇಳಿಕೆ
ಅಮೇರಿಕಾ ಅಧ್ಯಕ್ಷ ಜೋ ಬಿಡೆನ್
Follow us
TV9 Web
| Updated By: shivaprasad.hs

Updated on:Dec 17, 2021 | 12:57 PM

ಅಮೇರಿಕಾ: ಕೊರೊನಾ ವೈರಸ್​​ನ ಹೊಸ ರೂಪಾಂತರ ಒಮಿಕ್ರಾನ್ ಕುರಿತು ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ (Joe Biden) ಹೇಳಿಕೆ ನೀಡಿದ್ದು, ಒಮಿಕ್ರಾನ್ ಅಮೇರಿಕಾದಲ್ಲಿ ವೇಗವಾಗಿ ಹಬ್ಬಲಿದೆ ಎಂದಿದ್ದಾರೆ. ಅಲ್ಲದೇ, ‘‘ಲಸಿಕೆ ಪಡೆಯದವರಿಗೆ ಅನಾರೋಗ್ಯ ಮತ್ತು ಸಾವಿನ ಚಳಿಗಾಲ ಎದುರಾಗಬಹುದು’’ (Winter of death and illness) ಎಂದು ಬಿಡೆನ್ ವಿಶ್ಲೇಷಿಸಿದ್ದಾರೆ. ಉನ್ನತ ಆರೋಗ್ಯ ಸಲಹೆಗಾರರಿಂದ ಸಾಂಕ್ರಾಮಿಕ ರೋಗದ ಬಗ್ಗೆ ಮಾಹಿತಿ ಪಡೆಯುತ್ತಿರುವ ಬಿಡೆನ್, ಜನರು ಬೂಸ್ಟರ್ ಶಾಟ್‌ಗಳನ್ನು (Booster Shot) ಪಡೆಯಬೇಕು ಮತ್ತು ಅದನ್ನು ಆದಷ್ಟು ಶೀಘ್ರವಾಗಿ ಪೂರೈಸಿಕೊಳ್ಳಿ ಎಂದು ಒತ್ತಾಯಿಸಿದ್ದಾರೆ. ಲಸಿಕೆ ಪಡೆಯದವರಲ್ಲಿ ತೀವ್ರ ಅನಾರೋಗ್ಯ ಮತ್ತು ಸಾವನ್ನು ಈ ಚಳಿಗಾಲದಲ್ಲಿ ನೋಡಲಿದ್ದೇವೆ ಎಂದು ಬಿಡೆನ್ ಹೇಳಿದ್ದಾರೆ. ಇದನ್ನು ಅವರು ‘ಸಾವಿನ ಚಳಿಗಾಲ’ ಎಂದು ವ್ಯಾಖ್ಯಾನಿಸಿದ್ದಾರೆ.

ಪ್ರಸ್ತುತ ಅಮೇರಿಕಾದ ಕನಿಷ್ಠ 36 ರಾಜ್ಯಗಳು ಒಮಿಕ್ರಾನ್ ಪ್ರಕರಣಗಳನ್ನು ದೃಢಪಡಿಸಿವೆ. ಈ ಕುರಿತು ರೋಗ ನಿಯಂತ್ರಣ ಕೇಂದ್ರದ ಅಧಿಕಾರಿಗಳು ಬುಧವಾರ ಮಾಹಿತಿ ನೀಡಿದ್ದಾರೆ. ಒಮಿಕ್ರಾನ್ ವಿರುದ್ಧ ಹೋರಾಡಲು ಬೂಸ್ಟರ್ ಡೋಸ್ ಅಗತ್ಯವನ್ನು ಒತ್ತಿ ಹೇಳಿದ ಬಿಡೆನ್, ‘‘ನೀವು ಲಸಿಕೆ ಮತ್ತು ಬೂಸ್ಟರ್ ಶಾಟ್ ಪಡೆದಿದ್ದರೆ, ತೀವ್ರ ಅನಾರೋಗ್ಯ ಮತ್ತು ಸಾವಿನಿಂದ ರಕ್ಷಿಸಲ್ಪಡುತ್ತೀರಿ’’ ಎಂದು ತಜ್ಞರ ಮಾತುಗಳನ್ನು ಆಧರಿಸಿ ಬಿಡೆನ್ ಅಭಯ ನೀಡಿದ್ದಾರೆ.

ಪ್ರಸ್ತುತ ಒಮಿಕ್ರಾನ್ ರೂಪಾಂತರವು ಅಮೇರಿಕಾದಲ್ಲಿ ತೀರಾ ವೇಗವಾಗಿ ಹರಡಿಲ್ಲ. ಇದರಿಂದ ಆಡಳಿತವು ಬೇಕಾದ ಕ್ರಮಗಳನ್ನು ಕೈಗೊಳ್ಳಬಹುದು. ಆದರೆ ಸೋಂಕು ಹರಡುವಿಕೆಯ ಪ್ರಮಾಣ ಶೀಘ್ರದಲ್ಲೇ ಹೆಚ್ಚಾಗಲಿದೆ ಎಂದು ಬಿಡೆನ್ ನುಡಿದಿದ್ದಾರೆ. ಈ ದೃಷ್ಟಿಯಿಂದ ಬೂಸ್ಟರ್ ಡೋಸ್ ಮುಖ್ಯವಾಗಿರಲಿದೆ ಎಂದು ಅವರು ಹೇಳಿದ್ದಾರೆ.

ಜಗತ್ತಿನ ಎಲ್ಲೆಡೆಯಂತೆ ಅಮೇರಿಕಾದಲ್ಲೂ ಕೂಡ ಸಾರ್ವಜನಿಕರು ಸಾಂಕ್ರಮಿಕ ರೋಗ ಅದರ ನಿಯಮಾವಳಿಗಳ ವಿರುದ್ಧ ಅಸಮಾಧಾನ ಹೊಂದಿದ್ದಾರೆ. ವಾರಗಳ ಹಿಂದೆ ಒಮಿಕ್ರಾನ್ ಗುರುತಿಸಲ್ಪಟ್ಟಾಗ ಅಮೇರಿಕಾವು ದಕ್ಷಿಣ ಆಫ್ರಿಕಾ ಮತ್ತು ಹಲವಾರು ದೇಶಗಳಿಂದ ಪ್ರಯಾಣಕ್ಕೆ ನಿರ್ಬಂಧ ವಿಧಿಸಿತು. ಆದರೆ ಯಾವುದೇ ಇತರ ನಿರ್ಬಂಧಗಳನ್ನು ಹೇರಲಿಲ್ಲ ಮತ್ತು ದೇಶೀಯ ವಿಮಾನಗಳಲ್ಲಿ ಆರೋಗ್ಯ ಕ್ರಮಗಳನ್ನು ಬಿಗಿಗೊಳಿಸಲಿಲ್ಲ.

ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಟ್ರ್ಯಾಕರ್ ಪ್ರಕಾರ ಅಮೇರಿಕಾದಲ್ಲಿ ಇದುವರೆಗೆ 800,000 ಅಧಿಕ ಜನರು ಕೊರೊನಾದಿಂದ ಮೃತಪಟ್ಟಿದ್ದಾರೆ. ಇದು ಅಲಾಸ್ಕಾ ಅಥವಾ ಇತರ ಕೆಲವು ರಾಜ್ಯಗಳ ಜನಸಂಖ್ಯೆಗಿಂತ ಹೆಚ್ಚಾಗಿದೆ. ಈ ವರ್ಷ, ಸುಮಾರು 450,000 ಜನರು ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ, ಅವರಲ್ಲಿ ಹೆಚ್ಚಿನವರು ಲಸಿಕೆ ಪಡೆಯದವರಾಗಿದ್ದಾರೆ. ಈ ಹಿನ್ನೆಲೆಯೆಲ್ಲಿ ಬಿಡೆನ್ ಹೇಳಿಕೆ ಮಹತ್ವ ಪಡೆದಿದೆ.

ಇದನ್ನೂ ಓದಿ:

Coronavirus: ಲಂಡನ್, ದುಬೈನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ 6 ಜನರಿಗೆ ಕೊರೊನಾ ಸೋಂಕು

Miss World 2021 ಭಾರತದ ಮಾನಸಾ ವಾರಣಾಸಿ ಸೇರಿದಂತೆ ಹಲವು ಸ್ಪರ್ಧಿಗಳಿಗೆ ಕೊವಿಡ್; ವಿಶ್ವ ಸುಂದರಿ ಸ್ಪರ್ಧೆ ಮುಂದೂಡಿಕೆ

Published On - 12:54 pm, Fri, 17 December 21