ವಾಷಿಂಗ್ಟನ್: ಸುಮ್ಮನಿರಲಾರದೇ ಇರುವೆ ಬಿಟ್ಟುಕೊಂಡರಂತೆ ಅನ್ನುವಂತಾಗುತ್ತಿದೆ ಕುಟಿಲ ಬುದ್ದಿಯ ಚೀನಾದ ಸ್ಥಿತಿ. ಯಾಕಂದ್ರೆ ಭಾರತದ ವಿರುದ್ಧ ಗಡಿ ಕ್ಯಾತೆ ತೆಗಿದಿದ್ದೇ ಬಂತು ಭಾರತ ಅದರ 59 ಆಪ್‌ಗಳನ್ನ ಬ್ಯಾನ್ ಮಾಡಿತು. ಈಗ ಅಮೆರಿಕ ಕೂಡಾ ಭಾರತದಂತೆ ಟಿಕ್‌ಟಾಕ್ ಬ್ಯಾನ್ ಮಾಡಲು ಮುಂದಾಗಿದೆ.
ಭಾರತದಂತೆ ಅಮೆರಿಕದಲ್ಲಿಯೂ ಟಿಕ್‌ಟಾಕ್ ಬ್ಯಾನ್?
ಹೌದು, ಗಲ್ವಾನ್ ಕಣಿವೆಯಲ್ಲಿ ಭಾರತದ 20 ಯೋಧರ ಸಾವಿಗೆ ಕಾರಣವಾದ ಚೀನಾ ವಿರುದ್ದ ಸೇಡು ತೀರಿಸಿಕೊಳ್ಳಲು ಭಾರತ ಟಿಕ್‌ಟಾಕ್ ಸೇರಿದಂತೆ ಚೀನಾದ 59 ಆಪ್‌ಗಳನ್ನು ಬ್ಯಾನ್ ಮಾಡಿತು. ಇದು ಭಾರೀ ಅಲ್ಲದಿದ್ರೂ ತಕ್ಕ ಮಟ್ಟಿನ ಹೊಡೆತವನ್ನು ಚೀನಾಗೆ ನೀಡಲಿದೆ ಅನ್ನೋ ಲೆಕ್ಕಾಚಾರ ಭಾರತದ್ದು.
ಈಗ ಇದೇ ಭಾರತದ ಪಾಲಿಸಿಯನ್ನ ಅಮೆರಿಕ ಕೂಡಾ ಪಾಲಿಸಲು ಮುಂದಾಗಿದೆ. ಅಮೆರಿಕ ಚೀನಾದ ವಿಡಿಯೋ ಶೇರಿಂಗ್ ಟಿಕ್‌ಟಾಕ್ ಅಪ್ ಸೇರಿ ಕೆಲವೊಂದು ಅಪ್‌ಗಳನ್ನ ಬ್ಯಾನ್ ಮಾಡಲು ಮುಂದಾಗಿದೆ.
ಟಿಕ್‌ಟಾಕ್ ಬ್ಯಾನ್ ಮಾಡಲು ಚಿಂತನೆ
ಈ ಸಂಬಂಧ ಮಾತನಾಡಿರುವ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೋ ಅಮೆರಿಕ ಚೀನಾದ ಕೆಲ ಅಪ್‌ಗಳನ್ನು ಬ್ಯಾನ್ ಮಾಡಲು ಚಿಂತಿಸುತ್ತಿದೆ. ಇದರಲ್ಲಿ ವಿಡಿಯೋ ಶೇರಿಂಗ್ ಅಪ್ ಟಿಕ್‌ಟಾಕ್ ಕೂಡಾ ಸೇರಿದೆ ಎಂದಿದ್ದಾರೆ. ಆದ್ರೆ ಈ ಕುರಿತು ಅಂತಿಮವಾಗಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಪ್ರಕಟಿಸುತ್ತಾರೆ. ಇದಕ್ಕಿಂತ ಹೆಚ್ಚಿಗೆ ನಾನು ಏನನ್ನು ಹೇಳಲಾರೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಆಪ್ತವಾಗಿರುವ ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಹೇಳಿದ್ದಾರೆ.
ಟಿಕ್‌ಟಾಕ್ ಬ್ಯಾನ್ ಟ್ರಂಪ್ ಅವರ ಚುನಾವಣಾ ಗಿಮಿಕ್?
ಮೈಕ್ ಪೊಂಪಿಯೋ ಅವರ ಈ ಮಾತನ್ನ ಕೇಳಿದ್ರೆ ಒಂದಂತೂ ಸ್ಪಷ್ಟವಾಗುತ್ತಿದೆ. ಮೊದಲೇ ಚುನಾವಣಾ ವರ್ಷದಲ್ಲಿರುವ ಟ್ರಂಪ್, ಭಾರತದಂತೆ ಚೀನಾದ ಟಿಕ್‌ಟಾಕ್ ಸೇರಿ ಕೆಲವೊಂದು ಆಪ್‌ಗಳನ್ನ ಬ್ಯಾನ್ ಮಾಡುವುದಂತೂ ಪಕ್ಕಾ. ಈ ಹೀಗೆ ಬ್ಯಾನ್ ಮಾಡುವುದರಿಂದ ಅಮೆರಿಕವೇನೂ ಸಾಧಿಸಿದಂತಾಗುವುದಿಲ್ಲ. ಆದ್ರೆ ನವೆಂಬರ್‌ನಲ್ಲಿ ನಡೆಯಲಿರುವ 2020ರ ಅಧ್ಯಕ್ಷೀಯ ಚುನಾವಣೆಯಲ್ಲಿ ಈ ಗಿಮಿಕ್ ವರ್ಕ್ ಔಟ್ ಆಗುವ ಲೆಕ್ಕಾಚಾರ ಟ್ರಂಪ್ ಆಡಳಿತದ್ದು.
US Secretary of State Mike Pompeo says that the United States is "certainly looking at" banning Chinese social media apps, including #TikTok: Reuters
(file pic) pic.twitter.com/fUzJKlQkSk— ANI (@ANI) July 7, 2020
Published On - 2:19 pm, Tue, 7 July 20